ತರಾತುರಿಯಲ್ಲಿ ವಾಣಿಜ್ಯ ಕಟ್ಟಡ ಉದ್ಘಾಟನೆ

blank
blank

ಕುಶಾಲನಗರ: ಕುಶಾಲನಗರ ಪುರಸಭೆಯ 2023-24ರ ಆಯವ್ಯಯವನ್ನು ಅಧ್ಯಕ್ಷ ಬಿ.ಜಯವರ್ಧನ ಶುಕ್ರವಾರ ಮಂಡಿಸಿದರು.
ನಿರೀಕ್ಷಿತ ಆದಾಯ 22,31,06,928 ರೂ. ಮತ್ತು ನಿರೀಕ್ಷಿತ ಖರ್ಚು 22,05,50,000 ರೂ. ಆಗಿದ್ದು, 25,56,928 ರೂ. ಉಳಿತಾಯ ಬಜೆಟ್ ಇದಾಗಿದೆ ಎಂದು ಅಧ್ಯಕ್ಷರು ತಿಳಿಸಿದರು.

ಸಭೆಯ ಆರಂಭದಲ್ಲಿ ಪುರಸಭೆ ವಾಣಿಜ್ಯ ಕಟ್ಟಡದ ಉದ್ಘಾಟನೆಯನ್ನು ಶುಕ್ರವಾರ ತರಾತುರಿಯಲ್ಲಿ, ಕಾಮಗಾರಿ ಪೂರ್ಣವಾಗದೆ ಮಾಡಿರುವುದನ್ನು ಪ್ರತಿಪಕ್ಷ ನಾಯಕರಾದ ಪ್ರಮೋದ್ ಮುತ್ತಪ್ಪ ಮತ್ತು ವಿ.ಎಸ್.ಅನಂದಕುಮಾರ್ ವಿರೋಧಿಸಿದರು. 13 ಮಳಿಗೆಗಳಲ್ಲಿ 3 ಮಳಿಗೆಗಳಿಗೆ ರೊಲಿಂಗ್ ಶೆಟ್ಟರ್ ಹಾಕಿಲ್ಲ. ಇನ್ನು ಸಾಕಷ್ಟು ಕೆಲಸ ಬಾಕಿಯಿದೆ. ಅಂತಹ ತರಾತುರಿ ಏನಿತ್ತು ಎಂದು ಪ್ರಶ್ನಿಸಿದರು.


ಅಧ್ಯಕ್ಷ ಬಿ.ಜಯವರ್ಧನ ಉತ್ತರಿಸಿ, ಮೇಲಧಿಕಾರಿಗಳ ಸಲಹೆ ಪಡೆದು ಉದ್ಘಾಟಿಸಿದ್ದೇವೆ. ಪುರಸಭೆಗೆ ಆ 13 ಅಂಗಡಿಗಳ ಮೂಲಕ ಬಾಡಿಗೆ ರೂಪದಲ್ಲಿ ಆದಾಯ ಬರುವಂತೆ ಮಾಡಲು ಮತ್ತು ಜಿಲ್ಲಾಧಿಕಾರಿ ಸ್ಥಿರೀಕರಣ ಪಡೆಯಲು ಉದ್ಘಾಟನೆ ಮಾಡಬೇಕಿರುವ ಕಾರಣ ಮಾಡಿದ್ದೇವೆ ಎಂದರು.

ಕುಶಾಲನಗರ ಪುರಸಭೆಯಾಗಿ ಮೇಲ್ದರ್ಜೆಗೆ ಏರಿದ ಮೇಲೆ ಮುಳ್ಳುಸೋಗೆ ಗ್ರಾಮ ಪಂಚಾಯಿತಿ ಈ ವ್ಯಾಪ್ತಿಗೆ ಸೇರಿರುವ ಕಾರಣ ಅಲ್ಲಿಯ ಆಸ್ತಿಗಳ ನಮೂನೆ 3 ಮಾಡಿಸಿಕೊಳ್ಳಬೇಕು. 11ಬಿ ಖಾತೆಯನ್ನು ನಮೂನೆ 3 ಮಾಡುವಂತಿಲ್ಲ ಎನ್ನುವ ಕಾನೂನು ಮೀರಿ ಮಧ್ಯವರ್ತಿಯೊಬ್ಬರ 22 ಖಾತೆಗಳನ್ನು ಒಂದೇ ದಿನ ಮಾಡಿಕೊಟ್ಟಿರುವ ಬಗ್ಗೆ ಪ್ರತಿಪಕ್ಷ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ಆ 22 ಫೈಲ್‌ಗಳು ಟಪಾಲ್‌ನಲ್ಲಿ ನೋಂದಣಿ ಮಾಡಿಲ್ಲ. ಇದು ಎಷ್ಟು ದೊಡ್ಡ ಮಟ್ಟದ ಭ್ರಷ್ಟಾಚಾರ ಎಂದು ವಿ.ಎಸ್.ಅನಂದಕುಮಾರ್ ವಿಷಯ ಪ್ರಸ್ತಾಪಿಸಿದರು.


ಅಧ್ಯಕ್ಷ ಜಯವರ್ಧನ ಉತ್ತರಿಸಿ, ಆ 22 ಖಾತೆಗಳ ಸ್ಥಳ ಪರಿಶೀಲನೆ ನಡೆಸಲು ಖುದ್ದು ಸದಸ್ಯರನ್ನು ಜತೆಯಲ್ಲಿ ಕರೆದುಕೊಂಡು ಹೋಗಿ ಪರಿಶೀಲಿಸಿ, ಅಕ್ರಮವೆಂದು ತಿಳಿದುಬಂದರೆ ಅಂತಹ ಖಾತೆಗಳ ನಮೂನೆ 3 ಅನ್ನು ಅಮಾನತು ಮಾಡುತ್ತೇವೆ ಎಂದು ಭರವಸೆ ನೀಡಿದರು.


