Monday, 17th December 2018  

Vijayavani

ಸುಳ್ವಾಡಿ ವಿಷಪ್ರಸಾದ ದುರಂತ ಪ್ರಕರಣ-ಆರೋಗ್ಯ ಸಚಿವರ ಉಡಾಫೆ ಹೇಳಿಕೆ ಪ್ರಸ್ತಾಪ-ಪರಿಷತ್​ನಲ್ಲಿ ಬಿಜೆಪಿಯಿಂದ ನಿಲುವಳಿ ಸೂಚನೆ        ಶುರುವಾಯ್ತು ಪೆಥಾಯ್ ಪ್ರತಾಪ-ಆಂಧ್ರ, ತಮಿಳುನಾಡು ಕರಾವಳಿಯಲ್ಲಿ ಅಲೆಗಳ ಅಬ್ಬರ-ಚೆನ್ನೈ ಸೇರಿ ಹಲವೆಡೆ ಭಾರಿ ಮಳೆ ಸಾಧ್ಯತೆ        ಒಂದೇ ರಸ್ತೆ, ಎರಡು ಇಲಾಖೆ ಬಿಲ್-ಭೂಸೇನೆ, ಪಿಡಬ್ಲ್ಯೂಡಿ ಇಲಾಖೆ ಬಿಲ್​​ಗಾಗಿ ಪೈಪೋಟಿ-ಮುಗಿದ ರಸ್ತೆಗೆ ಗುದ್ದಲಿ ಪೂಜೆ ನೆರವೇರಿಸಿದ ಕೈ ಶಾಸಕ        ಇನ್ನೂ ನಿಂತಿಲ್ಲ ‘ವಿಷ’ಪ್ರಸಾದದ ಎಫೆಕ್ಟ್-ಚಿಕಿತ್ಸೆ ಪಡೀತಿರೋ 30 ಜನ್ರ ಸ್ಥಿತಿ ಗಂಭೀರ-ಆರೋಪಿತರ ಪರ ವಕಾಲತ್ತು ವಹಿಸದಿರಲು ವಕೀಲರ ನಿರ್ಧಾರ        ಇಂದು 3 ರಾಜ್ಯ ಸಿಎಂಗಳ ಪದಗ್ರಹಣ-ರಾಜ್ಯದಿಂದ ಸಿಎಂ ಎಚ್​ಡಿಕೆ, ಸಿದ್ದುಗೆ ವಿಶೇಷ ಆಹ್ವಾನ-ಕೈ ಸಮಾರಂಭದಲ್ಲಿ ತೃತೀಯ ಶಕ್ತಿ ಪ್ರದರ್ಶನ        37ನೇ ವಸಂತಕ್ಕೆ ‘ಉಗ್ರಂ’ ಸ್ಟಾರ್ ಮುರಳಿ-37ನೇ ಬರ್ತಡೇ.. 37 ಕೆಜಿ ಕೇಕ್ ಕಟ್-ಫ್ಯಾನ್ಸ್​​ಗೆ ಭರಾಟೆ ಟೀಸರ್, ಮದಗಜ ಫಸ್ಟ್ ಪೋಸ್ಟರ್ ಗಿಫ್ಟ್       
Breaking News

ತ್ರೖೆಲೋಕ್ಯಾಕ್ರಮಣ, ಪುನಃಪುನರಾವರ್ತನೆ

Tuesday, 14.11.2017, 3:07 AM       No Comments

ಭಾರತ, ಕಮ್ಯುನಿಸ್ಟರ ಆಕ್ರಮಣಕ್ಕೆ ತುತ್ತಾಗಿಯೇ ಜೆಎನ್​ಯುು ಹುಟ್ಟಿ, ಇತಿಹಾಸ ತಿರುಚುವ ಕಾಯಕ ಶುರುವಾಗಿ, ಭಾರತ ಮೂಲದ ಜ್ಞಾನಭಂಡಾರವನ್ನು ದಮನಿಸುವ, ತಿರಸ್ಕರಿಸುವ, ನಮ್ಮ ಸ್ವಂತಿಕೆಯನ್ನೇ ಹಾಳುಮಾಡುವ ಮಹಾಯತ್ನ ಆರಂಭವಾಯ್ತು. ಭಾರತೀಯ ಮೂಲವನ್ನೇ ಉನ್ಮೂಲ ಮಾಡುವ ಮತಾಂತರಕಾರರ ಪರಂಪರೆಯನ್ನು ನಮ್ಮವರೇ ಮುಂದುವರಿಸಿದರು.

