ಇಂಡಿ: ತಾಲೂಕಿನ ಕೊನೇ ಭಾಗದವರೆಗೂ ಗುತ್ತಿ ಬಸವಣ್ಣ ಕಾಲುವೆ ನೀರು ಹರಿಸಬೇಕೆಂದು ಆಗ್ರಹಿಸಿ ರೈತರು ಗುರುವಾರ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಬಿ.ಎಸ್. ಕಡಕಬಾವಿ ಅವರಿಗೆ ಮನವಿ ಸಲ್ಲಿಸಿದರು.

ಮುಖಂಡ ಬಸವರಾಜ ಪಾಟೀಲ ಹಂಜಗಿ ಮಾತನಾಡಿ, ಕಾಲುವೆ ನೀರು ತಾಂಬಾ ಗ್ರಾಮದವರೆಗೆ ಸರಿಯಾಗಿ ಬರುತ್ತದೆ. ನಂತರ ಹಂಜಗಿ ಗ್ರಾಮದವರೆಗೆ ಸ್ವಲ್ಪ ಪ್ರಮಾಣದಲ್ಲಿ ಬರುತ್ತದೆ. ಗುತ್ತಿ ಬಸವಣ್ಣ ಕಾಲುವೆಯಲ್ಲಿ ಅಲ್ಲಲ್ಲಿ ಸಾಕಷ್ಟು ಪ್ರಮಾಣದಲ್ಲಿ ಹೂಳು ತುಂಬಿದೆ. ಗಿಡಗಂಟಿಗಳು ಬೆಳೆದಿವೆ. ಹೀಗಾಗಿ ನೀರು ಸಾರಾಗವಾಗಿ ಮುಂದೆ ಸಾಗುತ್ತಿಲ್ಲ. ಇದಕ್ಕೆ ಅಧಿಕಾರಿಗಳ ನಿರ್ಲಕ್ಷೃವೇ ಕಾರಣವಾಗಿದೆ. ಆದ್ದರಿಂದ ಕೂಡಲೇ ಕಾಲುವೆಯಲ್ಲಿನ ಹೂಳು ತೆಗೆದು ಕೊನೆಯ ಭಾಗದವರೆಗೂ ನೀರು ಹರಿಯುವಂತೆ ಮಾಡಬೇಕೆಂದು ಆಗ್ರಹಿಸಿದರು.
ಕೆಂಚಪ್ಪ ನಿಂಬಾಳ, ಜಟ್ಟೆಪ್ಪ ಸಾಲೋಟಗಿ, ಲಾಯಪ್ಪ ಉಪ್ಪಾರ, ಸುರೇಶ ಜೇವೂರ, ಹಣಮಂತ ಮಸಳಿ, ಶರಣಪ್ಪ ಗುಂದಗಿ, ಗುರಪ್ಪ ಅಗಸರ, ರಮೇಶ ದಳವಾಯಿ, ಬಾಳು ಕೊಟಗೊಂಡ, ಶ್ರಿಮಂತ ಉಪ್ಪಾರ, ಸಿದ್ದಪ್ಪ ಕರಂಡೆ, ದಯಾನಂದ ಕಂಟಗೊಂಡ, ಜಟ್ಟೆಪ್ಪ ತಳವಾರ ಸೇರಿ ಅಂಜುಟಗಿ, ಹಿರೇರೂಗಿ, ತಡವಲಗಾ, ಹಂಜಗಿ ಗ್ರಾಮದ ರೈತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.