ತೆರಿಗೆ ಪಡೆದು ಕರ್ತವ್ಯ ಮರೆತ ಪಾಲಿಕೆ

Latest News

ಮೈತ್ರಿ ತೊರೆಯದಂತೆ ಎನ್​ಡಿಎ ಮಿತ್ರಪಕ್ಷಗಳಲ್ಲಿ ಮನವಿ ಮಾಡಿದ ಪ್ರಧಾನಿ ನರೇಂದ್ರ ಮೋದಿ

ನವದೆಹಲಿ: ಮಹಾರಾಷ್ಟ್ರದ ಕಹಿಘಟನೆಯಿಂದ ಎಚ್ಚರಗೊಂಡ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಎನ್​ಡಿಎ ಕೂಟ ತೊರೆಯದಂದತೆ ಮಿತ್ರಪಕ್ಷಗಳಿಗೆ ಮನವಿ ಮಾಡಿಕೊಂಡಿದ್ದಾರೆ. ಎನ್​ಡಿಎ ಕೂಟದಲ್ಲಿ ಸಣ್ಣ ಸಣ್ಣ...

ಗವಿಶ್ರೀಗಳ ಸದ್ಭಾವನಾ ಪಾದಯಾತ್ರೆ, ಸ್ವಚ್ಛತೆಗೆ ಭಕ್ತರ ಹೆಚ್ಚಿನ ಆದ್ಯತೆ

ಕಾರಟಗಿ: ಹತ್ತು ದಿನಗಳ ಸದ್ಭಾವನಾ ಪಾದಯಾತ್ರೆ, ಆಧ್ಯಾತ್ಮಿಕ ಪ್ರವಚನ ಕೈಗೊಂಡಿರುವ ಕೊಪ್ಪಳದ ಗವಿಶ್ರೀ ಆಗಮನದ ಹಿನ್ನೆಲೆಯಲ್ಲಿ ವಿವಿಧ ಗ್ರಾಮಗಳ ಬೀದಿ ಸಿಂಗಾರಗೊಳ್ಳುತ್ತಿದ್ದು, ಜನ...

ಆರ್ಥಿಕ ಅಭಿವೃದ್ಧಿಗೆ ಸಹಕಾರ ಕ್ಷೇತ್ರ ಕಾರಣ – ಜಿಲ್ಲಾ ಸಹಕಾರ ಯುನಿಯನ್ ಅಧ್ಯಕ್ಷ ಡಾ.ಶೇಖರಗೌಡ ಮಾಲಿಪಾಟೀಲ್ ಶ್ಲಾಘನೆ

ತಾವರಗೇರಾ: ರೈತರ ಭಾಗವಹಿಸುವಿಕೆ, ಆರ್ಥಿಕ ಅಭಿವೃದ್ಧಿ ಜತೆಗೆ ಕೃಷಿಯಲ್ಲಿ ಯಶಸ್ಸು ಪಡೆಯುವಲ್ಲಿ ಸಹಕಾರ ಕ್ಷೇತ್ರ ಕಾರಣವಾಗಿದೆ ಎಂದು ಜಿಲ್ಲಾ ಸಹಕಾರ ಯುನಿಯನ್ ಅಧ್ಯಕ್ಷ...

ಜಿಲ್ಲಾ ಕಾಂಗ್ರೆಸ್‌ನಲ್ಲಿರುವ ಗುಂಪುಗಾರಿಕೆಗೆ ಬೇಸತ್ತು ಬಿಜೆಪಿ ಸೇರಿದೆ- ಅನರ್ಹ ಶಾಸಕ ಪ್ರತಾಪಗೌಡ ಪಾಟೀಲ್

ರಾಯಚೂರು: ಜಿಲ್ಲಾ ಕಾಂಗ್ರೆಸ್‌ನಲ್ಲಿರುವ ಗುಂಪುಗಾರಿಕೆ, ಹಿರಿತನಕ್ಕೆ ಸಿಗದ ಬೆಲೆ ಮತ್ತು ಹೈಕಮಾಂಡ್ ಧೋರಣೆಯಿಂದ ಬೇಸರವಾಗಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೆ ವಿನಾ, ಸಮ್ಮಿಶ್ರ...

ಶತಮಾನದಷ್ಟು ಹಳೆಯ ಚರ್ಚ್​ ಬೆಂಕಿಗೆ ಆಹುತಿ; ಜ್ವಾಲೆ ಕಾಣಿಸುತ್ತಲೇ ಒಳಗೆ ಹೋದ ವೃದ್ಧ ದಂಪತಿ ಸಾವು..ಬೆಂಕಿ ನೋಡಿ ಕೂಡ ಅವರು ಒಳಹೋಗಿದ್ದೇಕೆ ಗೊತ್ತಾ?

ಶಿಲ್ಲಾಂಗ್​: ಶತಮಾನದಷ್ಟು ಹಳೆಯ ಚರ್ಚ್​ ಬೆಂಕಿಗೆ ಆಹುತಿಯಾಗಿ, ವೃದ್ಧ ದಂಪತಿ ಸಜೀವ ದಹನಗೊಂಡ ದುರ್ಘಟನೆ ಮೇಘಾಲಯದ ಶಿಲ್ಲಾಂಗ್​ನಲ್ಲಿ ಇಂದು ಮುಂಜಾನೆ ನಡೆದಿದೆ. ಶಿಲ್ಲಾಂಗ್​ನ ಕ್ವಾಲಪಟ್ಟಿ ಪ್ರದೇಶದಲ್ಲಿ 1902ರಲ್ಲಿ...

ಹುಬ್ಬಳ್ಳಿ: ಇಲ್ಲಿಯ ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆಗೆ ತೆರಿಗೆ ಹಣ ಮಾತ್ರ ಬೇಕು ಆದರೆ, ಕರದಾತರ ಯಾವೊಂದು ಕೆಲಸ ಮಾಡಿಕೊಡಲೂ ಅಧಿಕಾರಿಗಳಿಗೆ ಪುರುಸೊತ್ತಿಲ್ಲ.

ಹೌದು. ಇಲ್ಲಿಯ ಗೋಕುಲ ರಸ್ತೆ ಡಾ. ರಾಮ ಮನೋಹರ ಲೋಹಿಯಾ ನಗರದ ನಿವಾಸಿಗಳು ಪ್ರಾಮಾಣಿಕವಾಗಿ ಕರ ತುಂಬುತ್ತ ಬಂದಿದ್ದರೂ ನಾಗರಿಕ ಸೌಲಭ್ಯಗಳು ಇಲ್ಲದೇ ಪರದಾಡುತ್ತಿದ್ದಾರೆ. ರಸ್ತೆ, ಗಟಾರು ಸೇರಿ ಒಂದಿಷ್ಟು ಸವಲತ್ತು ಮಾಡಿ ಕೊಡಿ ಎಂದು ಅಧಿಕಾರಿಗಳಿಗೆ ದುಂಬಾಲು ಬಿದ್ದರೂ ಯಾವುದೇ ಪ್ರಯೋಜನವಾಗುತ್ತಿಲ್ಲ.

ಪಟ್ಟು ಬಿಡದ ನಿವಾಸಿಗಳು ಮೇಲಿಂದ ಮೇಲೆ ಮನವಿ ಮಾಡುತ್ತಲೇ ಬಂದಿದ್ದಾರೆ. ಇದೀಗ ಜಿಲ್ಲಾಧಿಕಾರಿಯವರಿಗೂ ಮನವಿ ಸಲ್ಲಿಸಿ, ಮೂಲ ಸೌಲಭ್ಯ ಕಲ್ಪಿಸಿ ಎಂದು ಪರಿಪರಿಯಾಗಿ ಕೇಳಿಕೊಂಡಿದ್ದಾರೆ.

