Tuesday, 11th December 2018  

Vijayavani

ಪಂಚರಾಜ್ಯಗಳ ಫಲಿತಾಂಶದಲ್ಲಿ ಕೈ ಆಟ-3 ರಾಜ್ಯಗಳಲ್ಲಿ ಅಧಿಕಾರದತ್ತ ಕಾಂಗ್ರೆಸ್​ - ವರ್ಕೌಟ್​ ಆಗದ ಮೋದಿ - ಅಮಿತ್ ಷಾ ಅಲೆ        ರಾಜಸ್ಥಾನದಲ್ಲಿ ಮ್ಯಾಜಿಕ್ ನಂಬರ್ ಸನಿಹ ಕಾಂಗ್ರೆಸ್-95 ಕ್ಷೇತ್ರದಲ್ಲಿ ಕಾಂಗ್ರೆಸ್, 80 ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ        ಮಧ್ಯಪ್ರದೇಶದಲ್ಲಿ ಹಾವು ಏಣಿ ಆಟ - ಕೈ ಕಮಲ ಸಮಬಲದ ಹೋರಾಟ - ಸರ್ಕಾರ ರಚನೆಗೆ ಪಕ್ಷೇತರರೇ ನಿರ್ಣಾಯಕರು        ತೆಲಂಗಾಣದಲ್ಲಿ ನಡೆಯದ ಕೈ-ಕಮಲದ ಆಟ-ಶರವೇಗದಲ್ಲಿ ಮುನ್ನುಗಿದ ಕೆಸಿಆರ್​-ನೂತನ ಸಿಎಂ ಆಗಿ ನಾಳೆ ಪ್ರಮಾಣ ವಚನ        ಛತ್ತೀಸ್​ಗಢದಲ್ಲಿ ಅಧಿಕಾರದತ್ತ ಕಾಂಗ್ರೆಸ್ - ಆಡಳಿತಾರೂಢ ಬಿಜೆಪಿಗೆ ಭಾರಿ ಮುಖಭಂಗ        ಮಿಜೋರಾಂನಲ್ಲಿ ಕಾಂಗ್ರೆಸ್​​​ಗೆ ಭಾರಿ ಮುಖಭಂಗ - ಅಧಿಕಾರದ ಗದ್ದುಗೆ ಹಿಡಿದ ಎಂಎನ್​​​ಎಫ್​ - 25 ಕ್ಷೇತ್ರಗಳಲ್ಲಿ ಭರ್ಜರಿ ಮುನ್ನಡೆ       
Breaking News

ದಕ್ಷ ಆಡಳಿತಗಾರ, ಅಜಾತಶತ್ರು ಅಟಲ್​ಜಿ

Monday, 25.12.2017, 3:05 AM       No Comments

 | ತರುಣ್​ ವಿಜಯ್​

ವಾಜಪೇಯಿಯವರು ದೇಶದ ರಾಜಕಾರಣ ಕಂಡ ಅಮೂಲ್ಯ ರತ್ನ. ಉತ್ತಮ ಆಡಳಿತ, ಸ್ನೇಹಪರತೆ, ವಾಕ್ಪಟುತ್ವ ಮುಂತಾದ ಗುಣಗಳಿಂದಾಗಿ ಅಜಾತಶತ್ರುವಾಗಿ ಗುರುತಿಸಿಕೊಂಡವರು. ಅವರ ಜನ್ಮದಿನವನ್ನು ಸುಶಾಸನ ದಿನವನ್ನಾಗಿ ಆಚರಿಸಲು ಕೇಂದ್ರದ ಎನ್​ಡಿಎ ಸರ್ಕಾರ ನಿರ್ಧರಿಸಿದೆ. 

ಅಟಲ್ ಬಿಹಾರಿ ವಾಜಪೇಯಿ ಅವರ ವ್ಯಕ್ತಿತ್ವ ಸ್ವಯಂಸೇವಕರ ಪುಣ್ಯಪ್ರವಾಹದ ಪ್ರತಿಬಿಂಬವಾಗಿದೆಯೆಂದರೆ ಅತಿಶಯೋಕ್ತಿಯಲ್ಲ. ಅವರ ಲೇಖನಿಯಲ್ಲಿ ಹೊರಬಂದ ಹಲವು ಕವಿತೆಗಳೇ ಇದಕ್ಕೆ ಸಾಕ್ಷಿ. ‘ಹಿರೋಶಿಮಾ ಕಿ ವೇದನಾ’ ಮತ್ತು ‘ಮನಾಲಿ ಮತ್ ಜಾಯಿಯೋ’ ಕವಿತೆಗಳು ವಾಜಪೇಯಿ ಕವಿಹೃದಯದ ವೇದನೆಯನ್ನು ಪ್ರತಿಬಿಂಬಿಸುತ್ತವೆ. ದುಃಖ ಮತ್ತು ಕಷ್ಟದ ಸಮಯಗಳು ಅವರನ್ನು ಬಹುವಾಗಿ ಕಾಡಿದವು. ತಮ್ಮವರು ಎಂದುಕೊಂಡವರಿಂದಲೇ ಉಂಟಾದ ವ್ಯಥೆ ಅವರನ್ನು ಕುಸಿದುಹೋಗುವಂತೆ ಮಾಡಿತ್ತು. ಆದರೆ ಅಟಲ್ ಜೀ ಸೋಲೊಪ್ಪಿಕೊಳ್ಳಲಿಲ್ಲ, ತಮ್ಮ ಮನೋಬಲವನ್ನು ಕಳೆದುಕೊಳ್ಳಲಿಲ್ಲ.

ಅವರಲ್ಲಿ ಇನ್ನೊಂದು ಮೆಚ್ಚಿಕೊಳ್ಳಬೇಕಾದ ಗುಣವೆಂದರೆ ತಮ್ಮ ನೋವುಗಳನ್ನು, ಅಭಿಪ್ರಾಯಗಳನ್ನು ಹೇಳಿಕೊಳ್ಳಲು ಬರುವ ಜನರಿಗೆ ಎಂದೂ ನಿರಾಸೆ ಮಾಡುತ್ತಿರಲಿಲ್ಲ. ಅಟಲ್​ಜೀ ನಮ್ಮ ಮಾತನ್ನೂ ಆಲಿಸಿದರು ಎಂಬ ತೃಪ್ತಿಯಿಂದ ಹಾಗೆಬಂದವರು ಹಿಂದಿರುಗುತ್ತಿದ್ದರು. ಇಂದು ಸಂಘಟನೆಗಳಲ್ಲಿ, ಸಮಾಜ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಹೇಳುವವರಿದ್ದಾರೆಯೇ ಹೊರತು, ಹೇಳುವುದನ್ನು ಕೇಳುವವರಿಲ್ಲ ಎನ್ನುವ ನೋವು ಎಲ್ಲ ಕಡೆ ವ್ಯಾಪಿಸಿದೆ. ನನಗೆ ಒಮ್ಮೆ ದೆಹಲಿಯಿಂದ ಮಥುರಾದ ದೀನದಯಾಳ್ ಧಾಮದವರೆಗೆ ಅಟಲ್ ಜೀ ಅವರೊಂದಿಗೆ ಪ್ರಯಾಣಿಸುವ ಅವಕಾಶ ಸಿಕ್ಕಿತ್ತು. ಆ ಸಂದರ್ಭದಲ್ಲಿ ನಾವಿಬ್ಬರೇ ಇದ್ದೆವು. ಆ ನಾಲ್ಕು ಗಂಟೆಗಳ ಪ್ರಯಾಣದಲ್ಲಿ ನಾನು ದಾರಿಯುದ್ದಕ್ಕೂ ಏನೇನೋ ಮಾತನಾಡುತ್ತಾ ಹೋದೆ. ಅವರು ಕೇಳುತ್ತಾ ಹೋದರು. ಇನ್ನೊಬ್ಬರು ಕೇಳುವುದನ್ನು ಈ ಮಟ್ಟಕ್ಕೆ ಸೈರಿಸಿಕೊಳ್ಳುವ ತಾಳ್ಮೆ, ಧೈರ್ಯ ಎಲ್ಲಿಂದ ಬಂತು ಎಂದು ನಾನು ಅವರನ್ನು ಪ್ರಶ್ನಿಸಿದ್ದೆ. ಅದಕ್ಕೆ ಅವರು ನೀಡಿದ ಉತ್ತರ ಮನಃಪೂರ್ವಕವಾದ ನಗು. ‘ನೀವು ಹೇಳಿದ್ದು ಮನಸ್ಸಿನ ಮಾತು. ಅದನ್ನು ಕೇಳುವುದರಿಂದ ನಮಗೆ ಏನಾದರೂ ಸಿಗುತ್ತದೆ. ಯಾವುದು ನಮಗೆ ಇಷ್ಟವಾಗುತ್ತದೋ ಅದನ್ನು ನಮ್ಮಲ್ಲಿ ಇಟ್ಟುಕೊಳ್ಳುವ. ಇಷ್ಟವಾಗದ ವಿಚಾರಗಳನ್ನು ಬಿಟ್ಟುಬಿಡುವ ಅಷ್ಟೇ’ ಎಂದು ಹೇಳಿದಾಗ ನನಗೆ ಹೊಸದೊಂದು ಪಾಠ ಸಿಕ್ಕಂತಾಯಿತು.

