ತ್ರಿವಿಧ ದಾಸೋಹಿಗೆ ಭಾವಪೂರ್ಣ ಶ್ರದ್ಧಾಂಜಲಿ

ಚಿಕ್ಕಬಳ್ಳಾಪುರ:  ಶಿವೈಕ್ಯರಾದ ತ್ರಿವಿಧ ದಾಸೋಹಿ, ಸಿದ್ಧಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿಗೆ ನಗರ ಸೇರಿ ಜಿಲ್ಲಾದ್ಯಂತ ಮಂಗಳವಾರ ವಿವಿಧ ಸಂಘಟನೆ ಹಾಗೂ ಭಕ್ತ ಸಮೂಹ ಶ್ರದ್ಧಾಂಜಲಿ ಸಲ್ಲಿಸಿತು.

ವೀರಶೈವ ಸೇವಾ ಸಮಾಜದಿಂದ ನಗರದ ಹಳೇ ಬಸವನಗುಡಿಯಲ್ಲಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಶ್ರೀಗಳ ಭಾವಚಿತ್ರ ಮೆರವಣಿಗೆ ಪ್ರಮುಖ ಬೀದಿಗಳಲ್ಲಿ ನಡೆಸಲಾಯಿತು. ದಾರಿಯುದ್ದಕ್ಕೂ ಭಕ್ತರು ಹೂವು ಸಮರ್ಪಿಸುವ ಮೂಲಕ ಗೌರವ ಸಲ್ಲಿಸಿದರು.

ಸಂಘದ ಗೌರವಾಧ್ಯಕ್ಷ ಬಿ.ಗಿರೀಶ್ ಮಾತನಾಡಿ, ಶ್ರೀಗಳು ಯಾವುದೇ ಧರ್ಮ, ಜಾತಿ, ಭೇದಭಾವವಿಲ್ಲದೆ ಅಕ್ಷರ, ಅನ್ನ ಮತ್ತು ಅರಿವನ್ನು ನೀಡುವ ಮೂಲಕ ತ್ರಿವಿಧ ದಾಸೋಹಿಗಳಾಗಿದ್ದಾರೆ. ಆಗಾಗ ಈ ಭಾಗಕ್ಕೆ ಬಂದು ಜನರಿಗೆ ದರ್ಶನ ನೀಡುತ್ತಿದ್ದರು ಎಂದು ಸ್ಮರಿಸಿದರು.

ಶ್ರೀಗಳ ಆದರ್ಶ, ತತ್ವಗಳನ್ನು ರೂಢಿಸಿಕೊಂಡು ಸಾರ್ಥಕತೆಯ ಜೀವನ ನಡೆಸಬೇಕೆಂದು ಸಂಘದ ಜಿಲ್ಲಾಧ್ಯಕ್ಷ ಎಸ್.ರಾಜಶೇಖರ್ ಹೇಳಿದರು. ಸಂಘದ ಉಪಾಧ್ಯಕ್ಷ ಗುಬ್ಬಿ ಶೆಟ್ಟರ್, ಕಾರ್ಯದರ್ಶಿ ಪರಶಿವಯ್ಯ, ಸಂಘಟನಾ ಕಾರ್ಯದರ್ಶಿ ಬಿ.ಸಿದ್ದಪ್ಪ, ಖಜಾಂಚಿ ದೇವೇಂದ್ರ, ಮುಖಂಡರಾದ ಬಿ.ಪುಟ್ಟರಾಜು, ಜಿ.ಆರ್.ನಂಜುಂಡಪ್ಪ, ಬಸವರಾಜ್ ಕಿಳ್ಳಿ, ಬಸಮ್ಮ ಶಿವಪ್ರಸಾದ್, ಶೈಲಜಾ, ಭಾರತಿ ಪ್ರಕಾಶ್, ಚೇತನಾ ಮಹಾಂತೇಶ್ ಮತ್ತಿತರರಿದ್ದರು.

ಶ್ರೀಗಳೇ ನಿಜವಾದ ರತ್ನ:  ಚಿಕ್ಕಬಳ್ಳಾಪುರ ಕೃಷ್ಣ ಟಾಕೀಸ್ ರಸ್ತೆಯ ಸಮುದಾಯ ಭವನದಲ್ಲಿ ಅಯೋಧ್ಯೆ ನಗರ ಶಿವಾಚಾರ ವೈಶ್ಯ ನಗರ್ತ ಮಂಡಳಿಯಿಂದ ಸಿದ್ಧಗಂಗಾ ಶ್ರೀಗಳಿಗೆ ಪುಷ್ಪನಮನ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಸರ್ಕಾರವು ಶ್ರೀಗಳಿಗೆ ಭಾರತ ರತ್ನ ಕೊಡದಿದ್ದರೇನಂತೆ?, ಶ್ರೀಗಳೇ ಭಾರತದ ನಿಜವಾದ ರತ್ನ ಎಂದು ಸಂಘದ ಅಧ್ಯಕ್ಷ ಜಯದೇವ್ ಹೇಳಿದರು. ಸಂಘದ ಕಾರ್ಯದರ್ಶಿ ಭಾಸ್ಕರ್, ಖಜಾಂಚಿ ಸತೀಶ್, ಸದಸ್ಯ ಆನಂದ್​ವುೂರ್ತಿ, ಮಹಿಳಾ ಘಟಕ ಅಧ್ಯಕ್ಷೆ ಕಲಾ ಚಂದ್ರಶೇಖರ್, ಕಾರ್ಯದರ್ಶಿ

ಪತ್ರಕರ್ತರ ಭವನದಲ್ಲಿ ಸಂತಾಪ:  ಚಿಕ್ಕಬಳ್ಳಾಪುರ ಪತ್ರಕರ್ತರ ಭವನದಲ್ಲಿ ಸಿದ್ಧಗಂಗಾ ಶ್ರೀಗಳಿಗೆ ಪುಷ್ಪನಮನದ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಸಂಘದ ರಾಜ್ಯ ಸಮಿತಿ ಸದಸ್ಯ ಭೀಮಪ್ಪ ಪಾಟೀಲ್, ಉಪಾಧ್ಯಕ್ಷ ಈ.ಮುಂಜಾನೆ ಎನ್.ವೆಂಕಟೇಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ಎಸ್.ಹರಿಕುಮಾರ್, ಖಜಾಂಚಿ ಕೆ.ಎಸ್.ನಾರಾಯಣಸ್ವಾಮಿ, ಪತ್ರಕರ್ತರಾದ ಎಸ್.ಶಿವರಾಮ್ ಕಾಗತಿ ನಾಗರಾಜಪ್ಪ, ಅರಿಕೆರಿ ಮುನಿರಾಜು, ಮುದ್ದುಕೃಷ್ಣ, ಟಿ.ಎಸ್.ನಾಗೇಂದ್ರಬಾಬು, ಮುಬಷೀರ್ ಅಹಮದ್ ಮತ್ತಿತರರಿದ್ದರು.