Thursday, 13th December 2018  

Vijayavani

Breaking News

ತಿರುಪತಿ ತಿಮ್ಮಪ್ಪನ ಆದಾಯದಲ್ಲಿ 50 ಕೋಟಿ ರೂಪಾಯಿ ಖೋತಾ!

Saturday, 13.01.2018, 3:00 AM       No Comments

ತಿರುಪತಿ: ಪ್ರಧಾನಿ ನರೇಂದ್ರ ಮೋದಿ 2016ರಲ್ಲಿ ಕೈಗೊಂಡ ನೋಟು ಅಮಾನ್ಯೀಕರಣ ನಿರ್ಧಾರದ ಬಿಸಿ ತಿರುಪತಿ ತಿಮ್ಮಪ್ಪನಿಗೆ ಈಗ ತಟ್ಟಲಾರಂಭಿಸಿದೆ. ತಿರುಪತಿಗೆ ಬರುವ ಭಕ್ತರ ಸಂಖ್ಯೆ ಹಿಂದಿಗಿಂತಲೂ ಹೆಚ್ಚಾಗಿದ್ದರೂ, ತಿಮ್ಮಪ್ಪನ ಆದಾಯದಲ್ಲಿ -ಠಿ;50 ಕೋಟಿ ಕಡಿಮೆಯಾಗಿದೆ ಎಂದು ತಿರುಮಲ ತಿರುಪತಿ ದೇವಸ್ಥಾನದ (ಟಿಟಿಡಿ) ಅಧಿಕಾರಿಗಳು ತಿಳಿದ್ದಾರೆ. 2017ನೇ ಸಾಲಿನಲ್ಲಿ 3.33 ಕೋಟಿ ಭಕ್ತರು ತಿಮ್ಮಪ್ಪನ ದರ್ಶನಕ್ಕೆ ಬಂದಿದ್ದು, ಆದಾಯ 995.89 ಕೋಟಿ ರೂ.ಗೆ ತಲುಪಿದೆ ಎಂದು ತಿಳಿಸಿದ್ದಾರೆ. 2016ನೇ ಸಾಲಿನಲ್ಲಿ 2.6 ಕೋಟಿ ಭಕ್ತರಿಂದ 1,046.28 ಕೋಟಿ ರೂ. ಕಾಣಿಕೆ ಸಂಗ್ರಹವಾಗಿತ್ತು.

2017ನೇ ಸಾಲಿನ ಆರಂಭದಲ್ಲಿ 26 ಕೋಟಿ ರೂ. ಮೌಲ್ಯದ ರದ್ದಾದ 1 ಸಾವಿರ ರೂ. ಮತ್ತು 500 ರೂ. ನೋಟುಗಳ ರೂಪದಲ್ಲಿ ಕಾಣಿಕೆ ಬಂದಿತ್ತು. ಬದಲಿಸಿಕೊಳ್ಳುವ ಅವಧಿ ಮುಗಿದುಹೋಗಿದ್ದರಿಂದ, ಅವುಗಳನ್ನು ಬದಲಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಅಲ್ಲದೆ, ಎಟಿಎಂ ಹಾಗೂ ಬ್ಯಾಂಕ್​ಗಳಲ್ಲಿ ಹಣ ಹಿಂಪಡೆಯಲು ನಿರ್ಬಂಧ ಇದ್ದಿದ್ದು ಕೂಡ ಕಾಣಿಕೆ ಸಂಗ್ರಹ ಕುಸಿಯಲು ಕಾರಣ ಎಂದು ಟಿಟಿಡಿ ಕಾರ್ಯಕಾರಿ ನಿರ್ದೇಶಕ ಅನಿಲ್ ಕುಮಾರ್ ಸಿಂಘಾಲ್ ವಿವರಿಸಿದ್ದಾರೆ.

Leave a Reply

Your email address will not be published. Required fields are marked *

Back To Top