ಭಾರತ ವಿಭಜನೆ ಮತ್ತು ಪಾಕಿಸ್ತಾನದ ಹುಟ್ಟಿನ ಸಂದರ್ಭದಲ್ಲೂ ಅವರು ತಮ್ಮ ತಿರಸ್ಕಾರ ಮತ್ತು ನೋವನ್ನು ಕವಿತೆಯ ಮೂಲಕವೇ ಹೊರಹಾಕಿದ್ದರು.

ಅವರು ಎರಡನೆಯ ಬಾರಿ ಪ್ರಧಾನಿ ಮಂತ್ರಿ ಪದವಿಗೇರಿದಾಗ ಅಧಿಕ ಆತ್ಮವಿಶ್ವಾಸದೊಂದಿಗೆ ಕಠಿಣ ನಿರ್ಣಯಗಳನ್ನು ತೆಗೆದುಕೊಳ್ಳಲು ಹಿಂದೇಟು ಹಾಕಲಿಲ್ಲ. ಪೋಕ್ರಾನ್-2ರ ಸ್ಫೋಟ ಇಂತಹದ್ದೇ ಒಂದು ಚಮತ್ಕಾರ ತುಂಬಿದ ಕ್ಷಣ. ಅಮೆರಿಕದಂತಹ ಶಕ್ತಿಶಾಲಿ ರಾಷ್ಟ್ರವೂ ಅಟಲ್​ಜೀ ನಿರ್ಣಯದಿಂದ ಆಶ್ಚರ್ಯಚಕಿತಗೊಂಡಿತ್ತು. ವಿಶ್ವಾದ್ಯಂತದ ಹಲವು ರಾಷ್ಟ್ರಗಳು ಈ ಅಣ್ವಸ್ತ್ರ ಪ್ರಯೋಗಕ್ಕೆ ವಿರೋಧ ವ್ಯಕ್ತಪಡಿಸಿದವು. ಆದರೆ ವಾಜಪೇಯಿ ಇಂಥ ವಿರೋಧಗಳನ್ನು ಲೆಕ್ಕಕ್ಕೇ ತೆಗೆದುಕೊಳ್ಳಲಿಲ್ಲ. ಅಮೆರಿಕದಿಂದ ಸೂಪರ್ ಕಂಪ್ಯೂಟರ್ ಸಿಗದೇ ಇದ್ದಾಗ ವಿಜ್ಞಾನಿ ವಿಜಯ್ ಭಾಟ್ಕರ್​ಗೆ ಪ್ರೋತ್ಸಾಹಿಸಿ ಭಾರತದಲ್ಲಿಯೇ ಸೂಪರ್ ಕಂಪ್ಯೂಟರ್ ನಿರ್ವಣವಾಗುವಂತೆ ಮಾಡಿದರು. ಕ್ರಯೋಜೆನಿಕ್ ಇಂಜಿನ್ ಸಿಗದಿದ್ದಾಗ ಭಾರತದಲ್ಲಿಯೇ ಇದನ್ನು ತಯಾರಿಸಲಾಯಿತು. ಕಾರ್ಗಿಲ್​ನಲ್ಲಿ ಪಾಕಿಸ್ತಾನಕ್ಕೆ ದಿಟ್ಟ ಪ್ರತ್ಯುತ್ತರ ನೀಡಿದ ಹೊರತಾಗಿಯೂ ಆಗ್ರಾದಲ್ಲಿ ನಡೆದ ಸಮಾವೇಶ ವಾಜಪೇಯಿಯವರ ಆತ್ಮವಿಶ್ವಾಸದ ದ್ಯೋತಕವಾಗಿತ್ತು.

ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಕ್ರಾಂತಿ, ಮೊಬೈಲ್ ಟೆಲಿಫೋನ್ ಅಗ್ಗ ಆಗುವಂತೆ ಮಾಡುವ ನಿಟ್ಟಿನಲ್ಲಿ ನೀತಿಗಳನ್ನು ಪ್ರಕಟಿಸಿದ್ದು, ಭಾರತದ ಮೂಲೆ ಮೂಲೆಗಳನ್ನೂ ಚತುಷ್ಪಥ ಹೆದ್ದಾರಿಗಳಿಂದ ಸಂರ್ಪಸುವಂತೆ ಮಾಡಿದ್ದು ಹೀಗೆ ಅವರ ಸಾಧನೆಗಳನ್ನು ಪಟ್ಟಿಮಾಡುತ್ತ ಹೋಗಬಹುದು. ಇನ್ನು, ಸೈನ್ಯದ ವಿಚಾರಕ್ಕೆ ಬರುವುದಾದರೆ ಭಾರತವನ್ನು ಸಮರ್ಥ, ಶಕ್ತಿಶಾಲಿ ದೇಶವಾಗಿ ಮಾಡುವ ಅವರ ಕ್ರಮ ವಿಕಾಸ ಕೇಂದ್ರಿತ ನೀತಿಗೆ ಹಿಡಿದ ಕನ್ನಡಿಯಾಗಿದೆ. ಅಟಲ್​ಜಿ ಬಡತನ ನಿಮೂಲನೆ ಬಗ್ಗೆಯೂ ಸಾಕಷ್ಟು ಚಿಂತನೆ ನಡೆಸುತ್ತಿದ್ದರು. ಪಂಡಿತ್ ದೀನದಯಾಳ್ ಉಪಾಧ್ಯಾಯರ ಏಕಾತ್ಮ ಮಾನವತಾವಾದ ಮತ್ತು ಗಾಂಧಿ ಚಿಂತನೆಯಲ್ಲಿ ಅವರು ಆಳವಾದ ಶ್ರದ್ಧೆ ಹೊಂದಿದ್ದರು. ಹೀಗಾಗಿಯೇ ಬಿಜೆಪಿಯನ್ನು ಕಟ್ಟಿ ಬೆಳೆಸುವ ಸಂದರ್ಭದಲ್ಲಿ ಅವರು ಗಾಂಧಿವಾದಿ ಸಮಾಜವಾದವನ್ನು ತಮ್ಮದಾಗಿಸಿಕೊಂಡರು. ಅವರು ವಿರೋಧಿ ಪಕ್ಷಗಳ ನಾಯಕರ ಬಗ್ಗೆಯೂ ವ್ಯಕ್ತಿಗತ ಪ್ರಹಾರ ನಡೆಸುವವರಲ್ಲ. ಆ ದಿನಗಳಲ್ಲಿ ನಾವು ‘ಪಾಂಚಜನ್ಯ’ ಪತ್ರಿಕೆಯಲ್ಲಿ ಸೋನಿಯಾ ಗಾಂಧಿಯವರ ನೇತೃತ್ವದ ಕಾಂಗ್ರೆಸ್​ನ ಆಲೋಚನೆಗಳ ಬಗ್ಗೆ ಕೊಂಚ ಕಠೋರವಾಗಿಯೇ ಬರೆದಿದ್ದೆವು. ಈ ಸಮಯದಲ್ಲಿ ಪ್ರಧಾನಿ ಕಾರ್ಯಾಲಯದಿಂದಲೇ ಕರೆ ಮಾಡಿದ ಅಟಲ್ ಜೀ, ‘ವಿಜಯ್ಜೀ ನೀತಿಗಳು ಮತ್ತು ಕಾರ್ಯಕ್ರಮಗಳ ಬಗ್ಗೆ ಮಾತ್ರ ನಮ್ಮ ಗಮನವಿರಲಿ. ಆದರೆ ವ್ಯಕ್ತಿಗತ ಟೀಕೆ, ಪ್ರಹಾರಗಳನ್ನು ಮಾಡಬೇಡಿ. ಅದರಿಂದ ನಮಗೇ ಒಳ್ಳೆಯದಾಗುತ್ತದೆ’ಎಂದು ಎಚ್ಚರಿಸಿದ್ದರು. ಒಂದು ಬಾರಿ ನಾವು ‘ಧರ್ಮಕ್ಷೇತ್ರೆ ಕುರುಕ್ಷೇತ್ರೆ’ ಎಂಬ ಹೆಸರಿನಲ್ಲಿ ಅಂಕಣ ತಂದಿದ್ದೆವು. ಅದರ ಮುಖಪುಟದಲ್ಲಿ ಕಾಶಿಯ ಡೋಮ್ಾಜಾ(ಮೃತದೇಹಗಳಿಗೆ ಅಗ್ನಿಸ್ಪರ್ಶ ಮಾಡುವಾತ) ಏಳು ಸಂತರು, ಶಂಕರಾಚಾರ್ಯ ಮತ್ತು ವಿಶ್ವ ಹಿಂದೂ ಪರಿಷತ್​ನ ಆಗಿನ ಅಧ್ಯಕ್ಷ ಅಶೋಕ್ ಸಿಂಘಾಲ್ ಜತೆಗೆ ಕುಳಿತುಕೊಂಡು ಭೋಜನ ಸ್ವೀಕರಿಸುತ್ತಿರುವ ಚಿತ್ರವನ್ನು ಪ್ರಕಟಿಸಿದ್ದೆವು. ಇದನ್ನು ನೋಡಿ ಅಟಲ್ ಜೀ ಸಂತುಷ್ಟರಾಗಿದ್ದರು. ಖುಷಿಯಿಂದ ಮಾತನಾಡಿದ ಅವರು ಇಂತಹ ವಿಚಾರಗಳು ಸಾಕಷ್ಟು ಪ್ರಚಾರ ಪಡೆಯಬೇಕು. ಪ್ರಚಾರ ಸಿಕ್ಕಷ್ಟು ಉತ್ತಮ ಎಂದು ಹೇಳಿದ್ದರು. ಇಂತಹ ಕಾರ್ಯಕ್ರಮಗಳು ಹೆಚ್ಚಿನ ಸಂಖ್ಯೆಯಲ್ಲಿ ನಡೆಯಬೇಕು. ಆದರೆ ಅದು ಮನಃಪೂರ್ವಕವಾಗಿ ನಡೆಯಬೇಕೇ ವಿನಾ ಬರೀ ಫೋಟೊ ತೆಗೆಯಲು, ಪ್ರಚಾರ ಪಡೆದುಕೊಳ್ಳುವ ಸಲುವಾಗಿ ನಡೆಯಬಾರದು ಎಂದೂ ಕಿವಿಮಾತು ಹೇಳಿದ್ದರು. ಅವರು ‘ಪಾಂಚಜನ್ಯ’ದ ಪ್ರಥಮ ಸಂಪಾದಕರು ಮಾತ್ರವಲ್ಲ ಪ್ರಥಮ ಓದುಗರೂ ಆಗಿದ್ದರು. ಪ್ರಧಾನಿಯಾಗಿದ್ದ ಸಮಯದಲ್ಲಿ ಪ್ರತಿ ಅಂಕಣದ ಬಗ್ಗೆಯೂ ತಮ್ಮ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದರು. ಅದೊಂದು ಬಾರಿ ಸ್ವದೇಶಿ ಕೇಂದ್ರಿತ ಅಂಕಣದ ಮುಖಪುಟದಲ್ಲಿ ಭಾರತಮಾತೆಯ ದ್ರೌಪದಿಯ ವಸ್ತ್ರಾಪಹರಣದಂತಹ ಚಿತ್ರವನ್ನು ನೋಡಿ ಅವರು ಸಿಟ್ಟಾಗಿದ್ದರು. ‘ನಾವು ಬದುಕಿರುವಾಗಲೇ ಇಂತಹ ದೃಶ್ಯ ನೋಡಬೇಕಾಯಿತೇ? ನಾವು ಸತ್ತು ಹೋಗಿದ್ದೇವೇನು? ಸಂಯಮ ಮತ್ತು ನಮ್ರತೆಯ ಹೊರತಾಗಿ ಪತ್ರಕರ್ತನಾಗಲು ಸಾಧ್ಯವಿಲ್ಲ’ ಎಂದು ತುಸು ಅಸಮಾಧಾನದಿಂದಲೇ ಹೇಳಿದ್ದರು.

