Tuesday, 20th November 2018  

Vijayavani

ಕಬ್ಬು ಬೆಳಗಾರರ ಜತೆ ಸಿಎಂ ಸಭೆ - ವಿಧಾನಸೌಧಕ್ಕೆ ಆಗಮಿಸಿದ ರೈತ ಮುಖಂಡರು - ಕಬ್ಬಿನ ಬಾಕಿ ಹಣ ಕೊಡಿಸ್ತಾರಾ ಎಚ್‌ಡಿಕೆ?        ಉ-ಕ ರೈತರ ಹೋರಾಟಕ್ಕೆ ಜಾತಿ ಲೇಪನ - ನಾಲಾಯಕ್ ಅನ್ನೋದು ಕೆಟ್ಟ ಪದ ಅಲ್ಲ - ಸಿಎಂ ವಿರುದ್ಧ ಮತ್ತೆ ಗುಡುಗಿದ ಯಡಿಯೂರಪ್ಪ        ಸಿಂಪಲ್ ಮ್ಯಾರೇಜ್ ಆಗೋರಿಗೆ ಶಾಕ್‌- ಮುಜರಾಯಿ ದೇವಸ್ಥಾನದಲ್ಲಿ ಮದುವೆಗೆ ಬ್ರೇಕ್‌ - ಅರ್ಚಕರ ಮನವಿಗೆ ಇಲಾಖೆ ನಿರ್ಧಾರ        ದಿಗ್ಗಜರಿಂದಲೇ ಬಿಬಿಎಂಪಿಗೆ ಬಾಕಿ - ಜಾರ್ಜ್‌, ಹ್ಯಾರೀಸ್‌, ಕುಪೇಂದ್ರರೆಡ್ಡಿ ಕಟ್ಟಿಲ್ಲ ಟ್ಯಾಕ್ಸ್‌ - ಪಾಲಿಕೆ ದಿವಾಳಿಗೆ ಕಾರಣರಾದ್ರಾ ನಾಯಕರು        ಛತ್ತಿಸ್‌ಗಡದಲ್ಲಿ ಎರಡನೇ ಹಂತದ ಮತದಾನ -72 ವಿಧಾನಸಭಾ ಕ್ಷೇತ್ರಗಳಲ್ಲಿ ವೋಟಿಂಗ್‌ - ಮಧ್ಯ ಪ್ರದೇಶದಲ್ಲಿ ಪ್ರಧಾನಿ ರ‍್ಯಾಲಿ        ಬೆಂಗಳೂರಿಗೆ ಬಂದಿಳಿದ ನವಜೋಡಿ - ಮುಂಬೈನಿಂದ ಸಿಲಿಕಾನ್‌ ಸಿಟಿಗೆ ರಣವೀರ್‌, ದೀಪಿಕಾ - ನಾಳೆ ಲೀಲಾ ಪ್ಯಾಲೇಸ್‌ನಲ್ಲಿ ರಿಸೆಪ್ಷನ್       
Breaking News

ತುರ್ತು ನಿರ್ಗಮನದಲ್ಲಿ ಭಾವನಾ-ರಿಷಿ ಅತಿಥಿ

Wednesday, 15.11.2017, 3:03 AM       No Comments

ಬೆಂಗಳೂರು: ನಟಿ ಭಾವನಾ ರಾವ್ ‘ಸತ್ಯಹರಿಶ್ಚಂದ್ರ’ನೊಂದಿಗೆ ಕುಣಿದಿದ್ದಾಯಿತು. ‘ದಯವಿಟ್ಟು ಗಮನಿಸಿ’ದ ಬಳಿಕ ‘ಟೈಗರ್ ಗಲ್ಲಿ’ಯೊಳಗೆ ಹೊಕ್ಕು ಬಂದಿದ್ದೂ ಆಯಿತು. ಇದೀಗ ‘ತುರ್ತ ನಿರ್ಗಮನ’ದಲ್ಲಿದ್ದಾರೆ! ಅದೂ ಅತಿಥಿಯಾಗಿ. ‘ಗೋಧಿ ಬಣ್ಣ ಸಾಧಾರಣ ಮೈಕಟ್ಟು’ ಚಿತ್ರದ ನಿರ್ದೇಶನ ವಿಭಾಗದಲ್ಲಿ ಕೆಲಸ ಮಾಡಿದ್ದ ಹೇಮಂತ್​ಕುಮಾರ್, ‘ತುರ್ತ ನಿರ್ಗಮನ’ ಚಿತ್ರದ ಮೂಲಕ ಪೂರ್ಣಪ್ರಮಾಣದ ನಿರ್ದೇಶಕರಾಗಿ ಅಖಾಡಕ್ಕಿಳಿದಿದ್ದಾರೆ. ‘ಲೂಸ್ ಕನೆಕ್ಷನ್’ ವೆಬ್ ಸರಣಿ ಮೂಲಕ ಬಣ್ಣದ ಲೋಕಕ್ಕೆ ಮರಳಿ ಎಂಟ್ರಿ ಕೊಟ್ಟಿರುವ ‘ಎಕ್ಸ್​ಕ್ಯೂಸ್ ಮೀ’ ಖ್ಯಾತಿ ನಟ ಸುನೀಲ್, ‘ತುರ್ತ ನಿರ್ಗಮನ’ ಮೂಲಕ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಸುನೀಲ್​ಗೆ ನಾಯಕಿಯರಾಗಿ ‘ಕಿರಿಕ್​ಪಾರ್ಟಿ’ ಖ್ಯಾತಿಯ ಸಂಯುಕ್ತಾ ಹೆಗಡೆ ಹಾಗೂ ಹಿತಾ ಚಂದ್ರಶೇಖರ್ ಸಾಥ್ ನೀಡಿದ್ದಾರೆ. ಇವರೆಲ್ಲ ಜತೆಗೆ ಇನ್ನಿಬ್ಬರು ಹೊಸದಾಗಿ ಸೇರಿಕೊಂಡಿದ್ದಾರೆ. ಅವರೇ ಭಾವನಾ ರಾವ್ ಮತ್ತು ‘ಆಪರೇಷನ್ ಅಲಮೇಲಮ್ಮ’ ಖ್ಯಾತಿಯ ರಿಷಿ.