ಬೇಡಿಕೆ ಏನು ?: ವಾರ್ಡ್ ನಂ. 38ರಲ್ಲಿ ಬರುವ ರಾಮ ಮನೋಹರ ಲೋಹಿಯಾನಗರದ ರಸ್ತೆಗಳಿಗೆ ಒಂದಿಷ್ಟು ಡಾಂಬರು ಸುರಿದು ಸಂಚಾರ ಯೋಗ್ಯ ಮಾಡಬೇಕಿದೆ. ದಶಕದಿಂದ ಅದೇ ತೆಗ್ಗು ಗುಂಡಿಗಳಿಂದ ಕೂಡಿದ ರಸ್ತೆಯಲ್ಲಿ ಮಕ್ಕಳು, ಮಹಿಳೆಯರು, ವೃದ್ಧರು ನರಕಯಾತನೆ ಅನುಭವಿಸಿದ್ದಾರೆ. ಕಸ ಸಂಗ್ರಹ ವಾಹನ ವ್ಯವಸ್ಥೆ ತುರ್ತಾಗಿ ಆಗಬೇಕು. ಮನೆಗಳ ಹಸಿ ಹಾಗೂ ಒಣ ತ್ಯಾಜ್ಯವನ್ನು ಎಲ್ಲೆಂದರಲ್ಲಿ ದೇವಸ್ಥಾನದ ಸಮೀಪದಲ್ಲೂ ಎಸೆಯಲಾಗುತ್ತಿದೆ. ಕಸದ ಡಬ್ಬಿ ಇಟ್ಟು ನಿತ್ಯ ವಿಲೇವಾರಿಯ ವ್ಯವಸ್ಥೆಯಾದರೂ ಮಾಡಿ. ರಾತ್ರಿಯಾದರೆ ಜನ ಸಂಚರಿಸಲು ಹೆದರುತ್ತಾರೆ. ಹುಳ- ಹುಪ್ಪಡಿಗಳ ಕಾಟ ಬೇರೆ. ಬೀದಿ ದೀಪಗಳ ವ್ಯವಸ್ಥೆ ಸರಿಯಾಗಿಲ್ಲ. ಇದ್ದರೂ ದೀಪಗಳು ಬೆಳಗುವುದಿಲ್ಲ. ಕೂಡಲೇ ವಿದ್ಯುತ್ ದೀಪ ಅಳವಡಿಸಿ ಬೆಳಕು ಚೆಲ್ಲುವಂತೆ ಮಾಡಿ. ರಾಯನಾಳ ಸರಹದ್ದಿನಲ್ಲಿ ಬರುವ ಈ ನಗರದಲ್ಲಿ ಕೆರೆಯೊಂದು ಇದೆ. ಈಚೆಗೆ ಸುರಿದ ರಣಮಳೆಗೆ ಕೆರೆ ತುಂಬಿ ಮನೆಗಳಿಗೆ ನುಗ್ಗುವ ಅಪಾಯ ಎದುರಾಗಿತ್ತು. ಅಲ್ಲಿ ಮಣ್ಣು ಹಾಕಿ ತಾತ್ಕಾಲಿಕ ಪರಿಹಾರ ಕಂಡುಕೊಳ್ಳಲಾಗಿತ್ತು. ಇದೀಗ ಶಾಶ್ವತ ಪರಿಹಾರಕ್ಕೆ ಅಲ್ಲಿ ತಡೆಗೋಡೆ ನಿರ್ವಿುಸಬೇಕು.

ಇಲ್ಲಿನ ಖಾಲಿ ನಿವೇಶನಗಳು ಕಸ ಚೆಲ್ಲುವ ತಾಣಗಳಾಗಿದ್ದು, ಹಂದಿ ನಾಯಿಗಳ ಆವಾಸಕ್ಕೆ ಹೇಳಿ ಮಾಡಿಸಿದಂತಾಗಿವೆ. ಅನೇಕ ರೋಗ ರುಜಿನಗಳ ತಾಣವೂ ಆಗಿವೆ. ದುರ್ವಾಸನೆಯಿಂದ ನಾಗರಿಕರು ರೋಸಿ ಹೋಗಿದ್ದಾರೆ. ಅವುಗಳನ್ನು ಸ್ವಚ್ಛಗೊಳಿಸುವ ಕೆಲಸ ಆಗಬೇಕು.

ಬಡಾವಣೆಯಲ್ಲಿ ಗಟಾರು ನಿರ್ಮಾಣ ಸೇರಿ ಇನ್ನಷ್ಟು ಅಗತ್ಯ ಕೆಲಸಗಳನ್ನು ಸ್ಥಳೀಯ ಆಡಳಿತ ಮಾಡಿಕೊಡಬೇಕು ಎಂದು ಲೋಹಿಯಾನಗರ ಸುಧಾರಣಾ ಸಮಿತಿ ಉಪಾಧ್ಯಕ್ಷ ಟಿ.ಕೆ. ಬರಗಿ, ಪ್ರಧಾನ ಕಾರ್ಯದರ್ಶಿ ರಾಮ ಹಿರೇಒಡೆಯರ, ಕಾರ್ಯದರ್ಶಿ ಕಿರಣ ರಜಪೂತ, ಜಂಟಿ ಕಾರ್ಯದರ್ಶಿ ನಾಗರಾಜ ನಾಡಕರ್ಣಿ, ಆನಂದ ಬಳ್ಳಾರಿ, ಮಂಜುನಾಥ ಉಳ್ಳಾಗಡ್ಡಿ ಹಾಗೂ ನಿವಾಸಿಗಳು ಆಗ್ರಹಿಸಿದ್ದಾರೆ.

- Advertisement -

Stay connected

278,517FansLike
570FollowersFollow
608,000SubscribersSubscribe

ವಿಡಿಯೋ ನ್ಯೂಸ್

VIDEO| ಲೋಕಸಭಾಧ್ಯಕ್ಷ ಓಂ...

ಜೈಪುರ: ಬಾಲಿವುಡ್​ ನಟಿ ರಾಣಿ ಮುಖರ್ಜಿ ಅವರ ಮುಂದಿನ ಚಿತ್ರ ಮರ್ದಾನಿ-2ಗೆ ಬಿಡುಗಡೆ ಮುನ್ನವೇ ವಿರೋಧದ ಕೂಗು ಕೇಳಿಬಂದಿದೆ. ಚಿತ್ರದ ವಿರುದ್ಧ ರಾಜಸ್ಥಾನದ ಕೋಟಾ ನಗರದ ನಿವಾಸಿಗಳು ಲೋಕಸಭಾ ಸ್ಪೀಕರ್​...

VIDEO| ಭಾರಿ ಭದ್ರತೆಯೊಂದಿಗೆ...

ಶಬರಿಮಲೆ: ವಿವಾದದ ನಡುವೆಯೇ ಭಾರಿ ಭದ್ರತೆಯೊಂದಿಗೆ ಅಯ್ಯಪ್ಪ ದೇವಸ್ಥಾನದ ಮುಖ್ಯ ದ್ವಾರವನ್ನು ಶನಿವಾರ ಸಂಜೆ ತೆರೆಯಲಾಯಿತು. ಸುದೀರ್ಘ ಎರಡು ತಿಂಗಳ ಮಂಡಲ-ಮಕರವಿಳಕ್ಕು ಪೂಜೆಗಾಗಿ ದೇವಸ್ಥಾನ ಬಾಗಿಲನ್ನು ಇಂದು ತೆರೆಯಲಾಗಿದೆ. ದೇವಸ್ಥಾನದ ಪ್ರಧಾನ...

VIDEO| ಹಿರಿಯ ಗಾಯಕಿ...

ಬೆಂಗಳೂರು: ಹಿರಿಯ ಗಾಯಕಿ ಲತಾ ಮಂಗೇಶ್ಕರ್ (90) ಅನಾರೋಗ್ಯದಿಂದ ಬಳಲುತ್ತಿದ್ದು ಕಳೆದ ಆರು ದಿನಗಳಿಂದ ಮುಂಬೈನಲ್ಲಿರುವ ಬ್ರೀಚ್​ ಕ್ಯಾಂಡಿ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದರ ನಡುವೆ ಕಳೆದೆರಡು ದಿನಗಳಿಂದ...

VIDEO: ನೆಟ್ಟಿಗರ ಪ್ರೀತಿಯನ್ನು...

ನವದೆಹಲಿ: ಈ ನಾಲ್ಕು ತಿಂಗಳ ಪುಟಾಣಿ ಕಪ್ಪುಬೆಕ್ಕಿಗೆ ಎರಡು ಮುಖ ! ಅದರ ವಿಲಕ್ಷಣ ರೂಪಕ್ಕೆ ನೆಟ್ಟಿಗರು ಮನಸೋತಿದ್ದಾರೆ. ಎರಡು ಮುಖದ ಬೆಕ್ಕಿನ ಮರಿ ತುಂಬ ಆರೋಗ್ಯಕರವಾಗಿ ಬೆಳೆಯುತ್ತಿದ್ದು ಅದನ್ನು...

VIDEO: ಸುಮ್ಮಸುಮ್ಮನೆ ಟ್ರಾನ್ಸ್​ಫರ್​...

ನವದೆಹಲಿ: ಸರ್ಕಾರಿ ಕೆಲಸದಲ್ಲಿ ಇರುವವರಿಗೆ ವರ್ಗಾವಣೆ ಸಾಮಾನ್ಯ. ಆದರೆ ಕೆಲವು ಸಲ ಮೇಲಧಿಕಾರಿಗಳ ಸರ್ವಾಧಿಕಾರಿ ಧೋರಣೆಯಿಂದ ಅಧೀನ ಅಧಿಕಾರಿಗಳು ಸುಮ್ಮನೆ ವರ್ಗಾವಣೆಯಾಗುತ್ತಾರೆ. ಸಣ್ಣ ತಪ್ಪಿಗೂ ಬೇರೆ ಕಡೆ ವರ್ಗಗೊಳ್ಳಬೇಕಾದ ಪರಿಸ್ಥಿತಿ ಬರುತ್ತದೆ. ಹಾಗೆ ವರ್ಗಾವಣೆಗೊಂಡ...

VIDEO: ಪುನೀತ್ ರಾಜ್​ಕುಮಾರ್​​...

