Monday, 10th December 2018  

Vijayavani

ಆರ್​ಬಿಐ ಗವರ್ನರ್​ ಸ್ಥಾನಕ್ಕೆ ಊರ್ಜಿತ್​ ಪಟೇಲ್​ ರಾಜೀನಾಮೆ- ವಿಜಯ ಮಲ್ಯ ಗಡಿಪಾರಿಗೆ ಯುಕೆ ನ್ಯಾಯಾಲಯ ಆದೇಶ        ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ -ಮೊದಲ ದಿನ ಕಲಾಪದಲ್ಲಿ ಅಗಲಿದ ಗಣ್ಯರಿಗೆ ಸಂತಾಪ -ಮೈತ್ರಿ ಸರ್ಕಾರ ವಿರುದ್ಧ ಬಿಜೆಪಿ ಗುಡುಗು        ಸರ್ಕಾರದ ವಿರುದ್ದ ರೈತರ ಹೋರಾಟ -ದೀಡ್ ದಂಡ ನಮಸ್ಕಾರ, ಬಾರುಕೋಲು ಚಳುವಳಿ -ಪೀಪಿ ಊದಿ ನಾಯಕರನ್ನು ಎಚ್ಚರಿಸಿದ ರೈತರು        ಚಿಕ್ಕಬಳ್ಳಾಪುರದಲ್ಲಿ ಒತ್ತುವರಿ ಅರಣ್ಯ ಭೂಮಿ ತೆರವು -ಜೆಸಿಬಿ ಮುಂದೆ ಬಿದ್ದು ಗೋಳಾಡಿದ ರೈತರು -ಬಿಗಿ ಪೊಲೀಸ್ ಭದ್ರತೆಯಲ್ಲಿ ಕಾರ್ಯಾಚರಣೆ        940 ದಿನಗಳ ನಿರಂತರ ವಿದ್ಯುತ್ ಉತ್ಪಾದನೆ -ಕೈಗಾ ಅಣುಸ್ಥಾವರದಿಂದ ವಿಶ್ವ ದಾಖಲೆ -ಸ್ಥಳೀಯರ ವಿರೋಧದ ನಡುವೆಯೂ ಸಾಧನೆ        ಸಿದ್ಧಗಂಗಾ ಶ್ರೀಗಳ ಆರೋಗ್ಯದಲ್ಲಿ ಚೇತರಿಕೆ -ನಾಳೆ ವಾರ್ಡ್ ಗೆ ಶಿಫ್ಟ್ ಸಾಧ್ಯತೆ -ಅಲ್ಪಸಂಖ್ಯಾತ ವೈದ್ಯರ ಚಿಕಿತ್ಸೆ ಅಂತ ಪ್ರಸ್ತಾಪಿಸಿದ್ದ ಡಿಕೆಶಿ ಕ್ಷಮೆ        ಮಂಡ್ಯದ ನವದಂಪತಿಗೆ ವಿಶೇಷ ಗಿಫ್ಟ್ -ದೇಸೀ ಹಸು ಉಡುಗೊರೆ ನೀಡಿದ ಗೆಳೆಯರು -ಕಾಮಧೇನು ನೋಡಿ ಮದುಮಕ್ಕಳ ಸಂತಸ       
Breaking News

ದಕ್ಷಿಣ ಭಾರತದ ಬೃಹತ್ ಸ್ಪಟಿಕಲಿಂಗ

Thursday, 14.12.2017, 3:01 AM       No Comments

| ಪ್ರಶಾಂತ ರಿಪ್ಪನ್​ಪೇಟೆ

ಜಗತ್ತಿನಲ್ಲಿ ಸಾಕಷ್ಟು ರೀತಿಯ ಶಿವಲಿಂಗಗಳನ್ನು ಕಾಣುತ್ತೇವೆ. ಕಟ್ಟಿಗೆ, ಕಲ್ಲು, ಲೋಹ ಇತ್ಯಾದಿ ಲಿಂಗಗಳು ಸಾಮಾನ್ಯ. ಆದರೆ ಪಚ್ಚೆಲಿಂಗ, ಸಾಲಿಗ್ರಾಮ, ಸ್ಪಟಿಕದ ಅಪರೂಪದ ಲಿಂಗಗಳು ಕೆಲವೇ ಕೆಲವು ಕಡೆಗಳಲ್ಲಿ ಇರುತ್ತವೆ. ಆದರೆ ದಕ್ಷಿಣಭಾರತದಲ್ಲೇ ಅತ್ಯಂತ ದೊಡ್ಡ ಸ್ಪಟಿಕಲಿಂಗ ಕರ್ನಾಟಕದಲ್ಲಿರುವುದು ಹಲವರಿಗೆ ತಿಳಿದಿಲ್ಲ. ಹಾವೇರಿ ಜಿಲ್ಲೆಯ ರಾಣಿಬೆನ್ನೂರು ತಾಲೂಕಿನಲ್ಲಿ ಲಿಂಗದಹಳ್ಳಿ ಎಂಬ ಪುಟ್ಟ ಗ್ರಾಮದಲ್ಲಿ ಬೃಹತ್ ಸ್ಪಟಿಕಲಿಂಗವಿದೆ.

ದಕ್ಷಿಣ ಭಾರತದಲ್ಲಿ ಸ್ಪಟಿಕಲಿಂಗಗಳು ವಿರಳ. ಪುರಾತನ ರಾಮೇಶ್ವರದಲ್ಲಿ ಸ್ಪಟಿಕಲಿಂಗವಿದ್ದು ಗಾತ್ರದಲ್ಲಿ ಅತ್ಯಂತ ಚಿಕ್ಕದು. ಆದರೆ ಲಿಂಗದಹಳ್ಳಿಯ ಸ್ಪಟಿಕಲಿಂಗ ಒಂದು ಅಡಿಗಿಂತ (13-13 ಇಂಚು) ದೊಡ್ಡದಾಗಿದೆ. ಇದು ದಕ್ಷಿಣ ಭಾರತದಲ್ಲೇ ಬೃಹತ್ ಸ್ಪಟಿಕಲಿಂಗ ಎಂಬ ಹೆಗ್ಗಳಿಕೆ ಹೊಂದಿದೆ. ಜಗತ್ತಿನ 10 ಬೃಹತ್ ಸ್ಪಟಿಕಲಿಂಗಗಳಲ್ಲಿ ಲಿಂಗದಹಳ್ಳಿಯ ಸ್ಪಟಿಕಲಿಂಗವನ್ನು ಗುರುತಿಸಲಾಗಿದೆ. ಈ ಬಗ್ಗೆ ಸಾಕಷ್ಟು ಅಧ್ಯಯನಗಳಾಗಿದ್ದು, ಇಲ್ಲಿನಸ್ಪಟಿಕಲಿಂಗದ ಕುರಿತು ಅಂತರ್ಜಾಲದಲ್ಲಿ ವಿವರಗಳಿವೆ.

ಲಿಂಗದಹಳ್ಳಿ ಹಿರೇಮಠದಲ್ಲಿ ಅಪರೂಪದ ನರ್ಮದೇಶ್ವರ ಲಿಂಗವೂ ಇದೆ. ಮಧ್ಯಪ್ರದೇಶದ ಓಂಕಾರೇಶ್ವರಕ್ಷೇತ್ರದ ನರ್ಮದಾನದಿಯಲ್ಲಿ ದೊರೆಯುವ ಈ ನರ್ಮದಾಲಿಂಗಗಳಲ್ಲಿ ಸ್ವಯಂ ಶಿವಕಳೆ ಇರುತ್ತದೆ ಎಂಬುದು ನಂಬಿಕೆ. ಪುರಾಣದ ಪ್ರಕಾರ ಶಿವ ಶಿಲೆಯ ರೂಪವನ್ನು ತಾಳಿ, ಪಾರ್ವತಿ ನದಿಯ ರೂಪವನ್ನು ತಾಳುತ್ತಾಳೆ. ಹಾಗೆ ಶಿವ-ಶಕ್ತಿಯ ಸಮ್ಮಿಲನವಾಗಿ ವಿಶೇಷ ಸಾಲಿಗ್ರಾಮ ನೈಸರ್ಗಿಕ ಲಿಂಗಗಳು ಉತ್ಪತ್ತಿಯಾಗುತ್ತವೆ.

ಸ್ಪಟಿಕಲಿಂಗದ ಮಹತ್ವ

ಸ್ಪಟಿಕ ಶಕ್ತಿಯುತ ವಸ್ತು. ಹಿಮಗಡ್ಡೆಯೇ ಲಕ್ಷಾಂತರ ವರ್ಷದಿಂದ ಗಟ್ಟಿಯಾಗಿ ಸ್ಪಟಿಕವಾಗುತ್ತದೆ ಎನ್ನಲಾಗುತ್ತದೆ. ಸ್ಪಟಿಕದಲ್ಲಿ ನಕಾರಾತ್ಮಕ ಶಕ್ತಿಯನ್ನು ನಾಶಪಡಿಸಿ ಸಕಾರಾತ್ಮಕ ಶಕ್ತಿ ಹೆಚ್ಚಿಸುವ ಆಧ್ಯಾತ್ಮಿಕ ಶಕ್ತಿ ಇದೆ. ವೈಜ್ಞಾನಿಕವಾಗಿಯೂ ಸ್ಪಟಿಕದಲ್ಲಿ; ಮಾನಸಿಕ ಮತ್ತು ದೈಹಿಕ ಆರೋಗ್ಯ ವೃದ್ಧಿಸುವ, ದೇಹದ ಉಷ್ಣತೆಯನ್ನು ತಗ್ಗಿಸಿ ಸಮತೋಲನ ಕಾಪಾಡುವ ಸಾಮರ್ಥ್ಯವಿದೆ. ಈ ಕಾರಣದಿಂದಲೇ ಯೋಗಿಗಳು, ಸಾಧು-ಸಂತರು, ಸ್ವಾಮೀಜಿಗಳು ಸ್ಪಟಿಕದ ಮಾಲೆಯನ್ನು ಧರಿಸಿ ಧ್ಯಾನ, ಜಪವನ್ನು ಮಾಡುತ್ತಾರೆ.

ಸ್ಪಟಿಕಲಿಂಗದಲ್ಲಿ ಅಪಾರ ಶಕ್ತಿ ಇದೆ ಎಂಬ ಉಲ್ಲೇಖವಿದೆ. ಯುಜುರ್ವೆದದಲ್ಲಿ ‘ಜ್ಯೋತಿಸ್ಪಾಟಿಕ ಲಿಂಗ’ ಎಂಬ ಪ್ರಸ್ತಾಪವಿದೆ. ಅಂದರೆ ಶಿವನು ಜ್ಯೋತಿ, ಲಿಂಗ ಮತ್ತು ಸ್ಪಾಟಿಕ ರೂಪದಲ್ಲಿ ಇದ್ದಾನೆ. ಆದ್ದರಿಂದ ಸ್ಪಟಿಕಲಿಂಗಕ್ಕೆ ಹೆಚ್ಚಿನ ಮಹತ್ವ ನೀಡಲಾಗಿದೆ. ‘ಶುದ್ಧಸ್ಪಟಿಕ ಸಂಕಾಶಂ ವಿದ್ಯಾ ಪ್ರದಾಯಕಂ, ಶುದ್ಧಂ ಪೂರ್ಣ ಚಿದಾನಂದಂ | ಸದಾಶಿವಮಹಂ ಭಜೇ ||’ ಎಂದು ರುದ್ರಾಧ್ಯಾಯದ ಧ್ಯಾನದಲ್ಲಿ ಹೇಳಲಾಗಿದೆ. ಅಂದರೆ ಸ್ಪಟಿಕಲಿಂಗದ ದರ್ಶನ, ಸ್ಪರ್ಶನದಿಂದ ನಿಸ್ಸಂಶಯವಾಗಿ ಶೀಘ್ರ ಫಲಗಳು ದೊರೆಯುತ್ತವೆ. ಅದರಲ್ಲೂ ಶುದ್ಧವಿದ್ಯೆ, ಪೂರ್ಣತ್ವ, ಚಿದಾನಂದತ್ವವು ಲಭಿಸುತ್ತದೆ. ಶಾಸ್ತ್ರದ ಪ್ರಕಾರ ಸೂರ್ಯೋದಯ ಮತ್ತು ಸೂರ್ಯಾಸ್ತದ ಸಮಯದಲ್ಲಿ ಸ್ಪಟಿಕಲಿಂಗವನ್ನು ದರ್ಶನ ಮಾಡಿ ಪೂಜಿಸುವುದರಿಂದ ಸರ್ವ ಬೇಡಿಕೆಗಳು ಈಡೇರುತ್ತವೆ. ಅಂತೆಯೇ ಲಿಂಗದಹಳ್ಳಿ ಹಿರೇಮಠದಲ್ಲಿ ಸರ್ವಧರ್ವಿುಯರಿಗೂ ಸ್ಪಟಿಕಲಿಂಗವನ್ನು ಪೂಜಿಸಲು ಅವಕಾಶ ಮಾಡಿಕೊಡಲಾಗಿದೆ.

