More

  ಥಲಸ್ಸೆಮಿಯಾ ರೋಗ ಪತ್ತೆಗೆ ವೈದ್ಯರನ್ನು ಭೇಟಿ ಮಾಡಿ

  ಬಳ್ಳಾರಿ : ಅನುವಂಶೀಯ ಆಧಾರಿತ ರಕ್ತದ ತೊಂದರೆಯ ಕಾಯಿಲೆಯಾದ ಥಲಸ್ಸೆಮಿಯಾ ರೋಗದ ಆರಂಭಿಕ ಪತ್ತೆಗಾಗಿ ಹತ್ತಿರದ ವೈದ್ಯರನ್ನು ಭೇಟಿ ಮಾಡಿ ಎಂದು ಡಿಎಚ್‌ಒ ಡಾ.ವೈ.ರಮೇಶ ಬಾಬು ತಿಳಿಸಿದರು.
  ನಗರದ ಜಿಲ್ಲಾಸ್ಪತ್ರೆಯ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ನಿಯಂತ್ರಣ ಘಟಕ, ತಾಲೂಕು ಆರೋಗ್ಯಾಧಿಕಾರಿಗಳ ಕಾರ್ಯಾಲಯ ಸಹಯೋಗದೊಂದಿಗೆ ವೈದ್ಯಾಧಿಕಾರಿಗಳಿಗೆ ಮತ್ತು ಸಿಬ್ಬಂದಿಗಳಿಗೆ ಬುಧವಾರ ನಡೆದ ವಿಶ್ವ ಥಲಸ್ಸೆಮಿಯಾ ಜಾಗೃತಿ ದಿನ ಕಾರ್ಯಕ್ರಮದಲ್ಲಿ ಮಾತನಾಡಿದರು.
  ಥಲಸ್ಸೆಮಿಯಾ ಅನುವಂಶೀಯ ಆಧಾರಿತ ರಕ್ತದ ತೊಂದರೆಯ ಕಾಯಿಲೆಯಾಗಿದ್ದು. ದೇಹದಲ್ಲಿ ಸೂಕ್ತ ಸಂಖ್ಯೆಯ ಕೆಂಪು ರಕ್ತ ಕಣಗಳನ್ನು ಉತ್ಪಾದಿಸುವಲ್ಲಿ ವಿಫಲವಾಗಿ ಉತ್ಪಾದನೆಯಾದ ರಕ್ತಕಣಗಳನ್ನು ಕೂಡ ಬೇಗನೇ ನಾಶವಾಗಿ ಹಿಮೋಗ್ಲೋಬಿನ್ ಮಟ್ಟ ಅತ್ಯಂತ ಕಡಿಮೆಯಾಗುತ್ತದೆ. ಇದರ ಪರಿಣಾಮವಾಗಿ ಸುಸ್ತು, ಅಶಕ್ತತೆ, ದಮ್ಮು, ಕೆಮ್ಮು, ಕಂಡುಬರುತ್ತವೆ. ಅಲ್ಲದೇ ರಕ್ತ ಹೀನತೆ ಉಲ್ಬಣಗೊಂಡಾಗ ಅಂಗಾಂಗಗಳ ವೈಫಲ್ಯ ಉಂಟಾಗಿ ವ್ಯಕ್ತಿಯ ಮರಣಕ್ಕೂ ಕಾರಣವಾಗಬಹುದು ಈ ದಿಶೆಯಲ್ಲಿ ರೋಗವನ್ನು ಆರಂಭದಲ್ಲಿಯೇ ಗುರ್ತಿಸಿ ಸೂಕ್ತ ಚಿಕಿತ್ಸೆ ನೀಡಲು ಸಹಾಯಕವಾಗುತ್ತದೆ ಎಂದರು.
  ಈ ರೋಗದಿಂದ ಬಳಲುವ ಸುಮಾರು 60,000 ಮಕ್ಕಳು ಪ್ರತಿ ವರ್ಷ ಹುಟ್ಟುತ್ತಾರೆಂದು ಗುರುತಿಸಲಾಗಿದೆ. ಏಷಿಯಾ, ಚೀನಾ, ಮೆಡಿಟೇರಿಯನ್, ಗ್ರೀಸ್, ಟರ್ಕಿ, ಆಫ್ರಿಕಾ ಮತ್ತು ಅಮೇರಿಕದಲ್ಲಿಯೂ ರೋಗದ ತೀವ್ರತೆ ಹೆಚ್ಚಿನ ಮಟ್ಟದಲ್ಲಿ ಕಂಡುಬಂದಿದೆ. ಪ್ರಸ್ತುತ ಬಳ್ಳಾರಿ ಜಿಲ್ಲೆಯಲ್ಲಿ 76 ಜನ ಥಲಸ್ಸೀಮಿಯಾ ರೋಗಕ್ಕೆ ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ ಎಂದು ಮಾಹಿತಿ ನೀಡಿದರು.
  ಈ ಸಂದರ್ಭದಲ್ಲಿ ಹಿರಿಯ ವೈದ್ಯರಾದ ಡಾ.ನರಸಿಂಹಮೂರ್ತಿ, ಡಾ.ಭಾರತಿ, ಡಾ.ಚೈತ್ರಾ, ಡಾ.ಕರುಣಾ, ಡಾ.ಕಾಶಿಪ್ರಸಾದ್, ಡಾ.ಪ್ರಲ್ಹಾದ್, ಡಾ.ಜಬೀನ ತಾಜ್, ಡಾ.ಫಮೀದಾ ಇದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts