ತನ್ನದೇ ಮನೆಗೆ ಕನ್ನ ಹಾಕಿದ್ದ ವ್ಯಕ್ತಿ ಅಂದರ್ !

Latest News

ಚಲಿಸುತ್ತಿದ್ದ ಟ್ರಾಕ್ಟರ್​ಗೆ ನೆಲಕ್ಕೆ ಬಾಗಿದ ವಿದ್ಯುತ್​ ಕಂಬದ ತಂತಿ ಸ್ಪರ್ಶ: ವಿದ್ಯುತ್ ಪ್ರವಹಿಸಿ ಸ್ಥಳದಲ್ಲೇ ಮೃತಪಟ್ಟ ಚಾಲಕ

ಬಾಗಲಕೋಟೆ: ಚಲಿಸುತ್ತಿದ್ದ ಟ್ರಾಕ್ಟರ್​ಗೆ ವಿದ್ಯುತ್​ ಹರಿದು ಚಾಲಕ ಮೃತಪಟ್ಟ ಘಟನೆ ಜಮಖಂಡಿ ತಾಲೂಕಿನ ಕಂಕಣವಾಗಿ ಗ್ರಾಮದಲ್ಲಿ ನಡೆದಿದೆ. ಶಿವಲಿಂಗ ಸೋಮರಾಯ ಸವಣೂರ (20) ವಿದ್ಯುತ್​...

ಮೇ 30ರ ವರೆಗೂ ಹರಿಯಲಿ ನೀರು: ಕರ್ನಾಟಕ ರೈತ ಹಿತರಕ್ಷಣಾ ವೇದಿಕೆ ಒತ್ತಾಯ

ಗಂಗಾವತಿ: ಎರಡನೇ ಬೆಳೆಗಾಗಿ ತುಂಗಭದ್ರಾ ಎಡದಂಡೆ ಕಾಲುವೆಗೆ ಮೇ 30ರವರೆಗೂ ನೀರು ಹರಿಸುವಂತೆ ಒತ್ತಾಯಿಸಿ ಕರ್ನಾಟಕ ರೈತರ ಹಿತರಕ್ಷಣಾ ವೇದಿಕೆ ಜಿಲ್ಲಾ ಘಟಕದ...

ಕಾಡಾ ಕಚೇರಿಗೆ ಮುತ್ತಿಗೆ ಹಾಕುವುದಾಗಿ ಎಚ್ಚರಿಸಿದ ಮಾಜಿ ಸಚಿವ ಶಿವರಾಜ್ ತಂಗಡಗಿ

ಕಾರಟಗಿ: ತುಂಗಭದ್ರಾ ಜಲಾಶಯದಲ್ಲಿ 96 ಟಿಎಂಸಿ ಅಡಿ ನೀರಿದ್ದರೂ ಎರಡನೇ ಬೆಳೆಗೆ ನೀರು ಬಿಡಲು ಸರ್ಕಾರ ಮೀನ ಮೇಷ ಎಣಿಸುತ್ತಿರುವುದು ನಾಚಿಕೆಗಢು. ಏ.20ರ...

ಐತಿಹಾಸಿಕ ಪಿಂಕ್​ಬಾಲ್, ಅಹರ್ನಿಶಿ ಟೆಸ್ಟ್​ನಲ್ಲಿ 106 ಕ್ಕೆ ಆಲ್​ ಔಟ್​ ಆದ ಬಾಂಗ್ಲಾ ಹುಲಿಗಳು: ಪ್ರಭುತ್ವ ಮೆರೆದ ಭಾರತದ ವೇಗಿಗಳು

ಕೋಲ್ಕತ: ಬಾಂಗ್ಲಾದೇಶದ ವಿರುದ್ಧ ಈಡನ್ ಗಾರ್ಡನ್​ನಲ್ಲಿ ನಡೆಯುತ್ತಿರುವ ಮೊದಲ ಅಹರ್ನಿಶಿ ಟೆಸ್ಟ್​ ಕ್ರಿಕೆಟ್​​ ಪಂದ್ಯದ ಮೊದಲದಿನ ಭಾರತ ಕ್ರಿಕೆಟ್​ ತಂಡ ಪ್ರಭುತ್ವ ಮೆರೆದಿದೆ....

ಹುಬ್ಬಳ್ಳಿ: ತನ್ನದೇ ಮನೆಯಲ್ಲಿದ್ದ ಚಿನ್ನಾಭರಣ, ಲಕ್ಷಾಂತರ ರೂ. ನಗದು ಕದ್ದು ಪರಾರಿಯಾಗಿದ್ದ ವ್ಯಕ್ತಿಯನ್ನು ಹುಬ್ಬಳ್ಳಿ ಗ್ರಾಮೀಣ ಠಾಣೆ ಪೊಲೀಸರು ಶನಿವಾರ ಬಂಧಿಸಿದ್ದಾರೆ.

ಭಂಡಿವಾಡ ಗ್ರಾಮದ ರಹಮಾನಸಾಬ ಚಂದುಸಾಬ ದಂಡಿನ (28) ಬಂಧಿತ ಆರೋಪಿ. ಆ.29ರಂದು ಮಧ್ಯಾಹ್ನ ತಮ್ಮದೇ ಮನೆಗೆ ಕನ್ನ ಹಾಕಿದ್ದ. ಯಾರೂ ಇಲ್ಲದ ವೇಳೆಯಲ್ಲಿ ಮುಂದಿನ ಬಾಗಿಲು ಮುರಿದು ಒಳಗೆ ನುಗ್ಗಿದ್ದ. ರೂಮಿನಲ್ಲಿದ್ದ ಟ್ರೆಜರಿ ಕೀಲಿ ಮುರಿದು 100 ಗ್ರಾಂನ 3 ಚೈನ್​ಗಳು, 2 ಬಳೆ ಮತ್ತಿತರ ಚಿನ್ನಾಭರಣ ಹಾಗೂ 3,10,000 ರೂ. ನಗದು ಕಳವು ಮಾಡಿಕೊಂಡು ಹೋಗಿದ್ದ.

ತನ್ನ ಹಿರಿಯ ಮಗ ರಹಮಾನಸಾಬ ಕಳ್ಳತನ ಮಾಡಿರುವ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದ ತಂದೆ ಚಂದುಸಾಬ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಇನ್ಸ್​ಪೆಕ್ಟರ್ ಎಂ.ಎಸ್. ಪಾಟೀಲ ನೇತೃತ್ವದ ತಂಡ ಅಣ್ಣಿಗೇರಿ ಅಂಬಿಗೇರ ಕ್ರಾಸ್​ನಲ್ಲಿ ಆರೋಪಿಯನ್ನು ಬಂಧಿಸಿದೆ. ಪಿಎಸ್​ಐ ಮಂಜುಳಾ ಸದಾರಿ, ಸಿಬ್ಬಂದಿ ಎಚ್.ಬಿ. ಐಹೊಳೆ, ಎಂ.ಎಫ್. ವಾಲೀಕಾರ, ವೈ.ಎಂ. ಕುಂಬಾರ, ಎ.ಎ. ಪಾಟೀಲ, ಮಹಾಂತೇಶ, ಭಗವತಿ ತಂಡದಲ್ಲಿದ್ದರು.

ಅಕ್ರಮ ಇ- ಟಿಕೆಟ್ ಮಾರಾಟ, ಬಂಧನ

ಹುಬ್ಬಳ್ಳಿ: ಬೆಳಗಾವಿಯಲ್ಲಿ ನಕಲಿ ಐಡಿ ಸೃಷ್ಟಿಸಿ ಹೆಚ್ಚು ಬೆಲೆಗೆ ರೈಲ್ವೆ ರಿಸರ್ವೆಶನ್ ಟಿಕೆಟ್ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ರೈಲ್ವೆ ರಕ್ಷಣಾ ದಳ (ಆರ್​ಪಿಎಫ್)ದವರು ಬಂಧಿಸಿ, 95 ಸಾವಿರ ರೂ. ಮೌಲ್ಯದ ಇ- ಟಿಕೆಟ್​ಗಳನ್ನು ವಶಪಡಿಸಿಕೊಂಡಿದ್ದಾರೆ.