50ರ ದಶಕದಲ್ಲಿ ನೆಹರೂವಾದಿ ಮಾನಸಿಕತೆಯ ಪ್ರಭಾವದಿಂದಾಗಿ, ಭಿನ್ನ ವಿಚಾರಧಾರೆ ಹೊಂದಿದವರ ಮೇಲೆ ವೈಚಾರಿಕ ಅಸ್ಪಶ್ಯತೆಯ ಪ್ರಹಾರವಾಗುತ್ತಿತ್ತು. ಆಗ ಅಟಲ್ ಜೀಯವರ ಸಂಪಾದಕತ್ವದಲ್ಲಿ ಪಾಂಚಜನ್ಯ, ರಾಷ್ಟ್ರಧರ್ಮ, ಸ್ವದೇಶಿ, ಹಿಂದೂಸ್ಥಾನ್ ಮುಂತಾದ ಪತ್ರಿಕೆಗಳು ಹೊರಬರುತ್ತಿದ್ದವು. ಅವರು ಈ ಎಲ್ಲ ಪತ್ರಿಕೆಗಳಿಗೆ ಹೊಸತೊಂದು ಹಾದಿ ಮತ್ತು ಹೊಸತನವನ್ನು ತಂದುಕೊಟ್ಟರು. ಅವು ಸಂಘರ್ಷದ ದಿನಗಳಾಗಿದ್ದವು. ಪಂಡಿತ್ ದೀನದಯಾಳ್ ಉಪಾಧ್ಯಾಯರ ಜತೆಯಲ್ಲಿ ಎಂತಹ ಕಷ್ಟದ ದಿನಗಳಲ್ಲೂ ಶ್ರದ್ಧೆಯಿಂದ ಕಾರ್ಯನಿರ್ವಹಿಸಿದರು.

