ತರೀಕೆರೆ: ಪಟ್ಟಣಕ್ಕೆ ಆಗಮಿಸಿದ ಕನ್ನಡ ಜ್ಯೋತಿ ರಥಯಾತ್ರೆಗೆ ಕನ್ನಡಪರ ಸಂಘಟನೆಗಳು, ಅಧಿಕಾರಿ, ಸಿಬ್ಬಂದಿ ಹಾಗೂ ನಾಗರಿಕರು ಭವ್ಯ ಸ್ವಾಗತ ಕೋರಿದರು.
ಕನ್ನಡ ಜ್ಯೋತಿ ರಥಯಾತ್ರೆಗೆ ಮಹಾತ್ಮ ಗಾಂಧಿ ವೃತ್ತದಲ್ಲಿ ಪುಷ್ಪಾರ್ಚನೆ ಮಾಡಿ ಜಯಘೋಷ ಮೊಳಗಿಸಿ ಕನ್ನಡತನ ಮೆರೆದರು. ತರೀಕೆರೆಯಿಂದ ಲಕ್ಕವಳ್ಳಿಗೆ ತಲುಪಿದ ರಥಯಾತ್ರೆಯನ್ನು ಹಲವರು ಸ್ವಾಗತಿಸಿ ಸಕಲ ಗೌರವ ಸಲ್ಲಿಸಿ ಬೀಳ್ಕೊಟ್ಟರು. ಎಸಿ ಡಾ. ಕೆ.ಜೆ.ಕಾಂತರಾಜ್, ಕಸಾಪ ತಾಲೂಕು ಅಧ್ಯಕ್ಷ ರವಿ ದಳವಾಯಿ, ಎಂ.ನರೇಂದ್ರ, ಟಿ.ಎನ್.ಜಗದೀಶ್, ಬಿ.ಎಸ್.ಭಗವಾನ್, ನವೀನ್ ಪೆನ್ನಯ್ಯ, ಇಮ್ರಾನ್ ಅಹಮದ್ ಬೇಗ್, ತ.ಮ.ದೇವಾನಂದ್, ದಾದಾಪೀರ್, ಸಿ.ಚಕ್ರವರ್ತಿ, ಆರ್.ನಾಗೇಶ್ ಮತ್ತಿತರರಿದ್ದರು.