More

    ದೊಡ್ಡಮ್ಮ-ಚಿಕ್ಕಮ್ಮ ದೇವರ ಸಿಡಿ ಉತ್ಸವಕ್ಕೆ ತೆರೆ

    ಬೇಲೂರು : ತಾಲೂಕಿನ ಹೆಬ್ಬಾಳು ಗ್ರಾಮದ ಶ್ರೀ ದೊಡ್ಡಮ್ಮ-ಚಿಕ್ಕಮ್ಮ ದೇವರ ಸಿಡಿ ಮಹೋತ್ಸವ ನೂರಾರು ಭಕ್ತರ ಸಮ್ಮುಖದಲ್ಲಿ ಭಾನುವಾರ ಅದ್ದೂರಿಯಾಗಿ ನೆರವೇರಿತು. ಭಕ್ತರು ಸಿಡಿ ಉತ್ಸವದಲ್ಲಿ ಭಾಗವಹಿಸಿ ದೇವರಿಗೆ ಹರಕೆ ಸಲ್ಲಿಸಿ ಧನ್ಯರಾದರು.ತಾಲೂಕಿನ ಹೆಬ್ಬಾಳು ಗ್ರಾಮದ ಶ್ರೀ ಚನ್ನಬಸವೇಶ್ವರ, ಶ್ರೀ ಮಲ್ಲೇಶ್ವರಸ್ವಾಮಿ ಕೊಂಡೋತ್ಸವದ ಮಾರನೇ ದಿನ ಗ್ರಾಮದಲ್ಲಿರುವ ಶ್ರೀ ದೊಡ್ಡಮ್ಮ-ಶ್ರೀ ಚಿಕ್ಕಮ್ಮ ದೇವರ ಸಿಡಿ ಮಹೋತ್ಸವ ನಡೆಸಲಾಗುತ್ತದೆ. ಸಿಡಿ ಮಹೋತ್ಸವಕ್ಕೂ ಮುನ್ನ ಕಲ್ಲಿನ ಕಂಬಕ್ಕೆ ಸಿಡಿ ಮರವನ್ನು ಕಟ್ಟಿ ಪೂಜೆ ಸಲ್ಲಿಸಲಾಗುತದೆ. ನಂತರ ಎಲ್ಲ ಸಮುದಾಯದ ಮುಖಂಡರು ಸಿಡಿ ಮರದ ಸಮೀಪ ಆಗಮಿಸಿ ನಾಡಿನಲ್ಲಿ ಮಳೆ ಬೆಳೆಯಾಗಲಿ ಎಂದು ಪ್ರಾರ್ಥನೆ ಸಲ್ಲಿಸಿದ ಬಳಿಕ ಭಕ್ತರು ಈಡು ಗಾಯಿಗಳನ್ನು ಸಿಡಿ ಮರದ ಕಲ್ಲಿಗೆ ಹರಕೆ ರೂಪದಲ್ಲಿ ಸಲ್ಲಿಸುತ್ತಾರೆ, ನಂತರ ಗ್ರಾಮದ ದೊಡ್ಡಮ್ಮ-ಚಿಕ್ಕಮ್ಮ ದೇವರ ಉತ್ಸವ ಮೂರ್ತಿಗಳನ್ನು ಹೊತ್ತು ಪ್ರದಕ್ಷಿಣೆ ನಡೆಸಿದ ನಂತರದಲ್ಲಿ ಸಿಡಿ ಉತ್ಸವಕ್ಕೆ ಚಾಲನೆ ನೀಡಲಾಗುತ್ತದೆ. ಈ ಉತ್ಸವದಲ್ಲಿ ಹೆಬ್ಬಾಳು ಸುತ್ತಮುತ್ತಲಿನ 12ಗ್ರಾಮಗಳ ಜನರು ಪಾಲ್ಗೊಳ್ಳುತ್ತಾರೆ.

    ಗ್ರಾಮದ ಮುಖಂಡ ಚಂದ್ರಯ್ಯ, ತೀರ್ಥಕುಮಾರ್, ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಹೆಬ್ಬಾಳು ಹಾಲಪ್ಪ, ವ್ನಿೇಶಯ್ಯ, ರಾಮೇಗೌಡ, ರಾಜಶೇಖರ್, ಮೋಹನ್, ಹಲಗಯ್ಯ, ಯೋಗೀಶ್, ಜಗದೀಶ್, ಜಯಪ್ರಕಾಶ್, ಸುರೇಶ್, ಮಲ್ಲೇಶ್, ಸುಧಾಕರ್ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts