25.5 C
Bangalore
Monday, December 16, 2019

ತುಂಗೆಯಲ್ಲಿ ತೇಲಿದ ಶಿವಮೊಗ್ಗ

Latest News

ರಾಜರಾಜೇಶ್ವರಿ ನಗರದ ಸಮಸ್ಯೆ ಬಗೆಹರಿಸುವಂತೆ ಬಿಜೆಪಿ ನಾಯಕರ ಬೆನ್ನುಹತ್ತಿರುವ ಅನರ್ಹ ಶಾಸಕ ಮುನಿರತ್ನ

ಬೆಂಗಳೂರು: ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಸಮಸ್ಯೆ ಬಗೆ ಹರಿಸಿ ಶೀಘ್ರವೇ ಉಪ ಚುನಾವಣೆ ನಡೆಯುವಂತೆ ಮಾಡಬೇಕು ಎಂದು ಅನರ್ಹ ಶಾಸಕ ಮುನಿರತ್ನ...

ಪೌರತ್ವ ತಿದ್ದುಪಡಿ ಕಾಯ್ದೆ, ಎನ್​ಆರ್​ಸಿ ವಿರುದ್ಧ ಕೋಲ್ಕತ್ತದಲ್ಲಿ ಬೃಹತ್​ ರ‍್ಯಾಲಿ; ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವ

ಕೋಲ್ಕತ್ತ: ಪೌರತ್ವ ತಿದ್ದುಪಡಿ ಕಾಯ್ದೆ ಈಗಾಗಲೇ ದೇಶದ ಕೆಲವು ರಾಜ್ಯಗಳಲ್ಲಿ ಕಿಡಿ ಹೊತ್ತಿಸಿದೆ. ದೇಶದ ಈಶಾನ್ಯ ಭಾಗದಲ್ಲಿ ಪ್ರಾರಂಭವಾದ ಪ್ರತಿಭಟನೆ ಈಗ ದೆಹಲಿ, ಉತ್ತರ ಪ್ರದೇಶ...

ಮುಸ್ಲಿಂರಿಂದ ಅಯ್ಯಪ್ಪ ಮಾಲಾಧಾರಿಗಳಿಗೆ ಅನ್ನದಾನ

* ಸಾಮರಸ್ಯಕ್ಕೆ ಮುನ್ನುಡಿ ಬರೆದ ಕಾರ್ಯಕ್ರಮವಿಜಯವಾಣಿ ಸುದ್ದಿಜಾಲ ಬಳ್ಳಾರಿನಗರದ ಹೊಸಪೇಟೆ ರಸ್ತೆಯಲ್ಲಿರುವ ಏಳು ಮಕ್ಕಳ ದೇವಸ್ಥಾನದಲ್ಲಿ ಅಯ್ಯಪ್ಪ ಮಾಲಾಧಾರಿಗಳಿಗೆ ಸೋಮವಾರ ಮುಸ್ಲಿಂರು ಊಟ...

ಒಂದೂವರೆ ತಾಸು ಶಸ್ತ್ರಚಿಕಿತ್ಸೆ ನಡೆಸಿ ಎದೆಗೆ ನಾಟಿದ್ದ ಕಬ್ಬಿಣ ರಾಡ್​ ಹೊರತೆಗೆದ ವೈದ್ಯರು: ಪ್ರಾಣಾಪಾಯದಿಂದ ವ್ಯಕ್ತಿ ಪಾರು

ರಾಯಚೂರು: ಎದೆಗೆ ಕಬ್ಬಿಣದ ರಾಡ್ ತೂರಿದ್ದ ವ್ಯಕ್ತಿಗೆ ರಾಯಚೂರಿನ ಖಾಸಗಿ ಆಸ್ಪತ್ರೆಯ ವೈದ್ಯರು ಸತತ ಒಂದೂವರೆ ತಾಸು ಶಸ್ತ್ರಚಿಕಿತ್ಸೆ ನಡೆಸಿ ಪ್ರಾಣಾಪಾಯದಿಂದ ಪಾರು...

ಹಿಂದು ರಾಷ್ಟ್ರದಲ್ಲಿ ಹಿಂದುಗಳ ಮೇಲೆ ದೌರ್ಜನ್ಯ ಮಿತಿಮೀರಿದೆ

ಕೊಡಗು: ಹಿಂದು ರಾಷ್ಟ್ರದಲ್ಲಿ ಹಿಂದುಗಳ ಮೇಲೆ ದೌರ್ಜನ್ಯ ಮಿತಿಮೀರಿದೆ ಎಂದು ವಕೀಲ ಪಿ. ಕೃಷ್ಣಮೂರ್ತಿ ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಹಿಂದು ಜನಜಾಗೃತಿ ಸಮಿತಿಯಿಂದ ಕುಶಾಲನಗರದ ಗಾಯತ್ರಿ ಕಲ್ಯಾಣ...

ಶಿವಮೊಗ್ಗ: ನಗರದ ಹಲವು ಬಡಾವಣೆ ನಿವಾಸಿಗಳಿಗೆ ಶುಕ್ರವಾರ ರಾತ್ರಿ ದುಸ್ವಪ್ನವಾಗಿ ಕಾಡಿತು. ಉಟ್ಟ ಬಟ್ಟೆಯಲ್ಲೇ ಮನೆ ತೊರೆದು ಸಾವಿರಾರು ಮಂದಿ ಪರಿಹಾರ ಕೇಂದ್ರ ಸೇರುವಂತಾಯಿತು. ಬಡವ-ಬಲ್ಲಿದ ಎಂಬ ತಾರತಮ್ಯ ಇಲ್ಲದೆ ವರುಣ ಎಲ್ಲರ ಬದುಕನ್ನೂ ಮೂರಾಬಟ್ಟೆ ಮಾಡಿದ್ದ. ಕಳೆದ 75 ವರ್ಷಗಳಲ್ಲಿ 3ನೇ ಬಾರಿಗೆ ಶಿವಮೊಗ್ಗ ನೆರೆಯಿಂದ ಅಕ್ಷರಶಃ ನಲುಗಿ ಹೋಯಿತು.

ಉತ್ತರ ಕರ್ನಾಟಕದಲ್ಲಿ ನೆರೆಯ ಪರಿಸ್ಥಿತಿಯನ್ನು ಮಾಧ್ಯಮಗಳಲ್ಲಿ ನೋಡಿ ಮರುಗುತ್ತಿದ್ದ ಶಿವಮೊಗ್ಗ ಮಂದಿ ಅದನ್ನು ಸ್ವಂತ ಅನುಭವಿಸುವಂತಾಯ್ತು. ಶುಕ್ರವಾರ ರಾತ್ರಿಯಿಂದ ಶನಿವಾರ ಮಧ್ಯಾಹ್ನದವರೆಗೂ ಜಲಾವೃತ ಮನೆಗಳಿಂದ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸುವ ಕಾರ್ಯ ನಡೆಯಿತು.

ಸೀಗೇಹಟ್ಟಿ, ಭಾರತಿ ಕಾಲನಿ, ನಿಸರ್ಗ ಲೇಔಟ್, ನಂಜಪ್ಪ ಬಡಾವಣೆ, ಶಾಂತಮ್ಮ ಲೇಔಟ್, ಇಮಾಂಬಾಡಾ, ಬಿಬಿ ರಸ್ತೆ, ಬಾಪೂಜಿ ನಗರ…ಹೀಗೆ ವರುಣನ ಆರ್ಭಟಕ್ಕೆ ತಗ್ಗು ಪ್ರದೇಶದ ಹಲವು ಬಡಾವಣೆಗಳ ಜನರು ತತ್ತರಿಸಿ ಹೋದರು. ಕೆಲವರು ಬೆಲೆ ಬಾಳುವ ವಸ್ತುಗಳನ್ನು ಮಾತ್ರ ತೆಗೆದುಕೊಂಡು ಪರಿಹಾರ ಕೇಂದ್ರ ಸೇರಿದರೆ, ಇನ್ನು ಕೆಲವರು ಜೀವ ಉಳಿದರೆ ಸಾಕು ಎಂದು ಎಲ್ಲವನ್ನೂ ಬಿಟ್ಟು ಮನೆಯಿಂದ ಹೊರ ನಡೆದರು.

