ತುರುವೇಕೆರೆಗೆ ತಾಲೂಕು ಕಚೇರಿಗೆ ಡಿಸಿ ದಿಢೀರ್ ಭೇಟಿ

ತುರುವೇಕೆರೆ: ತಾಲೂಕು ಕಚೇರಿಗೆ ಮಂಗಳವಾರ ದಿಢೀರ್ ಭೇಟಿ ನೀಡಿದ ಜಿಲ್ಲಾಧಿಕಾರಿ ರಾಕೇಶ್ ಕುಮಾರ್, ಇಲಾಖೆಗಳ ಕಡತಗಳನ್ನು ಪರಿಶೀಲಿಸುವ ಮೂಲಕ ಅಧಿಕಾರಿಗಳಿಗೆ ಚುರುಕು ಮುಟ್ಟಿಸಿದರು.

ನಂತರ ತಹಸೀಲ್ದಾರ್ ಕಚೇರಿಯಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ ಮಾತನಾಡಿದ ಜಿಲ್ಲಾಧಿಕಾರಿ, ಸಾಮಾಜಿಕ ಭದ್ರತೆ ಯೋಜನೆಯಲ್ಲಿ ಪಿಂಚಣಿ ಹಣ ವರ್ಗಾವಣೆ ವಿಳಂಬವಾಗುತ್ತಿದೆ ಎಂದು ಹಲವು ದೂರುಗಳು ಬಂದಿದ್ದ ಹಿನ್ನೆಲೆ ಖುದ್ದು ಭೇಟಿ ನೀಡಿದ್ದೇನೆ ಎಂದರು.

ಕಡತದಲ್ಲಿ ಹಲವು ಲೋಪ ಕಂಡುಬಂದಿದ್ದು, ಕೆಲ ಫಲಾನುಭವಿಗಳಿಗೆ ಎರಡೆರಡು ಬಾರಿ ಹಣ ಸಂದಾಯವಾಗಿದೆ. ಇನ್ನೂ ಕೆಲವರಿಗೆ ಪಿಂಚಣೆ ಹಣ ಸಂದಾಯವಾಗಿಲ್ಲ ಎಂದರು.

ಕೆ1 ನಿಂದ ಕೆ2ಗೆ ಆಡಳಿತ ಯಂತ್ರ ಬದಲಾಗಿರುವುದರಿಂದ ಸೂಕ್ತ ದಾಖಲಾತಿಗಳಲ್ಲಿ ಗೊಂದಲವಿದ್ದು, ಪಿಂಚಣಿ ಪಲಾನುಭವಿಗಳು ತಮ್ಮ ಆದಾರ್ ಕಾರ್ಡ್ ಬ್ಯಾಂಕ್ ಪಾಸ್ ಪುಸ್ತಕ ಸಲ್ಲಿಸುವಂತೆ ಸೂಚಿಸಿದರು.

ಗ್ರಾಪಂನಲ್ಲಿ ಆದಾರ್ ತಿದ್ದುಪಡಿ; ಜಿಲ್ಲೆಯಲ್ಲಿಯೇ ಆದಾರ್ ಕಾರ್ಡ್ ಸಮಸ್ಯೆಯಾಗಿದೆ. ಗ್ರಾಪಂಗಳಲ್ಲಿಯೇ ಆಧಾರ್ ತಿದ್ದಪಡಿ ಮಾಡಲು ಅವಕಾಶ ಕಲ್ಪಿಸಲು ಕೇಂದ್ರ ಸರ್ಕಾರಕ್ಕೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಪತ್ರ ಬರೆದಿದ್ದಾರೆ. ಗ್ರಾಪಂನಲ್ಲಿ ಬಾಪೂಜಿ ಕೇಂದ್ರ ತೆರೆಯುವ ಮೂಲಕ ಸಣ್ಣ ಪುಟ್ಟಲೋಪ ಸರಿಪಡಿಸಲು ಮುಂದಾದರೆ, ಯಾವುದೇ ಸಮಸ್ಯೆಗಳು ಕಂಡು ಬರುವುದಿಲ್ಲ ಎಂದು ಡಿಸಿ ಹೇಳಿದರು.

ತಹಸೀಲ್ದಾರ್ ನಯೀಂಉನ್ನಿಸಾ, ಇಒ ಜಯಕುಮಾರ್ ಸೇರಿ ಇಲಾಖೆ ಅಧಿಕಾರಿಗಳು ಇದ್ದರು.

ರಸ್ತೆ ಬಿಡಿಸುವಂತೆ ಮನವಿ: ಪಟ್ಟಣದ ಪೊಲೀಸ್ ಕ್ವಾಟ್ರಸ್ ಕಾಂಪೌಂಡ್​ಗೆ ಹಾಕಲಾಗಿರುವ ತಂತಿ ಬೇಲಿಯಿಂದಾಗಿ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳಿಗೆ ಸಂಚರಿಸಲು ತೊಂದರೆಯಾಗಿದೆ, ವಿವಿಧ ವಾರ್ಡ್​ಗಳಿಗೆ ಸಂಪರ್ಕ ರಸ್ತೆ ಇಲ್ಲದಂತಾಗಿದೆ. ಮಾನವೀಯತೆ ದೃಷ್ಟಿಯಿಂದ ಜನರಿಗೆ ಪಾದಚಾರಿ ರಸ್ತೆ ಕಲ್ಪಿಸಿಕೊಡಬೇಕು ಎಂದು ಜಿಲ್ಲಾಧಿಕಾರಿಗೆ ಪಟ್ಟಣ ಪಂಚಾಯಿತಿ ಸದಸ್ಯರಾದ ಚಿದಾನಂದ್, ಅಂಜನ್ ಕುಮಾರ್ ಹಾಗೂ ಸಾರ್ವಜನಿಕರು ಮನವಿ ಸಲ್ಲಿಸಿದರು.

ಜಿಲ್ಲೆಯಲ್ಲಿ 40 ನಾಡಕಚೇರಿ, 40 ಅಂಚೆಕಚೇರಿ ಹಾಗೂ ಎಸ್​ಬಿಐ ಬ್ಯಾಂಕ್​ಗಳಲ್ಲಿ ಆಧಾರ್ ಕಾರ್ಡ್ ತೆಗೆಯಲು ವ್ಯವಸ್ಥೆ ಮಾಡಲಾಗಿದೆ. ಆದರೂ ಜನರಿಗೆ ಸಮಸ್ಯೆ ಉಂಟಾಗುತ್ತಿದೆ. ದಿನದಲ್ಲಿ 40 ಜನರಿಗೆ ಆಧಾರ್ ಕಾರ್ಡ್ ತೆಗೆಯಬಹುದು. ಒಬ್ಬರಿಗೆ 20 ನಿಮಿಷ ಬೇಕಾಗಿದ್ದು, ಸಮಸ್ಯೆಗೆ ಕಾರಣವಾಗಿದೆ.

| ರಾಕೇಶ್ ಕುಮಾರ್, ಜಿಲ್ಲಾಧಿಕಾರಿ

Leave a Reply

Your email address will not be published. Required fields are marked *