ಕೋಲಾರ: ಜಿಲ್ಲೆ ಸಮಗ್ರವಾಗಿ ಅಭಿವೃದ್ಧಿ ಹೊಂದಬೇಕಾದರೆ ರಾಜಕೀಯ, ಆಡಳಿತ ಹಾಗೂ ಜನರಲ್ಲಿ ಇಚ್ಛಾಶಕ್ತಿ ಇರಬೇಕು. ಆಗ ಮಾತ್ರ ವ್ಯವಸ್ಥೆಯಲ್ಲಿನ ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡು, ಅಭಿವೃದ್ಧಿ ಕಾಣಲು ಸಾಧ್ಯ ಎಂದು ನೂತನ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಹೇಳಿದರು.
ನಗರದ ಪ್ರತಿಕಾ ಭವನದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸಂವಾದದಲ್ಲಿ ಮಾತನಾಡಿದ ಅವರು, ಸೇವಾ ಅವಧಿಯಲ್ಲಿನ ಜನಸೇವೆ ಶಾಶ್ವತವಾಗಿ ಉಳಿದಾಗ ಕೃತಜ್ಞತಾ ಭಾವ ಇರುತ್ತದೆ. ಆ ರೀತಿ ಕೆಲಸ ಮಾಡಲು ಜಿಲ್ಲೆಯ ಜನ ಸಹಕಾರ ನೀಡುತ್ತಾರೆ ಎಂಬ ನಿರೀೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಒಂದೊಂದು ವೈವಿಧ್ಯ ಇದೆ. ಜವಾಬ್ದಾರಿಯನ್ನು ಹೊಂದಾಣಿಕೆಯೊಂದಿಗೆ ನಿರ್ವಹಿಸಬೇಕು. ಅಧಿಕಾರದ ಮದ ತಲೆಗೇರಿದರೆ ಸತ್ತ ಹಾಗೇ ಎಂದರ್ಥ. ತೆಗೆದುಕೊಳ್ಳುವ ನಿರ್ಧಾರಗಳು ಗಟ್ಟಿ ಇರಬೇಕು. ಆಡಳಿತ ವ್ಯವ್ಯಸ್ಥೆಯಲ್ಲಿ ಬದಲಾವಣೆ ತರಬೇಕು. ಅದನ್ನು ಹಂತಹಂತವಾಗಿ ಕಾರ್ಯಗತಗೊಳಿಸಲಾಗುವುದು ಎಂದು ಡಿಸಿ ಹೇಳಿದರು.
ನಾನೂ ಸಹ ತಳಮಟ್ಟದಿಂದ ಬಂದಿದ್ದು, ಜನಸಾಮಾನ್ಯರ ಪರಿಸ್ಥಿತಿ ಬಗ್ಗೆ ಗೊತ್ತಿದೆ. ಇದುವರೆಗೂ 18 ಜಿಲ್ಲೆಗಳಲ್ಲಿ ಕೆಲಸ ಮಾಡಿದ್ದು, ಕೃಷ್ಣಾ, ಕಾವೇರಿ ನೀರು ಕುಡಿದು ಬಂದಿದ್ದೇನೆ. ಒತ್ತಡ ನಿಭಾಯಿಸುವ ಶಕ್ತಿಯಿದೆ. ಸರ್ಕಾರಿ ಭೂಗಳ್ಳರಿಗೆ ಉಳಿಗಾಲವಿಲ್ಲ. ಸರ್ಕಾರಿ ಕಚೇರಿಯಲ್ಲಿ ಮೈಗಳ್ಳರು ಎಣ್ಣೆ ಹಚ್ಚಿಕೊಂಡು ಕೆಲಸ ಮಾಡುವ ಬದಲಾಗಿ ಜನ ಸೇವೆ ಮಾಡಬೇಕು. ಆ ವಾತಾವರಣ ಸೃಷ್ಟಿ ಮಾಡಲಾಗುವುದು ಎಂದು ಡಿಸಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಪತ್ರಕರ್ತರ ಸಂದ ವಿವಿಧೋದ್ದೇಶ ಸಹಕಾರ ಸಂದ ಅಧ್ಯಕ್ಷ ಕೆ.ಎಸ್.ಗಣೇಶ್, ಸಂದ ಪ್ರಧಾನ ಕಾರ್ಯದರ್ಶಿ ಎಸ್.ಚಂದ್ರಶೇಖರ್, ಖಜಾಂಜಿ ಎ.ಜಿ.ಸುರೇಶ್ ಹಾಜರಿದ್ದರು.