ಜಗತ್ತಿನಲ್ಲಿ ಸಾಕಷ್ಟು ರೀತಿಯ ಶಿವಲಿಂಗಗಳನ್ನು ಕಾಣುತ್ತೇವೆ. ಕಟ್ಟಿಗೆ, ಕಲ್ಲು, ಲೋಹ ಇತ್ಯಾದಿ ಲಿಂಗಗಳು ಸಾಮಾನ್ಯ. ಆದರೆ ಪಚ್ಚೆಲಿಂಗ, ಸಾಲಿಗ್ರಾಮ, ಸ್ಪಟಿಕದ ಅಪರೂಪದ ಲಿಂಗಗಳು ಕೆಲವೇ ಕೆಲವು ಕಡೆಗಳಲ್ಲಿ ಇರುತ್ತವೆ. ಆದರೆ ದಕ್ಷಿಣಭಾರತದಲ್ಲೇ ಅತ್ಯಂತ ದೊಡ್ಡ ಸ್ಪಟಿಕಲಿಂಗ ಕರ್ನಾಟಕದಲ್ಲಿರುವುದು ಹಲವರಿಗೆ ತಿಳಿದಿಲ್ಲ. ಹಾವೇರಿ ಜಿಲ್ಲೆಯ ರಾಣಿಬೆನ್ನೂರು ತಾಲೂಕಿನಲ್ಲಿ ಲಿಂಗದಹಳ್ಳಿ ಎಂಬ ಪುಟ್ಟ ಗ್ರಾಮದಲ್ಲಿ ಬೃಹತ್ ಸ್ಪಟಿಕಲಿಂಗವಿದೆ.

ದಕ್ಷಿಣ ಭಾರತದಲ್ಲಿ ಸ್ಪಟಿಕಲಿಂಗಗಳು ವಿರಳ. ಪುರಾತನ ರಾಮೇಶ್ವರದಲ್ಲಿ ಸ್ಪಟಿಕಲಿಂಗವಿದ್ದು ಗಾತ್ರದಲ್ಲಿ ಅತ್ಯಂತ ಚಿಕ್ಕದು. ಆದರೆ ಲಿಂಗದಹಳ್ಳಿಯ ಸ್ಪಟಿಕಲಿಂಗ ಒಂದು ಅಡಿಗಿಂತ (13-13 ಇಂಚು) ದೊಡ್ಡದಾಗಿದೆ. ಇದು ದಕ್ಷಿಣ ಭಾರತದಲ್ಲೇ ಬೃಹತ್ ಸ್ಪಟಿಕಲಿಂಗ ಎಂಬ ಹೆಗ್ಗಳಿಕೆ ಹೊಂದಿದೆ. ಜಗತ್ತಿನ 10 ಬೃಹತ್ ಸ್ಪಟಿಕಲಿಂಗಗಳಲ್ಲಿ ಲಿಂಗದಹಳ್ಳಿಯ ಸ್ಪಟಿಕಲಿಂಗವನ್ನು ಗುರುತಿಸಲಾಗಿದೆ. ಈ ಬಗ್ಗೆ ಸಾಕಷ್ಟು ಅಧ್ಯಯನಗಳಾಗಿದ್ದು, ಇಲ್ಲಿನಸ್ಪಟಿಕಲಿಂಗದ ಕುರಿತು ಅಂತರ್ಜಾಲದಲ್ಲಿ ವಿವರಗಳಿವೆ.

