More

  ತುಲಾಭಾರ ಚಕ್ರವರ್ತಿ ಪುಟ್ಟರಾಜರು

  ಮುಂಡರಗಿ: ಶ್ರೀ ವೀರೇಶ್ವರ ಪುಣ್ಯಾಶ್ರಮದ ಶ್ರೀ ಪುಟ್ಟರಾಜ ಗವಾಯಿಗಳು ನಾಡಿನ ಉದ್ದಗಲಕ್ಕೂ ಸಂಚರಿಸಿ ತá-ಲಾಭಾರ ಚಕ್ರವರ್ತಿ ಎನಿಸಿಕೊಂಡು, ತುಲಾಭಾರದಿಂದ ಬಂದ ದವಸ, ದಾನ್ಯ, ಕಾಣಿಕೆಗಳನ್ನು ವೀರೇಶ್ವರ ಪುಣ್ಯಾಶ್ರಮದ ವಿದ್ಯಾರ್ಥಿಗಳಿಗೆ ವಿನಿಯೋಗಿಸಿ ಸಾರ್ಥಕತೆ ಮೆರೆದವರು ಎಂದು ನಾಡೋಜ ಡಾ.ಅನ್ನದಾನೀಶ್ವರ ಸ್ವಾಮೀಜಿ ಹೇಳಿದರು.

  ಪಟ್ಟಣದ ಜಗದ್ಗುರು ಅನ್ನದಾನೀಶ್ವರ ಸಂಸ್ಥಾನಮಠದಲ್ಲಿ ಡಾ.ಪಂ.ಪುಟ್ಟರಾಜ ಸೇವಾ ಸಮಿತಿ ವತಿಯಿಂದ ಶನಿವಾರ ಆಯೋಜಿಸಿದ್ದ ಡಾ.ಪಂಡಿತ ಪುಟ್ಟರಾಜ ಗವಾಯಿಗಳ 12ನೇ ಪುಣ್ಯ ಸ್ಮರಣೋತ್ಸವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.

  ಅಧ್ಯಕ್ಷತೆ ವಹಿಸಿದ್ದ ಡಾ.ಪಂ.ಪುಟ್ಟರಾಜ ಸೇವಾ ಸಮಿತಿ ಸಂಸ್ಥಾಪಕ ವೇ.ಚನ್ನವೀರಸ್ವಾಮಿ ಹಿರೇಮಠ ಮಾತನಾಡಿ, ಪುಟ್ಟರಾಜ ಗುರುಗಳ ಸಾಹಿತ್ಯ ಸಂಗೀತ ಸೇವೆ ಈ ನಾಡಿನ ಉದ್ದಗಲಕ್ಕೂ ಪಸರಿಸುವ ಉದ್ದೇಶದಿಂದ ಸೇವಾ ಸಮಿತಿ ಸ್ಥಾಪಿಸಿ ಜಿಲ್ಲಾ, ತಾಲೂಕು, ಹೋಬಳಿ ಮಟ್ಟದಲ್ಲಿ ಸಮಿತಿ ರಚಿಸುತ್ತಿದ್ದೇವೆ ಎಂದರು.

  ಸಾಹಿತಿ ಡಾ.ನಿಂಗು ಸೊಲಗಿ ಮಾತನಾಡಿ, ಜಗತ್ತಿನಲ್ಲಿ ಗಾನಸುಧೆಯ ಕಂಪು ಇನ್ನೂ ಹರಡುತ್ತಲಿದೆ, ಬೆಳೆಯುತ್ತಲಿದೆ ಎಂದರೆ ಅದಕ್ಕೆ ಪೂಜ್ಯ ಪಂಡಿತ ಪುಟ್ಟರಾಜ ಗವಾಯಿಗಳು ಸಾಕ್ಷಿ ಎಂದರು.

  ಪಂಡಿತ ಪುಟ್ಟರಾಜ ಪೂಜ್ಯರ ಕುರಿತು ಆಯೋಜಿಸಿದ್ದ ಕವಿಗೋಷ್ಠಿಯಲ್ಲಿ ಈರಮ್ಮ ಕುಂದಗೋಳ, ಎನ್.ಎಸ್. ಶಿರನಹಳ್ಳಿ, ಶಿವಾನಂದ ಭಜಂತ್ರಿ, ಶಿವು ವಾಲಿಕಾರ, ಮಂಜುನಾಥ ಹೂವಿನಹಡಗಲಿ, ರಾಘವೇಂದ್ರ ಗೆಜ್ಜಿ ಕವನ ವಾಚಿಸಿದರು.

  ಸಮಿತಿ ಜಿಲ್ಲಾಧ್ಯಕ್ಷ ಮಂಜುನಾಥ ಹುಳ್ಳೂರಮಠ, ಜಿಲ್ಲಾ ಕಾರ್ಯದರ್ಶಿ ದೇವು ಹಡಪದ, ಲಕ್ಷೆ್ಮೕಶ್ವರ ತಾಲೂಕು ಸಂಚಾಲಕ ಗುಡ್ಡಪ್ಪ ಹಡಪದ, ಗದಗ ಶಹರ ತಾಲೂಕು ಸಂಚಾಲಕ ಶಿವಾನಂದ ಭಜಂತ್ರಿ, ರೋಣ ತಾಲೂಕು ಸಂಚಾಲಕ ಶರಣು ಚಲವಾದಿ, ನರಗುಂದ ತಾಲೂಕು ಸಂಚಾಲಕ ರಾಘವೇಂದ್ರ ಗೆಜ್ಜಿ ಅವರಿಗೆ ಪ್ರಮಾಣ ಪತ್ರ ನೀಡಲಾಯಿತು.

  ಮಂಜುನಾಥ ಇಟಗಿ, ಎಂ.ಜಿ. ಗಚ್ಚಣ್ಣವರ, ದೇವಪ್ಪ ಇಟಗಿ, ಲೋಕೇಶ ದೊಡ್ಡಮನಿ, ರಾಮಣ್ಣ ತಿಪ್ಪಾಪೂರ, ಉಷಾ ತಳಕಲ್ಲ, ಮಂಜುಳಾ ಇಟಗಿ, ಮಂಜುನಾಥ ಮುಧೋಳ, ಈಶಣ್ಣ ಬಡಿಗೇರ ಉಪಸ್ಥಿತರರು ಇದ್ದರು. ಶರಣಯ್ಯ ಹಿರೇಮಠ ಸ್ವಾಗತಿಸಿದರು. ಶಿವು ವಾಲಿಕಾರ ನಿರೂಪಿಸಿದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts