ತೋಳು, ಭುಜ ಬಲಪಡಿಸುವ ಗಣಪಮುದ್ರೆ

ಣಪಮುದ್ರೆಯ ಬಗ್ಗೆ ಮಾಹಿತಿ ತಿಳಿಸಿ

| ಸಂಗನ ಗೌಡ 76 ವರ್ಷ, ಯಾದಗಿರಿ

ಎಲ್ಲಾ ಅಡೆತಡೆಗಳನ್ನು ಜಯಿಸುವವ ಗಣೇಶ ದೇವರು. ಗಣೇಶಮುದ್ರೆಯನ್ನು ಆನೆದೇವರು ಗಣೇಶನಿಗೆ ಅರ್ಪಿಸಲಾಗಿದೆ. ಸಂಕಲ್ಪ ಸಿದ್ಧಿಯಾಗಲು ಈ ಮುದ್ರೆ ಸಹಕಾರಿ. ಎಲ್ಲಾ ಕಾರ್ಯಗಳು ನಿರ್ವಿಘ್ನವಾಗಿ ನೆರವೇರಲು ಪ್ರಥಮವಾಗಿ ಗಣೇಶದೇವರ ಸ್ಮರಣೆ ಮಾಡುತ್ತೇವೆ. ಯಾವುದೇ ರೀತಿಯ ಅಡಚಣೆ ಬರಬಾರದು ಎಂಬುದು ಮುದ್ರೆಯ ಉದ್ದೇಶ. ಈ ಮುದ್ರೆಯ ಅಭ್ಯಾಸದಿಂದ ಪೃಥ್ವಿ, ಜಲ, ಅಗ್ನಿ, ವಾಯು, ಆಕಾಶ – ಈ ಐದೂ ಮೂಲಭೂತ ತತ್ವಗಳ ಶಕ್ತಿಗಳು ಸಮ್ಮಿಲನಗೊಂಡು ಮೈ-ಮನಗಳನ್ನು ಸದೃಢಗೊಳ್ಳುತ್ತವೆ.

ವಿಧಾನ: ಎಡಗೈ ಹಸ್ತವನ್ನು ಬೆರಳುಗಳು ಮಡಚಿದ ಸ್ಥಿತಿಯಲ್ಲಿ ಹೊರಮುಖವಾಗಿ ಎದೆಯ ಹತ್ತಿರ ಇರಿಸಿ. ಬಲಗೈ ಬೆರಳುಗಳನ್ನು ಎಡಗೈ ಬೆರಳುಗಳಿಗೆ ಕೊಕ್ಕೆಯ ಹಾಗೆ ಬೆಸೆದು ಆರು ಬಾರಿ ದೀರ್ಘ ಉಸಿರಾಟ ನಡೆಸಿ. ಆಮೇಲೆ 6ರಿಂದ 16 ಬಾರಿ ಓಂ ಗಂ ಗಣಪತಯೇ ಸ್ವಾಹ ಎಂದು ಪಠಿಸಿ. ಹಾಗೆಯೇ ಕೈಯನ್ನು ಬದಲಾಯಿಸಿ ಅದೇ ರೀತಿ ಅಭ್ಯಾಸ ಮಾಡಿ. ಈ ರೀತಿ ದಿನದಲ್ಲಿ ಮೂರು ಬಾರಿ ಅಭ್ಯಾಸ ಮಾಡಿ.

ಉಪಯೋಗ: ತೋಳುಗಳು, ಭುಜ ಹಾಗೂ ಎದೆಯ ಸ್ನಾಯುಗಳು ಬಲಗೊಳ್ಳುತ್ತವೆ. ಖಚಿತತೆ, ಧೈರ್ಯ ಹೆಚ್ಚುತ್ತದೆ. ಆತ್ಮಸ್ಥೆರ್ಯ ಉತ್ತಮಗೊಳ್ಳುತ್ತದೆ. ಹೃದಯ ಸ್ನಾಯುಗಳನ್ನು ಬಲಪಡಿಸುತ್ತದೆ. ಆಜ್ಞಾಚಕ್ರವನ್ನು ಉದ್ದೀಪಿಸಿ ಧೈರ್ಯ, ಸ್ಥೈರ್ಯವನ್ನು ಉಂಟುಮಾಡುತ್ತದೆ. ಸಹಿಷ್ಣುತೆ, ಸೌಹಾರ್ದತೆ, ಹೊಂದಾಣಿಕೆ, ಗುಣಗಳನ್ನು ಬೆಳೆಸುತ್ತದೆ. ಆಜ್ಞಾಚಕ್ರವು ಹಾಮೋನುಗಳನ್ನು ಬಿಡುಗಡೆಗೆ ಪ್ರಚೋದಕ. ಇದರಿಂದ ಮನಸ್ಸನ್ನು ಕೇಂದ್ರೀಕರಿಸಲಾಗುತ್ತದೆ. ದಿವ್ಯಶಕ್ತಿ, ಜ್ಞಾನ ಉದಯವಾಗುತ್ತದೆ. ಸ್ಪಷ್ಟ ಚಿಂತನೆ, ಆಧ್ಯಾತ್ಮಿಕ ಚಿಂತನೆ, ಆಂತರಿಕ, ಬಾಹ್ಯಶಕ್ತಿ ವೃದ್ಧಿಸುತ್ತದೆ.

