ಸಿನಿಮಾ

ದಾವಣಗೆರೆಯಲ್ಲಿ ನೀಟ್ ಪರೀಕ್ಷೆಗೆ 7270 ಮಂದಿ ಹಾಜರು

ದಾವಣಗೆರೆ: ವೈದ್ಯಕೀಯ ಕೋರ್ಸ್‌ಗಳ ಪ್ರವೇಶಾತಿಗೆ ನಗರದ 13 ಪರೀಕ್ಷಾ ಕೇಂದ್ರಗಳಲ್ಲಿ ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ (ನೀಟ್‌) ಭಾನುವಾರ ಸುಗಮವಾಗಿ ನಡೆಯಿತು.
ಪರೀಕ್ಷೆಗೆ ನೋಂದಾಯಿತ 7,388 ವಿದ್ಯಾರ್ಥಿಗಳಲ್ಲಿ 7,270 ಮಂದಿ ಹಾಜರಾಗಿ ಪರೀಕ್ಷೆ ಬರೆದರು. 118 ಅಭ್ಯರ್ಥಿಗಳು ಗೈರಾಗಿದ್ದರು. .
ನಗರದ ವಿಶ್ವಚೇತನ ಪಪೂ ಕಾಲೇಜು, ಅಥಣಿ ಸಂಯುಕ್ತ ಪಪೂ ಕಾಲೇಜು, ಜೈನ್ ವಿದ್ಯಾಲಯ (ಸಿಬಿಎಸ್ಇ), ಸಿದ್ಧಗಂಗಾ ಪಪೂ ಕಾಲೇಜು, ಸೇಂಟ್ ಜಾನ್ಸ್ ಕಾಲೇಜು, ಮಾಗನೂರು ಬಸಪ್ಪ, ಬಾಪೂಜಿ ಸಿಬಿಎಸ್‌ಇ ಶಾಲೆ, ಜೈನ್‌ ವಿದ್ಯಾಲಯ ಕಸಬಾ ಹೋಬಳಿ, ಅಥಣಿ ಪಿಯು ಕಾಲೇಜು, ಸೇಂಟ್ ಪಾಲ್ಸ್ ಪಪೂ ಕಾಲೇಜು, ಎಂ.ಇ.ಎಸ್‌ ಮಹಾವಿದ್ಯಾಲಯ, ಎಸ್‌ಪಿಜೆ ಪಪೂ ಕಾಲೇಜು, ಪಿಎಸ್‌ಎಸ್‌ಎಂಇಆರ್ ಶಾಲೆಗಳಲ್ಲಿ ಪರೀಕ್ಷೆ ನಡೆಯಿತು.
ಪರೀಕ್ಷಾ ಕೇಂದ್ರಗಳಲ್ಲಿ ವಿದ್ಯಾರ್ಥಿಗಳಿಗೆ ಮೂಲ ಸೌಲಭ್ಯ ಒದಗಿಸಲಾಗಿತ್ತು. ಕೇಂದ್ರಕ್ಕೆ ಹೋಗುವ ಮುಂಚೆ ವಿದ್ಯಾರ್ಥಿಗಳನ್ನು ತಪಾಸಣೆಗೆ ಒಳಪಡಿಸಲಾಯಿತು. ಥರ್ಮಲ್ ಸ್ಕ್ರೀನಿಂಗ್‌ಗೆ ಒಳಪಡಿಸಲಾಯಿತು. ಯಾವುದೇ ಅಹಿತಕರ ನಡೆಯದಂತೆ ಪೊಲೀಸರು ಬಿಗಿ ಭದ್ರತೆ ಒದಗಿಸಿದ್ದರು.
ಮಧ್ಯಾಹ್ನ 2ಕ್ಕೆ ಆರಂಭವಾದ ಪರೀಕ್ಷೆ ಸಂಜೆ 5.20ಕ್ಕೆ ಮುಕ್ತಾಯವಾಯಿತು. ಬೆಳಗ್ಗೆಯಿಂದ ವಿದ್ಯಾರ್ಥಿಗಳ ತಪಾಸಣಾ ಕಾರ್ಯ ಮಾಡಲಾಯಿತು ಎಂದು ಹಿರಿಯ ಅಧಿಕಾರಿಗಳು ವಿವರಿಸಿದರು.

Latest Posts

ಲೈಫ್‌ಸ್ಟೈಲ್