ತವರಿನಲ್ಲಿ ಪ್ರಶಸ್ತಿ ಗೆಲ್ಲುವ ಹಂಬಲದಲ್ಲಿ ಪಂಕಜ್

ಬೆಂಗಳೂರು: 15 ಬಾರಿಯ ವಿಶ್ವ ಚಾಂಪಿಯನ್ ಪಂಕಜ್ ಆಡ್ವಾಣಿ ಸೋಮವಾರ ಆರಂಭವಾಗಲಿರುವ ಐಬಿಎಸ್ಎಫ್ ವಿಶ್ವ ಬಿಲಿಯರ್ಡ್ಸ್ ಚಾಂಪಿಯನ್ಷಿಪ್ನಲ್ಲಿ ಪ್ರಶಸ್ತಿ ಗೆಲ್ಲುವ ಫೇವರಿಟ್ ಎನಿಸಿದ್ದಾರೆ. ಲಾಂಗ್ ಫಾರ್ವ್ಯಾಟ್ನಲ್ಲಿ ಹಾಲಿ ಚಾಂಪಿಯನ್ ಕೂಡ ಆಗಿರುವ ಸ್ಥಳೀಯ ಆಟಗಾರ ಪಂಕಜ್, ಇತ್ತೀಚೆಗಷ್ಟೆ ದೋಹಾದಲ್ಲಿ ಅಂತ್ಯಗೊಂಡ ವಿಶ್ವ ಸ್ನೂಕರ್ ಚಾಂಪಿಯನ್ಷಿಪ್ನಲ್ಲಿ ಕಂಚಿನ ಪದಕ ಪಡೆದಿದ್ದರು. ಪ್ರಸಕ್ತ ವರ್ಷ ಬಿಲಿಯರ್ಡ್ಸ್ ಗಿಂತ ಹೆಚ್ಚು ಸ್ನೂಕರ್ ಆಡಿರುವ ಪಂಕಜ್, ಇದೀಗ ತವರಿನಲ್ಲಿ ಹೊಸ ಸವಾಲಿಗೆ ಸಜ್ಜಾಗಿದ್ದಾರೆ.

ಸೋಮವಾರದಿಂದ ಗುರುವಾರದವರೆಗೆ ಲಾಂಗ್ ಫಾರ್ವ್ಯಾಟ್ನಲ್ಲಿ ಟೂರ್ನಿ ನಡೆದರೆ, ಶುಕ್ರವಾರದಿಂದ ಮುಂದಿನ ಸೋಮವಾರದವರೆಗೆ (ಡಿ.12) ಪಾಯಿಂಟ್ ಫಾರ್ವ್ಯಾಟ್ ಟೂರ್ನಿ ನಡೆಯಲಿದೆ. ‘ಕೆಎಸ್ಬಿಎ ನನ್ನ ತವರು. ನನ್ನ ಮೇಲೆ ಹೆಚ್ಚು ನಿರೀಕ್ಷೆ ಇರುವುದರಿಂದ ಸಹಜವಾಗಿಯೇ ಸಾಕಷ್ಟು ಒತ್ತಡದಲ್ಲಿದ್ದೇನೆ. ಪ್ರಸಕ್ತ ವರ್ಷ ಬಿಲಿಯರ್ಡ್ಸ್ಗಿಂತ ಸ್ನೂಕರ್ ಹೆಚ್ಚು ಆಡಿದ್ದೇನೆ. ಉತ್ತಮ ಪ್ರದರ್ಶನ ನೀಡುವುದಷ್ಟೆ ಮುಂದಿರುವ ಗುರಿ’ ಎಂದು 31 ವರ್ಷದ ಪಂಕಜ್ ಆಡ್ವಾಣಿ ಪ್ರತಿಕ್ರಿಯಿಸಿದ್ದಾರೆ.

 

Leave a Reply

Your email address will not be published. Required fields are marked *