ತ್ಯೋತ್ಸವ -ಸೈಕಲ್ ಜಾಥಾಕ್ಕೆ ಚಾಲನೆ

blank

ನಾಗಮಂಗಲ : ಕನ್ನಡ ಬಳಸುವ ಮೂಲಕ ಭಾಷೆ ಉಳಿಸಲು ಮುಂದಾಗಿ ಎಂದು ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಮಂಜುನಾಥ್ ಸಲಹೆ ನೀಡಿದರು.
ಪಟ್ಟಣದ ಶ್ರೀ ಸೌಮ್ಯಕೇಶವ ಸ್ವಾಮಿ ದೇವಾಲಯದಿಂದ ಕಂಬದಹಳ್ಳಿಯ ಆಂಜನೇಯಸ್ವಾಮಿ ಬೆಟ್ಟಕ್ಕೆ ತಾಲೂಕು ಕಸಾಪ ಭಾನುವಾರ ಆಯೋಜಿಸಿದ್ದ ನವೆಂಬರ್ ನಿತ್ಯೋತ್ಸವ -ಸೈಕಲ್ ಜಾಥಾದಲ್ಲಿ ಅವರು ಮಾತನಾಡಿದರು. ಎಲ್ಲಿ ಉತ್ತಮ ಸಂಸ್ಕಾರ ಮತ್ತು ಸಂಸ್ಕೃತಿ ಇರುತ್ತವೆಯೋ ಆ ನಾಡಿಗೆ ಉತ್ತಮ ಭವಿಷ್ಯ ಇದ್ದೇ ಇರುತ್ತದೆ. ಜತೆಗೆ ತಂದೆ- ತಾಯಿಯರ ಆಶಯಗಳಿಗೆ ಬದ್ಧರಾಗಿ ಬದುಕು ನಡೆಸಿದರೆ ಸಾರ್ಥಕತೆ ದೊರಕುತ್ತದೆ ಎಂದರು. ಮಕ್ಕಳು ಉನ್ನತ ಮಟ್ಟಕ್ಕೆ ಬೆಳೆದು ನಿಂತಾಗ ಪಾಲಕರಿಗೆ ಹೆಮ್ಮೆ ಮೂಡುತ್ತದೆ. ಈ ನಿಟ್ಟಿನಲ್ಲಿ ಭಾಷೆ, ಸಂಸ್ಕೃತಿ, ಸಂಪ್ರದಾಯ ಮತ್ತು ಸೌಜನ್ಯಗಳು ನಮ್ಮ ವ್ಯಕ್ತಿತ್ವ ನಿರೂಪಿಸುತ್ತವೆ ಎಂದರು.
ಸಮ್ಮೇಳನಕ್ಕೆ ಸ್ಫೂರ್ತಿ ನೀಡಲಿ: ತಾಲೂಕು ಕಸಾಪ ಅಧ್ಯಕ್ಷ ಸಿ.ಆರ್.ಚಂದ್ರಶೇಖರ್ ಮಾತನಾಡಿ, ಅಖಿಲ ಭಾರತಗ ಕನ್ನಡ ಸಾಹಿತ್ಯ ಸಮ್ಮೇಳನದ ಹಿನ್ನೆಲೆಯಲ್ಲಿ ಭಾಷಾ ಜಾಗೃತಿ ಮತ್ತು ಸ್ಫೂರ್ತಿ ನೀಡಲು ಸೈಕಲ್ ಜಾಥಾ ಆಯೋಜನೆ ಮಾಡಲಾಗಿದೆ. ನಾಗಮಂಗಲದ ಸೈಕಲ್ ಕ್ಲಬ್ ಮಕ್ಕಳಿಗೆ ವಿಶೇಷ ಹವ್ಯಾಸ ಬೆಳೆಸುವುದರೊಂದಿಗೆ ನಾಡು-ನುಡಿಯ ಮೇಲೆ ಅಭಿಮಾನ ಮೂಡಿಸಲು ಪ್ರೇರಕವಾಗಿದೆ ಎಂದರು. ತಾಲೂಕಿನ ಪ್ರತಿ ಗ್ರಾ.ಪಂ. ಕೇಂದ್ರಗಳಿಗೂ ಸಾಹಿತ್ಯ ಸಮ್ಮೇಳನ ಸಂದರ್ಭ ಉಚಿತ ಬಸ್ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಸಮ್ಮೇಳನ ನಡೆಯಲಿರುವ 3 ದಿನಗಳೂ ಯಾವುದೇ ವಯಕ್ತಿಕ ಕೆಲಸ ಕಾರ್ಯದ ನೆಪ ಹೇಳದೇ ಎಲ್ಲರೂ ಕನ್ನಡದ ಹಬ್ಬದಲ್ಲಿ ಸಂಭ್ರಮದಿಂದ ಭಾಗವಹಿಸಿ ಜಿಲ್ಲೆಯ ಕೀರ್ತಿಯನ್ನು ಬೆಳಗಬೇಕು ಎಂದರು.
30 ಸೈಕ್ಲಿಸ್ಟ್ ಗಳು ಭಾಗಿ: ಪಟ್ಟಣದ ಶ್ರೀ ಸೌಮ್ಯಕೇಶವಸ್ವಾಮಿ ದೇವಾಲಯದ ಆವರಣದಿಂದ 18 ಕಿ.ಮೀ. ದೂರದಲ್ಲಿರುವ ಕಂಬದಹಳ್ಳಿ ಆಂಜನೇಯಸ್ವಾಮಿ ಬೆಟ್ಟಕ್ಕೆ ಭಾನುವಾರ ಬೆಳಗ್ಗೆ 7ಕ್ಕೆ ನಾಗಮಂಗಲದ ‘ನಮ್ಮ ಸೈಕಲ್ ಕ್ಲಬ್’ ತಂಡದ 30 ಸೈಕ್ಲಿಸ್ಟ್ ಗಳು ಜಾಥಾ ನಡೆಸಿದರು. ತಹಸೀಲ್ದಾರ್ ಜಿ.ಆದರ್ಶ ಚಾಲನೆ ನೀಡಿ ಶುಭಕೋರಿದರು. ಸೈಕಲ್‌ಗಳಿಗೆ ನಾಡಧ್ವಜ ಕಟ್ಟಿದ್ದು ಗಮನ ಸೆಳೆಯಿತು. ಮಾರ್ಗದ ಉದ್ದಕ್ಕೂ ಸಾಹಿತ್ಯ ಸಮ್ಮೇಳನದ ಮಾಹಿತಿ ನೀಡುತ್ತಾ ಸಾಗಿದ್ದು ವಿಶೇಷವಾಗಿತ್ತು. ನಮ್ಮ ಸೈಕಲ್ ಕ್ಲಬ್ ಸಂಚಾಲಕ ಗುರು, ತಾಲೂಕು ಕಸಾಪ ಕಾರ್ಯದರ್ಶಿ ಧನಂಜಯ, ಮುಖಂಡರಾದ ಕೆಂಪೇಗೌಡ, ಅನಿಲ್, ಕೃಷ್ಣೇಗೌಡ, ಜೆ.ಪಿ.ಮಲ್ಲೇನಹಳ್ಳಿ, ಅಚ್ಯುತ, ಮಹದೇವಸ್ವಾಮಿ, ಪರಮೇಶ್, ಮಹೇಶ್, ಪ್ರವೀಣ್ ಇದ್ದರು.

