ತಾಲೂಕು ಆಡಳಿತ ಯಂತ್ರ ಸ್ತಬ್ಧ

ಧಾರವಾಡ ಇಲ್ಲಿನ ತಹಸೀಲ್ದಾರ್ ಕಚೇರಿಯ ಆಡಳಿತ ಯಂತ್ರ ಸಂಪೂರ್ಣ ಸ್ತಬಟಛಿಗೊಂಡಿದೆ. ವಿವಿಧ ದಾಖಲಾತಿಗಳಿಗಾಗಿ ಬರುವ ಜನರಿಗೆ ನಾಳೆ… ನಾಡಿದ್ದು… ಎಂಬ ಧೋರಣೆ ಮುಂದುವರಿದಿದೆ. ಗ್ರಾಮೀಣ ಪ್ರದೇಶಗಳಿಂದ ವಿವಿಧ ದಾಖಲಾತಿಗಳನ್ನು ಪಡೆಯಲು ತಹಸೀಲ್ದಾರ್ ಕಚೇರಿಗೆ ಪ್ರತಿದಿನ ನೂರಾರು ಜನ ಬರುತ್ತಾರೆ.

ಅವರೆಲ್ಲ ಬರಿಗೈಯಲ್ಲಿ ವಾಪಸಾಗಬೇಕಾಗಿದೆ. ಮುಖ್ಯವಾಗಿ ಶಾಲೆ-ಕಾಲೇಜ್ ವಿದ್ಯಾರ್ಥಿಗಳ ಶಿಷ್ಯವೇತನಕ್ಕೆ ಅರ್ಜಿ ಹಾಕಲು ಪಾಲಕರು ಆದಾಯ ಮತ್ತು ಜಾತಿ ಪ್ರಮಾಣಪತ್ರ ಪಡೆಯಲು ಆಗಮಿಸುತ್ತಿದ್ದಾರೆ. ಅರ್ಜಿ ಸಲ್ಲಿಕೆ ಅವಧಿಯನ್ನು ವಿಸ್ತರಿಸಲಾಗಿದ್ದು, ಪಾಲಕರು ಪ್ರತಿದಿನ ಅದಕ್ಕಾಗಿಯೇ ಓಡಾಡಬೇಕಾಗಿದೆ. ಕೆಲ ತಿಂಗಳ ಮಟ್ಟಿಗೆ ಹೆಗ್ಗಣ್ಣವರ ಎಂಬುವರು ಪ್ರೊಬೇಷನರ್ ಗ್ರೇಡ್- 2 ತಹಸೀಲ್ದಾರ್ ಆಗಿದ್ದರು. ಅವರು ವಾರದ ಹಿಂದೆ ಬೇರೆ ಕಡೆ ವರ್ಗಾವಣೆಗೊಂಡು ಬಿಡುಗಡೆಯಾಗಿದ್ದಾರೆ. ಇಷ್ಟು ದಿನ ವಿವಿಧ ಪ್ರಮಾಣಪತ್ರಗಳ ವಿತರಣೆಗೆ ಅವರೇ ಹೆಬ್ಬೆಟ್ಟು ಗುರುತು ನೀಡುತ್ತಿದ್ದರು. ಈಗ ಪರ್ಯಾಯ ವ್ಯವಸ್ಥೆ ಆಗಿಲ್ಲ. ಹೆಬ್ಬೆಟ್ಟು ಗುರುತು ಜವಾಬ್ದಾರಿಯನ್ನು ಮತ್ತೊಬ್ಬರಿಗೆ ನೀಡುವ ತಾಂತ್ರಿಕ ಕಾರ್ಯ ನಡೆದಿದ್ದು, ಅಲ್ಲಿಯವರೆಗೆ ಜನ ಕಚೇರಿಗೆ ಅಲೆದಾಡಬೇಕಾದ ಅನಿವಾರ್ಯತೆ ಎದುರಾಗಿದೆ.

ತಹಸೀಲ್ದಾರ್ ಕಚೇರಿಯಲ್ಲಿ ಏಜೆಂಟರ ಹಾವಳಿ, ಬೇಕಾಬಿಟ್ಟಿ ಹಣ ಸುಲಿಯುತ್ತಿರುವ ದೂರುಗಳು ಕೇಳಿಬಂದಿದ್ದವು. ದೂರಿಗೆ ಸ್ಪಂದಿಸಿದ್ದ ಜಿಲ್ಲಾಧಿಕಾರಿ ದೀಪಾ ಚೋಳನ್ ಅವರು, ಕೆಲ ದಿನಗಳ ಹಿಂದೆ ತಹಸೀಲ್ದಾರ್ ಕಚೇರಿಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.