2ನೇ ಮಹಡಿಗೂ ಬಂತು ನೀರು:

ನಿಸರ್ಗ ಲೇಔಟ್, ಶಾಂತಮ್ಮ ಲೇಔಟ್, ಭಾರತಿ ಕಾಲನಿಯ ಕೆಲವೆಡೆ ಕೆಳ ಅಂತಸ್ತಿನಲ್ಲಿ ವಾಸಿಸುತ್ತಿದ್ದ ನಾಗರಿಕರು ಶುಕ್ರವಾರ ರಾತ್ರಿಯೇ ಮನೆಯಿಂದ ಪರಿಹಾರ ಕೇಂದ್ರದತ್ತ ಧಾವಿಸಿದರು. ಎರಡನೇ ಮಹಡಿಯಲ್ಲಿದ್ದವರು ರಾತ್ರಿ ಮನೆಯಲ್ಲೇ ಉಳಿದುಕೊಂಡರು.

ಆದರೆ ಶನಿವಾರ ಬೆಳಗ್ಗೆ 10 ಗಂಟೆಯಾದರೂ ನೆರೆ ತಗ್ಗದ ಕಾರಣ ಎರಡನೇ ಅಂತಸ್ತಿನಲ್ಲಿದ್ದವರೂ ಇಲ್ಲದ ಮನಸ್ಸಿನಿಂದಲೇ ಮನೆ ತೊರೆಯಬೇಕಾಯಿತು. ಅವರನ್ನು ಬೋಟ್​ಗಳ ಮೂಲಕ ಹೊರಗೆ ಕರೆ ತರಲಾಯಿತು. ಕೆಲವೆಡೆ ನೀರು ನಿಂತ ಪರಿಣಾಮ ಮನೆಗಳು ಕುಸಿಯುವ ಅಪಾಯವೂ ಇದ್ದುದರಿಂದ ಪಾಲಿಕೆ ಅಧಿಕಾರಿಗಳು ಒತ್ತಾಯಪೂರ್ವಕವಾಗಿ ಜನರನ್ನು ತೆರವು ಮಾಡಿದರು.

ಶನಿವಾರ ಬೆಳಗ್ಗೆಯಿಂದಲೇ ಶಿವಮೊಗ್ಗ ನಗರ ಸೇರಿ ತುಂಗಾ ನದಿ ಪಾತ್ರದಲ್ಲಿ ಮಳೆ ಪ್ರಮಾಣ ಇಳಿಮುಖವಾಗಿದ್ದರೂ ತುಂಗಾ ಜಲಾಶಯದ ಒಳಹರಿವಿನಲ್ಲಿ ಹೆಚ್ಚಿನ ವ್ಯತ್ಯಾಸವಿರಲಿಲ್ಲ. ಶನಿವಾರ ಬೆಳಗ್ಗೆ ತುಂಗಾ ಬೈಪಾಸ್ ಸೇತುವೆ ಮೇಲೆ ನೀರು ಉಕ್ಕಲು 2 ಅಡಿ ಮಾತ್ರ ಬಾಕಿ ಇತ್ತು. ಆದರೆ ಮಧ್ಯಾಹ್ನ 12ರ ವೇಳೆಗೆ 4 ಅಡಿ ನೀರು ಕಡಿಮೆಯಾದ ಪರಿಣಾಮ ಕೆಲವರು ನಿಟ್ಟುಸಿರು ಬಿಟ್ಟರು.

ಮಳೆ ಪ್ರಮಾಣ ಕಡಿಮೆಯಿದ್ದರೂ ಜಲಾವೃತವಾದ ಮನೆಗಳು ನೀರಿನಿಂದ ಮುಕ್ತವಾಗಲು ಇನ್ನೂ ಮೂರ್ನಾಲ್ಕು ದಿನಗಳೇ ಬೇಕು. ಶಿವಮೊಗ್ಗ ನಗರದ ವ್ಯಾಪ್ತಿಯಲ್ಲಿ ಬಿದ್ದ ಮಳೆ ಕಡಿಮೆಯಾದರೂ ತುಂಗಾ ನದಿ ಉಕ್ಕಿ ಹರಿದಿದ್ದು ಸಾವಿರಾರು ಜನರು ಬದುಕನ್ನೇ ಅತಂತ್ರಕ್ಕೆ ತಳ್ಳಿದೆ. ಈ ಆಘಾತದಿಂದ ಜನರು ಹೊರಬರಲು ಕೆಲ ದಿನಗಳೇ ಬೇಕು.

ಒಟ್ಟು ಎರಡೂವರೆ ಸಾವಿರ ಜನರು ಪರಿಹಾರ ಕೇಂದ್ರದಲ್ಲಿ ಆಶ್ರಯ ಪಡೆದಿದ್ದು ಶನಿವಾರ ಬೆಳಗ್ಗೆ 6 ಸಾವಿರ ಜನರಿಗೆ ತಿಂಡಿ ವ್ಯವಸ್ಥೆ ಮಾಡಲಾಗಿತ್ತು. ಕೆಲವರು ಸಂಬಂಧಿಕರ ಮನೆಗಳಲ್ಲಿ ವಾಸ್ತವ್ಯ ಹೂಡಿದ್ದಾರೆ.

- Advertisement -

ನೆರೆ ಹೊರೆಯವರ ಸಹಾಯ: ರಾತ್ರೋರಾತ್ರಿ ಮನೆಗೆ ನುಗ್ಗಿದ ನೀರನ್ನು ತೆರವು ಮಾಡಲು ನೆರೆ ಹೊರೆಯವರು ಸಹಾಯ ಮಾಡುವ ಮೂಲಕ ಸಂತ್ರಸ್ತರ ನೆರವಿಗೆ ನಿಂತರು. ಕೆಲವರು ಸಂತ್ರಸ್ತರಿಗೆ ತಮ್ಮ ಮನೆಯಲ್ಲಿ ಆಶ್ರಯ ನೀಡಿ ಮಾನವೀಯತೆ ಮೆರೆದರು. ಸಂಘ ಸಂಸ್ಥೆಗಳು, ವಿವಿಧ ಸಂಘಟನೆಗಳು ಸಂತ್ರಸ್ತರ ನೆರವಿಗೆ ನಿಂತು ಹೆಚ್ಚಿನ ಹಾನಿ ತಪ್ಪಿಸಿದರು.

ಸಾಕು ಪ್ರಾಣಿಗಳ ಪರದಾಟ:

ನೆರೆಯಲ್ಲಿ ಸಿಲುಕಿದ್ದ ಕೆಲ ಮಂದಿ ತಮ್ಮ ಪ್ರಾಣವನ್ನು ಉಳಿಸಿಕೊಳ್ಳುವ ಜತೆಗೆ ತಾವು ಸಾಕಿದ ಪ್ರಾಣಿಗಳ ರಕ್ಷಣೆಯನ್ನೂ ಮರೆಯಲಿಲ್ಲ. ಬಾಪೂಜಿ ನಗರದಲ್ಲಿ ಮಹಿಳೆಯೊಬ್ಬರು ಕರುವನ್ನು ಹೊತ್ತುಕೊಂಡು ಪರಿಹಾರ ಕೇಂದ್ರದತ್ತ ಧಾವಿಸಿದರೆ, ಇನ್ನು ಕೆಲವರು ನಾಯಿಗಳನ್ನೂ ಜತೆಯಲ್ಲಿ ಕರೆದೊಯ್ದು ಶ್ವಾನ ಪ್ರೀತಿ ಮೆರೆದರು.

ರಸ್ತೆಯಲ್ಲ ನೀರು:

ಶಿವಮೊಗ್ಗ ನಗರದಲ್ಲಿ ನೆರೆಯ ಪರಿಣಾಮ ಎಷ್ಟು ಭಯಾನಕವಾಗಿತ್ತೆಂದರೆ ಹಳೇ ಶಿವಮೊಗ್ಗದ ಬಹುತೇಕ ಜನವಸತಿ ಪ್ರದೇಶಗಳಲ್ಲಿ ರಸ್ತೆಯೇ ಕಾಣುತ್ತಿರಲಿಲ್ಲ. ಎಲ್ಲವೂ ಆಳೆತ್ತರದ ನೀರಿನಿಂದ ಮುಚ್ಚಿ ಹೋಗಿತ್ತು. ಅಕ್ಕ ಪಕ್ಕದಲ್ಲಿ ಮನೆಗಳು ಮಧ್ಯದಲ್ಲಿ ರಸ್ತೆಯ ಮೇಲೆ ನಿಂತ ನೀರು ಕಣಿವೆಯಂತೆ ಕಾಣುತ್ತಿತ್ತು.

