ವಿಟಿಯು: ದಾವಣಗೆರೆಯ ಸುಚಿತ್ರಾಗೆ 9 ಚಿನ್ನದ ಪದಕ!

ವಿಟಿಯು ಘಟಿಕೋತ್ಸವಕ್ಕೆ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಆಗಮಿಸಲಿದ್ದಾರೆ

ಮಾರ್ಚ್ 18ಕ್ಕೆ ವಿಟಿಯು ಘಟಿಕೋತ್ಸವ

ಬೆಳಗಾವಿ: ದೇಶದಲ್ಲಿಯೇ ಅತಿದೊಡ್ಡ ತಾಂತ್ರಿಕ ವಿಶ್ವವಿದ್ಯಾಲಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ 18ನೇ ಘಟಿಕೋತ್ಸವ ಮುಂಬರುವ ಮಾರ್ಚ್ 18 ರಂದು ಬೆ.10ಗಂಟೆಗೆ ನಡೆಯಲಿದ್ದು, ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು, ಘಟಿಕೋತ್ಸವದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಎಂದು ವಿಟಿಯು ಕುಲಪತಿ ಡಾ.ಕರಿಸಿದ್ದಪ್ಪ ಹೇಳಿದರು.

ಸೋಮವಾರ ವಿಟಿಯು ಕ್ಯಾಂಪಸ್‌ದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡಿದರು. ಈ ಬಾರಿ ಖ್ಯಾತ ಅಭಿಯಂತರ ಹಾಗೂ ಸಾಮಾಜಿಕ ಕಾರ್ಯಕರ್ತ ಬಿ.ಗಿರೀಶ ಭಾರದ್ವಾಜ್ ಅವರಿಗೆ ಡಾಕ್ಟರ್ ಆಫ್ ಸೈನ್ಸ್ ಪದವಿ ನೀಡಿ ಗೌರವಿಸಲಾಗುತ್ತಿದೆ. ಈ ಕಾರ್ಯಕ್ರಮದಲ್ಲಿ ವಿಟಿಯು ಕುಲಾಧಿಪತಿ ರಾಜ್ಯಪಾಲ ವಾಜುಭಾಯಿ ವಾಲಾ, ವಿಟಿಯು ಸಮ ಕುಲಾಧಿಪತಿ ಹಾಗೂ ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಅವರು ಪಾಲ್ಗೊಳ್ಳಲಿದ್ದಾರೆ ಎಂದರು.

ವಿಶ್ವವಿದ್ಯಾಲಯದ 18ನೇ ಘಟಿಕೋತ್ಸವದಲ್ಲಿ 64881 ಬಿಇ, 819 ಬಿ.ಆರ್ಕ್, 4425 ಎಂಬಿಎ, 1801 ಎಂಸಿಎ, 2859 ಎಂ.ಟೆಕ್, 28 ಎಂ.ಆರ್ಕ್, 428 ಪಿಎಚ್‌ಡಿ ಹಾಗೂ 33 ಎಂ.ಎಸ್ಸಿ ಇಂಜಿನಿಯರಿಂಗ್ ಪದವಿಗಳನ್ನು ನೀಡಿ ಗೌರವಿಸಲಾಗುವುದು ಎಂದು ಡಾ.ಕರಿಸಿದ್ಧಪ್ಪ ಹೇಳಿದರು.

9 ಚಿನ್ನದ ಪದಕ ಪಡೆದ ಸುಚಿತ್ರಾ ಎನ್. ಚಿನ್ನದ ಹುಡುಗಿ

ದಾವಣಗೇರೆಯ ಜೈನ್ ಇನ್ಸಿಟಿಟ್ಯೂಟ್ ಆಫ್ ಟೆಕ್ನಾಲಾಜಿ ಬಿಇ ಸಿವಿಲ್ ಇಂಜಿನಿಯರಿಂಗ್ ವಿದ್ಯಾರ್ಥಿನಿ ಸುಚಿತ್ರ ಎನ್. ಅವಳು 9 ಚಿನ್ನದ ಪದಕಗಳನ್ನು ಪಡೆದಿದ್ದಾಳೆ. ದಾವಣಗೇರೆಯ ಬಾಪುಜಿ ಇನ್ಸಿಟಿಟ್ಯೂಟ್ ಆಫ್ ಟೆಕ್ನಾಲಾಜಿಯ ವಿದ್ಯಾರ್ಥಿನಿ ಬಿಇ ಸಿವಿಲ್ ಇಂಜಿನಿಯರಿಂಗ್ ವಿದ್ಯಾರ್ಥಿನಿ ಮಧುಶ್ರೀ ಎಸ್. ಆರ್.(ಎಸ್ಸಿ-ಎಸ್ಟಿ ವಿದ್ಯಾರ್ಥಿಗಳ ವಿಭಾಗದಲ್ಲಿ) 6 ಚಿನ್ನದ ಪದಕಗಳನ್ನು ಪಡೆದಿದ್ದಾಳೆ.

