ತೆಂಗಿಗೆ ಕಪು್ಪತಲೆ ಹುಳು ಕಾಟ

ಬೆಂಗಳೂರು: ನುಸಿಪೀಡೆ ರೋಗದಿಂದ ಮುಕ್ತವಾಗುತ್ತಿರುವ ಬೆಂ.ಗ್ರಾಮಾಂತರ ಜಿಲ್ಲೆಯ ತೆಂಗಿನ ಮರಗಳಿಗೆ ಇದೀಗ ಕಪು್ಪ ತಲೆ ಹುಳಗಳ ಹಾವಳಿ ಕಾಡುತ್ತಿದೆ.

ಜಿಲ್ಲೆಯಲ್ಲಿ ತೆಂಗು ಪ್ರಮುಖ ಬೆಳೆಯಲ್ಲವಾದರೂ ಅಂದಾಜು 5 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಗಿದೆ. ಈ ಹಿಂದೆ ನುಸಿಪೀಡೆಯಿಂದ ಬೆಳೆಗಾರರು ಕಂಗಾಲಾಗಿದ್ದರು. ಈ ಮೊದಲು ತುಮಕೂರು ಭಾಗದಲ್ಲಿ ಗರಿಷ್ಠ ಪ್ರಮಾಣದಲ್ಲಿ ಕಾಣಿಸಿಕೊಂಡ ಕಪು್ಪತಲೆ ಹುಳದ ಕಾಟ, ನಂತರ ನೆರೆಹೊರೆ ಜಿಲ್ಲೆಗಳಿಗೂ ಆವರಿಸಿತು. ತಿಪಟೂರು ಹಾಗೂ ಗುಬ್ಬಿ ಭಾಗಗಳಲ್ಲಿ ಬೆಳೆಗಾರರು ಹೆಚ್ಚು ನಷ್ಟ ಅನುಭವಿಸಿದ್ದರು.

ಮಳೆಯಾದರೆ ರೋಗ ಹತೋಟಿ: ನೀರಿನ ಕೊರತೆಯಿಂದ ಬೆಂದಿರುವ ಮರಗಳಿಗೆ ಕಪು್ಪತಲೆ ಹುಳದ ಕಾಟ ಗಾಯದ ಮೇಲೆ ಬರೆ ಎಳೆದಂತಾಗಿದೆ. ಉತ್ತಮ ಮಳೆಯಾದರೆ ತೆಂಗಿನ ಮರಗಳಿಗೆ ಮರುಜೀವ ಬಂದು ರೋಗವೂ ಹತೋಟಿಗೆ ಬರಲಿದೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಬದು ನಿರ್ಮಾಣ ಸೂಕ್ತ: ಜಿಲ್ಲೆಯಲ್ಲಿ ತೆಂಗಿಗೆ ರೋಗಬಾಧೆ, ಮಳೆಕೊರತೆ ಒಂದು ಕಾರಣವಾದರೆ, ನಿರ್ವಹಣೆ ಬಗ್ಗೆ ರೈತರು ಕಾಳಜಿ ವಹಿಸುತ್ತಿಲ್ಲ. ವ್ಯವಸ್ಥಿತವಾಗಿ ಬದು ನಿರ್ಮಾಣ ಮಾಡಿದರೆ, ಸಣ್ಣ ಮಳೆಯಾದರೂ ತೋಟಕ್ಕೆ ಮರುಜೀವ ಬರುತ್ತದೆ. ತೇವಾಂಶ ಕಾಪಾಡುವ ಪ್ರಯತ್ನ ನಡೆಸಬೇಕು ಎಂದು ತೋಟಗಾರಿಕೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಕಪು್ಪತಲೆ ಹುಳು ಹೇಗೆ ಆವರಿಸುತ್ತೆ ?: ಒಪಿಸಿನಾ ಅರೆಸೋಸಿಲಾ ಎಂಬ ಸಸ್ಯ ಶಾಸ್ತ್ರೀಯ ಭಾಷೆಯಿಂದ ಕರೆಯಲ್ಪಡುವ ಕಪು್ಪತಲೆ ಹುಳ ಲಾರ್ವಾ ಹಂತದಿಂದಲೇ ತೆಂಗಿನ ಗರಿ ತಿನ್ನುತ್ತದೆ. ಇದರಿಂದ ತೆಂಗಿನ ಮರಗಳು ಒಣಗುತ್ತವೆ. ತೋಟಕ್ಕೆ ಒಂದು ಹುಳು ಹೊಕ್ಕರೂ ಇಡೀ ತೋಟ ಆವರಿಸುತ್ತದೆ. ಬಿಳಿಬಣ್ಣದ ಕಪು್ಪ ತಲೆ ಇರುವ ಈ ಹುಳು ಮರಕ್ಕೆ ಅಂಟಿದ ವಾರದಲ್ಲೇ ಮರದ ಎಲ್ಲ ಗರಿಗಳು ತರಗಿನ ರೂಪ ಪಡೆಯುತ್ತವೆ. ಆರಂಭದಲ್ಲೇ ರೈತರು ಎಚ್ಚೆತ್ತುಕೊಳ್ಳದಿದ್ದರೆ ಈ ರೋಗಕ್ಕೆ ಮರಗಳೆಲ್ಲ ಬಲಿಯಾಗುತ್ತವೆ. ಆದ್ದರಿಂದ ಪ್ಯಾರಾಸೈಟ್ (ಪರಾವಲಂಬಿ ಕೀಟ) ಪ್ರಯೋಗಿಸುವುದೇ ಈ ರೋಗಕ್ಕೆ ರಾಮಬಾಣ.

ಗೋನಿಯೋಜಸ್ ಪರೋಪಜೀವಿ: ಕಪು್ಪತಲೆ ಹುಳು ಹತೋಟಿಗೆ ತೋಟಗಾರಿಕೆ ಇಲಾಖೆ ಗೋನಿಯೋಜಸ್ ಪರೋಪಜೀವಿ ಉತ್ಪಾದಿಸುತ್ತಿದೆ. ಜಿಲ್ಲೆಯಲ್ಲಿ ಪರೋಪಜೀವಿ ಉತ್ಪಾದನಾ ಕೇಂದ್ರದ ವ್ಯವಸ್ಥೆ ಇಲ್ಲ. ಬೆಂಗಳೂರಿನ ಲಾಲ್​ಬಾಗ್​ನಲ್ಲಿ ಈ ಕೇಂದ್ರವಿದೆ. ರೈತರು ತೋಟಗಾರಿಕೆ ಇಲಾಖೆಯಿಂದ ಮಾಹಿತಿ ಪಡೆಯಬಹುದು. ಈ ಜೀವಿಯನ್ನು ತೋಟದಲ್ಲಿ ಬಿಡುವುದರಿಂದ ಕಪು್ಪತಲೆ ಹುಳುಗಳು ನಾಶವಾಗಿ ರೋಗ ಹತೋಟಿಗೆ ಬರುತ್ತದೆ ಎಂದು ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ರುದ್ರೇಶ್ ತಿಳಿಸಿದ್ದಾರೆ. ಪ್ರತಿ ಮರಕ್ಕೆ 15ರಂತೆ 2 ಬಾರಿ 30 ಪರೋಪಜೀವಿಗಳನ್ನು ಬಿಡಬೇಕು. ಒಂದು ತೋಟದಲ್ಲಿ ಬಿಟ್ಟರೆ ಸಾಲದು, ಅಕ್ಕಪಕ್ಕದ ತೋಟದವರು ಏಕಕಾಲದಲ್ಲಿ ಕ್ರಮಕೈಗೊಂಡರೆ ರೋಗ ತಡೆಗಟ್ಟಬಹುದು ಎಂದು ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ನೀರಿನ ತೀವ್ರ ಕೊರತೆಯಿಂದ ತೆಂಗಿನ ಮರಗಳು ನಾಶವಾಗುತ್ತಿವೆ. ಇದರ ಜತೆಗೆ ಕಪು್ಪತಲೆ ಹುಳು ರೋಗಬಾಧೆ ಕಾಣಿಸಿಕೊಂಡಿದೆ. ಇಲಾಖೆಯಲ್ಲಿ ಸಿಗುವ ಪರೋಪಜೀವಿಗಳನ್ನು ಬಳಸುವುದರಿಂದ ರೋಗ ನಿಯಂತ್ರಿಸಬಹುದು.

| ರುದ್ರೇಶ್, ತೋಟಗಾರಿಕೆ ಸಹಾಯಕ ನಿರ್ದೇಶಕ ಬೆಂಗಳೂರು ಗ್ರಾಮಾಂತರ ಜಿಲ್ಲೆ

ಮಳೆಯಿಲ್ಲದೆ ತೋಟದಲ್ಲಿದ್ದ ಅನೇಕ ತೆಂಗಿನ ಮರಗಳು ನಾಶವಾಗಿವೆ. ಕಪು್ಪತಲೆ ಹುಳು ಕಾಟದಿಂದ ಮರದ ಸುಳಿಯೇ ಸರ್ವನಾಶವಾಗುತ್ತಿದೆ. ರೋಗ ಹತೋಟಿಗೆ ಬರದಿದ್ದರೆ ಇಡೀ ತೋಟವೇ ಖಾಲಿಯಾಗುತ್ತದೆ.

| ಶ್ರೀನಿವಾಸಪ್ಪ, ಕುಂದಾಣ ರೈತ

Leave a Reply

Your email address will not be published. Required fields are marked *