ತಾಪಂ ಎದುರು ಎಬಿವಿಪಿ ಪ್ರತಿಭಟನೆ

ಹಿರೇಕೆರೂರ: ಪಟ್ಟಣದ ಬಿಸಿಎಂ ಇಲಾಖೆಯ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯದ ಅವ್ಯವಸ್ಥೆ ಸರಿಪಡಿಸುವುದು ಸೇರಿ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿ ಎಬಿವಿಪಿ ಸಂಘಟನೆ ವತಿಯಿಂದ ತಾಪಂ ಕಾರ್ಯಾಲಯದ ಎದುರು ಶನಿವಾರ ಪ್ರತಿಭಟನೆ ನಡೆಸಲಾಯಿತು.

ಈ ವೇಳೆ ಮಾತನಾಡಿದ ತಾಲೂಕು ಎಬಿವಿಪಿ ನಗರ ಕಾರ್ಯದರ್ಶಿ ಹಾಲೇಶರಾವ್ ಹಲಗೇರಿ, ವಸತಿ ನಿಲಯಕ್ಕೆ ಸ್ವಂತ ಕಟ್ಟಡವಿಲ್ಲ. 50 ವಿದ್ಯಾರ್ಥಿಗಳು ಇರುವ ಜಾಗದಲ್ಲಿ ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದಾರೆ. ಅಗತ್ಯ ಸೌಕರ್ಯ ಒದಗಿಸಿಲ್ಲ. ಕೂಡಲೆ ಮೇಲಧಿಕಾರಿಗಳು, ಜನಪ್ರತಿನಿಧಿಗಳು ವಸತಿ ನಿಲಯಕ್ಕೆ ಸ್ವಂತ ಕಟ್ಟಡ ಹಾಗೂ ಮೂಲ ಸೌಕರ್ಯ ಒದಗಿಸಬೇಕು ಎಂದು ಆಗ್ರಹಿಸಿದರು.  ನಂತರ ಬಿಸಿಎಂ ಪ್ರಭಾರ ವಿಸ್ತರಣಾಧಿಕಾರಿ ವಿ.ಎಸ್. ಹಿರೇಮಠ ಅವರಿಗೆ ಮನವಿ ಸಲ್ಲಿಸಲಾಯಿತು. ವಿದ್ಯಾರ್ಥಿಗಳಾದ ಬಿ.ಎಚ್. ಜಾಡರ, ಎಂ.ಜಿ. ಕುರಿಯವರ, ಮಾಲನಗೌಡ ಬಿ.ಜಿ., ಕರಬಸಪ್ಪ, ಮಾಲತೇಶ ಮಡಿವಾಳರ, ಮೈಲಾರಿ ತಿಮಾಪುರ, ರವಿಚಂದ್ರ ಚವರಮಣಿ, ಮಾರುತಿ ಅರಳಿಕಟ್ಟಿ, ಗುಡದೇಶಿ ಅರಳಿಕಟ್ಟಿ, ಅಜ್ಜಪ್ಪ ಮತ್ತಕೋಟಿ, ಶ್ರೀಧರ ತಿಪ್ಪಗೊಂಡ್ರ, ಇತರರು ಇದ್ದರು.