ಬೆಳಗಾವಿ ಕಾಲೇಜು ರಸ್ತೆ ಸಬ್ನಿಸ್ ಕಾಂಪ್ಲೆಕ್ಸ್​ನಲ್ಲಿರುವ ಮೋಶಿನ್ ಖೋಜಾ ಮಾಲೀಕತ್ವದ ಪೇಸ್ ಟ್ರಾವೆಲ್ಸ್ ಮೇಲೆ ಬೆಳಗಾವಿಯ ಪೋಸ್ಟ್ ಕಮಾಂಡರ್ ಹಾಗೂ ಹುಬ್ಬಳ್ಳಿಯ ಕ್ರೖೆಂ ಇನ್ಸ್​ಪೆಕ್ಟರ್ ಜಂಟಿಯಾಗಿ ಆ.30ರದು ದಾಳಿ ನಡೆಸಿದರು. ಆ ವೇಳೆ ಅಂಗಡಿಯ ಮ್ಯಾನೇಜರ್ ಅಮೀರಖಾನ್ (28)ನನ್ನು ಬಂಧಿಸಿದ್ದಾರೆ.

ಅಂಗಡಿಯಲ್ಲಿ ಇದ್ದ 16,795 ರೂ. ಮೌಲ್ಯದ 10 ಟಿಕೆಟ್​ಗಳು ಹಾಗೂ 95,460 ರೂ. ಮೌಲ್ಯದ ಜೆರಾಕ್ಸ್ ಟಿಕೆಟ್​ಗಳನ್ನು ವಶಪಡಿಸಿಕೊಳ್ಳಲಾಗಿದೆ. ನಕಲಿ ಐಡಿಗಳನ್ನು ಸೃಷ್ಟಿಸಿಕೊಂಡು ಆನ್​ಲೈನ್ ಮುಖಾಂತರ ಇ- ಟಿಕೆಟ್ ಬುಕ್ ಮಾಡಿ ಗ್ರಾಹಕರಿಗೆ ಹೆಚ್ಚು ಬೆಲೆಗೆ ಮಾರಾಟ ಮಾಡುತ್ತಿದ್ದ ಕುರಿತು ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಲಾಗಿದೆ.

ಬೆಳಗಾವಿ ಆರ್​ಪಿಎಫ್ ಠಾಣೆಯಲ್ಲಿ ರೈಲ್ವೆ ಕಾಯ್ದೆ ಕಲಂ 143 ಅಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ಆರ್​ಪಿಎಫ್ ಪೊಲೀಸರು ತಿಳಿಸಿದ್ದಾರೆ.

ಇಬ್ಬರು ಚಾಲಕರಿಗೆ ಗಂಭೀರ ಗಾಯ

ಧಾರವಾಡ: ಟಾಟಾ ಏಸ್ ಮತ್ತು ಕ್ಯಾಂಟರ್ ಡಿಕ್ಕಿಯಾಗಿ ಇಬ್ಬರು ಚಾಲಕರು ಗಂಭೀರವಾಗಿ ಗಾಯಗೊಂಡ ಘಟನೆ ಸಮೀಪದ ಕೆಲಗೇರಿ ಬಳಿಯ ಬೈಪಾಸ್ ರಸ್ತೆಯಲ್ಲಿ ಶನಿವಾರ ಬೆಳಗ್ಗೆ ಸಂಭವಿಸಿದೆ.

ವಾಹನ ಚಾಲಕರಾದ ಮಹಾರಾಷ್ಟ್ರ ಮೂಲದ ಆನಂದ ಸಿಂಗ್ ಮತ್ತು ಕಲಘಟಗಿ ತಾಲೂಕಿನ ಹಿರೇಹೊನ್ನಳ್ಳಿ ಗ್ರಾಮದ ಮಂಜುನಾಥ ಗಾಯಗೊಂಡವರು. ಡಿಕ್ಕಿಯ ರಭಸಕ್ಕೆ ಎರಡೂ ವಾಹನಗಳು ನಜ್ಜುಗುಜ್ಜಾಗಿವೆ. ಗಾಯಾಳುಗಳನ್ನು ಜಿಲ್ಲಾ ಆಸ್ಪತ್ರೆಗೆ ಸೇರಿಸಲಾಗಿದ್ದು, ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಹಿಳೆ ಸಾವು

