ಹೊಸಪೇಟೆ: ತುಂಗಭದ್ರಾ ನದಿಯಲ್ಲಿ ತ್ಯಾಜ್ಯ, ರಾಸಾಯನಿಕಯುಕ್ತವಾಗಿ ನೀರು ಮಲಿನವಾಗುತ್ತಿದೆ ಎಂದು ಶೃಂಗೇರಿಯಿಂದ ನಡೆಯುತ್ತಿರುವ ತುಂಗಭದ್ರಾ ಅಭಿಯಾನ ಪಾದಯಾತ್ರೆಗೆ ಈ ಭಾಗದ 130 ಸಂಘಸಂಸ್ಥೆಗಳು ಬೆಂಬಲಿಸುತ್ತಿವೆ ಎಂದು ರಾಜ್ಯ ರೈತ ಸಂಘದ ತಾಲೂಕು ಅಧ್ಯಕ್ಷ ಗಂಟೆ ಸೋಮಶೇಖರ ಹೇಳಿದರು.
ನಗರದ ಪತ್ರಿಕಾಭವನದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ನೀರಾವರಿ ಬೆಳೆಗಳು, ಅಡಿಕೆ ತೋಟ ಹಾಗೂ ತರಕಾರಿ ಬೆಳೆಯಲು ಹೆಚ್ಚಿನ ಪ್ರಮಾಣದಲ್ಲಿ ರಾಸಾಯನಿಕ ಗೊಬ್ಬರ, ಔಷಧಿಗಳನ್ನು ಬಳಸಲಾಗುತ್ತಿದೆ. ಪಟ್ಟಣಗಳ ತ್ಯಾಜ್ಯ ನೀರೂ ನದಿಯಲ್ಲಿ ಬೆರೆಯುವುದರಿಂದ ತುಂಗಭದ್ರಾ ಕಲುಷಿತಗೊಂಡಿದ್ದು, ಆ ನೀರನ್ನು ಬಳಸುವುದರಿಂದ ಆರೋಗ್ಯದ ಮೇಲೆ ದುಷ್ಪರಿಣಾಮವಾಗಲಿದೆ. ಈ ನಿಟ್ಟಿನಲ್ಲಿ ನದಿಯನ್ನು ಸ್ವಚ್ಛವಾಗಿಡಬೇಕು ಎಂಬ ಉದ್ದೇಶದಿಂದ ನಿರ್ಮಲ ತುಂಗಭದ್ರಾ ಆಭಿಯಾನ ಹಮ್ಮಿಕೊಳ್ಳಲಾಗಿದೆ ಎಂದರು.
ಈ ದಿನ ಕರ್ನಾಟಕ ರಾಜ್ಯ ರೈತ ಸಂಘ ಪ್ರತಿಯೊಂದು ರೈತ ಕುಟುಂಬಗಳು ಹಾಗೂ ಸಾರ್ವಜನಿಕರು ಇದಕ್ಕೆ ಬೆಂಬಲಿಸುವ ಮೂಲಕ ನಮ್ಮ ನೀರನ್ನು ನಾವು ಉಳಿಸಬೇಕಾಗಿದೆ. ರೈತರಿಗೆ ನಗರದ ಕೊಳಚೆ ನೀರಿನಿಂದ ಭೂಮಿಯಲ್ಲಿ ಜೀವಾಂಶಗಳು ಸುಟ್ಟುಹೋಗುತ್ತಿವೆ. ಫಲವತ್ತೆ ಕಳೆದುಕೊಳ್ಳುತ್ತಿದೆ. ಕೊಳಚೆ ನೀರಿನಿಂದ ಸರಿಯಾದ ಬೆಳೆ ಕೈಗೆ ಸಿಗುತ್ತಿಲ್ಲ. ಸಕ್ಕರೆ ಕಾರ್ಖಾನೆ ಪ್ರಾರಂಭವಾಗುವುದು ಕುಂಠಿತವಾಗುತ್ತಿದೆ ಎಂದು ಆಗ್ರಹಿಸಿದರು.
ವಿಜಯನಗರ ಕಾಲೇಜಿನ ಅಧಕ್ಷ ಮಲ್ಲಿಕಾರ್ಜುನ, ಪ್ರಮುಖರಾದ ಪಿ.ವೇಂಕಟೇಶ್, ಗುಜ್ಜಲ ಗಣೇಶ್, ಜೋಗಿ ಭೀಮೇಶ್ ಇದ್ದರು.