Share This Article

ಈ ಕಾಯಿಲೆಯಿಂದ ಬಳಲುತ್ತಿರುವವರು ಸಿಹಿ ಗೆಣಸಿನಿಂದ ದೂರವಿರಿ; ಇಲ್ಲಿದೆ ಹೆಲ್ತಿ ಮಾಹಿತಿ | Health Tips

ಸಿಹಿ ಗೆಣಸು ಯಾರಿಗೆ ಇಷ್ಟವಿರುವುದಿಲ್ಲ ಹೇಳಿ. ರುಚಿಕರವಾದ ಸಿಹಿಗೆಣಸನ್ನು ಶೀತ ಋತುವಿನಲ್ಲಿ ಕಂಡುಬರುವ ಬೇರು ತರಕಾರಿ…

ಗಿಡಗಳನ್ನು ಹಸಿರಾಗಿಡಲು ಕಡಲೆಕಾಯಿ ಸಿಪ್ಪೆ ಪ್ರಯೋಜನಕಾರಿ; ಇಲ್ಲಿದೆ ಬಳಸುವ ವಿಧಾನ | Tips

ಚಳಿಗಾಲದಲ್ಲಿ ಸಸ್ಯಗಳಿಗೆ ಹೆಚ್ಚಿನ ಕಾಳಜಿ ಬೇಕು. ಏಕೆಂದರೆ ತಂಪಾದ ಗಾಳಿ ಮತ್ತು ಇಬ್ಬನಿಯಿಂದ ತೇವಾಂಶವು ಹೆಚ್ಚಾಗುವುದರಿಂದ…

Kurukshetra | ಕುರುಕ್ಷೇತ್ರ ಯುದ್ಧದ ಕೊನೆಯಲ್ಲಿ ರಣಭೂಮಿಗೆ ದ್ರೌಪದಿಯನ್ನು ಶ್ರೀಕೃಷ್ಣ ಕರೆತಂದಿದ್ದೇಕೆ; ಪರಮಾತ್ಮ ಹೇಳಿದ್ದೇನು?

ಕುರುಕ್ಷೇತ್ರ(Kurukshetra) ಯುದ್ಧದಲ್ಲಿ ಎಲ್ಲಾರೂ ಮರಣ ಹೊಂದಲು ಕಾರಣ ಪಾಂಡವರಲ್ಲ ದ್ರೌಪದಿಯ ಕಣ್ಣೀರು. ಕುರುಕ್ಷೇತ್ರ ಯುದ್ಧ ಮುಗಿದ…