ಲಿಂಗದಹಳ್ಳಿ ಹಿರೇಮಠದಲ್ಲಿ ಅಪರೂಪದ ನರ್ಮದೇಶ್ವರ ಲಿಂಗವೂ ಇದೆ. ಮಧ್ಯಪ್ರದೇಶದ ಓಂಕಾರೇಶ್ವರಕ್ಷೇತ್ರದ ನರ್ಮದಾನದಿಯಲ್ಲಿ ದೊರೆಯುವ ಈ ನರ್ಮದಾಲಿಂಗಗಳಲ್ಲಿ ಸ್ವಯಂ ಶಿವಕಳೆ ಇರುತ್ತದೆ ಎಂಬುದು ನಂಬಿಕೆ. ಪುರಾಣದ ಪ್ರಕಾರ ಶಿವ ಶಿಲೆಯ ರೂಪವನ್ನು ತಾಳಿ, ಪಾರ್ವತಿ ನದಿಯ ರೂಪವನ್ನು ತಾಳುತ್ತಾಳೆ. ಹಾಗೆ ಶಿವ-ಶಕ್ತಿಯ ಸಮ್ಮಿಲನವಾಗಿ ವಿಶೇಷ ಸಾಲಿಗ್ರಾಮ ನೈಸರ್ಗಿಕ ಲಿಂಗಗಳು ಉತ್ಪತ್ತಿಯಾಗುತ್ತವೆ.