 ತನ್ನದಲ್ಲದ್ದನ್ನು, ಬೇರೊಬ್ಬರದನ್ನು ಅಪಹರಿಸುವುದು, ಅಲ್ಲಿ ತಳವೂರುವುದು, ಆಳುವುದು, ಅದೆಲ್ಲ ತನ್ನದೆಂಬುದು, ಅಲ್ಲಿ ದಬ್ಬಾಳಿಕೆ ನಡೆಸುವುದು- ಇದನ್ನೇ ಹಿಂದೆ ಬಲಿ ಚಕ್ರವರ್ತಿ ಮಾಡಿದ್ದು, ಅವನ ಮುತ್ತಾತ ಹಿರಣ್ಯಾಕ್ಷ, ಹಿರಣ್ಯಕಶಿಪುಗಳೂ ಮಾಡಿದ್ದು, ಈಚಿನ ಶತಮಾನಗಳಲ್ಲಿ ನೆಪೋಲಿಯನ್, ಸ್ಟಾಲಿನ್, ಲೆನಿನ್ ಹಾಗೂ ಐರೋಪ್ಯ ವಸಾಹತುಗಳ ದಾಳಿಕೋರರು, ಈಸ್ಟ್ ಇಂಡಿಯಾ ಕಂಪನಿಯವರು ಮಾಡಿದ್ದು. ಇಲ್ಲಿ ಹೈದರ್, ಟಿಪು್ಪ ಮಾಡಿದ್ದು, ಈ ಪೂರ್ವದ ಘಸ್ನಿ, ಘೋರಿ, ತುಘಲಕ್, ಖಿಲ್ಜಿ, ಮೊಘಲರು ಮಾಡಿದ್ದು ಎಲ್ಲಾ ಇದೇ- ‘ತ್ರೖೆಲೋಕ್ಯಾಕ್ರಮಣ’ (ಬೇಂದ್ರೆಯವರ ‘ಇಂದ್ರಪಟ್ಟ’- ನಾಕುತಂತಿ, ಕವನ ಓದಿ).

