ತ್ರಿವರ್ಣ ಧ್ವಜ ಜಾಗೃತಿ ಪಥ ಸಂಚಲನ

ಹುಬ್ಬಳ್ಳಿ: ಸ್ವಾತಂತ್ರ್ಯೊತ್ಸವದ ಮಹತ್ವದ ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸುವ ಉದ್ದೇಶದಿಂದ ‘ಹಮ್ ಭಾರತಿ ಫೌಂಡೇಶನ್’ ನೇತೃತ್ವದಲ್ಲಿ ಶನಿವಾರ ಕೇಶ್ವಾಪುರದ ಮಯೂರಿ ಎಸ್ಟೇಟ್​ನ ಚಿನ್ಮಯಿ ಕಾಲೇಜು ಆವರಣದಿಂದ ಚನ್ನಮ್ಮ ವೃತ್ತದವರೆಗೆ ತಿರಂಗಾ ಪಥ ಸಂಚಲನ ಹಮ್ಮಿಕೊಂಡಿತ್ತು.

ತ್ರಿವರ್ಣ ಧ್ವಜ ಹಿಡಿದಿದ್ದ ವಿದ್ಯಾರ್ಥಿಗಳು ವಾದ್ಯಮೇಳದೊಂದಿಗೆ ಹೆಜ್ಜೆ ಹಾಕಿದರು. ಸುಳ್ಳ ರಸ್ತೆಯ ರಮೇಶ ಭವನ, ಕೇಶ್ವಾಪುರ ಸರ್ಕಲ್, ದೇಸಾಯಿ ಸರ್ಕಲ್​ಕೋರ್ಟ್ ಸರ್ಕಲ್, ಸಂಗೊಳ್ಳಿ ರಾಯಣ್ಣ ವೃತ್ತ, ಮೂಲಕ ಚನ್ನಮ್ಮ ವೃತ್ತದವರೆಗೆ ಸಾಗಿದ ವಿದ್ಯಾರ್ಥಿಗಳು 21*14 ಅಡಿ ಬೃಹತ್ ತ್ರಿವರ್ಣ ಧ್ವಜ ಪ್ರದರ್ಶಿಸಿ, ರಾಷ್ಟ್ರಗೀತೆ ಹಾಡಿದರು.  ಹಮ್ ಭಾರತಿ ಫೌಂಡೇಶನ್ ಅಧ್ಯಕ್ಷ ಅನ್ವರ್ ಮುಲ್ಲಾ ಮಾತನಾಡಿ, ಯುವ ಜನರಲ್ಲಿ ದೇಶಪ್ರೇಮ ಕಡಿಮೆಯಾಗುತ್ತಿದ್ದು, ದೇಶಭಕ್ತರ ಬಗ್ಗೆ ಅರಿವಿಲ್ಲ. ಸ್ವಾತಂತ್ರ್ಯೊತ್ಸವ ಮತ್ತು ಗಣರಾಜ್ಯೋತ್ಸವವನ್ನು ದೇಶದ ಪ್ರತಿ ಮನೆ ಮನೆಯಲ್ಲೂ ಹಬ್ಬದಂತೆ ಆಚರಿಸುವಂತಾಗಬೇಕು. ಈ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ಪಥ ಸಂಚಲನ ಹಮ್ಮಿಕೊಳ್ಳಲಾಗಿತ್ತು ಎಂದರು. ಚಿನ್ಮಯ ಸಮೂಹ ಸಂಸ್ಥೆ ಅಧ್ಯಕ್ಷ ಗಿರೀಶ ಉಪಾಧ್ಯಾಯ, ಆಡಳಿತಾಧಿಕಾರಿ ವಿಶ್ವನಾಥ ರಾನಡೆ, ಪ್ರಾಚಾರ್ಯ ವಾಮನ ನಾಡಿಗೇರ, ರಜನಿ ತುಂಗಳ, ಮೇಘಾ, ಶೋಭಾ ಕುಲಕರ್ಣಿ, ಮಲ್ಲಿಕಾರ್ಜುನ ತೋಟಗಿ, ದೇವೇಂದ್ರ ಉಪಾಧ್ಯಾಯ, ಚಂದ್ರಶೇಖರ ಚನ್ನಂಗಿ, ಮತ್ತಿತರರು ಪಾಲ್ಗೊಂಡಿದ್ದರು.