ಅಕ್ರಮ ಖಾತೆ ಬದಲಾವಣೆ ಮೂಲಕ 3 ಕೋಟಿ ರೂ. ಪುರಸಭೆಗೆ ನಷ್ಟವಾಗಿದೆ ಎನ್ನುವ ಗಂಭೀರ ಆರೋಪವನ್ನು ಪ್ರಮೋದ್ ಮುತ್ತಪ್ಪ ಮಾಡಿದರು. ಆಡಳಿತ ಪಕ್ಷದ ಸದಸ್ಯರು ದಾಖಲೆಯಿದ್ದರೆ ಕೊಡಿ, ಸುಖಾಸುಮ್ಮನೆ ಆರೋಪ ಮಾಡುವುದು ತಪ್ಪು ಎಂದಾಗ ಸಭೆ ಕೆಲಕಾಲ ಗೊಂದಲದಲ್ಲಿತ್ತು. ಒಂದು ಹಂತದಲ್ಲಿ ಆಡಳಿತ ಪಕ್ಷದ ಡಿ.ಕೆ.ತಿಮ್ಮಪ್ಪ, ನಾಮ ನಿರ್ದೇಶಕ ಶಂಭುಲಿಂಗಪ್ಪ ಪ್ರತಿಪಕ್ಷಗಳ ಧೋರಣೆ ಖಂಡಿಸಿ ಸಭೆಯಿಂದ ಹೊರಹೋಗಲು ಸಿದ್ಧರಾದಾಗ ಅಧ್ಯಕ್ಷ ಜಯವರ್ಧನ ಸಮಾಧಾನ ಪಡಿಸಿದರು.


ಅಧ್ಯಕ್ಷರು ಆಡಳಿತ ಪಕ್ಷ ಮತ್ತು ಪ್ರತಿಪಕ್ಷಗಳ ಸದಸ್ಯರಲ್ಲಿ ಮನವಿ ಮಾಡಿ ಬಜೆಟ್‌ಗೆ ಅನುಮೋದನೆ ಪಡೆದುಕೊಂಡರು. ಪುರಸಭೆ ಸಿಬ್ಬಂದಿ ಮತ್ತು ಮಧ್ಯವರ್ತಿಗಳ ಹಾವಳಿಯಿಂದ ಎಲ್ಲ ಅಕ್ರಮಗಳು ಸಲೀಸಾಗಿ ನಡೆಯುತ್ತಿವೆ. ಚುನಾಯಿತ ಸದಸ್ಯರ ಮಾತಿಗೆ ಕಿಮ್ಮತ್ತು ದೊರೆಯುತ್ತಿಲ್ಲವೆಂದು ಕಾಂಗ್ರೆಸ್ ಸದಸ್ಯ ಶೇಕ್ ಖಲಿಮುಲ್ಲಾಖಾನ್ ಆರೋಪಿಸಿದರು.


ಉಪಾಧ್ಯಕ್ಷೆ ಸುರಾಯಬಾನು, ಮುಖ್ಯಾಧಿಕಾರಿ ಶಿವಪ್ಪ ನಾಯಕ್, ಸದಸ್ಯರಾದ ಜಗದೀಶ್, ಕೆ.ಜಿ.ಮನು, ಎಂ.ಕೆ.ದಿನೇಶ್, ಎಂ.ವಿ.ನಾರಾಯಣ, ಶೈಲಾ ಕೃಷ್ಣಪ್ಪ, ಜಯಲಕ್ಷ್ಮಿ, ಜಯಲಕ್ಷಮ್ಮ, ರೂಪ ಉಮಾಶಂಕರ್ ಇತರರು ಹಾಜರಿದ್ದರು.

Share This Article

ವಿದುರ ನೀತಿ: ಇಂತಹ ಜನರಿಂದ ದೂರ ಇರಿ.. ಇಲ್ಲವಾದ್ರೆ ಅಪಾಯಕ್ಕೆ ಸಿಲುಕುತ್ತೀರಿ! | Vidura Niti

Vidura Niti: ಮಹಾಭಾರತದಲ್ಲಿ ಪ್ರಮುಖರಲ್ಲಿ ವಿದುರ ಕೂಡ ಒಬ್ಬರು. ಬರೀ ಕೌರವ ಮತ್ತು ಪಾಂಡವರಿಗೆ ಮಾತ್ರ…

ಹುರಿದ ಜೋಳ ಅಥವಾ ಬೇಯಿಸಿದ ಜೋಳ ಇವೆರಡರಲ್ಲಿ ಆರೋಗ್ಯಕ್ಕೆ ಯಾವುದು ಬೆಸ್ಟ್​? ಇಲ್ಲಿದೆ ಮಾಹಿತಿ.. | Corn,

Corn: ಸಾಮಾನ್ಯವಾಗಿ ರಸ್ತೆಗಳ ಬದಿಯಲ್ಲಿ ಹುರಿದ ಜೋಳ ಮಾರಾಟ ಮಾಡುವುದನ್ನು ಅಧಿಕ ಗಮನಿಸಿರುತ್ತೀರಾ ಅಲ್ವಾ.. ಹಾಗೇ…