ಸಿನಿಮಾ

ತ್ವರಿತ ನ್ಯಾಯದಾನಕ್ಕೆ ಬೇಕು ಸಹಕಾರ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರ ಅಭಿಪ್ರಾಯ

ಚಿತ್ರದುರ್ಗ: ನ್ಯಾಯಾಧೀಶರ ಹಾಗೂ ವಕೀಲರ ಪರಸ್ಪರ ಸಹಕಾರದಿಂದ ಕಕ್ಷಿದಾರರಿಗೆ ತ್ವರಿತವಾಗಿ ನ್ಯಾಯ ನೀಡಲು ನೆರವಾಗಲಿದೆ ಎಂದು ಪ್ರಧಾ ನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಪ್ರೇಮಾವತಿ ಎಂ.ಮನಗೂಳಿ ಹೇಳಿದರು.
ನಗರದ ವಕೀಲರ ಸಂಘದಲ್ಲಿ ಸೋಮವಾರ ಸ್ಥಳೀಯ ನ್ಯಾಯಾಲಯಕ್ಕೆ ವರ್ಗಾವಣೆಯಾಗಿರುವ ನ್ಯಾಯಾಧೀಶರ ಸ್ವಾಗತ ಸಮಾರಂಭದಲ್ಲಿ ಮಾತನಾಡಿ, ಪರಸ್ಪರರ ನಡುವೆ ಸಹಕಾರ ನ್ಯಾಯಾಂಗ ವ್ಯವಸ್ಥೆಯನ್ನು ಮುನ್ನಡೆಸಲು ಸಾಧ್ಯವಾಗಲಿದೆ. ಜಿಲ್ಲಾ ವಕೀಲರ ಸಂಘ ಶಿಸ್ತು, ಶಾಂತಿ, ಸೌಹಾರ್ದತೆ, ಸಹಕಾರಕ್ಕೆ ಹೆಸರಾಗಿದೆ. ಇಲ್ಲಿ ಕೆಲಸ ಮಾಡುವುದು ಒಂದು ಹೆಮ್ಮೆಯ ವಿಷಯ ಎಂದರು.
ವಕೀಲರ ಸಂಘದ ಅಧ್ಯಕ್ಷ ಸಿ.ಶಿವು ಯಾದವ್ ಮಾತನಾಡಿ, ಚಿತ್ರದುರ್ಗ ನ್ಯಾಯಾಲಯಕ್ಕೆ ಒಂದು ವಿಶೇಷ ಸ್ಥಾನವಿದೆ. ಇಲ್ಲಿ ನ್ಯಾಯಾಧೀಶರಾಗಿ ಕರ್ತವ್ಯ ನಿರ್ವಹಿಸಿದ ಅನೇಕರು ಹೈಕೋರ್ಟ್ ನ್ಯಾಯಾಮೂರ್ತಿಗಳಾಗಿ ಬಡ್ತಿ ಹೊಂದಿದ್ದಾರೆ. ನೂತನವಾಗಿ ಬಂದ ನ್ಯಾಯಾಧೀಶರನ್ನು ಸ್ವಾಗತಿಸುವುದು ಮತ್ತು ಬೇರೆಡೆ ವರ್ಗಾವಣೆಯಾದವರನ್ನು ಬಿಳ್ಕೋಡುಗೆ ನೀಡುವುದು ಸಂಘದ ಸಂಪ್ರದಾಯವಾಗಿದೆ ಎಂದರು.
ಪ್ರಧಾನ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಧೀಶೆ ಗೀತಾ ಕುಂಬಾರ್, ಒಂದನೇ ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಧೀಶೆ ಚೈತ್ರಾ ಮತ್ತು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ವಿಜಯ್ ಎಂ.ಮಾರಪ್ಪ ಅವರನ್ನು ಸಂಘದ ಪದಾಧಿಕಾರಿಗಳು ಸ್ವಾಗತಿ ಸಿದರು.
ನ್ಯಾಯಾಧೀಶರಾದ ಶಂಕ್ರಪ್ಪ ನಿಂಬಣ್ಣ ಕಲ್ಕಣಿ, ಬಿ.ಕೆ.ಕೋಮಲಾ, ಕೆಂಪರಾಜು, ನೇಮಿಚಂದ್ರ, ಅನಿತಾಕುಮಾರಿ, ಸಹನಾ, ವಕೀಲರ ಸಂಘದ ಉಪಾಧ್ಯಕ್ಷ ಜಿ.ಸಿ.ದಯಾನಂದ, ಪ್ರಧಾನ ಕಾರ್ಯದರ್ಶಿ ಎಂ.ಮೂರ್ತಿ, ಸಹ ಕಾರ್ಯದರ್ಶಿ ವಿಶ್ವನಾಥ ರೆಡ್ಡಿ, ಖಜಾಂಚಿ ಅಜ್ಜಯ್ಯ ಇತರರಿದ್ದರು.

Latest Posts

ಲೈಫ್‌ಸ್ಟೈಲ್