ಬಲಿಯ ಪೂರ್ವದ ಆಕ್ರಮಣಕಾರರ ದೇಶ ಲ್ಯಾಟಿನ್ ಅಮೆರಿಕ ಎಂಬ ಸಪ್ತ ಪಾತಾಳ ಕ್ಷೇತ್ರಗಳು- ಟ್ರಿನಿಡಾಡ್, ಗಯಾನಾ, ಮುಳುಗಿರುವ ಅಟ್ಲಾಂಟಾ, ಮೆಕ್ಸಿಕೋ, ಬಮುಡಾ ಟ್ರಯಾಂಗಲ್ ಪ್ರದೇಶಗಳು (ನೋಡಿ: ಭಿಕ್ಷು ಚಮನ್​ಲಾಲರ ‘ಏಜ್ಞಿಛ್ಠ ಅಞಛ್ಟಿಜ್ಚಿಚ’, ಪ್ರಕಾಶಕರು- ಭಾರತೀಯ ವಿದ್ಯಾಭವನ, 1960, ಪ್ರಸ್ತಾವನೆ- ಡಾ. ಎಸ್. ರಾಧಾಕೃಷ್ಣನ್). ಮೆಕ್ಸಿಕೋದಲ್ಲಿ ಪ್ರಹ್ಲಾದನ ಮಗ ವಿರೋಚನನನ್ನು ‘ವೀರಕೋಚ’ ಎಂದು ಇಂದೂ ನೆನೆಯುತ್ತಾರೆ. ಅವನು ನಿರ್ವಿುಸಿದ ಪಗೋಡಾ, ಪಿರಮಿಡ್ಡು, ಗುಹಾಂತ ದೇವಾಲಯಗಳು ಇನ್ನೂ ಅಲ್ಲಿ ಇವೆ. ಮೆಕ್ಸಿಕನ್ನರೆಂಬ ಇಂದಿನವರ ಪೂರ್ವಜರು- ಭಾರತದ ಮಯನ ಕಡೆಯವರು, ‘ಆಸ್ತಿಕ’ನೆಂಬ ನಾಗನ ಕಡೆಯ Aztees ಹಾಗೂ ಬಲಿಯ ವಂಶದವರು. ಇದೆಲ್ಲ ದೊಡ್ಡಕತೆ, ಮಹಾಭಾರತದ್ದು. ಆಗೆಲ್ಲ ಹಿಂದೂ ಎಂಬ ಸನಾತನ ಧರ್ಮ, ವಾಮನನಂತೆ ಕುಬ್ಜವಾಗಿದ್ದು, ಈಗಿನಂತೆ ತ್ರಿವಿಕ್ರಮನಾಗಿ ಮೇಲೆದ್ದು, ಬೆಳೆಯುತ್ತಾ ದೈತ್ಯಶಕ್ತಿಗಳನ್ನು ಹೊಡೆದೋಡಿಸಿ, ಸನಾತನವನ್ನು ರಕ್ಷಿಸಿದ ಕತೆಯೇ ವಾಮನ ತ್ರಿವಿಕ್ರಮಾವತಾರದ ಅರ್ಥ ಹೊಂದಿರುವ ‘ಮಿಥ್’ಗಳು. ಓಡಿಸಲ್ಪಟ್ಟ ದೈತ್ಯರು “Deutschland’ ಎಂಬ ಜರ್ಮನಿ, ಹಾಲೆಂಡ್ (Hollow Land), ಡೆನ್ಮಾರ್ಕ್ ಮುಂತಾದ ಕಡೆ ವಲಸೆ ಹೋಗಿ ಅಲ್ಲಿನ ಕಾಡುಜನರೊಡನೆ ಬೆರೆದು, ಬೇರೆಬೇರೆ ರೂಪಾಕಾರ ತಾಳಿ, ಬೇರೆ ಜನಾಂಗಗಳೇ ಆದರು. ಬಲಿಯನ್ನು ಹೊರದಬ್ಬಿದ ದಿನ, ‘ಶ್ರವಣ ದ್ವಾದಶೀ’- ವಾಮನಾವತಾರದ ದಿನ. ಅದೇ ಶ್ರವಣ- ಆಮೇಲೆ ತಮಿಳಿನಲ್ಲಿ ‘ತಿರುಓಣಂ’ ಆಗಿ, ಕೇರಳದಲ್ಲಿ ‘ಓಣಂ’ ಆಗಿ, ಇಂದಿಗೂ ಹೊರದಬ್ಬಿದ ದಿನದ ಕುರುಹಾಗಿ ಬೋಟ್ ರೇಸ್ ಮಾಡುತ್ತಾರೆ. ಅದೇ ದಿನ! ಘಟ್ಟದ ಕೆಳಗಿನ ಕರಾವಳಿಯನ್ನು ಅಂದು ‘ಪಾತಾಳ’ ಎನ್ನುತ್ತಿದ್ದು, ಅಲ್ಲಿ ನಾಗಪೂಜೆ, ಭೂತಾರಾಧನೆ, ‘ದೈವ’ಗಳ ಆಟ ಇಂದಿಗೂ ಕುರುಹಾಗಿವೆ. ಬಿಡಿ, ಇದೆಲ್ಲ ಹಳೆಯದು. ಈಚಿನದನ್ನು ಬರೆಯೋಣ. ‘ಯಾವುದೂ ನಿನ್ನದಲ್ಲ. ಬೇರೆಯವರ ಸ್ವತ್ತನ್ನು ಅಪಹರಿಸಬೇಡ’ ಎಂದಿತ್ತು ಈಶೋಪನಿಷತ್ತು. ‘ಈಶಾವಾಸ್ಯಂ ಇದಂ ಸರ್ವಂ, ಯತ್ಕಿಂಚ ಜಗತ್ಯಾಂ ಜಗತ್ | ತೇನ ತ್ಯಕ್ತೇನ ಭುಂಜೀಥಾಃ, ಮಾ ಗೃಧ ಕಸ್ಯ ಸ್ವಿದ್ಧನಂ’ ಎಂದು. ಕೃಷ್ಣಸಂಧಾನ ಕಾಲದಲ್ಲಿ ಧೃತರಾಷ್ಟ್ರನ ಸಭೆಯಲ್ಲಿ ಶ್ರೀಕೃಷ್ಣ ಪ್ರತಿಪಾದಿಸಿದ್ದೂ ಇದನ್ನೇ. ಕಳ್ಳರಲ್ಲಿ ಎರಡು ವಿಧ- ‘ಪ್ರತ್ಯಕ್ಷ ಹರ, ಪರೋಕ್ಷ ಹರ’ ಎಂದು. ನೀವು ನೋಡನೋಡುತ್ತಲೇ ನಿಮ್ಮದನ್ನು ಅಪಹರಿಸುವವನು ‘ಪ್ರತ್ಯಕ್ಷ ಹರ’. ಅಂದಿನ ಶಕುನಿ, ಇಂದಿನ ಕಮ್ಯುನಿಸ್ಟರು, ಕೆಲ ಕಾಂಗ್ರೆಸ್ ನೇತಾರರು, ರಷ್ಯನ್ನರು, ಚೀನಿಯರು, ವೋಟಿನ ಹೆಸರಲ್ಲಿ ಜನರ ಸರ್ವಸ್ವಾಪಹಾರ ಮಾಡಿ ನಿರ್ಗತಿಕರನ್ನಾಗಿಸುವವರು, ಯಾರೆಲ್ಲ ಇಲ್ಲಿ ಸೇರುತ್ತಾರೆ.

