ತುರುವೇಕೆರೆ ಬಂದ್​ಗೆ ವ್ಯಾಪಕ ಬೆಂಬಲ

ತುರುವೇಕೆರೆ: ಜೆಡಿಎಸ್, ಕಾಂಗ್ರೆಸ್ ಶಾಸಕರಿಂದ ರಾಜೀನಾಮೆ ಕೊಡಿಸಿ ಸಮ್ಮಿಶ್ರ ಸರ್ಕಾರ ಅಸ್ತಿರಗೊಳಿಸಲು ಬಿಜೆಪಿ ಮುಂದಾಗಿದೆ ಎಂದು ಆರೋಪಿಸಿ ಮೈತ್ರಿ ಪಕ್ಷಗಳು ಶುಕ್ರವಾರ ಕರೆಕೊಟ್ಟಿದ್ದ ತುರುವೇಕೆರೆ ಬಂದ್​ಗೆ ವ್ಯಾಪಕ ಬೆಂಬಲ ವ್ಯಕ್ತವಾಗಿತ್ತು.

ಶುಕ್ರವಾರ ಬೆಳಗ್ಗೆಯಿಂದಲೇ ವರ್ತಕರು ಸ್ವಯಂ ಪ್ರೇರಿತರಾಗಿ ಅಂಗಡಿಗಳನ್ನು ಮುಚ್ಚಿದ್ದರು. ಹಣ್ಣು, ಹೂ, ಕಾಫಿ, ಟೀ ಅಂಗಡಿಗಳು, ಪೆಟ್ರೋಲ್ ಬಂಕ್​ಗಳು, ಬ್ಯಾಂಕ್, ಕೆಲವು ಖಾಸಗಿ ಶಾಲಾ ಕಾಲೇಜುಗಳು, ಮಾರುಕಟ್ಟೆ, ಚಿತ್ರಮಂದಿರಗಳು ಸ್ವಯಂಪ್ರೇರಿತವಾಗಿ ಮುಚ್ಚಿದ್ದವು. ಸರ್ಕಾರಿ ಬಸ್, ಖಾಸಗಿ, ಸಾರಿಗೆ, ಆಟೋ, ಟ್ಯಾಕ್ಸಿಗಳು ಸಂಚಾರ ನಡೆಸಿದವು. ಸರ್ಕಾರಿ ಶಾಲೆ, ಕಾಲೇಜುಗಳು ಮೆಡಿಕಲ್ ಶಾಪ್, ಆಸ್ಪತ್ರೆ ಎಂದಿನಂತೆ ಕಾರ್ಯನಿರ್ವಹಿಸಿದವು. ಬಂದ್ ಹಿನ್ನೆಲೆ ಬೆಳಗ್ಗೆ ಪಟ್ಟಣದಲ್ಲಿ ಜನರ ಸಂಚಾರ ಕಡಿಮೆಯಿತ್ತು. ತಾಪಂ ಕಚೇರಿ ಸೇರಿ ಕೆಲವು ಕಚೇರಿಗಳು ಬಿಕೋ ಎನ್ನುತಿದ್ದವು.

ಕಾರ್ತಕರ್ತರ ಮೆರವಣಿಗೆ: ಜೆಡಿಎಸ್ ಹಾಗೂ ಕಾಂಗ್ರೆಸ್ ನೂರಾರು ಕಾರ್ಯಕರ್ತರು ಪಟ್ಟಣದ ದಬ್ಬೇಘಟ್ಟ, ತಿಪಟೂರು, ಭಾಣಸಂದ್ರ ರಸ್ತೆಗಳಲ್ಲಿ ಮೆರವಣಿಗೆ ನಡೆಸಿ ನಂತರ ಬಾಣಸಂದ್ರ ವೃತ್ತದಲ್ಲಿ ಮಾನವ ಸರಪಳಿ ನಿರ್ವಿುಸಿ ಪ್ರತಿಭಟನೆ ನಡೆಸಿದರು.

ಜೆಡಿಎಸ್ ತಾಲೂಕು ಆಧ್ಯಕ್ಷ ಸ್ವಾಮಿ, ಪಪಂ ಸದಸ್ಯ ಎನ್.ಆರ್.ಸುರೇಶ್, ಗ್ರಾಪಂ ಅಧ್ಯಕ್ಷ ಪ್ರಕಾಶ್, ಎಪಿಎಂಸಿ ಸದಸ್ಯ ರಾಜು, ಜೆಡಿಎಸ್ ಮುಖಂಡರಾದ ಕೊಳಾಲಗಂಗಾಧರ್, ವೆಂಕಟಾಪುರ ಯೋಗಾನಂದ್, ಬಾಣಸಂದ್ರ ರಮೇಶ್ ಇತರರು ಇದ್ದರು.

Leave a Reply

Your email address will not be published. Required fields are marked *