* ಪತ್ರಕರ್ತರು, ಅಧಿಕಾರಿಗಳು ಸಾಮಾಜಿಕ ವೈದ್ಯರಿದ್ದಂತೆ
ಪತ್ರಕರ್ತರಿಗೆ ಸ್ವಾರ್ಥ ಇರಬಾರದು. ಸಮಾಜದ ಕನ್ನಡಿ, ನಾಡಿಯಾಗಿರಬೇಕು. ಸಮಾಜದ ಕಲ್ಯಾಣವೇ ಮುಖ್ಯ ಉದ್ದೇಶವೇ ಹೊರತು, ಸ್ವಂತ ಕೆಲಸವಲ್ಲ. ಸೌಲಭ್ಯಗಳು ಜನರಿಗೆ ಸಿಗುತ್ತಿವೆಯೋ ? ಇಲ್ಲವೋ ಎಂಬುದನ್ನು ಗಮನಿಸಬೇಕು. ಪತ್ರಕರ್ತರು, ಅಧಿಕಾರಿಗಳು ಸಾಮಾಜಿಕ ವೈದ್ಯರು ಇದ್ದಂತೆ. ಸಮಸ್ಯೆಗಳನ್ನು ಹುಡುಕಿ ಪರಿಹಾರ ಹುಡುಕುವುದು ಪತ್ರಕರ್ತರ ಆದ್ಯ ಕರ್ತವ್ಯವಾಗಬೇಕು ಎಂದು ಡಾ.ಎಂ.ಆರ್.ರವಿ ತಿಳಿಹೇಳಿದರು.
* ಪತ್ರಕರ್ತನಾಗಿಯೂ ಸೇವೆ
ಅನಿರೀಕ್ಷಿತವಾಗಿ ಪತ್ರಕರ್ತನಾಗಿ ಕೆಲಸ ಮಾಡಿದೆ. ಆಗ ಸುದ್ದಿಯನ್ನು ಹೇಗೆ ಬರೆಯಬೇಕು ಎಂದು ಯಾರೂ ಹೇಳುತ್ತಿರಲಿಲ್ಲ. ವಿಚಾರದ ಹಿಂದೆ ಬಿದ್ದು ಸುದ್ದಿ ಸಂಗ್ರಹ ಮಾಡುತ್ತಿದ್ದೆೆ. ಬಿಎನಲ್ಲಿ ರ್ಯಾಂಕ್ ಪಡೆದುಕೊಂಡಿದ್ದರೂ ಸುದ್ದಿ ಬರೆಯಲು ಬರುತ್ತಿರಲಿಲ್ಲ. ಸಾಮಾನ್ಯ ರಿಪೋರ್ಟರ್ ಆಗಿ ಕೊನೆಗೆ ಚೀಫ್ ಎಡಿಟರ್ ಆಗಿ ಪತ್ರಿಕಾ ರಂಗದಿಂದ ಹೊರಬಂದೆ. ಕಾಕತಾಳಿಯ ಎಂಬಂತೆ ಸರ್ಕಾರಿ ಕೆಲಸಕ್ಕೆ ಸೇರಿ 1992ರಲ್ಲಿ ಉಪನ್ಯಾಸಕನಾಗಿ ಕೆಲಸ ಮಾಡಿದ ಜಿಲ್ಲೆಯಲ್ಲಿ ಅಧಿಕಾರಿಯಾಗಿ ಸೇವೆ ಸಲ್ಲಿಸಲು ಅವಕಾಶ ಸಿಕ್ಕಿರುವುದು ನನ್ನ ಪುಣ್ಯ ಎಂದು ಡಾ.ಎಂ.ಆರ್.ರವಿ ಅಭಿಪ್ರಾಯ ವ್ಯಕ್ತಪಡಿಸಿದರು.
* ಶಾಶ್ವತ ಕೆಲಸಗಳ ಅನುಷ್ಠಾನಕ್ಕೆ ಮನವಿ
ಪತ್ರಕರ್ತರ ಸಂದ ಅಧ್ಯಕ್ಷ ಬಿ.ವಿ.ಗೋಪಿನಾಥ್ ಮಾತನಾಡಿ, ಜಿಲ್ಲೆಗೆ ಸಿಇಒ, ಡಿಸಿ, ಎಸ್ಪಿ ಆಗಮಿಸಿದಾಗ ಸಂಘದಿಂದ ಸ್ವಾಗತಿಸುವುದು ವಾಡಿಕೆ. ಜತೆಗೆ ಸಮಸ್ಯೆಗಳ ಬಗ್ಗೆ ಗಮನ ಸೆಳೆದು ಪರಿಹಾರ ಕಲ್ಪಿಸುವುದು ಕಾರ್ಯಕ್ರಮದ ಉದ್ದೇಶ ಎಂದರು.
ನೂತನ ಡಿಸಿ ಮೂಲತ@ ಪತ್ರಕರ್ತರೂ ಆಗಿರುವುದರಿಂದ ಸಮಸ್ಯೆಗಳ ಅರಿವಿರುತ್ತದೆ. ಜಿಲ್ಲೆಯಿಂದ ಉಪನ್ಯಾಸ ವೃತ್ತಿ ಆರಂಭಿಸಿದ್ದಾರೆ. ಕೈಗಾರಿಕೆಗಳು ಬಾರದೆ ಇದಿದ್ದರೆ ಜಿಲ್ಲೆ ಬೆಳೆಯಲು ಸಾಧ್ಯವಾಗುತ್ತಿರಲಿಲ್ಲ. ನಗರಸಭೆ ಪರಿಸ್ಥಿತಿ ಏನಾಗಿದೆ ಎಂಬುದು ಊಹಿಸಿಕೊಳ್ಳಲೂ ಸಾಧ್ಯವಾಗುತ್ತಿರಲಿಲ್ಲ. ಈ ಹಿಂದಿನ ಹಲವು ಡಿಸಿಗಳು ಅವರ ಹೆಸರು ಶಾಶ್ವತವಾಗಿ ಉಳಿಯುವಂತಹ ಕೆಲಸ ಮಾಡಿದ್ದು, ಈಗಿನ ಜಿಲ್ಲಾಧಿಕಾರಿಗಳಿಂದಲೂ ಶಾಶ್ವತ ಕೆಲಸದ ನಿರೀೆ ಇದೆ ಎಂದರು.
* ಜಮೀನು ಮಂಜೂರು ಮಾಡಿ
ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ವಿ.ಮುಜುರಾಜು ಮಾತನಾಡಿ, ಜಿಲ್ಲೆಯಲ್ಲಿ 300ಕ್ಕೂ ಹೆಚ್ಚು ಪತ್ರಕರ್ತರಿದ್ದು, ಬಹುತೇಕರು ನಿವೇಶನ, ವಸತಿ ರಹಿತರಿದ್ದಾರೆ. 10 ಎಕರೆ ಜಾಗ ಮಂಜೂರು ಮಾಡಿಕೊಟ್ಟರೆ ಬಡಾವಣೆ ನಿಮಾರ್ಣ ಮಾಡಿ, ನಿವೇಶನ ಹಂಚಿಕೆ ಮಾಡಲಾಗುವುದು. ಜಿಲ್ಲಾಡಳಿತ ಸಹಕರಿಸಬೇಕು ಎಂದು ಮನವಿ ಮಾಡಿದರು.