ಈ ವರ್ಷ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ವಾಜಪೇಯಿ ಜನ್ಮದಿನವನ್ನು ಸುಶಾಸನ ದಿವಸವನ್ನಾಗಿ ಆಚರಿಸಲು ನಿರ್ಧರಿಸಿದ್ದಾರೆ. ಒಮ್ಮೆ ಅಟಲ್​ಜೀ ಸುಶಾಸನದ ಬಗ್ಗೆ ಮಾತನಾಡುತ್ತಾ,‘ ದೇಶಕ್ಕೆ ಉತ್ತಮ ಆಡಳಿತ ಅಗತ್ಯ. ಜನಪ್ರತಿನಿಧಿಗಳು ಆಡಳಿತದ ಪ್ರಾಥಮಿಕ ಕರ್ತವ್ಯಗಳ ಪಾಲನೆ ಮಾಡಬೇಕು. ಎಲ್ಲ ನಾಗರಿಕರನ್ನು ಯಾವುದೇ ಭೇದಭಾವವಿಲ್ಲದೆ ನೋಡಬೇಕು ಮತ್ತು ಸುರಕ್ಷತೆ ನೀಡಬೇಕು, ಅದಕ್ಕಾಗಿ ಉತ್ತಮ ಶಿಕ್ಷಣ, ಆರೋಗ್ಯ ಹಾಗೂ ವಸತಿ ವ್ಯವಸ್ಥೇಗಳನ್ನು ಕಲ್ಪಿಸಲು ಯತ್ನಿಸಬೇಕು’ ಎಂದಿದ್ದರು.

ಅಟಲ್​ಜೀ ದೀರ್ಘಾಯುವಾಗಲಿ. ಅವರ ಜೀವನ ನೂರು ವಸಂತಗಳ ಉತ್ಸವದ ಪರಿಮಳದಿಂದ ಸುವಾಸಿತವಾಗಲಿ. ಅವರು ಭಾರತದ ರಾಷ್ಟ್ರೀಯ ನಾಯಕತ್ವದ ಒಂದು ಮಾದರಿ. ಇಂಥ ಇನ್ನಷ್ಟು ನಾಯಕರು ಮೂಡಿಬಂದು ಭಾರತ ಇನ್ನಷ್ಟು ಪ್ರಜ್ವಲಿಸುವಂತೆ ಮಾಡಲಿ.

Leave a Reply

Your email address will not be published. Required fields are marked *

Back To Top