ಬೆಂಗಳೂರು: ಪುನೀತ್​ ರಾಜ್​ಕುಮಾರ್ ಅವರ ಪಿಆರ್​ಕೆ ಸಂಸ್ಥೆಯಲ್ಲಿ ನಿರ್ಮಾಣವಾಗಿರುವ ಮಾಯಾ ಬಜಾರ್​-2016 ಸಿನಿಮಾದ ಟೀಸರ್​ ನಿನ್ನೆ (ನ.15)ರಂದು ಸಂಜೆ 7.30ಕ್ಕೆ ಬಿಡುಗಡೆಯಾಗಿದೆ. 56 ಸೆಕೆಂಡ್​​ಗಳ ಟೀಸರ್​ ಬಿಡುಗಡೆಯಾಗಿದೆ. ನವೆಂಬರ್​ 8, 2016ರಂದು 500 ರೂ.ಹಾಗೂ...

VIDEO| ಆಯುಷ್ಮಾನ್​ ಭವ...

ಬೆಂಗಳೂರು: ಹ್ಯಾಟ್ರಿಕ್​ ಹಿರೋ ಶಿವರಾಜ್​ಕುಮಾರ್​ ಹಾಗೂ ಡಿಂಪಲ್​ ಕ್ವೀನ್​ ರಚಿತಾ ರಾಮ್ ನಟನೆಯ "ಆಯುಷ್ಮಾನ್​ ಭವ" ಚಿತ್ರ ಇಂದು ತೆರೆಕಂಡಿದೆ. ವಿಶೇಷವೆಂದರೆ ಈ ಚಿತ್ರದ ಮೂಲಕ ಸಂಗೀತ ನಿರ್ದೇಶಕ ಗುರುಕಿರಣ್​...

VIDEO| ಐತಿಹಾಸಿಕ ಪಾತ್ರದಲ್ಲಿ...

ಮುಂಬೈ: ಇತ್ತೀಚೆಗೆ ಬಿಡುಗಡೆಯಾದ ಹೌಸ್​ಫುಲ್​-4 ಚಿತ್ರದ ಯಶಸ್ಸಿನಲ್ಲಿ ತೇಲುತ್ತಿರುವ ಬಾಲಿವುಡ್​ ನಟ ಅಕ್ಷಯ್​ ಕುಮಾರ್​ ತಮ್ಮ ಮುಂದಿನ ಐತಿಹಾಸಿಕ ಪ್ರಾಜೆಕ್ಟ್​ಗೆ ತಯಾರಾಗುತ್ತಿದ್ದಾರೆ. ಪೃಥ್ವಿರಾಜ್​ ಹೆಸರಿನ ಇತಿಹಾಸ ಆಧಾರಿತ ಚಿತ್ರದ ಪೂಜಾ...

VIDEO| ಎಸ್ಸೆಸ್ಸೆಲ್ಸಿಯ ಎಲ್ಲ...

ವಡೋದರಾ: ರಿಮೋಟ್​ ಕಂಟ್ರೋಲ್​ನಿಂದ ಆಪರೇಟ್​ ಮಾಡಬಹುದಾದ 35 ದೇಶೀಯ ಹಗುರ ವಿಮಾನ ಮಾದರಿಗಳನ್ನು ತಯಾರಿಸುವ ಮೂಲಕ 17 ವರ್ಷದ ಹುಡುಗನೊಬ್ಬ ಎಲ್ಲರ ಹುಬ್ಬೇರಿಸಿದ್ದಾನೆ. ಪ್ರಿನ್ಸ್​ ಪಂಚಾಲ್ ವಿಮಾನ ಮಾದರಿ ತಯಾರಿಸಿದ ಹುಡುಗ....

ಒಸಮಾ ಬಿನ್​ ಲಾಡೆನ್​,...

ಇಸ್ಲಮಾಬಾದ್​: ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರತೀಯ ಸೇನೆ ವಿರುದ್ಧ ಹೋರಾಡಲು ಕಾಶ್ಮೀರಿಗಳಿಗೆ ಉಗ್ರ ತರಬೇತಿ ನೀಡಲಾಗುತ್ತಿತ್ತು ಎಂಬುದನ್ನು ಪಾಕಿಸ್ತಾನದ ಮಾಜಿ ಅಧ್ಯಕ್ಷ, ಪಾಕ್​ ಸೇನೆಯ ಮಾಜಿ ಜನರಲ್​ ಫರ್ವೇಜ್​ ಮುಷರಫ್​ ಅವರು ಒಪ್ಪಿಕೊಂಡಿದ್ದಾರೆ....