ಮಳೆಗೆ ಕೊಚ್ಚಿ ಹೋದ ಹಬ್ಬದ ಸಂಭ್ರಮ:

ಇಮಾಂ ಬಾಡಾ, ನ್ಯೂ ಮಂಡ್ಲಿ, ಸೀಗೇಹಟ್ಟಿ, ಮಂಡಕ್ಕಿ ಭಟ್ಟಿ ಮುಂತಾದ ಕಡೆಗಳಲ್ಲಿ ವಾಸವಾಗಿದ್ದ ಮುಸ್ಲಿಂ ಸಮುದಾಯದವರು ಬಕ್ರೀದ್ ಆಚರಣೆಗೆಂದು ಸಿದ್ಧತೆ ಮಾಡಿಕೊಂಡಿದ್ದರು. ಮನೆಯಲ್ಲಿ ದಿನಸಿ ಪದಾರ್ಥಗಳನ್ನು ತಂದಿಟ್ಟುಕೊಂಡಿದ್ದರು. ಎಲ್ಲವನ್ನೂ ನೆರೆ ಆಪೋಷನ ತೆಗೆದುಕೊಂಡಿದೆ.

ಬೇರೆ ದೇಶದಲ್ಲಿ ನೆಲೆಸಿದ್ದ ಶಿವಮೊಗ್ಗ ಮೂಲದವರು ಬಕ್ರೀದ್ ಆಚರಣೆಗೆಂದು ಶಿವಮೊಗ್ಗಕ್ಕೆ ಆಗಮಿಸಿದ್ದರು. ಅವರ ಸಂತಸ ಒಂದೇ ದಿನದಲ್ಲಿ ಬೇಸರವಾಗಿ ಪರಿವರ್ತನೆಯಾಗಿದೆ. ಹಬ್ಬಕ್ಕೆಂದು ಖರ್ಚು ಮಾಡಿ ತಂದ ದಿನಸಿಗಳೆಲ್ಲವೂ ನೀರು ಪಾಲಾಗಿದೆ. ಮನೆಗೆ ನುಗ್ಗಿರುವ ನೀರನ್ನು ಹೊರ ಹಾಕುವುದೇ ಕೆಲಸವಾಗಿದೆ. ಹಬ್ಬದ ಸಂಭ್ರಮ ಈಗ ಉಳಿದಿಲ್ಲ ಎಂದು ನ್ಯೂ ಮಂಡ್ಲಿ ನಿವಾಸಿ ಶಾಹಿನಾ ಅಳಲು ತೋಡಿಕೊಂಡರು.

Stay connected

278,752FansLike
588FollowersFollow
629,000SubscribersSubscribe

ವಿಡಿಯೋ ನ್ಯೂಸ್

VIDEO| ಕ್ರಿಕೆಟ್​​ ಮೈದಾನಕ್ಕೆ ಎಂಟ್ರಿ ಕೊಟ್ಟು ಪಂದ್ಯವನ್ನೇ ಕೆಲಕಾಲ ನಿಲ್ಲಿಸಿದ...

ಹೈದರಾಬಾದ್​: ಮಳೆಯ ಕಾರಣದಿಂದಾಗಿ ಕ್ರಿಕೆಟ್​ ಪಂದ್ಯಗಳು ಕೆಲಕಾಲ ಸ್ಥಗಿತಗೊಳ್ಳುವುದನ್ನು ನಾವು ನೋಡಿದ್ದೇವೆ. ಆದರೆ, ಹಾವಿನಿಂದಾಗಿ ಪಂದ್ಯ ಕೆಲಕಾಲ ನಿಲ್ಲುವುದನ್ನು ಎಂದಾದರೂ ನೋಡಿದ್ದೀರಾ? ಇಲ್ಲ ಎಂದಾದಲ್ಲಿ ನಾವು ತೋರಿಸುತ್ತೇವೆ ನೋಡಿ.... ಡಿಸೆಂಬರ್​ 9ರ...

VIDEO: ನಮಾಮಿ ಗಂಗಾ ಯೋಜನೆ ಪ್ರಗತಿ ಪರಿಶೀಲನೆ ಮುಗಿಸಿ ವಾಪಸ್​...

ಲಖನೌ: ಪ್ರಧಾನಿ ನರೇಂದ್ರ ಮೋದಿಯವರು ನ್ಯಾಷನಲ್ ಗಂಗಾ ಕೌನ್ಸಿಲ್​ನ ಮೊದಲ ಸಭೆಯನ್ನು ಇಂದು ಕಾನ್ಪುರದಲ್ಲಿ ನಡೆಸಿದ್ದಾರೆ. ಸಭೆಯಲ್ಲಿ ನಮಾಮಿ ಗಂಗಾ ಯೋಜನೆಯ ಮುಂದಿನ ಹಂತಗಳು, ನದಿ ಸ್ವಚ್ಛತೆಗೆ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ನರೇಂದ್ರ ಮೋದಿ...