ಸಾರ್ವಜನಿಕರಿಗೆ ತೊಂದರೆಯಾಗದಂತೆ ಹಾಗೂ ಅಗತ್ಯ ಸೇವೆಯಲ್ಲಿ ವಿಳಂಬ ಮಾಡದಂತೆ ಅಧಿಕಾರಿಗಳಿಗೆ ತಾಕೀತು ಮಾಡಿದ್ದರು. ಕೆಲ ದಿನಗಳ ಮಟ್ಟಿಗೆ ಸರಿಯಾಗಿದ್ದ ಆಡಳಿತ ಯಂತ್ರ ಮತ್ತೆ ಹಳಿ ತಪ್ಪಿದೆ. ಹೋಟೆಲ್​ಗಳಲ್ಲಿ ಮೆನು ಕಾರ್ಡ್ ನೀಡುವಂತೆ ವಿವಿಧ ಪ್ರಮಾಣಪತ್ರಗಳಿಗೆ ಹಣ ನಿಗದಿಪಡಿಸಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ. ನಮಾಮಿ ದುರ್ಗಾ ನವರಾತ್ರಿ ಅಂಗವಾಗಿ ಧಾರವಾಡ ಶ್ರೀ ನಗರೇಶ್ವರ ದೇವಸ್ಥಾನದಲ್ಲಿ ಶ್ರೀ ಕನ್ನಿಕಾ ಪರಮೇಶ್ವರಿ ದೇವಿಗೆ ಗುರುವಾರ ನಾಗಲಕ್ಷ್ಮೀ ಅಲಂಕಾರ ಮಾಡಲಾಗಿತ್ತು.

ಹುಬ್ಬಳ್ಳಿ ಕಂಚಗಾರ ಗಲ್ಲಿ ಶ್ರೀ ಕನ್ನಿಕಾ ಪರಮೇಶ್ವರಿ ದೇವಿಗೆ ಗುರುವಾರ ಯಲ್ಲಣ್ಣ ಜಿ. ಸವಣೂರ ಅವರಿಂದ ಕನ್ಯಾಕುಮಾರಿ ದೇವಿಯ ಅಲಂಕಾರ ಮಾಡಲಾಗಿತ್ತು ಧಾರವಾಡದ ಶ್ರೀ ಲಕ್ಷ್ಮೀ ನಾರಾಯಣ ದೇವಸ್ಥಾನದಲ್ಲಿ ಗುರುವಾರ ದೇವರಿಗೆ ಶ್ರೀ ಕಾಲಿಯಾ ಮರ್ದನ ಅಲಂಕಾರ ಮಾಡಲಾಗಿತ್ತು. ಗಾಯತ್ರಿ ದೇವಿ ಅಲಂಕಾರದಲ್ಲಿ ಧಾರವಾಡ ನೇಕಾರ ಓಣಿಯ ಶ್ರೀ ಬನಶಂಕರಿ ದೇವಿ. ಧಾರವಾಡದ ಶಾಂತಿನಿಕೇತನನಗರದ ಶ್ರೀ ಕರಿಯಮ್ಮದೇವಿಗೆ ಗುರುವಾರ ಶ್ರೀ ಗಾಯತ್ರಿ ದೇವಿ ಅಲಂಕಾರ ಮಾಡಲಾಗಿತ್ತು. ಧಾರವಾಡದ ಮರಾಠಾ ಕಾಲನಿಯ ಶ್ರೀ ದುರ್ಗಾದೇವಿಗೆ ಗುರುವಾರ ತಪಸಾರಾಧಿನಿ ಅಲಂಕಾರ ಮಾಡಿ ನಿಂಬೆಹಣ್ಣಿನ ಮಾಲೆ ಹಾಕಲಾಗಿತ್ತು.

ತಹಸೀಲ್ದಾರ್ ಕಚೇರಿಯಲ್ಲಿ ಆದಾಯ, ಜಾತಿ ಪ್ರಮಾಣಪತ್ರಗಳ ವಿಲೇವಾರಿ ಸ್ಥಗಿತಗೊಂಡಿರುವುದು ತಿಳಿದಿದೆ. ಮತ್ತೊಬ್ಬ ಅಧಿಕಾರಿಗೆ ಹೆಬ್ಬೆಟ್ಟು ಗುರುತು ಜವಾಬ್ದಾರಿ ನೀಡುವ ವ್ಯವಸ್ಥೆ ಮಾಡಲಾಗುತ್ತಿದೆ. ಏಜೆಂಟರ ಹಾವಳಿ ತಡೆಗೆ ಕಠಿಣ ಕ್ರಮ ಜರುಗಿಸಲಾಗುವುದು.

| ದೀಪಾ ಚೋಳನ್ ಜಿಲ್ಲಾಧಿಕಾರಿ