ಧಾರವಾಡ: ಜಮೀನಿನಲ್ಲಿ ಬಿದ್ದಿದ್ದ ವಿದ್ಯುತ್ ತಂತಿಯನ್ನು ತುಳಿದು ಮಹಿಳೆ ಮೃತಪಟ್ಟ ಘಟನೆ ಇಲ್ಲಿನ ನವಲೂರು ಗ್ರಾಮ ವ್ಯಾಪ್ತಿಯಲ್ಲಿ ಶನಿವಾರ ಸಂಜೆ ನಡೆದಿದೆ. ಗ್ರಾಮದ ಮಲ್ಲವ್ವ ಭೀಮಪ್ಪ ಹೊಳೆಬಸಪ್ಪನವರ (55) ಮೃತಪಟ್ಟ ಮಹಿಳೆ. ನವಲೂರಿನ ಜಮೀನೊಂದರಲ್ಲಿ ಕೂಲಿ ಕೆಲಸಕ್ಕೆ ಹೋಗಿದ್ದ ವೇಳೆ ದುರ್ಘಟನೆ ನಡೆದಿದೆ. ಜಮೀನಿನ ತಂತಿ ಬೇಲಿಯ ಮೇಲೆ ಕೊಳವೆಬಾವಿಗೆ ವಿದ್ಯುತ್ ಪೂರೈಸುತ್ತಿದ್ದ ತಂತಿ ಹರಿದು ಬಿದ್ದಿತ್ತು. ತಂತಿ ಬೇಲಿ ದಾಟುತ್ತಿದ್ದ ವೇಳೆ ವಿದ್ಯುತ್ ಪ್ರವಹಿಸಿ ಮಲ್ಲವ್ವ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ವೇಳೆ ಅವರ ಜೊತೆಗಿದ್ದ ಮಲ್ಲವ್ವ ತಿಪ್ಪಣ್ಣವರ ಎಂಬುವರಿಗೆ ಗಾಯಗಳಾಗಿದ್ದು, ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಕುರಿತು ವಿದ್ಯಾಗಿರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

- Advertisement -

Stay connected

278,668FansLike
576FollowersFollow
611,000SubscribersSubscribe

ವಿಡಿಯೋ ನ್ಯೂಸ್

ಪಿಂಕ್​ ಬಾಲ್​ ಟೆಸ್ಟ್​: ಐತಿಹಾಸಿಕ ಪಂದ್ಯದಲ್ಲಿ ಟಾಸ್​ ಗೆದ್ದು ಸಂಭ್ರಮಿಸಿದ...

ಕೋಲ್ಕತ: ಐತಿಹಾಸಿಕ ಪಿಂಕ್​ ಬಾಲ್​ ಟೆಸ್ಟ್​ ಪಂದ್ಯ ಕೆಲವೇ ಕ್ಷಣಗಳಲ್ಲಿ ಆರಂಭವಾಗಲಿದ್ದು, ಟಾಸ್​ ಗೆದ್ದ ಬಾಂಗ್ಲಾದೇಶ ಭಾರತದ ವಿರುದ್ಧ ಬ್ಯಾಟಿಂಗ್​ ಆಯ್ದುಕೊಳ್ಳುವ ಮೂಲಕ ಚೊಚ್ಚಲ ಹಗಲು-ಇರುಳು ಪಂದ್ಯದಲ್ಲೇ ಟಾಸ್​ ಗೆದ್ದು...

VIDEO| ಡಿಆರ್​ಐ ಅಧಿಕಾರಿಗಳ ದಾಳಿ ವೇಳೆ 6ನೇ ಮಹಡಿಯಿಂದ ಕೆಳಗೆ...

ಕೋಲ್ಕತ: ಪಶ್ಚಿಮ ಬಂಗಾಳದ ಕಂದಾಯ ಗುಪ್ತಚರ ನಿರ್ದೇಶನಾಲಯ(ಡಿಆರ್​ಐ) ಅಧಿಕಾರಿಗಳು ಬುಧವಾರ ಮಧ್ಯಾಹ್ನ ಕೇಂದ್ರ ಕೋಲ್ಕತದ ಬೆಂಟಿಂಕ್ ಸ್ಟ್ರೀಟ್​ನಲ್ಲಿನ ಖಾಸಗಿ ಕಚೇರಿಯೊಂದಕ್ಕೆ ದಾಳಿ ನಡೆಸಿದ್ದ ವೇಳೆ ಕಟ್ಟಡದ ಆರನೇ ಮಹಡಿಯಿಂದ ನೋಟಿನ...

VIDEO| ಹಾಡುಗಳ ಮೂಲಕವೇ ನಿರೀಕ್ಷೆ ಮೂಡಿಸಿದ್ದ ‘ಮುಂದಿನ ನಿಲ್ದಾಣ’ ಚಿತ್ರದ...