ವಿಡಿಯೋ | ಪತ್ನಿಗಾಗಿ ಆತ ಮಾಡಿದ ಆ ಕೆಲಸಕ್ಕೆ ನೆಟ್ಟಿಗರ...

ಈತ ತನ್ನ ಮಡದಿಗಾಗಿ ಮಾಡಿದ ಆ ಕೆಲಸದಿಂದ ಸಾಮಾಜಿಕ ಜಾಲತಾಣಗಳಲ್ಲಿ ಅಪಾರ ಪ್ರಶಂಸೆ ಪಡೆದಿದ್ದಾನೆ. ಚೀನಾದ ಹೆಗಾಂಗ್​ನ ಪೊಲೀಸರು ಇಂತಹ ವೀಡಿಯೊಂದನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋ ವೀಕ್ಷಿಸಿದ ಸಾವಿರಾರು ಮಂದಿ ಅದಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ. ಆ...

VIDEO: ಕಾನ್ಪುರದಲ್ಲಿ ನ್ಯಾಷನಲ್​ ಗಂಗಾ ಕೌನ್ಸಿಲ್​ ಮೊದಲ ಸಭೆ: ಅಟಲ್​...

ಕಾನ್ಪುರ: ಪ್ರಧಾನಿ ನರೇಂದ್ರ ಮೋದಿಯವರು ಇಂದು ಕಾನ್ಪುರಕ್ಕೆ ತೆರಳಿದ್ದು ನ್ಯಾಷನಲ್​ ಗಂಗಾ ಕೌನ್ಸಿಲ್​ನ ಮೊದಲ ಸಭೆ ನಡೆಸಿದ್ದಾರೆ. ಉತ್ತರ ಪ್ರದೇಶದ ಕಾನ್ಪುರಕ್ಕೆ ತಲುಪಿದ ಅವರನ್ನು ಅಲ್ಲಿನ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಅವರು ಸ್ವಾಗತಿಸಿದರು. ಬಳಿಕ...

ಮನೆಗೆಲಸದ ಯುವತಿ ಮೇಲೆ ಮೌಲ್ವಿಯಿಂದ ಅತ್ಯಾಚಾರ: ಐರನ್​ ಬಾಕ್ಸ್​ನಿಂದ ಮೈಯೆಲ್ಲ...

ಬೆಂಗಳೂರು: ಮನೆಯ ಕೆಲಸಕ್ಕಿದ್ದ ಯುವತಿಯ ಮೇಲೆ ಅತ್ಯಾಚಾರ ಎಸಗಿ, ಐರನ್​ ಬಾಕ್ಸ್​ನಿಂದ ಮೈಯೆಲ್ಲಾ ಸುಟ್ಟು ಮೌಲ್ವಿಯೊಬ್ಬ ವಿಕೃತ ಮೆರೆದಿರುವ ಆರೋಪ ರಾಜ್ಯ ರಾಜಧಾನಿಯಲ್ಲಿ ಕೇಳಿಬಂದಿದೆ. ನಗರದ ಕೋರಮಂಗಲದಲ್ಲಿ ಪೈಶಾಚಿಕ ಕೃತ್ಯ ನಡೆದಿದೆ...

ಕಾಂಗ್ರೆಸ್​ನಿಂದ ಭಾರತ್​ ಬಚಾವೋ ಬೃಹತ್​ ರ‍್ಯಾಲಿ: ಬಿಜೆಪಿ ವಿರುದ್ಧ ಹರಿಹಾಯ್ದ...

ನವದೆಹಲಿ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಹಲವು ಕ್ರಮಗಳು ಹಾಗೂ ದೇಶದಲ್ಲಿ ಕುಸಿಯುತ್ತಿರುವ ಅರ್ಥ ವ್ಯವಸ್ಥೆ ಹಾಗೂ ಉದ್ಯೋಗಾವಕಾಶಗಳ ಬಗ್ಗೆ ಜನರಿಗೆ ತಿಳಿಸಲು ಕಾಂಗ್ರೆಸ್,​ ರಾಷ್ಟ್ರ ರಾಜಧಾನಿಯಲ್ಲಿ "ಭಾರತ್​ ಬಚಾವೋ"...