‘ಮೊದಲ ಬಾರಿಗೆ ರಿಷಿ ಮತ್ತು ನಾನು ತುರ್ತನಿರ್ಗಮನ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇವೆ. ಈಗಾಗಲೇ ನಮ್ಮಿಬ್ಬರ ಚಿತ್ರೀಕರಣವೂ ಆಗಿದೆ. ಒಂದು ಸರ್​ಪ್ರೖೆಸ್ ಎಂಟ್ರಿ ರೀತಿಯಲ್ಲಿ ನಿರ್ದೇಶಕರು ನಮ್ಮನ್ನು ತೋರಿಸಲು ಪ್ರಯತ್ನಿಸಿದ್ದಾರೆ. ಆದರೆ ಏನದು ವಿಶೇಷತೆ ಎಂಬುದನ್ನು ಸಿನಿಮಾದಲ್ಲಿ ನೋಡಿ ತಿಳಿದುಕೊಳ್ಳಬೇಕು’ ಎಂದು ಕುತೂಹಲ ಮೂಡಿಸುತ್ತಾರೆ ಭಾವನಾ. ಫ್ಯಾಂಟಸಿ ಡ್ರಾಮಾ ರೀತಿಯ ಚಿತ್ರದಲ್ಲಿ ಹಲವು ನಟ-ನಟಿಯರು ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಈ ಹಿಂದೆಯೇ ನಿರ್ದೇಶಕ ಹೇಮಂತ್ ಕುಮಾರ್ ಹೇಳಿದ್ದರು. ಅದರಂತೆ ಭಾವನಾ-ರಿಷಿ ಆಗಮಿಸಿ ತಮಗೆ ನೀಡಿದ್ದ ಪಾತ್ರವನ್ನು ಮುಗಿಸಿಕೊಟ್ಟಿದ್ದಾರೆ. ಇನ್ನೂ ಯಾರ್ಯಾರು ಕಲಾವಿದರು ಅತಿಥಿಯಾಗಿ ಬಂದು ಹೋಗಲಿದ್ದಾರೆ ಎಂಬುದೇ ಸದ್ಯದ ಪ್ರಶ್ನೆ.

ಇದನ್ನೆಲ್ಲ ಬದಿಗಿಟ್ಟರೆ ನಟಿ ಸುಧಾರಾಣಿ, ‘ಒಂದು ಮೊಟ್ಟೆಯ ಕಥೆ’ ಖ್ಯಾತಿಯ ರಾಜ್ ಬಿ ಶೆಟ್ಟಿ, ಅಮೃತಾ ರಾಮಮೂರ್ತಿ ಸೇರಿ ದೊಡ್ಡ ತಾರಾಗಣವೇ ಚಿತ್ರದಲ್ಲಿದೆ. ಕುಮಾರ್ ಆಂಡ್ ಕುಮಾರ್ ಬ್ಯಾನರ್​ನಲ್ಲಿ ‘ತುರ್ತ..’ ಸಿನಿಮಾ ಮೂಡಿಬರುತ್ತಿದ್ದು, ನಿರ್ದೇಶಕ ಹೇಮಂತ್ ಕೂಡ ಬಂಡವಾಳ ಹೂಡಿದ್ದಾರೆ. ಈಗಾಗಲೇ ಒಂದು ಹಂತದ ಚಿತ್ರೀಕರಣ ಮುಗಿಸಿಕೊಂಡಿರುವ ಈ ಚಿತ್ರದ ಎರಡನೇ ಶೆಡ್ಯೂಲ್​ನ ಶೂಟಿಂಗ್​ನಲ್ಲಿ ತೊಡಗಿಸಿಕೊಂಡಿದೆ.

Leave a Reply

Your email address will not be published. Required fields are marked *

Back To Top