Monday, 19th November 2018  

Vijayavani

ರಾಜಧಾನಿಯಲ್ಲಿ ಹಸಿರು ಕ್ರಾಂತಿ-ಸಿಎಂ ಎಚ್​ಡಿಕೆ, ಡಿಸಿಎಂ ಪರಮೇಶ್ವರ್​ಗೆ ಡೆಡ್​​ಲೈನ್-ಕೂಡಲೇ ಸ್ಥಳಕ್ಕೆ ಬರುವಂತೆ ರೈತರ ಪಟ್ಟು        ಸೈಟ್ ಕೇಳ್ತಿಲ್ಲ, BMW ಕಾರೂ ಕೇಳ್ತಿಲ್ಲ-ನಾವು ಕೇಳ್ತಿರೋದು ಬೆಳೆದ ಬೆಲೆಗೆ ಬೆಲೆಯಷ್ಟೇ-ಸಚಿವ ಕಾಶಂಪೂರ್​​ಗೆ ಮನವಿ ಸಲ್ಲಿಕೆ        ರೈತರು, ಹೆಣ್ಮಕ್ಕಳ ವಿಚಾರದಲ್ಲಿ ಗೌರವ ಇದೆ-ನನ್ನ ಹೇಳಿಕೆಯಲ್ಲಿ ಯಾವುದೇ ದುರುದ್ದೇಶ ಇಲ್ಲ-ಸಿಎಂ ಹೇಳಿಕೆ ಬಿಡುಗಡೆ        ಸಿಎಂ ಕೂಡಲೇ ಕ್ಷಮೆ ಕೇಳಬೇಕು-ನಾಳಿನ ಕೋರ್​​​ ಕಮಿಟಿ ಸಭೆಯಲ್ಲಿ ಹೋರಾಟದ ನಿರ್ಧಾರ-ಸರ್ಕಾರದ ವಿರುದ್ಧ ಗುಡುಗಿದ ಬಿಜೆಪಿ        ₹3,300 ಕೋಟಿ, 132 ಕಿ.ಮೀ. ದೂರ-ಗುರಗಾಂವ್​​ನಲ್ಲಿ ಎಕ್ಸ್​​ಪ್ರೆಸ್​​ ಹೈವೇ ಲೋಕಾರ್ಪಣೆಗೊಳಿಸಿದ ಪ್ರಧಾನಿ        ರೈಲು ಬರುವ ವೇಳೆ ಹಳಿ ಮಧ್ಯೆ ಮಲಗಿದ ಭೂಪ-ಪ್ರಾಣದ ಹಂಗು ತೊರೆದು ಹುಚ್ಚು ಸಾಹಸ-ಹೈದ್ರಾಬಾದ್​ನಲ್ಲೊಂದು ಮಿರ‍್ಯಾಕಲ್       
Breaking News

ತ್ಯಾಜ್ಯದಿಂದಲೇ ಮನೆ ಸೌಂದರ್ಯ

Saturday, 23.06.2018, 3:02 AM       No Comments

| ದ್ವಾರಕಾನಾಥ್

ಬೆಂಗಳೂರು: ಪರಿಸರದ ವಿಶೇಷ ಕಾಳಜಿ ಹೊಂದಿರುವವರು ತಮ್ಮ ಮನೆಯನ್ನು ಹಸಿರು ಮನೆಯನ್ನಾಗಿ ಪರಿವರ್ತನೆ ಮಾಡುವುದರ ಜತೆಗೆ, ಮನೆ ಅಂದ ಹೆಚ್ಚಿಸಲು ಅನೇಕ ಕಸರತ್ತು ಮಾಡುತ್ತಾರೆ. ಕೆಲವರು ವಿದೇಶದಿಂದ ಮಾಡರ್ನ್ ಆರ್ಟ್, ಫಲಕ ಹಾಗೂ ಅಲಂಕಾರಿಕ ವಸ್ತುಗಳನ್ನು ದುಬಾರಿ ಬೆಲೆಗೆ ಖರೀದಿ ಮಾಡುತ್ತಾರೆ. ಇದರ ಬದಲಾಗಿ ಮನೆಯಲ್ಲೇ ಉತ್ಪತ್ತಿಯಾಗುವ ತ್ಯಾಜ್ಯ ವಸ್ತುಗಳನ್ನು ಬಳಸಿ ಮೆರುಗು ನೀಡುವುದು ಇಂದಿನ ಮಾಡರ್ನ್ ಮನೆಗಳ ಟ್ರೆಂಡ್ ಆಗಿದೆ.

