ಚಿಕ್ಕೋಡಿ: ಸಾರ್ವಜನಿಕ ಆಸ್ಪತ್ರೆಗೆ ಬರುವ ಬಡರೋಗಿಗಳಿಗೆ ಗುಣಮಟ್ಟದ ಆರೋಗ್ಯ ಸೇವೆ ಒದಗಿಸಬೇಕು. ಒಂದುವೇಳೆ ರೋಗಿಗಳಿಗೆ ತೊಂದರೆ ನೀಡಿದರೆ ಸುಮ್ಮನಿರುವುದಿಲ್ಲ. ಅಂಥ ಅಽಕಾರಿಗಳ ಮೇಲೆ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಾಗುವುದು ಎಂದು ಚಿಕ್ಕೋಡಿ ಉಪವಿಭಾಗಾಧಿಕಾರಿ ಸುಭಾಷ ಸಂಪಗಾಂವಿ ಎಚ್ಚರಿಕೆ ನೀಡಿದ್ದಾರೆ.
ಪಟ್ಟಣದಲ್ಲಿರುವ ಸಾರ್ವಜನಿಕ ಆಸತ್ರೆಗೆ ಮಂಗಳವಾರ ಭೇಟಿ ನೀಡಿ ಆಸ್ಪತ್ರೆಯ ಕಾರ್ಯವೈಖರಿ ಪರಿಶೀಲಿಸಿದರು. ಆಸ್ಪತ್ರೆಯಲ್ಲಿ ಔಷಧ ಮತ್ತು ಚುಚ್ಚುಮದ್ದು ಸರಿಯಾಗಿ ಪೂರೈಕೆಯಾಗುತ್ತಿರುವುದರ ಬಗ್ಗೆ ವೈದ್ಯರು ಗಮನ ವಹಿಸಬೇಕು. ಆಸ್ಪತ್ರೆಯ ನವೀಕರಣ ಕಾಮಗಾರಿ ನಡೆದಿದ್ದು, ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿಗಳು ಗುಣಮಟ್ಟದ ಕಾಮಗಾರಿ ಮಾಡಿಸಿಕೊಳ್ಳಬೇಕು. ಆಸ್ಪತ್ರೆಯಲ್ಲಿ ಏನೇ ತೊಂದರೆ ಅಥವಾ ಯಾವುದೇ ಔಷಧ ಕೊರತೆಯಾಗಿರುವುದನ್ನು ತಿಳಿಸಿದರೆ ಸರ್ಕಾರದಿಂದ ಒದಗಿಸುವ ವ್ಯವಸ್ಥೆ ಮಾಡಲಾಗುವುದು ಎಂದು ಹೇಳಿದರು.
ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ಮಹೇಶ ನಾಗರಬೆಟ್ಟ, ಡಾ.ಸಚಿನ ಬಾಕರೆ, ಡಾ. ವಿಶಾಲ ಹಡಪದ, ಡಾ. ಹಿದಾಯತವುಲ್ಲಾ ಪಠಾಣ, ಡಾ. ಕಾವೇರಿ ಉಪ್ಪೆ, ಡಾ. ರೂಪಾ ಅಗಸಿಮನಿ, ಡಾ. ಜ್ಯೋತಿ ಚಿತಳೆ, ಶುಶ್ರೂಷಕ ಅಧೀಕ್ಷಕಿ ಮೇಘಾ ಕಾಂಬಳೆ, ರಮೇಶ ದೊಡಮನಿ ಇತರರಿದ್ದರು.