ನೇತಾಜಿ, ಪಟೇಲರಿಗೆ ಸಿಗಬೇಕಿದ್ದ ಪ್ರಥಮ ಪ್ರಧಾನಿ ಪಟ್ಟ ಅಪಹರಿಸಿ, ಶೋಷಿಸಿದವರು ಯಾರಯ್ಯ? ಶೋಷಣೆ ತಪ್ಪಿಸಲು ವಾಮನನಾಗಿ ಲಾಲ್ ಬಹಾದೂರರು ಹುಟ್ಟಿ, ತ್ರಿವಿಕ್ರಮನಾಗಿ ನರಸಿಂಹರಾಯರಾಗಿ ಬೆಳೆದು ಈಗ ಮೂರನೆಯ ಹೆಜ್ಜೆಯಲ್ಲಿ ಮೋದಿಯಾಗಿ ಆವಿರ್ಭವಿಸಿರುವ ಶಕ್ತಿಯೇ ಸನಾತನ. ಕಾಂಗ್ರೆಸ್ಸನ್ನು ಕೊಂದವರು ಇವರೇ! ಮೃತಸಂಜೀವಿನೀ ಮಾಡಿ, ಕುಟುಕುಜೀವ ಇತ್ತವರು ಸೀತಾರಾಂ ಕೇಸರಿ, ಅರ್ಜುನ್ ಸಿಂಗ್, ಸೋನಿಯಾ, ಅಹ್ಮದ್ ಪಟೇಲ್, ಚಿದಂಬರಂ ಇವರ ಮಾಯೆ ಮುಗಿದಿದೆ.

ಒಮ್ಮೆ ಆಕ್ರಮಣಕಾರಕ ನೀತಿ ಅಳವಡಿಸಿಕೊಂಡವರಿಗೆ ಆ ಚಾಳಿ ಹೋಗದು. ಅವರ ಜಾತಕ, ಜಾಯಮಾನ, ಡಿಎನ್​ಎ ಎನ್ನಿ. ನೆಪೋಲಿಯನ್ನನ ಕಾಲದಲ್ಲಿ ಆಕ್ರಮಣ ನಡೆಯುವಾಗ ಮುಂದುಮುಂದಿನ ಊರು, ಕೋಟೆ, ಸ್ಥಳಗಳನ್ನು ಮೊದಲೇ ಗುರುತಿಸಿ, ಒಂದೊಂದಾಗಿ “We have taken this, We must take this now….’ ಎನ್ನುತ್ತಾ ಮುನ್ನಡೆಯುತ್ತಿದ್ದರಂತೆ. ಒಮ್ಮೆ ನದಿಯನ್ನು ದಾಟುವಾಗ ಸೇತುವೆ ಇರಲಿಲ್ಲ. ನೆಪೋಲಿಯನ್ “March’ ಎಂದಾಗ ಸೇನೆ ಮುನ್ನಡೆದು, ಸೈನಿಕರು ಮುಳುಗಿ ಸತ್ತು, ಹೆಣಗಳೇ ಸೇತುವೆಯಾಗಿ, ಮುನ್ನಡೆದು ಕೋಟೆಗಳನ್ನು ಹಿಡಿದದ್ದು ಚರಿತ್ರೆ. ಅದನ್ನೇ ಬ್ರಿಟಿಷರೂ ಮಾಡಿ, ಭಾರತ, ಬರ್ವ, ಚೀನಾ, ಸಿಲೋನ್, ಮಲೇಷ್ಯಾ, ಸಿಂಗಾಪುರ ಇನ್ನಿತರ ಪೂರ್ವ ಏಷ್ಯಾ ರಾಷ್ಟ್ರಗಳನ್ನು ಹಿಡಿದದ್ದು. ಅದು ‘ಚಾಳಿ’. ಸ್ಟಾಲಿನ್ನನ ಯುಎಸ್​ಎಸ್​ಆರ್ ಆದದ್ದೂ ಹೀಗೇ. ಆಸ್ಟ್ರಿಯಾ, ಹಂಗರಿ, ಪೋಲೆಂಡ್, ಝೆಕೋಸ್ಲೋವಾಕಿಯಾ, ಯುಗೋಸ್ಲಾವಿಯಾ, ಅಫ್ಘಾನಿಸ್ತಾನ, ಲಾಟ್ಟಿಯಾ, ಲಿಥುವೇನಿಯಾ, ಫಿನ್ಲೆಂಡ್ ಎಲ್ಲ ‘ಸೇರಿಸಿ’ ಕೃತಕ ಯುಎಸ್​ಎಸ್​ಆರ್ ಮಾಡಿದ ‘ಬಲ’ (ಬಲಶಾಲಿ) ಆಮೇಲೆ ‘ಬಲಿ’ಯಾಗಿ (Scapegoat) ರಷ್ಯಾ ಸಾಮ್ರಾಜ್ಯ ಪುಡಿಯಾಗಿ ಪುತಿನ್ ಪುಟಿದೆದ್ದದ್ದು ಕಣ್ಣೆದುರೇ ಇದೆ!