ಮೈಸೂರಿನ ವಿದ್ಯಾವರ್ಧಕ ಕಾಲೇಜ್ ಆಫ್ ಇಂಜಿನಿಯರಿಂಗ್ ವಿದ್ಯಾರ್ಥಿನಿ ಮೇಘನಾ ಪ್ರಕಾಶ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಶನ್ ಇಂಜಿನಿಯರಿಂಗ್‌ದಲ್ಲಿ 6 ಚಿನ್ನದ ಪದಕಗಳನ್ನು ಪಡೆದಿದ್ದಾಳೆ. ಬೆಂಗಳೂರಿನ ದಯಾನಂದ ಸಾಗರ ಕಾಲೇಜ್ ಆಫ್ ಇಂಜಿನಿಯರಿಂಗ್ ವಿದ್ಯಾರ್ಥಿ ಸುಪ್ರೀತ್ ಎಂ. ಅವರು ಬಿ.ಇ ಮ್ಯೆಕಾನಿಕಲ್ ಇಂಜಿನಿಯರಿಂಗ್ ವಿಭಾಗದಲ್ಲಿ 5 ಚಿನ್ನದ ಪದಕ ಪಡೆದಿದ್ದಾರೆ. ಮೈಸೂರಿನ ವಿದ್ಯಾವರ್ಧಕ ಕಾಲೇಜ್ ಆಫ್ ಇಂಜಿನಿಯರಿಂಗ್ ವಿದ್ಯಾರ್ಥಿನಿ ಜೀವಿತಾ ಎಸ್ ಅವಳು, ಬಿಇ ಎಲೆಕ್ಟ್ರೀಕಲ್ ಮತ್ತು ಎಲೆಕ್ಟ್ರಾನಿಕ್ಸ್ ವಿಭಾಗದಲ್ಲಿ 6 ಚಿನ್ನದ ಪದಕಗಳನ್ನು ಪಡೆದಿದ್ದಾಳೆ ಎಂದು ವಿಟಿಯು ಕುಲಪತಿ ಡಾ.ಕರಿಸಿದ್ದಪ್ಪ ಹೇಳಿದ್ದಾರೆ.

360 ವಿದ್ಯಾರ್ಥಿಗಳಿಗೆ ರ‌್ಯಾಂಕ್

ಬಿಇ ಮತ್ತು ಬಿಟೆಕ್ ವಿವಿಧ ಶಾಖೆಗಳ ವಿದ್ಯಾರ್ಥಿಗಳಿಗೆ 200 ರ‌್ಯಾಂಕ್, ಬಿ.ಆರ್ಕ್ ವಿಭಾಗದಲ್ಲಿ 11ರ‌್ಯಾಂಕ್, ಎಂಬಿಎ ವಿಭಾಗದಲ್ಲಿ 10 ರ‌್ಯಾಂಕ್, ಎಂಸಿಎ ವಿಭಾಗದಲ್ಲಿ 10 ರ‌್ಯಾಂಕ್ ಎಂಟೆಕ್ ವಿಭಾಗದಲ್ಲಿ 127 ಹಾಗೂ ಎಂ.ಆರ್ಕ್ ವಿಭಾಗದಲ್ಲಿ 2 ಸೇರಿ 360 ಜನ ವಿದ್ಯಾರ್ಥಿಗಳಿಗೆ ರ‌್ಯಾಂಕ್ ನೀಡಲಾಗಿದೆ.

ಬಿಇ/ಬಿ.ಟೆಕ್‌ದಲ್ಲಿ ಶೇ.74.68ರಷ್ಟು ಫಲಿತಾಂಶ

ಈ ಬಾರಿ ಬಿಇ ಮತ್ತು ಬಿಟೆಕ್ ಸೇರಿ 86875 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು, ಈ ಪೈಕಿ 64881 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದು, ಶೇ.74.68ರಷ್ಟು ಫಲಿತಾಂಶ ಬಂದಿದೆ. ಈ ಉತ್ತೀರ್ಣರಾದ ವಿದ್ಯಾರ್ಥಿಗಳ ಪೈಕಿ 40649 ವಿದ್ಯಾರ್ಥಿಗಳು, 24231 ವಿದ್ಯಾರ್ಥಿನಿಯರು ಇದ್ದಾರೆ.

