ಕೊಪ್ಪ: ಮಳೆಗಾಲ ಮುಗಿಯುತ್ತಿದ್ದಂತೆ ಮರಳು ದಂಧೆಕೋರರ ಹಾವಳಿ ಹೆಚ್ಚಾಗಿದ್ದು ತುಂಗಾ ನದಿಗೆ ಮಧ್ಯರಾತ್ರಿ ಇಳಿದು ಮರಳು ದೋಚುವ ಕೆಲಸಕ್ಕೆ ಮುಂದಾಗಿದ್ದಾರೆ.
ಹರಿಹರಪುರ ಹೋಬಳಿಯಲ್ಲಿ ತುಂಗಾ ನದಿ ಹರಿಯುತ್ತದೆ. ನದಿಯಲ್ಲಿ ನೀರಿನ ಮಟ್ಟ ಇಳಿಯುತ್ತಿದ್ದು ಕೆಲವೆಡೆ ಮರಳು ದೊರಕುತ್ತಿದೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಕೆಲವರು ರಾತ್ರಿ ವೇಳೆಯಲ್ಲಿ ಜೆಸಿಬಿ, ಪಿಕ್‌ಆಪ್ ಹಾಗೂ ಟಿಪ್ಪರ್‌ಗಳನ್ನು ಬಳಸಿಕೊಂಡು ಮರಳು ತೆಗೆಯುತ್ತಿದ್ದಾರೆ.
ಹರಿಹರಪುರ ಸಮೀಪದ ತೂಗುಸೇತುವೆ ಬಳಿ ತುಂಗೆಯ ಒಡಲಿಗೆ ಕನ್ನ ಹಾಕಿದ್ದು ತೂಗುಸೇತುವೆಗೆ ಅಪಾಯವಾಗುವ ರೀತಿಯಲ್ಲಿ ಮರಳನ್ನು ರಾತ್ರಿ ವೇಳೆಯಲ್ಲಿ ಹೊಳೆಯಿಂದ ತೆಗೆದಿದ್ದಾರೆ. ಸ್ಥಳೀಯರು ವಿರೋಧ ವ್ಯಕ್ತಪಡಿಸುತ್ತಿದ್ದಂತೆ ದಂಧೆಕೋರರು ಸ್ಥಳ ಬದಲಾವಣೆ ಮಾಡಿಕೊಂಡಿದ್ದು ಭಂಡಿಗಡಿ ಗ್ರಾಮದ ಹೊಳೆಹೊದ್ದು ಸಮೀಪದ ದೋಣಿಗಂಡಿಯಲ್ಲಿ ಎಗ್ಗಿಲ್ಲದೆ ಮರಳು ದೋಚುತ್ತಿದ್ದಾರೆ.
ವಾರದಲ್ಲಿ ಎರಡು ಬಾರಿ ದೋಣಿಗಂಡಿಯ ತುಂಗಾ ನದಿಗೆ ಇಳಿದು ಮರಳನ್ನು ತೆಗೆಯಲಾಗುತ್ತಿದೆ. ರಾತ್ರಿ 11 ಗಂಟೆಯಿಂದ ಬೆಳಗಿನ ಜಾವ 3 ಗಂಟೆವರೆಗೆ ಜೆಸಿಬಿ ಮೂಲಕ ಹೊಳೆಯಲ್ಲಿ ಮರಳನ್ನು ಎತ್ತಿ ಪಿಕಪ್ ವಾಹನಕ್ಕೆ ತುಂಬಿ ಸಮೀಪದಲ್ಲೇ ಶೇಖರಣೆ ಮಾಡಲಾಗುತ್ತದೆ. ನಂತರ ಟಿಪ್ಪರ್ ಮೂಲಕ 5 ಗಂಟೆಯ ಒಳಗೆ ಬೇರೆಡೆಗೆ ಸಾಗಿಸಲಾಗುತ್ತಿದೆ. ಪೊಲೀಸರ ಶ್ರೀರಕ್ಷೆ ಇಲ್ಲದೆ ಮರಳು ಒಂದೆಡೆಯಿಂದ ಬೇರೆಡೆಗೆ ಸಾಗಿಸುವುದು ಕಷ್ಟ.
ಮನೆಯಲ್ಲೇ ಮಾಡಿ ಟೇಸ್ಟಿ ಸ್ಪೈಸಿ ಬಟರ್ ಕಿಚಡಿ; ಇಲ್ಲಿದೆ ಸಿಂಪಲ್ ವಿಧಾನ | Recipe
ಪ್ರತಿ ಬಾರಿ ಮನೆಯಲ್ಲಿ ಸಿಂಪಲ್ ಕಿಚಡಿ ತಿಂದು ಬೇಜಾರಾಗಿದ್ಯಾ. ವಿಶೇಷ ರೀತಿಯ ಹೋಟೆಲ್ ಸ್ಟೈಲ್ ಟೇಸ್ಟಿ…
ತುಪ್ಪ ಸೇವಿಸಿದರೆ ಪಿರಿಯಡ್ಸ್ ನೋವು ಇರುವುದಿಲ್ಲವೇ; ತಜ್ಞರು ಹೇಳೋದೇನು? | Health Tips
ಋತುಚಕ್ರದ ಸಮಯದಲ್ಲಿ ಮಹಿಳೆಯರು ಸಾಮಾನ್ಯವಾಗಿ ನೋವು, ಉಬ್ಬುವುದು ಮತ್ತು ಹೆಪ್ಪುಗಟ್ಟುವಿಕೆಯಂತಹ ಸಮಸ್ಯೆಗಳನ್ನು ಎದುರಿಸುತ್ತಾರೆ. ಈ ಸಮಸ್ಯೆಗಳನ್ನು…
ಜಿಮ್ಗೆ ಹೋಗದೆ ಮನೆಯಲ್ಲೆ ಮಾಡಿ ಈ 3 ವ್ಯಾಯಾಮ; ಸ್ಲಿಮ್ ಆಗಲು ಈ ಟಿಪ್ಸ್ | Health Tips
ಸಿನಿಮಾ ನಟಿಯರನ್ನು ನೋಡಿ ನನಗೂ ಅವರಂತಹ ದೇಹಾಕೃತಿ ಇದ್ದಿದ್ದರೆ ಚೆನ್ನಾಗಿರುತಿತ್ತು ಎಂದು ಅನಿಸುತ್ತದೆಯೇ? ಹೌದು ಎಂದಾದರೆ…