ತಡಬಡಾಯಿಸಿದ ಅಧಿಕಾರಿಗಳಿಗೆ ತರಾಟೆ

blank

ಸಾಗರ: ಉದ್ಯೋಗ ಖಾತ್ರಿ ಯೋಜನೆಯ ಮುಂದಿನ ಗುರಿಯ ಕುರಿತಂತೆ ವಿವರಣೆ ಕೇಳಿದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್​ರಾಜ್ ಸಚಿವ ಕೆ.ಎಸ್.ಈಶ್ವರಪ್ಪ, ಅಂಕಿ ಅಂಶ ನೀಡಲು ತಡಬಡಾಯಿಸಿದ ಅಧಿಕಾರಿಗಳು ತರಾಟೆಗೆ ತೆಗೆದುಕೊಂಡರು. ನರೇಗಾ ಯೋಜನೆಯಲ್ಲಿ ಎಲ್ಲ ಕಾಮಗಾರಿ ಕೈಗೆತ್ತಿಕೊಳ್ಳುವ ಅವಕಾಶವಿದೆ. ಹಣದ ಕೊರತೆಯಿಲ್ಲ. ಜನರು ಕೆಲಸಕ್ಕೆ ಬರುತ್ತಿದ್ದಾರೆ. ಹಾಗಿದ್ದಾಗ ನಿಮ್ಮಲ್ಲಿ ಇಚ್ಚಾಶಕ್ತಿ ಏಕಿಲ್ಲ ಎಂದು ತಾಪಂ ಇಒ, ಇಂಜಿನಿಯರ್ ಮತ್ತು ನರೇಗಾ ಸಂಬಂಧಿಸಿದ ಅಧಿಕಾರಿಗಳನ್ನು ಪ್ರಶ್ನಿಸಿದರು.

ಭಾನುವಾರ ತಾಲೂಕು ಪಂಚಾಯಿತಿಯಲ್ಲಿ ಏರ್ಪಡಿಸಿದ್ದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ, ತಾಲೂಕಿನಲ್ಲಿ ಒಟ್ಟು 108 ಕೆರೆಗಳನ್ನು ನರೇಗಾ ಕಾಮಗಾರಿಯಲ್ಲಿ ಕೈಗೆತ್ತಿಕೊಳ್ಳಲಾಗುತ್ತಿದ್ದು ದಿನಕ್ಕೆ 8,278 ಮಾನವ ದಿನಗಳನ್ನು ಬಳಸಲಾಗುತ್ತಿದೆ. ಜೂನ್ 5ರ ಒಳಗೆ 35 ಕೆರೆಗಳ ಹೂಳೆತ್ತುವ ಕಾಮಗಾರಿ ಮುಕ್ತಾಯಗೊಳ್ಳಬೇಕು. ಅರಣ್ಯ ಇಲಾಖೆಯವರು ಸುತ್ತಲೂ ಗಿಡಗಳನ್ನು ನೆಟ್ಟು ಅದಕ್ಕೆ ಟ್ರೀ ಗಾರ್ಡ್ ಮಾಡಬೇಕು ಎಂದು ಸೂಚಿಸಿದರು.

ಕುಡಿಯುವ ನೀರಿನ ಸಮಸ್ಯೆ ಕುರಿತು ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಇಂಜಿನಿಯರ್ ಅವರನ್ನು ಪ್ರಶ್ನಿಸಿದಾಗ ಸಾಗರದಲ್ಲಿ 268 ಹಳ್ಳಿಗಳಿವೆ. 182 ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ ಎಂದಾಗ ಸಚಿವರು ಹೌಹೌರಿದರು.

ಮಧ್ಯಪ್ರವೇಶಿಸಿ ಮಾತನಾಡಿದ ಶಾಸಕ ಹರತಾಳು ಹಾಲಪ್ಪ, ಈಗಾಗಲೇ ಟಾಸ್ಕ್​ಫೋರ್ಸ್ ಸಭೆ ಕರೆದು ಎಲ್ಲ ವಿವರಗಳನ್ನು ಪಡೆದಿದ್ದೇನೆ. ತುರ್ತು ಸಮಸ್ಯೆ ಇರುವ ಪ್ರದೇಶಗಳಿಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದಾಗ ಸಚಿವರು, ವಿವರಣೆ ಗೊತ್ತಿಲ್ಲದ, ಪೂರ್ವಸಿದ್ಧತೆ ಇಲ್ಲದ ಅಧಿಕಾರಿಗಳು ಏಕೆ ಸಭೆಗೆ ಬರುತ್ತೀರಿ ಎಂದು ಎಂಜಿನಿಯರ್​ಗೆ ಬೆವರಿಳಿಸಿದರು.

ಸಭೆಯ ಮಧ್ಯದಲ್ಲಿ ಕೆಲ ವಿಚಾರಗಳಿಗೆ ತಾಪಂ ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ ವಿವರ ನೀಡಲು ಸನ್ನದ್ಧರಾದಾಗ ಸಚಿವ ಈಶ್ವರಪ್ಪ, ತಾವು ಅಧ್ಯಕ್ಷರಾಗಿ ಈ ಎಲ್ಲ ಸಮಸ್ಯೆಗಳ ಬಗ್ಗೆ ಗಮನ ಹರಿಸಲು ಆಗಿಲ್ಲವೇ, ಏನು ಮಾಡುತ್ತಿದ್ದೀರಿ? ಇನ್ನೂ ನಾನೇ ಎಲ್ಲ ಸರಿ ಮಾಡುತ್ತೇನೆ ಎಂದು ಹೇಳಿದರು.