ನನಗೆ ಪೆನ್ನು ಹಿಡಿದು ಬರೆಯಲು ಶಕ್ತಿ ಇಲ್ಲದಂತೆ ಅನಿಸುತ್ತದೆ. ಭಾರವಾದ ವಸ್ತುವನ್ನು ಹಿಡಿಯಲು ಏನೂ ಸಮಸ್ಯೆ ಇಲ್ಲ. ಈ ತರಹ ಒಂದು ವರ್ಷದಿಂದ ಅನುಭವವಾಗುತ್ತದೆ. ಯೋಗದ ಮೂಲಕ ಪರಿಹಾರ ತಿಳಿಸಿ.

| ವಿಶ್ವನಾಥ್ ಜೋಷಿ 50 ವರ್ಷ

ಹಿಡಿತದ ಸಾಮರ್ಥ್ಯದ ಬಗ್ಗೆ ನೀವು ಯೋಚಿಸುವುದು ಸೂಕ್ತವಾಗಿದೆ. ಹಿಡಿತವನ್ನು ಯೋಚಿಸುವಾಗ ಪರಿಗಣಿಸಬೇಕಾದ ಇನ್ನು ಅನೇಕ ವಿಷಯಗಳಿವೆ. ಹಿಡಿತವು ಮೊಣಕೈ ಬಳಿ ಇರುವ ಸ್ನಾಯುಗಳಿಂದ ಹಿಡಿದು ಬೆರಳ ತುದಿಯವರೆಗೆ ಎಲ್ಲವನ್ನು ಒಳಗೊಂಡಿರುತ್ತದೆ. ನೀವು ಕೈಬೆರಳುಗಳಿಗೆ ಕೆಲವು ವ್ಯಾಯಾಮಗಳನ್ನು ಮೊದಲು ನೀಡಿ. ಆರಂಭದಲ್ಲಿ ಬೆರಳುಗಳನ್ನು ಮಡಚಿ, ಬಿಡಿಸುವ ವ್ಯಾಯಾಮ ಸುಮಾರು 16ರಿಂದ ಹದಿನೆಂಟು ಬಾರಿ (ದಿನಕ್ಕೆ ಮೂರು ಬಾರಿ) ಮಾಡಿ. ಬಾಹ್ಯ ಮುಷ್ಟಿಮುದ್ರೆಯನ್ನು ಎರಡು ನಿಮಿಷ ಮಾಡಿ. ಬೆರಳುಗಳ ವಿಸ್ತರಣೆ ವ್ಯಾಯಾಮ ಮಾಡಿ. ಯೋಗಾಸನಗಳಲ್ಲಿ ತಾಡಾಸನ, ವೃಕ್ಷಾಸನ, ಅಧೋಮುಖ ಶ್ವಾನಾಸನ, ಶವಾಸನ ಮಾಡಿ. ನಾಡಿಶುದ್ಧಿ ಪ್ರಾಣಾಯಾಮ ಒಳಿತು. ಸಣ್ಣ ವಸ್ತು ಮತ್ತು ಭಾರವಾದ ವಸ್ತು ಎತ್ತುವಾಗ ಮನಸ್ಸಿನ ಸ್ಪಷ್ಟ ಸಂದೇಶ ರವಾನಿಸಿ. ಬಿಡುವಿನ ವೇಳೆಯಲ್ಲಿ ಪ್ರಾಣಮುದ್ರೆ, ಚಿನ್ಮುದ್ರೆ, ಪೃಥ್ವಿಮುದ್ರೆ ತಲಾ ಹತ್ತರಿಂದ ಇಪ್ಪತ್ತು ಬಾರಿ ಅಭ್ಯಾಸ ಮಾಡಿ.

Leave a Reply

Your email address will not be published. Required fields are marked *