ಬಲಿಯ ಆಕ್ರಮಣ ಉಳಿಯಲಿಲ್ಲ! ಉಳಿಯುವುದಿಲ್ಲ! ಉಳಿಯಬಾರದು. ಪ್ರಕೃತಿ, ಧರ್ಮ ವಿರುದ್ಧ ಇದು, ಈ ಆಕ್ರಮಣ. ನೆಹರು ಕಾಲದಲ್ಲಿ ರಷ್ಯಾ ಭಾರತವನ್ನು ಹಿಡಿದದ್ದೂ ಮೋಸದಿಂದಲೇ- ‘ಪ್ರತ್ಯಕ್ಷ ಹರ’ತ್ವ- ಕಣ್ಣೆದುರೇ! ಇಂದಿರಾ ಕಾಲದಲ್ಲಿ ನಮ್ಮ ಕರೆನ್ಸಿ ರಷ್ಯಾದಲ್ಲಿ ಮುದ್ರಿತವಾಗಿ, Ballot Paperಗಳು ಅಲ್ಲಿಂದಲೇ ಸರಬರಾಜಾಗುತ್ತಿದ್ದುದೂ ಹೀಗೇ! ಭಾರತ, ಕಮ್ಯುನಿಸ್ಟರ ಆಕ್ರಮಣಕ್ಕೆ ತುತ್ತಾಗಿಯೇ ಜೆಎನ್​ಯುು ಹುಟ್ಟಿ, ಇತಿಹಾಸ ತಿರುಚುವ ಕಾಯಕ ಶುರುವಾಗಿ, ಭಾರತ ಮೂಲದ ಜ್ಞಾನಭಂಡಾರವನ್ನು ದಮನಿಸುವ, ತಿರಸ್ಕರಿಸುವ, ನಮ್ಮ ಸ್ವಂತಿಕೆಯನ್ನೇ ಹಾಳುಮಾಡುವ ಮಹಾಯತ್ನ ಆರಂಭವಾಯ್ತು. ಮತಾಂತರಕಾರರು ಭಾರತೀಯ ಮೂಲವನ್ನೇ ಉನ್ಮೂಲ ಮಾಡುವ ಕ್ರೖೆಸ್ತ ಮುಸಲ್ಮಾನ ರೀತಿಯನ್ನೇ ನೆಹರು ಪರಂಪರೆ ಮಾಡುತ್ತಾ ಬಂತು. ನೆಹರು ಹೋದ ಮೇಲೆ ಅಥವಾ ಸಮಕಾಲದಲ್ಲೇ ಚೀನಾ ಮೂಲಕ ಆಕ್ರಮಣ ಶುರು ಆಯಿತು. ಸಿಪಿಐ ಮಾತ್ರ ಸಿಪಿಐ (ಎಂ) ಆದದ್ದೂ, ಕಾಂಗ್ರೆಸ್ (ಐ), ಕಾಂಗ್ರೆಸ್ (ಒ) ಆದದ್ದೂ ಇದೇ ದಾರಿಯಲ್ಲೇ! ಭಾರತೀಯ ಮನದ (Psyche) ಆಕ್ರಮಣ ಶುರುವಾಗಿ, ಸಂಸ್ಥೆಗಳನ್ನು ಒಂದೊಂದಾಗಿ ಹಿಡಿಯುತ್ತಾ ಬಂದರು! ಕರ್ನಾಟಕದಲ್ಲಿ ಸಾಹಿತ್ಯ ಅಕಾಡೆಮಿ, ಪುಸ್ತಕ ಪ್ರಾಧಿಕಾರ, ವಿಶ್ವವಿದ್ಯಾಲಯಗಳು, ಐಐಟಿಗಳು, ಫಿಲ್ಮ್ ಇನ್​ಸ್ಟಿಟ್ಯೂಟ್ (ಪುಣೆ), ಪರಿಷತ್ತು, ಸಾಹಿತ್ಯ ಸಮ್ಮೇಳನ, ನಾನಾ ಬಗೆಯ ಸಂಸ್ಥೆಗಳೂ ಕಮ್ಯುನಿಸ್ಟ್, ಎಡಪಂಥೀಯರ ಪಾಲಾಗುತ್ತಾ ಪ್ರಕಟವಾಗಿಯೇ ಭಾರತೀಯತ್ವ ವಿರುದ್ಧ ‘ಬಂಡಾಯ’ ಎಂಬ ಪರ್ವದ ಉದಯವಾದದ್ದೂ ಈ ‘ಬಲಿಯ’ ಆಕ್ರಮಣದ ಪುನರಾವರ್ತನೆಯೇ! ಸಂಶಯ ಬೇಡ. ನಾನು ‘ವ್ಯಾಸಗಣ್ಣಿಂದ’ ನೋಡಿ ಬರೆಯುತ್ತಿದ್ದೇನೆ. ಐರೋಪ್ಯ, ಕಮ್ಯುನಿಸ್ಟರ ಕಣ್ಣಿಂದ ಅಲ್ಲ.

ಕನ್ನಯ್ಯ, ವೇಮುಲ, ಕಂಚ ಇಲಯ್ಯ, ಮೇಧಾ ಪಾಟ್ಕರ್, ತೀಸ್ತಾ ಸೆಟಲ್ವಾಡ್, ಪಿಣರಾಯ್, ಕರ್ನಾಟಕದ ಕೆಲವರು, ಕೇರಳದ ಬಲಿಸಂತಾನ, ಬಂಗಾಳದ ನಹುಷರು, ತ್ರಿಶಂಕುಗಳು ಎಲ್ಲ ಈಗ ಸಿಪಿಐ ಅಥವಾ ಸಿಪಿಐ (ಎಂ) ಅರ್ಥಾತ್ ಎಲ್ಲಬಗೆಯ ಎಡಪಂಥೀಯ ವಿಚಾರ ಪ್ರವಾಹದಲ್ಲಿ ಕೊಚ್ಚುತ್ತಾ, ನಮ್ಮನ್ನು ಕೊರಳು ಹಿಡಿದಿರುವ ವಿರೋಚನ, ಬಲಿ ಸಂತಾನದವರೇ. ಇವರ ಕಾಯಕಗಳು? ಭಾರತೀಯ ಮಿದುಳನ್ನೇ ಹಿಡಿಯುವುದು! ಅಂದು ಮೆಕಾಲೆ ಸಾಹೇಬ! ಇಂದು ಎಡಪಂಥೀಯರು! ಭಾರತೀಯ ಮೂಲವಿಜ್ಞಾನ, ಅನ್ವೇಷಣೆ, ಸಾಧನೆಗಳನ್ನು ಅಲ್ಲಗಳೆದು ಇವನ್ನೆಲ್ಲ ಕಟ್ಟುಕತೆ ಎನ್ನುವುದು, ಮೂಢನಂಬಿಕೆ ಎಂದು ಪ್ರಚುರಿಸುವುದು. ಶ್ರೀರಾಮ ಇರಲಿಲ್ಲ, ಶ್ರೀಕೃಷ್ಣ ಇರಲಿಲ್ಲ ಎನ್ನುವುದು. ಯೋಗ ಎಂಬುದು ‘ನಾಯಿ ಮೈಮುರಿದಂತೆ’ (ಯೆಚೂರಿ ಉವಾಚ), ಆಯುರ್ವೆದ ಎಂಬುದು ಅವೈಜ್ಞಾನಿಕ ಎಂಬುದು, ಈಗ ಜ್ಯೋತಿಷವೂ ಮೂಢನಂಬಿಕೆ ಎಂಬುದು- ಎಲ್ಲ ಈ ‘ಬಲಿ’ಯ ಆಕ್ರಮಣ ರೀತಿ, ಪರ್ವಗಳೇ!!

