ತಾತ್ಕಾಲಿಕ ರಸ್ತೆ ನಿರ್ವಿುಸಲು ಒತ್ತಾಯ

ಮುಂಡರಗಿ: ಕೃಷಿ ಉತ್ಪನ್ನ ಮಾರುಕಟ್ಟೆ ಆವರಣದಲ್ಲಿ ಕೈಗೊಂಡಿರುವ ರಸ್ತೆ ಕಾಮಗಾರಿಯಿಂದ ವ್ಯಾಪಾರಸ್ಥರು, ರೈತರು ಹಾಗೂ ಎಕ್ಕಾ ಬಂಡಿಗಳ ಸಂಚಾರಕ್ಕೆ ತೀವ್ರ ತೊಂದರೆಯಾಗಿದ್ದು, ಕಾಮಗಾರಿ ನಡೆಯುತ್ತಿರುವ ರಸ್ತೆ ಪಕ್ಕದಲ್ಲಿ ತಾತ್ಕಾಲಿಕ ರಸ್ತೆ ನಿರ್ವಿುಸಿ ರೈತರಿಗೆ ಹಾಗೂ ಚಕ್ಕಡಿ ಮಾಲೀಕರಿಗೆ ಅನುಕೂಲ ಮಾಡಿಕೊಡಬೇಕು ಎಂದು ಎಪಿಎಂಸಿ ಸದಸ್ಯ ರವೀಂದ್ರ ಉಪ್ಪಿನಬೆಟಗೇರಿ ಒತ್ತಾಯಿಸಿದರು.

ಪಟ್ಟಣದ ನೂತನ ಎಪಿಎಂಸಿ ಆವರಣದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹದಿನೈದು ದಿನಗಳಿಂದ ಆಮೆಗತಿಯಲ್ಲಿ ಕಾಮಗಾರಿ ನಡೆಯುತ್ತಿದೆ. ಶೀಘ್ರವೇ ಕಾಮಗಾರಿ ಪೂರ್ಣಗೊಳಿಸಿ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು ಎಂದು ಆಗ್ರಹಿಸಿದರು.

ಗದಗ ರಸ್ತೆ ಬಳಿ ಇರುವ ಎಪಿಎಂಸಿ ಮುಖ್ಯ ದ್ವಾರವನ್ನು ಬಂದ್ ಮಾಡಲಾಗಿದೆ. ಇದರಿಂದಾಗಿ ರೈತರು ಪೊಲೀಸ್ ಠಾಣೆ ಸುತ್ತುವರಿದು ಎಪಿಎಂಸಿ ಹಿಂಬಾಗಿಲಿನಿಂದ ಬರಬೇಕಾಗಿದೆ. ಅದೇ ರೀತಿ ಚಕ್ಕಡಿಗಳ ಮೂಲಕ ವಸ್ತುಗಳನ್ನು ಸಾಗಿಸಲು ಸುತ್ತಿ ಬಳಸಿ ಹೋಗಬೇಕಾಗುತ್ತದೆ ಎಂದರು.

ಎಪಿಎಂಸಿಗೆ 4000-5000 ಚೀಲ ಶೇಂಗಾ ಮಾರಾಟಕ್ಕೆ ಬರುತ್ತಲಿವೆ. ಆದ್ದರಿಂದ ಕಾಮಗಾರಿ ಕೈಗೊಂಡ ಸ್ಥಳದ ಒಂದು ಭಾಗದಿಂದ ಸಂಚಾರಕ್ಕೆ ಅವಕಾಶ ಮಾಡಿಕೊಡಬೇಕು. ತ್ವರಿತವಾಗಿ ರಸ್ತೆ ಕಾಮಗಾರಿ ಪೂರ್ಣಗೊಳಿಸುವ ಕುರಿತಂತೆ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ರೈತರೊಂದಿಗೆ ಹೋರಾಟ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಎಪಿಎಂಸಿ ಸಹ ಕಾರ್ಯದರ್ಶಿ ಎಂ.ಎಂ. ಪಟೇಲ್, ರಸ್ತೆ ಪಕ್ಕದಲ್ಲಿ ಕೆಲವು ಅಡ್ಡಚರಂಡಿ ಹಾಗೂ ಚರಂಡಿಗಳನ್ನು ನಿರ್ವಿುಸಬೇಕಾಗಿದೆ. ರೈತರು ಹಾಗೂ ಎಕ್ಕಾ ಬಂಡಿ ಮಾಲೀಕರು ಸಂಚರಿಸಲು ಎಪಿಎಂಸಿ ಹಿಂದೆ ಕಾಂಪೌಂಡ್ ಒಡೆದು ತಾತ್ಕಾಲಿಕವಾಗಿ ನೂತನ ರಸ್ತೆ ನಿರ್ವಿುಸಲಾಗಿದೆ. ಸಂಬಂಧಪಟ್ಟ ಇಂಜಿಯರ್ ಜೊತೆಗೆ ರ್ಚಚಿಸಿ ತ್ವರಿತಗತಿಯಲ್ಲಿ ರಸ್ತೆ ಕಾಮಗಾರಿ ಪೂರ್ಣಗೊಳಿಸಲು ಪ್ರಯತ್ನಿಸುತ್ತೇವೆ ಎಂದರು.

Leave a Reply

Your email address will not be published. Required fields are marked *