ತೆಲಸಂಗ: ನಿವೃತ್ತ ಯೋಧನಿಗೆ ಸನ್ಮಾನ

ತೆಲಸಂಗ:  ಶಿಸ್ತಿಗೆ ಇನ್ನೊಂದು ಹೆಸರೇ ಸೈನಿಕ. ಸೈನಿಕರು ತಮ್ಮ ನಿವೃತ್ತಿಯ ಜೀವನವನ್ನು ಸಮಾಜ ಸೇವೆಗೆ ಮೀಸಲಿಡಬೇಕು ಎಂದು ಮಾಜಿ ಸೈನಿಕ ಮಹಾದೇವ ಸಾವಂತ ಸಲಹೆ ನೀಡಿದ್ದಾರೆ. ಗುರುವಾರ ಗ್ರಾಮದ ಶಿವಾನಂದ ಹತ್ತಿ ಸೈನ್ಯದಿಂದ ನಿವೃತ್ತಿ ಹೊಂದಿ ಗ್ರಾಮಕ್ಕೆ ಆಗಮಿಸಿದ ಹಿನ್ನೆಲೆಯಲ್ಲಿ ಅವರನ್ನು ನಿವೃತ್ತ ಸೈನಿಕರಿಂದ ಸನ್ಮಾನಿಸಿ ಮಾತನಾಡಿದರು.

ನಿವೃತ್ತ ಸೈನಿಕ ಶಿವಾನಂದ ಹತ್ತಿ, ಯುವಕರು ಉತ್ತಮ ಶಿಕ್ಷಣ ಪಡೆಯುವ ಮೂಲಕ ದೇಶ ಸೇವೆಗೆ ಮುಂದಾಗಬೇಕು ಎಂದರು.

ಮಾಜಿ ಸೈನಿಕರಾದ ಶಿವಬಸಪ್ಪ ಕುಂಬಾರ, ಹನುಮಂತ ಅವಟಿ, ಬಾಳಪ್ಪ ಲಾಮಖಾನೆ, ಬಸವರಾಜ ರೊಟ್ಟಿ, ಹಿರಿಯರಾದ ಮಲ್ಲಪ್ಪ ಗಂಗಾಧರ, ಚೆನ್ನಪ್ಪ ಕುಮಠಳ್ಳಿ ಇತರರು ಇದ್ದರು