More

  ದತ್ತಗಿರಿ ಶಾಲೆಗೆ ಶೇ 95 ರಷ್ಟು ಫಲಿತಾಂಶ

  ಬೀದರ್: ಇಲ್ಲಿಯ ಬಸವನಗರ ಕಾಲೊನಿಯ ದತ್ತಗಿರಿ ಮಹಾರಾಜ್ ಆಂಗ್ಲ ಮಾಧ್ಯಮ ಪಬ್ಲಿಕ್ ಶಾಲೆಯು ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ 95 ರಷ್ಟು ಫಲಿತಾಂಶ ಪಡೆದು ಗಮನ ಸೆಳೆದಿದೆ.
  2 ಅಗ್ರಶ್ರೇಣಿ, 24 ಪ್ರಥಮ ದರ್ಜೆ ಹಾಗೂ 13 ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ.
  ವರುಣ ಶೇ 90, ರೇಣುಕಾ ಶೇ 88.88, ನಿಕಿತಾ ಶೇ 82.72, ಬಸವಕಿರಣ ಶೇ 81.12, ಮಿಲಿಂದ ಶೇ 80.24, ರಿತಿಕರಾಜ್ ಶೇ 80.32, ಮಾಣಿಕ ಶೇ 75.2 ರಷ್ಟು ಅಂಕ ಗಳಿಸಿ ಸಾಧನೆ ಮಾಡಿದ್ದಾರೆ.
  ಶಾಲೆಯ ವಿದ್ಯಾರ್ಥಿಗಳ ಸಾಧನೆಗೆ ದತ್ತಗಿರಿ ಮಹಾರಾಜ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಪೂಜ್ಯ ಶ್ರೀ ಅವಧೂತಗಿರಿ ಮಹಾರಾಜ, ಅಧ್ಯಕ್ಷ ರಮೇಶಕುಮಾರ ಪಾಂಡೆ, ಉಪಾಧ್ಯಕ್ಷ ಮಲ್ಲಿಕಾರ್ಜುನ ಹತ್ತಿ, ಕಾರ್ಯದರ್ಶಿ ಶಿವರಾಜ ಪಾಟೀಲ, ಜಂಟಿ ಕಾರ್ಯದರ್ಶಿ ರಮೇಶ ಜಿ. ದುಕಾನದಾರ್, ಖಜಾಂಚಿ ಪ್ರಭಾಕರ ಮೈಲಾಪುರೆ, ಸದಸ್ಯರಾದ ಶಾಂತಾಬಾಯಿ ಯರಮಲ್ಲಿ, ರವಿ ಮಲಸಾ, ಬಸವರಾಜ ದೇಗಲಮಡಿ, ಪ್ರಾಚಾರ್ಯೆ ಮಹಾದೇವಿ ಬೀದೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts