ಕಾಗವಾಡ: ಇಲ್ಲಿನ ಕೃಷ್ಣ ಶಿಕ್ಷಣ ಅಭಿವೃದ್ಧಿ ಸಮಿತಿಯಿಂದ ಮಹಾದೇವ ಬಳವಂತ ಭಂಡಾರೆ ಪ್ರಾಥಮಿಕ ಶಾಲೆಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ನೇತ್ರ ಉಚಿತ ತಪಾಸಣಾ ಶಿಬಿರದಲ್ಲಿ 155 ರೋಗಿಗಳು ಲಾಭ ಪಡೆದರು.
ಕೃಷ್ಣ ಶಿಕ್ಷಣ ಅಭಿವೃದ್ಧಿ ಸಮಿತಿಯ ಮಹಿಳಾ ಮಂಡಳ ಹಾಗೂ ಮಿರಜ ನಗರದ ಶಾಂತಿ ಸರೋಜ ಆಸ್ಪತ್ರೆಯ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಶಿಬಿರದಲ್ಲಿ ಪಾಲ್ಗೊಂಡಿದ್ದ 80 ರೋಗಿಗಳಿಗೆ ಕನ್ನಡಕ ಹಾಗೂ 40 ರೋಗಿಗಳು ಮೋತಿ ಬಿಂದು ಚಿಕಿತ್ಸೆಗೆ ಒಳಪಟ್ಟರು. ಮಿರಜ ನಗರದ ಶಾಂತಿ ಸರೋಜ ಆಸ್ಪತ್ರೆಯ ನೇತ್ರ ತಜ್ಞ ಡಾ. ಶರದ ಬೋಮಾಜ, ಡಾ. ಪೂಜಾ ಬೋಮಾಜ, ಡಾ. ರೋಹಿತ ಶಿರೋಡಕರ, ಡಾ. ನಿಧಿ ಪಟೇಲ್, ಸಂಗೀತಾ ಶೆಟ್ಟಿ, ಮಹಿಳಾ ಮಂಡಳದ ಅಧ್ಯಕ್ಷೆ ಸುಜಾತಾ ಯಂದಗೌಡರ, ಉಪಾಧ್ಯಕ್ಷೆ ಶೋಭಾ ನಾಂದ್ರೆ, ಜಯಶ್ರೀ ನಾಂದಣಿ, ವಿದುಲಾ ಪಾಟೀಲ, ವಿಮಲ ತುಪಳೆ, ವೈಜಯಂತಿ ಗಣೆ ಇತರರಿದ್ದರು.