Friday, 16th November 2018  

Vijayavani

Breaking News

ತುಂಬಿದ ಹಳ್ಳವೇ ಶವ ಹೊರುವ ದಾರಿ

Thursday, 12.07.2018, 9:54 PM       No Comments

ಅಂಕೋಲಾ: ಕೇಣಿಯ ಪಡ್ತಿ ಸಮಾಜಕ್ಕೆ ಸೇರಿದ ಸ್ಮಶಾನಕ್ಕೆ ತೆರಳುವ ಮಾರ್ಗದಲ್ಲಿನ ಹಳ್ಳಕ್ಕೆ ಕಾಲುಸಂಕ ನಿರ್ವಿುಸಲಾಗಿತ್ತು. ಆದರೆ, ಇತ್ತೀಚೆಗೆ ಕಾಲುಸಂಕ ಮುರಿದ ಪರಿಣಾಮ ಜನರು ಸಂಕಷ್ಟ ಎದುರಿಸುವಂತಾಗಿದೆ.

ಕೇಣಿಯಲ್ಲಿ ಗುರುವಾರ ಮಹಿಳೆಯೊಬ್ಬರು ಮೃತಪಟ್ಟಿದ್ದರು. ಅವರನ್ನು ಅಂತ್ಯಸಂಸ್ಕಾರಕ್ಕೆ ಹೊತ್ತೊಯ್ಯುವಾಗ ಕಾಲುಸಂಕ ಇಲ್ಲದಿರುವುದರಿಂದ ತುಂಬಿದ ಹಳ್ಳದ ನೀರಿನಲ್ಲಿಯೇ ಹೊತ್ತುಕೊಂಡು ಸ್ಮಶಾನಕ್ಕೆ ತರಳಬೇಕಾದ ಅನಿವಾರ್ಯತೆ ಎದುರಾಯಿತು. ಕೇಣಿಯ ಗಾಂವಕರವಾಡದ ಸುಶೀಲಾ ಪುತ್ತು ಗಾಂವಕರ (80) ಎಂಬುವವರು ಸಾವನ್ನಪ್ಪಿದ್ದರು. ಈ ವೇಳೆ ಕಾಲು ಸಂಕದ ದುಸ್ಥಿತಿ ನೋಡಿ ಶವವನ್ನು ಅಲ್ಲೇ ಇಟ್ಟು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೆ, ಈ ಭಾಗದ ಕೃಷಿ ಭೂಮಿಯನ್ನು ಖರೀದಿಸಿದ ಕೆಲವರು ವರ ಜಾಗದಲ್ಲಿ ಮಣ್ಣನ್ನು ತುಂಬಿ ಎತ್ತರ ಮಾಡಿರುವುದು ದಾರಿಯಲ್ಲಿ ನೀರು ತುಂಬಿರುವುದಕ್ಕೆ ಕಾರಣ ಎಂದು ಆರೋಪಿಸಿದರು. ಸ್ಥಳಕ್ಕೆ ಆಗಮಿಸಿದ ಪುರಸಭೆ ಮುಖ್ಯಾಧಿಕಾರಿ ಎನ್.ಎಂ. ಮೇಸ್ತ ಈ ಕಾಲುಸಂಕವನ್ನು ಶೀಘ್ರದಲ್ಲಿಯೇ ಸರಿಪಡಿಸಲಾಗುವುದು ಎಂದರು. ಗ್ರಾಮಸ್ಥರಾದ ಸಂದೀಪ ಬಂಟ, ಸಂತೋಷ ವಿಠೋಬ ಗಾಂವಕರ, ಗಂಗಾಧರ ಗಾಂವಕರ, ದಯಾನಂದ ಗಾಂವಕರ, ರಾಮಚಂದ್ರ ಗುಣವಂತ ಗಾಂವಕರ, ಸತೀಶ ಗಣಪತಿ ಗಾಂವಕರ, ಉಲ್ಲಾಸ ಬುಧವಂತ ಗಾಂವಕರ, ಸತೀಶ ಗಣಪತಿ ಗಾಂವಕರ, ಶ್ರೀಧರ ಶಂಕರ ಗಾಂವಕರ, ಸಂತೋಷ ಬೀದಿ ಗಾಂವಕರ, ಯಾದು ನಾರಾಯಣ ಗಾಂವಕರ, ತಾರಾನಾಥ ಡಿ. ಗಾಂವಕರ, ಮಾರುತಿ ಗಾಂವಕರ, ದಿನಕರ ಗಾಂವಕರ ಮೊದಲಾದವರಿದ್ದರು

Leave a Reply

Your email address will not be published. Required fields are marked *

Back To Top