ಸ್ವಲ್ಪ ಚರಿತ್ರೆ ಹೇಳಲೇ! ಕಳೆದ ಶತಮಾನದಲ್ಲಿ “Positivism’ ಎಂಬ ದುರ್ವಾದ ಕೇಂಬ್ರಿಜ್​ನಲ್ಲಿ ಹುಟ್ಟಿತು. ‘‘ಪಂಚೇಂದ್ರಿಯಾತೀತವಾದ ‘ಜ್ಞಾನ’ ಎಲ್ಲ ಸುಳ್ಳು, ಪಂಚಭೌತಿಕಕ್ಕೆ ಮೀರಿದ್ದು ಏನೂ ಇಲ್ಲ, ಚಿಂತನೆ ಎಂಬ Speculative Philosophy, Metaphysics ಎಲ್ಲಾ ಸುಳ್ಳು’ ಎಂಬುದು ವಿಟ್​ಗೇನ್​ಸ್ಟೀನ್ ಎಂಬುವನು ಪ್ರತಿಪಾದಿಸಿ, ಅದು ಜನಪ್ರಿಯವಾಗುವಂತೆ ಪ್ರಚುರಿಸಲಾಯ್ತು. ಇದೇ ನಮ್ಮ ಚಾರ್ವಾಕ, ಭೌತವಾದ, Materialism ಎಂಬುದಾಗಿ, ಇದು ಎಲ್ಲ ಬಗೆಯ ನಾಸ್ತಿಕರಿಗೂ ಎಲುಬಾಗಿ, ಅಲ್ಲಿ ಕಮ್ಯುನಿಸ್ಟರೂ ಕೂಡಿಕೊಂಡರು. ವಿದೇಶಿ ಆಕ್ರಮಣಕಾರಿ ಶಕ್ತಿಗಳಿಗೂ ಇದು ಸಹಾಯಕವಾಗಿ, ಈಚೆಗೆ ಬಯಲಾಗುತ್ತಾ, ಈಗ ಯೋಗವು ವಿಶ್ವಮಾನ್ಯವಾಗಿದೆ, Credit to Modi.ಆಯುರ್ವೆದವು ವಿಶ್ವಮಾನ್ಯವಾಗಿದೆ, Credit to Baba Ramdev. ಇನ್ನು ಇತಿಹಾಸ ಸಂಕಲನಾ ಸಮಿತಿಯು, ಸರಸ್ವತೀ ನದಿಯನ್ನು ಪತ್ತೆಹಚ್ಚಿದೆ. ದ್ವಾರಕಾ ಉತ್ಖನನವಾಗಿದೆ. ರಾಮಸೇತು ಬೆಳಕಿಗೆ ಬಂದಿದೆ. ಜ್ಯೋತಿಷದ ಬಗ್ಗೆ ಈಚೆಗೆ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ (Indian Institute of Science) ವಿಚಾರ ಸಂಕಿರಣ, ಹಳೆಯ ವಿದ್ಯಾರ್ಥಿ ಸಂಘವು (Alumni) ಒಂದು ಸಭೆ ಏರ್ಪಡಿಸಲು ಯತ್ನಮಾಡಿದೆ. ಅಲ್ಲಿ ಎಡಪಂಥೀಯ ಬೋಧಕರು ಹೊಕ್ಕಿದ್ದು, ಇದನ್ನು ಮೂಢನಂಬಿಕೆ ಎಂದು ಮೂಗುಮುರಿದು, ಸಮ್ಮೇಳನವನ್ನು ತಡೆದಿದ್ದಾರೆ. ಅಲ್ಲಿನವರು ತಿಳಿದವರು ಹೇಳುತ್ತಾರೆ- ‘ಇಲ್ಲಿ ಓದಿ ಕೆಲಸ ಮಾಡಿದ ಬುದ್ಧಿವಂತರು, ಬೇರೆ ಕಡೆ, ದೇಶಗಳಲ್ಲಿ ಹೋಗಿ, ಉನ್ನತಾವಕಾಶ ಹುಡುಕಿ ನೆಲೆಸಿದ್ದಾರೆ. ಇಲ್ಲಿಯೇ ಉಳಿದ, ಬೇರತ್ತ ಹೋಗಲು ಆಗದವರು (Left Overs) ಇಲ್ಲಿ ರಾಜಕೀಯ ಮಾಡುತ್ತಾ, ವಿಶ್ವವಿಖ್ಯಾತ ಸಂಸ್ಥೆಯನ್ನು ಹಾಳುಮಾಡುತ್ತಿದ್ದಾರೆ’ ಎಂದು. ಇದು ಫಿಲ್ಮ್ ಇನ್​ಸ್ಟಿಟ್ಯೂಟ್ ಹಿಡಿಯುವ, ಹಿಡಿದಾದ ಕತೆಯ ನಿವಾರಣೆಯ ಪರ್ವ ಎನ್ನಿ. ಗಜೇಂದ್ರ ಚೌಹಾಣರಿಗೆ ಚಳ್ಳೆಹಣ್ಣು ತಿನ್ನಿಸಿದವರು, ಈಗ ಬಾಲ ಮುದುಡುತ್ತಿದ್ದಾರೆ. ಅನುಪಮ್ ಖೇರ್ ಅಲ್ಲಿ ಬಿಸಿ ಮುಟ್ಟಿಸಿದ್ದಾರೆಂದು ವರದಿ. ಐಐಎಸ್​ಸಿ ಸಮಾಚಾರ ಈಗ ಕೇಂದ್ರ ಮಾನವ ಸಂಪನ್ಮೂಲ ಖಾತೆ ಸಚಿವ ಜಾವಡೇಕರ್ ತನಕ ಹೋಗಿದೆ. ಈ ಸಂಸ್ಥೆಗೆ ವೈಚಾರಿಕ ಸ್ವಾಯತ್ತತೆ ತುರ್ತಾಗಿ ಬೇಕಾಗಿದೆ. ಸಂಶೋಧನೆ, ಬೋಧನೆ ಬಿಟ್ಟು ಚಳವಳಿ ನಿಲ್ಲಬೇಕಾಗಿದೆ. ತೆರೆದ ಮನ ಇಲ್ಲದವರು ಎಂಥ ‘ವಿಜ್ಞಾನಿ’ಗಳು? ಇದು ಬೋಗಸ್, ಮಿಥ್ಯಾವಿಚಾರವಾದಿಗಳ, ಢೋಂಗಿಗಳ ಕಾಲ. ಅದೇ ಬಲಿಯ ಕಾಲದಲ್ಲೂ ಇದ್ದದ್ದು. ಅಂದು ‘ಶುಕ್ರ’, ಒಕ್ಕಣ್ಣಿನವ! ಇಂದು ಅವನಿಗೆ ಬೇಕು ‘ಬೃಹಸ್ಪತಿ’ಯ ಇಂಜೆಕ್ಷನ್. ಈಗ ನಮ್ಮ ಸಂಸ್ಥೆಗಳನ್ನು ಮರಳಿಸುವ ತ್ರಿವಿಕ್ರಮ ಕಾಯಕ ತುರ್ತಾಗಿ ಬೇಕಾಗಿದೆ.

(ಲೇಖಕರು ಬಹುಶ್ರುತ ವಿದ್ವಾಂಸರು, ವರ್ತಮಾನ ವಿದ್ಯಮಾನಗಳ ವಿಶ್ಲೇಷಕರು)

Leave a Reply

Your email address will not be published. Required fields are marked *

Back To Top