ಕೆರೆ ಕಾಯಲ್ಪಕ್ಕೆ ಸಂತಸ: ಸಾಗರ ತಾಲೂಕಿನ ಕೆಳದಿ ಹೋಬಳಿ ಅದರಂತೆ ಗ್ರಾಮದ ಆನೆ ಒಡ್ಡಿನಕೆರೆ ಮತ್ತು ಅದರಂತೆ ತೋಟದ ಮೇಲಿನ ಕೆರೆ ನರೇಗಾ ಯೋಜನೆಯಲ್ಲಿ ಹೂಳೆತ್ತುವ ಕಾಮಗಾರಿ ವೀಕ್ಷಿಸಿ ಸಚಿವ ಕೆ.ಎಸ್.ಈಶ್ವರಪ್ಪ ಸಂತಸ ವ್ಯಕ್ತಪಡಿಸಿದರು. ಫಲಾನುಭವಿಗಳ ಜತೆ ಮಾತುಕತೆ ನಡೆಸಿ, ಒಟ್ಟು 258 ಜನರ ಎರಡು ಕಾಮಗಾರಿಗಳಲ್ಲಿ ತೊಡಗಿದ್ದೀರಿ, ಕಳೆದ ಒಂದೂವರೆ ತಿಂಗಳಲ್ಲಿ 6,260 ಮಾನವ ದಿನಗಳನ್ನು ಬಳಸಿಕೊಂಡಿದ್ದೀರಿ, ಇನ್ನೂ ಹೆಚ್ಚಿನ ದಿನಗಳ ಕೆಲಸ ಕೊಡುತ್ತೇವೆ. ಯಾವುದೇ ಕಾರಣಕ್ಕೂ ಕಾಮಗಾರಿಗೆ ಯಂತ್ರಗಳನ್ನು ಬಳಸಿಕೊಳ್ಳುವಂತಿಲ್ಲ ಎಂದರು. ಎರಡೂ ಕೆರೆಯಲ್ಲಿ ಕಾಯಕ ಮಾಡುತ್ತಿರುವ ಫಲಾನುಭವಿಗಳು ಶಾಸಕರ ಹರತಾಳು ಹಾಲಪ್ಪ ಮುಖಾಂತರ ಕರೊನಾ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ತಮ್ಮ ಕೂಲಿ ಹಣದ ಸ್ವಲ್ಪ ಧನವನ್ನು ಪರಿಹಾರ ರೂಪವಾಗಿ ನೀಡಿದರು.

ಸಚಿವರು ಮಂಗನ ಕಾಯಿಲೆ, ಕರೊನಾ ಪರಿಸ್ಥಿತಿ ಕುರಿತಂತೆ ವಿವರಣೆ ಪಡೆದುಕೊಂಡರು. ಜಿಪಂ ಸಿಇಒ ಎಂ.ಎಲ್.ವೈಶಾಲಿ, ಸಾಗರ ಉಪವಿಭಾಗಾಧಿಕಾರಿ ಡಾ. ಎಲ್.ನಾಗರಾಜ್, ತಾಪಂ ಇಒ ಪುಷ್ಪಾ ಎಂ.ಕಮ್ಮಾರ್, ಉಪಾಧ್ಯಕ್ಷ ಅಶೋಕ ಬರದವಳ್ಳಿ, ಕಲಸೆ ಚಂದ್ರಪ್ಪ, ಜಿಪಂ ಸದಸ್ಯ ಭೀಮನೇರಿ ಶಿವಪ್ಪ, ನಗರಸಭೆ ಸದಸ್ಯ ಟಿ.ಡಿ.ಮೇಘರಾಜ್ ಇತರರು ಇದ್ದರು.

Share This Article

ನಿಮಗೆ ದೃಷ್ಟಿ ದೋಷವಾಗಿದ್ರೆ..ನಿಂಬೆ ಹಣ್ಣಿನಿಂದ ಹೀಗೆ ಮಾಡಿದರೆ ಸಾಕು! Drishti Dosha

Drishti Dosha: ಸಾಮಾನ್ಯವಾಗಿ ಕೆಟ್ಟ ದೃಷ್ಟಿ ಬಿದ್ದಿದೆ ಎಂಬ ಪದವನ್ನು ನಾವು ಸಾಮಾನ್ಯವಾಗಿ ಕೇಳುತ್ತಿರುತ್ತೇವೆ. ಮನೆ ವ್ಯವಹಾರ,…

ನೀವು ಈ ದಿನಾಂಕಗಳಲ್ಲಿ ಹುಟ್ಟಿದ್ದೀರಾ? ಹಾಗಾದರೆ 2025ರಲ್ಲಿ ನಿಮಗೆ ಅದೃಷ್ಟೋ ಅದೃಷ್ಟ… ಹಣದ ಸುಗ್ಗಿ ಗ್ಯಾರಂಟಿ! Numerology

Numerology : ಸಾಮಾನ್ಯವಾಗಿ ನಮ್ಮ ನಡುವೆ ಜಾತಕವನ್ನು ನಂಬುವಂತಹ ಅನೇಕ ಜನರಿದ್ದಾರೆ. ಅದೇ ರೀತಿ ನಂಬದವರು…

Health Tips: ಊಟ, ತಿಂಡಿ ತಿಂದ ತಕ್ಷಣ ಅಪ್ಪಿತಪ್ಪಿಯೂ ಈ 5 ಕೆಲಸಗಳನ್ನು ಮಾಡಬೇಡಿ!

Health Tips: ಸಾಮಾನ್ಯವಾಗಿ ಊಟ ಮಾಡುವಾಗ ತಿಂಡಿ ತಿಂದು ತಿಳಿಯದೆ ಸಣ್ಣಪುಟ್ಟ ತಪ್ಪುಗಳನ್ನು ಮಾಡುತ್ತೇವೆ.  ಊಟವಾದ…