ಬೆಂಗಳೂರು: ಪೋಸ್ಟರ್ ಮತ್ತು ಹಾಡುಗಳ ಮೂಲಕ ನಿರೀಕ್ಷೆ ಮೂಡಿಸಿದ್ದ ‘ಮುಂದಿನ ನಿಲ್ದಾಣ’ ಚಿತ್ರತಂಡ ಇತ್ತೀಚೆಗಷ್ಟೇ ಟ್ರೇಲರ್ ಬಿಡುಗಡೆ ಮಾಡಿಕೊಂಡಿದೆ. ಚಿತ್ರದ ಪ್ರಮುಖ ಪಾತ್ರಗಳಲ್ಲಿ ದತ್ತಣ್ಣ, ಪ್ರವೀಣ್ ತೇಜ್, ರಾಧಿಕಾ ನಾರಾಯಣ್ ಹಾಗೂ ಅನನ್ಯಾ...

VIDEO: ಶವಪೆಟ್ಟಿಗೆಯಿಂದ ಎದ್ದುಕುಳಿತ ಮದುಮಗಳು; ಇದು ಮದುವೆನಾ, ಅಂತಿಮ ಸಂಸ್ಕಾರನಾ...

ಈ ಜಗತ್ತಿನಲ್ಲಿ ಎಂತೆಂತಾ ವಿಚಿತ್ರ ವ್ಯಕ್ತಿಗಳು ಇರುತ್ತಾರೆ ಎಂಬುದನ್ನು ಊಹಿಸಲೂ ಸಾಧ್ಯವಿಲ್ಲ. ಇಲ್ಲೊಬ್ಬಳು ಮದುಮಗಳು ತನ್ನ ವಿಶಿಷ್ಟ ನಡೆಯಿಂದ ಸುದ್ದಿಯಾಗಿದ್ದಾಳೆ. ಮದುವೆ ಪ್ರತಿ ವ್ಯಕ್ತಿಯ ಜೀವನದಲ್ಲಿ ವಿಶೇಷ ಸಂದರ್ಭ. ನಾವು ಹೀಗೇ ವಿವಾಹವಾಗಬೇಕು ಎಂದು...

VIDEO: ಮೃತ ವ್ಯಕ್ತಿಯ ಶ್ವಾಸಕೋಶವನ್ನು ಬೇರೊಬ್ಬರಿಗೆ ಕಸಿ ಮಾಡಲು ಹೊರತೆಗೆದ...

ಬೀಜಿಂಗ್​: ಧೂಮಪಾನ ಆರೋಗ್ಯಕ್ಕೆ ಹಾನಿಕರ ಎಂದು ಅದರ ಪ್ಯಾಕೆಟ್​ ಮೇಲೆಯೇ ಬರೆದಿರುತ್ತದೆ. ಧೂಮಪಾನದಿಂದ ಶ್ವಾಸಕೋಶಗಳು ಕಪ್ಪಾಗುತ್ತವೆ ಎಂಬುದನ್ನೂ ವೈದ್ಯ ಲೋಕ ಸಾಬೀತು ಪಡಿಸಿದೆ. ಅದನ್ನು ನೋಡಿ ಕೂಡ ಅನೇಕರು ಸ್ಮೋಕ್​ ಮಾಡುವುದನ್ನು ಮುಂದುವರಿಸುತ್ತಾರೆ....

VIDEO: ಹೆಬ್ಬಾವು-ಚಿರತೆ ನಡುವಿನ ಈ ಭಯಾನಕ ಕಾಳಗ ನೋಡಿದರೆ ಮೈನವಿರೇಳದೆ...

ಕೀನ್ಯಾ: ಹಾವು-ಮುಂಗುಸಿ, ಬೆಕ್ಕು-ಹಾವು, ಎರಡು ಹುಲಿಗಳ ನಡುವಿನ ಕಾದಾಟದ ವಿಡಿಯೋಗಳನ್ನು ನೋಡಿದ್ದೇವೆ. ಇಂತಹ ವಿಡಿಯೋಗಳು ನೋಡೋದಕ್ಕೆ ಸಿಕ್ಕಾಪಟೆ ರೋಚಕವಾಗಿರುತ್ತವೆ ಕೂಡ. ಈಗ ಅಂಥದ್ದೇ ಒಂದು ವಿಡಿಯೋ ವೈರಲ್​ ಆಗಿದ್ದು ಅದನ್ನು ನೋಡಿದರೆ ಮೈನವಿರೇಳದೆ...