ತಳಸುದಾಯಗಳಿಂದ ಜನಪದ ಕಲೆಗಳಿಗೆ ಜೀವ

blank

ಚಿತ್ರದುರ್ಗ: ಜನಪದ ಸಾಹಿತ್ಯದ ಬೇರುಗಳನ್ನು ಇನ್ನಷ್ಟು ಗಟ್ಟಿಗೊಳಿಸುವ ಹಾಗೂ ಮುಂದಿನ ಪಿಳಿಗೆಗೆ ಕೊಂಡೊಯ್ಯುವ ಗುರುತುರ ಹೊಣೆ ನಮ್ಮ ಮೇಲಿದೆ ಎಂದು ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಸದಸ್ಯ ಡಾ.ಜೆ.ಕರಿಯಪ್ಪ ಮಾಳಿಗೆ ಹೇಳಿದರು.
ಮದಕರಿ ಯುವಕ ಸಂಘ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ನಗರದ ತರಾಸು ರಂಗಮಂದಿರದಲ್ಲಿ ಶುಕ್ರವಾರ ಏರ್ಪಡಿಸಿದ್ದ ಜಾನಪದ ಉತ್ಸವ ಉದ್ಘಾಟಿಸಿ ಮಾತನಾಡಿದರು.
ನಮ್ಮ ಜನಪದ ಕಲೆ, ಸಾಹಿತ್ಯ, ಸಂಸ್ಕೃತಿ ಒಂದು ತಲೆಮಾರಿನಿಂದ-ಇನ್ನೊಂದು ತಲೆಮಾರಿಗೆ ವರ್ಗಾವಣೆ ಆಗಬೇಕು. ಈ ನಿಟ್ಟಿನಲ್ಲಿ ಗಮನಹರಿಸುವಂತೆ ತಿಳಿಸಿದರು.
ಗ್ರಾಮೀಣ ಸೊಗಡಿನ ಜನಪದ ಕಲೆಗಳಿಂದ ಉತ್ತಮ ಸಂಸ್ಕಾರ ದೊರೆಯುತ್ತದೆ. ತಳ ಸಮುದಾಯಗಳಿಂದ ಉಳಿದಿರುವ ಜನಪದ ಕಲೆಗಳು ಗ್ರಾಮೀಣ ಭಾರತದ ಸಂಸ್ಕೃತಿಯ ಸೊಗಡಾಗಿವೆ. ಇವುಗಳ ಉಳಿವಿನ ಜವಾಬ್ದಾರಿಯನ್ನು ಇವತ್ತಿಗೂ ತಳ ಸಮುದಾಯಗಳೇ ಹೊತ್ತಿವೆ ಎಂದರು.
ಸೋಬಾನೆ,ಗೊರವರ ಕುಣಿತ, ಬೀಸು ಕಲ್ಲಿನ ಪದಗಳು, ಚೌಡಿಕೆ ಪದ, ತಮಟೆ ವಾದ್ಯ, ಭಜನೆ, ಕೋಲಾಟದಂಥ ಕಲೆಗಳನ್ನು ಗಟ್ಟಿಗೊಳಿಸಬೇಕು. ಏಕತೆ ಪ್ರದರ್ಶಿಸುವ ಮೂಲಕ ಸಮಾಜಿಕ ಸಂಬಂಧಗಳನ್ನು ಗಟ್ಟಿಗೊಳಿಸಲು ನೆರವಾಗಿವೆ ಎಂದರು.ಈ ಸಂದರ್ಭದಲ್ಲಿ ಅವರನ್ನು ಸಂಘದಿಂದ ಸನ್ಮಾನಿಸಲಾಯಿತು.
ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಎ.ನಾಗರಾಜ್ ಮಾತನಾಡಿ, ಜಾಗತೀಕರಣ, ಖಾಸಗೀಕರಣ, ಆಧುನೀಕರಣದ ಭರಾಟೆಯಲ್ಲಿ ಜನಪದ ಕಲೆಗಳು ಕಣ್ಮರೆಯಾಗುತ್ತಿವೆ. ದೇಸೀ ಭಾಷೆ ಮತ್ತು ಸಂಸ್ಕೃತಿಗೆ ಇದರಿಂದ ಪೆಟ್ಟು ಬಿಳ್ಳುತ್ತಿದೆ ಎಂದರು.
ಮೊಬೈಲ್, ಸಾಮಾಜಿಕ ಜಾಲ ತಾಣಗಳ ಹಾವಳಿಯಿಂದ ಸಾಮಾಜಿಕ ಸಂಬಂಧ, ಮಾನವೀಯತೆ ಮರೆಯಾಗುತ್ತಿದೆ ಎಂದು ಅವರು ಕಳವಳ ವ್ಯಕ್ತ ಪಡಿಸಿದರು.
ರಾಜ್ಯಯುವ ಪ್ರಶಸ್ತಿ ಪುರಸ್ಕೃತ ಡಿ.ಗೋಪಾಲಸ್ವಾಮಿ ನಾಯಕ್ ಮಾತನಾಡಿ, ಜನಪದ ಕಲೆ ಪ್ರಾಚೀನ ಗ್ರಾಮೀಣ ಭಾರತದ ತಾಯಿಬೇರು ಎಂದು ಬಣ್ಣಿಸಿದರು.
ವದ್ದಿಕೆರೆ ಶ್ರೀ ಗುರು ಕರಿಬಸವೇಶ್ವರಸ್ವಾಮಿ ಮಠದ ವದ್ದಿಕೆರೆ ಕಾಂತರಾಜು, ರಾಜ್ಯ ಯುವ ಪ್ರಶಸ್ತಿ ಪುರಸ್ಕೃತ ಶ್ರೀನಿವಾಸ್ ಮಳಲಿ ಇದ್ದ ರು.
ಗಾರುಡಿ ಗೊಂಬೆ, ಕೀಲು ಕುದುರೆ, ನವಿಲು ಕುಣಿತ, ಜನಪದ ಸಂಗೀತ, ಭಜನೆ, ಕೋಲಾಟ, ಕಹಳೆ, ಗೊರವ ಕುಣಿತ, ತತ್ವ ಪದಗಳ ಗಾಯನ ಸೇರಿ ಮತ್ತಿತರ ಸಾಂಸ್ಕೃತಿಕ ಕಾರ್ಯಕ್ರಮಗಳು ಕಳೆಗಟ್ಟಿದವು.
ಮದಕರಿ ಯುವಕ ಸಂಘದ ಅಧ್ಯಕ್ಷ ಸೋಮಶೇಖರ್ ಸ್ವಾಗತಿಸಿದರು.

blank
Share This Article

ಊಟದ ನಂತರ ಸಿಹಿ ತಿನ್ನುವುದು ಒಳ್ಳೆಯದೇ? ವೈದ್ಯರ ಸಲಹೆ..!  sweet

sweet:  ಸಿಹಿ ತಿಂಡಿ ಎಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ... ನಾಲಿಗೆ ಚಪ್ಪರಿಸಿ ಸಿಹಿ ತಿಂಡಿ…

astrology : ಈ ದಿನ ಉಗುರು, ಕೂದಲನ್ನು ಕತ್ತರಿಸಿದ್ರೆ ಕಾದಿದೆ ಸಂಕಷ್ಟ! ಈ ಕೆಲಸಕ್ಕೂ ಇದೆ ಒಳ್ಳೆಯ ದಿನ

astrology: ವಾರದ ಕೆಲವು ದಿನಗಳಲ್ಲಿ ಉಗುರುಗಳನ್ನು ಕತ್ತರಿಸುವುದು ಮತ್ತು ಕೂದಲನ್ನು ಕತ್ತರಿಸುವು ಒಳ್ಳೆಯದಲ್ಲ ಎಂದು ಹೇಳಲಾಗುತ್ತದೆ. …

27 ವರ್ಷದ ನಂತ್ರ ಪೂರ್ವ ಭಾದ್ರಪದ ನಕ್ಷತ್ರದಲ್ಲಿ ಶನಿ ಸಂಚಾರ: ಈ 3 ರಾಶಿಯವರಿಗೆ ಅದೃಷ್ಟವೋ ಅದೃಷ್ಟ | Zodiac Signs

Zodiac Signs : ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಅನೇಕ ಗ್ರಹಗಳು ತಮ್ಮ ರಾಶಿಚಕ್ರ ಚಿಹ್ನೆಗಳನ್ನು ಆಗಾಗ…