ಕಾಗದ, ಬಿದಿರು, ಲೋಹ, ಗಾಜುಗಳಿಂದ ಆಧುನಿಕ ಸ್ಪರ್ಶ ನೀಡಿ ಮನೆಯ ಒಳಾಂಗಣ ಮತ್ತು ಹೊರಾಂಗಣ ಆಕರ್ಷಕವಾಗಿ ವಿನ್ಯಾಸಗೊಳಿಸುವುದು ಈಗ ಹೆಚ್ಚು ಜನಪ್ರಿಯವಾಗುತ್ತಿದೆ.

ಪರಿಸರ ಸ್ನೇಹಿ ಮತ್ತು ಕಡಿಮೆ ಖರ್ಚಿನಲ್ಲಿಯೇ ಮನೆಗಳನ್ನು ಸಿಂಗರಿಸಬಹುದಾಗಿದೆ.ಅದರಲ್ಲೂ ಬೆಂಗಳೂರಿನಲ್ಲಿರುವ ಐಟಿ ಉದ್ಯೋಗಿಗಳ ಕುಟುಂಬ ಇಂತಹ ಬೇಡದ ವಸ್ತುಗಳಲ್ಲಿ ತಮ್ಮ ಕುಶಲಕಲೆ ತೋರಿಸುವಲ್ಲಿ ಮುಂಚೂಣಿಯಲ್ಲಿದ್ದಾರೆ.

ಪರಿಸರಸ್ನೇಹಿ ವಸ್ತುಗಳ ಬಳಕೆ: ತ್ಯಾಜ್ಯ ವಸ್ತುಗಳನ್ನು ಪುನರ್ಬಳಕೆ ಮಾಡಿಕೊಂಡು ಅದೇ ವಸ್ತುಗಳನ್ನು ಮನೆಗೆ ಮೆರುಗು ನೀಡಲು ಬಳಸಿಕೊಳ್ಳಲಾಗುತ್ತಿದೆ. ತ್ಯಾಜ್ಯ ಸರಕಾದ ಕಾಗದ, ಬಿದಿರು, ಲೋಹ, ಗಾಜು ಎಲ್ಲದಕ್ಕೂ ಆಧುನಿಕ ಸ್ಪರ್ಶ ನೀಡಿ ಮನೆಯ ಒಳಾಂಗಣ ಮತ್ತು ಹೊರಾಂಗಣವನ್ನು ಆಕರ್ಷಕವಾಗಿ ವಿನ್ಯಾಸ ಮಾಡಲು ಈಗ ಸಾಧ್ಯವಾಗಿದೆ.ಇದಕ್ಕೆಂದೇ ಪರಿಸರ ಸ್ನೇಹಿ ಬಣ್ಣಗಳು, ಮರದ ಪರಿಕರಗಳು ಮತ್ತು ಇತರ ಅಲಂಕಾರಿಕ ವಸ್ತುಗಳು ಮಾರುಕಟ್ಟೆಯಲ್ಲಿ ಲಭ್ಯವಾಗುತ್ತಿವೆ.