ಲಿಂಗದಹಳ್ಳಿ ಮಠದ ಇತಿಹಾಸ

ಲಿಂಗದಹಳ್ಳಿ ಹಿರೇಮಠದ ಮೂಲ ಬಿಜಾಪುರ ಜಿಲ್ಲೆ ಇಂಡಿ ತಾಲೂಕಿನ ಎಳಮಲ್ಲಿ ಎಂಬ ಗ್ರಾಮ. ಸುಮಾರು ಎಂಟನೇ ಶತಮಾನದಿಂದಲೂ ಶ್ರೀಮಠ ತನ್ನ ಕಾರ್ಯ ನಡೆಸಿಕೊಂಡು ಬಂದಿದೆ ಎನ್ನಲಾಗುತ್ತದೆ. ನಂತರ ಹಗರಿಬೊಮ್ಮನಹಳ್ಳಿ ತಾಲೂಕಿನ ತಂಬರಹಳ್ಳಿಗೆ ಸ್ಥಳಾಂತರಗೊಂಡಿದ್ದ ಶ್ರೀಮಠವು ಹದಿನೈದನೇ ಶತಮಾನದಲ್ಲಿ ಈಗಿನ ಹಾವೇರಿ ಜಿಲ್ಲೆ ರಾಣಿಬೆನ್ನೂರು ತಾಲೂಕಿನ ಲಿಂಗದಹಳ್ಳಿಗೆ ಬಂದು ನೆಲೆಸಿದ ಬಗ್ಗೆ ಇತಿಹಾಸವಿದೆ. ಕೈಬರಹದ ಹಲವು ಹಳೆಯ ಗ್ರಂಥಗಳು, ತಾಡೋಲೆ ಕಟ್ಟುಗಳು ಶ್ರೀಮಠದ ಪರಂಪರೆ ಹೇಳುತ್ತವೆ. ವಲಸೆ ಬರುವಾಗ ತಮ್ಮ ಪೂರ್ವಿಕರಿಂದ ಲಭ್ಯವಾಗಿದ್ದ ಸ್ಪಟಿಕಲಿಂಗವನ್ನು ತೆಗೆದುಕೊಂಡು ಬಂದರು. ಲಿಂಗದಹಳ್ಳಿ ಹೆಸರಿನಂತೆ ಲಿಂಗತತ್ವ ಪ್ರಸಾರಕ್ಕೆ ಸೂಕ್ತ ಸ್ಥಳವೆಂದು ಸ್ಪಟಿಕಲಿಂಗವನ್ನು ಇಲ್ಲಿ ಸ್ಥಾಪಿಸಿದ್ದಾರೆ. ಅಂದಿನಿಂದ ವಂಶಾವಳಿ ಮಠದ ಪರಂಪರೆ ಇಂದಿಗೂ ಹಾಗೆಯೇ ಮುಂದುವರೆದಿದೆ. ವೇ.ಮೂ. ಚನ್ನಮಲ್ಲಪ್ಪ ಮತ್ತು ಶರಣೆ ಚನ್ನಮ್ಮನವರ ಪುತ್ರರಾದ ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮಿಗಳು ಸದ್ಯದ ಪೀಠಾಧಿಪತಿಗಳಾಗಿದ್ದು, ಸ್ವತಃ ವಿದ್ವಾಂಸರೂ, ತಪೋನಿಷ್ಠರೂ ಆಗಿದ್ದಾರೆ. ಪೂಜ್ಯರು ಅಷ್ಟಾಕೃತಿಯ ಬೃಹತ್ ಶಿಲಾಮಠವನ್ನು ನಿರ್ವಿುಸಿದ್ದಾರೆ. ಆದಿಜಗದ್ಗುರು ರೇಣುಕಾಚಾರ್ಯರನ್ನು ಸ್ಥಾಪಿಸಿ ಮುಂದೆ ಸ್ಪಟಿಕಲಿಂಗವನ್ನು ಪುನರ್ ಸ್ಥಾಪಿಸಿದ್ದಾರೆ. ಮಠದ ಆವರಣದಲ್ಲಿ ದ್ವಾದಶ ಜ್ಯೋತಿರ್ಲಿಂಗದ ಪ್ರತೀಕವಾಗಿ 12 ಲಿಂಗಗಳು, 18 ಶಕ್ತಿಪೀಠಗಳ ಪ್ರತೀಕವಾಗಿ ಶಕ್ತಿದೇವತೆಯರನ್ನು ಸ್ಥಾಪಿಸಿದ್ದಾರೆ. ಗೋತ್ರಪುರುಷ ವೀರಭದ್ರಸ್ವಾಮಿ, ಗವಿಸಿದ್ದೇಶ್ವರ ಸ್ವಾಮಿ ಮತ್ತು ಶಿಲಾಮಠದ ಮೇಲೆ 101 ಸ್ಥಲಗಳ ಪ್ರತೀಕವಾಗಿ 101 ಲಿಂಗಗಳನ್ನು ಸ್ಥಾಪಿಸುವ ಮೂಲಕ ಲಿಂಗದಹಳ್ಳಿ ಎಂಬ ಹೆಸರಿಗೆ ಸೂಕ್ತವಾಗಿ ಕ್ಷೇತ್ರವನ್ನು ಅಭಿವೃದ್ಧಿಗೊಳಿಸಿದ್ದಾರೆ.

ಹೋಗುವ ಮಾರ್ಗ

ಬೆಂಗಳೂರಿನಿಂದ 320 ಕಿ.ಮೀ. ದೂರವಿರುವ ಲಿಂಗದಹಳ್ಳಿಗೆ ರಾ.ಹೆ. 48ರ ಮೂಲಕ ರಾಣಿಬೆನ್ನೂರಿನ ತನಕ ಹೋಗಿ ಅಲ್ಲಿಂದ 20 ಕಿ.ಮೀ. ಕ್ರಮಿಸಿ ತಲುಪಬಹುದು.

(ಪ್ರತಿಕ್ರಿಯಿಸಿ:[email protected][email protected])

Leave a Reply

Your email address will not be published. Required fields are marked *

Back To Top