ದಯಾನಂದ ಸಾಗರ ಇಂಜಿನಿಯರಿಂಗ್‌ ಕಾಲೇಜಿಗೆ -36 ರ‌್ಯಾಂಕ್

ಇಡೀ ರಾಜ್ಯದಲ್ಲಿ ಅತಿ ಹೆಚ್ಚು ರ‌್ಯಾಂಕ್‌ಗಳನ್ನು ಬೆಂಗಳೂರಿನ ದಯಾನಂದ ಸಾಗರ ಕಾಲೇಜ್ ಆಫ್ ಇಂಜಿನಿಯರಿಂಗ್ ವಿದ್ಯಾರ್ಥಿಗಳೇ 36 ರ‌್ಯಾಂಕ್‌ಗಳನ್ನು ಪಡೆದುಕೊಂಡಿದ್ದಾರೆ. ಬೆಂಗಳೂರು ಇನ್ಸಿಟಿಟ್ಯೂಟ್ ಆಫ್ ಟೆಕ್ನಾಲಾಜಿಗೆ 29, ಬೆಂಗಳೂರಿನ ಆರ್‌ಎನ್‌ಎಸ್ ಇನ್ಸಿಟಿಟ್ಯೂಟ್‌ಗೆ-20, ಆಚಾರ್ಯ ಇನ್ಸಿಟಿಟ್ಯೂಟ್‌ಗೆ -18, ಬೆಳಗಾವಿಯ ಜಿಐಟಿಗೆ- 11, ಬೆಂಗಳೂರಿನ ಎಂವಿಜೆ ಇಂಜಿನಿಯರಿಂಗ್ ಕಾಲೇಜಿಗೆ- 11, ಮೈಸೂರಿನ ವಿದ್ಯಾವರ್ಧಕ ಕಾಲೇಜ್ ಆಫ್ ಇಂಜಿನಿಯರಿಂಗ್ -10 ಹಾಗೂ ಬೆಂಗಳೂರಿನ ಎಸ್‌ಜೆಬಿಐಟಿ ಇಂಜಿನಿಯರಿಂಗ್ ಕಾಲೇಜಿಗೆ 10 ರ‌್ಯಾಂಕ್ ಹಾಗೂ ಬೆಳಗಾವಿ ಕೆಎಲ್‌ಇ ಶೇಷಗಿರಿ ಇಂಜಿನಿಯರಿಂಗ್ ಕಾಲೇಜಿಗೆ 8 ರ‌್ಯಾಂಕ್‌ಗಳು ಬಂದಿವೆ.

ರ‌್ಯಾಂಕ್ ವಿಜೇತರು

ಸುಚಿತ್ರ ಎನ್.

ಮೇಘನಾ ಪ್ರಕಾಶ

ಜೀವಿತಾ ಎಸ್

ಸುಪ್ರೀತ್ ಎಂ.

ಬಿ.ಗಿರೀಶ ಭಾರದ್ವಾಜ್ (ಗೌರವ ಡಾಕ್ಟರ್ ಆಫ್ ಸೈನ್ಸ್ ಪದವಿ ಪಡೆದವರು.)

ವಿಟಿಯು ವಿಭಜನೆ ಕೈಬಿಡಲಾಗಿದೆ

ವಿಟಿಯು ವಿಭಜನೆಯನ್ನು ಸರ್ಕಾರ ಯಾವುದೇ ಕಾರಣಕ್ಕೂ ಒಡೆಯಬಾರದು ಎಂದು ತಾವು ಸರ್ಕಾರಕ್ಕೆ ಪತ್ರ ಬರೆದಿರುವುದಾಗಿ ಕುಲಪತಿ ಡಾ.ಕರಿಸಿದ್ಧಪ್ಪ ಅವರು ಸ್ಪಷ್ಟಪಡಿಸಿದರು.

ಬೆಳಗಾವಿಯಲ್ಲಿ ವಿಶ್ವೇಶ್ವರಯ್ಯ ವಿವಿ ಕುಲಪತಿ ಡಾ.ಕರಿಸಿದ್ದಪ್ಪ ಅವರು, ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಮೌಲ್ಯಮಾಪನ ಕುಲಸಚಿವ ಡಾ.ಸತೀಶ ಅಣ್ಣಿಗೇರಿ ಅವರು ಇದ್ದರು.

ರ‌್ಯಾಂಕ್ ವಿಜೇತರು..

ಸುಚಿತ್ರ ಎನ್.

ಮೇಘನಾ ಪ್ರಕಾಶ

ಜೀವಿತಾ ಎಸ್

ಸುಪ್ರೀತ್ ಎಂ.

ಬಿ.ಗಿರೀಶ ಭಾರದ್ವಾಜ್ (ಗೌರವ ಡಾಕ್ಟರ್ ಆಫ್ ಸೈನ್ಸ್ ಪದವಿ ಪಡೆದವರು.)