ನೈಸರ್ಗಿಕ ವಸ್ತು ಬಳಕೆಗೆ ಆದ್ಯತೆ: ಬಿದಿರು, ಹಳೆಯ ಮರಗಳು, ಹಳೆಯ ಫ್ರೇಂ, ಕಲ್ಲುಗಳು, ಮಣ್ಣಿನ ಮಡಿಕೆ ಇವುಗಳನ್ನು ಎಸೆಯುವ ಬದಲು ನಿಗದಿತ ಸ್ಥಳದಲ್ಲಿ ಸೂಕ್ತವಾಗಿ ಇಟ್ಟುಕೊಂಡರೆ ನೊಡಲು ಸುಂದರವಾಗಿರುತ್ತದೆ. ಹಳೆಯ ಫ್ರೇಂ, ಸಮುದ್ರ ಬದಿ ಅಥವಾ ನದಿ ದಂಡೆಯಲ್ಲಿ ಸಿಗುವ ನುಣುಪಾದ ಕಲ್ಲುಗಳೂ ಮನೆಯ ಷೋ ಕೇಸ್ ಅಂದವನ್ನು ಹೆಚ್ಚಿಸುತ್ತಿದೆ.ಇನ್ನು ಏರುತ್ತಿರುವ ತಾಪಮಾನದ ನಿಯಂತ್ರಣಕ್ಕಾಗಿ ಮನೆಯೊಳಗೆ ಹಸಿರು ಬೆಳೆಸುವುದು ಇಂದಿನ ಪ್ರಮುಖ ಟ್ರೆಂಡ್. ಅದರಲ್ಲೂ ತಾರಸಿ ತೋಟ, ವರ್ಟಿಕಲ್ ಗಾರ್ಡನಿಂಗ್ ಇತ್ಯಾದಿ ಮನೆ ಹಾಗೂ ಮನಸ್ಸನ್ನು ತಂಪಾಗಿರಿಸಲು ಸಹಕಾರಿ. ಬಿದಿರು, ಹಳೆ ವಸ್ತು, ನಾರು ಮುಂತಾದವುಗಳಿಂದ ತಯಾರಿಸಿದ ಅತ್ಯಾಕರ್ಷಕ ಮನೆ ಅಲಂಕಾರಿಕ ವಸ್ತುಗಳನ್ನು ಕೊಂಡುಕೊಳ್ಳುತ್ತಿದ್ದಾರೆ. ಪೇಪರ್ ವಾಸ್, ಬಿದಿರಿನ ಪರದೆ, ಟೇಬಲ್ ಲ್ಯಾಂಪ್ ಮರದ ಪೀಠೋಪಕರಣಗಳು ಹೆಚ್ಚು ಉಪಯುಕ್ತವಾಗುತ್ತಿವೆ. ಅಂತೆಯೇ ವುಡ್ ಪಾಲಿಮರ್ ಬಗ್ಗೆ ಮಾಹಿತಿ ಕೊರತೆ ಇರುವುದು ಮರಗಳ ಬಳಕೆ ಇಳಿಕೆಯಾಗದೆ ಇರಲು ಕಾರಣವಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಮನೆಯ ಅಲಂಕಾರಕ್ಕಾಗಿ ಬಳಕೆಯಾಗುವ ವಸ್ತುಗಳು ಶೇ. 85ರಷ್ಟಿವೆ. ಪರಿಸರಸ್ನೇಹಿ ವಸ್ತುಗಳನ್ನು ಖರೀದಿಸುತ್ತಿರುವವರು ಗಣನೀಯವಾಗಿ ಹೆಚ್ಚಾಗುತ್ತಿದ್ದಾರೆ.

ಬಣ್ಣಗಳ ಮೇಲೆ ಕಾಳಜಿ: ರಾಸಾಯನಿಕ ಬಣ್ಣಗಳು ಪರಿಸರಕ್ಕೆ ಹಾನಿಯುಂಟುಮಾಡುತ್ತವೆ. ಅದಕ್ಕೆಂದೇ ಮಾರುಕಟ್ಟೆಯಲ್ಲಿ ಪರಿಸರಸ್ನೇಹಿ ಬಣ್ಣಗಳೂ ಲಭ್ಯ ಇವೆ. ಈ ಬಣ್ಣಗಳು ಕಡಿಮೆ ಪ್ರಮಾಣದ ರಾಸಾಯನಿಕಗಳನ್ನು ಹೊಂದಿರುತ್ತವೆ. ಇವುಗಳು ಕೂಡ ಶೇ.98 ಸಸ್ಯಮೂಲವಾದ್ದರಿಂದ ಅವುಗಳಿಂದ ಹೆಚ್ಚು ಹಾನಿ ಉಂಟಾಗಲಾರದು. ಬಣ್ಣಗಳ ಮೇಲೆ ಸೂರ್ಯನ ಕಿರಣಗಳು ಬೀಳುವಂತೆ ನೋಡಿಕೊಂಡರೆ ಮನೆ ಇನ್ನಷ್ಟು ಕಲರ್​ಫುಲ್ ಆಗುತ್ತದೆ.

Leave a Reply

Your email address will not be published. Required fields are marked *

Back To Top