ತಂಬಾಕು ಕಾಯ್ದೆ ಉಲ್ಲಂಘನೆ

ಹಾವೇರಿ: ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮದಡಿ ಜಿಲ್ಲಾ ತಂಬಾಕು ನಿಯಂತ್ರಣ ಕೋಶ ಹಾಗೂ ವಿವಿಧ ಅಧಿಕಾರಿಗಳನ್ನೊಳಗೊಂಡ ತಂಡ ಗುರುವಾರವೂ ದಾಳಿ ಮುಂದು ವರಿಸಿ ಹಾನಗಲ್ಲ ರಸ್ತೆಯಲ್ಲಿನ 13 ಅಂಗಡಿ ಗಳಿಂದ 3,600 ರೂ. ದಂಡ ವಸೂಲಿ ಮಾಡಿದೆ. ತಂಬಾಕು ನಿಯಂತ್ರಣ ಕಾಯ್ದೆ ವಿರುದ್ಧವಾಗಿ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುವ ಮತ್ತು ನೇರ ಪರೋಕ್ಷವಾಗಿ ತಂಬಾಕು ಜಾಹೀರಾತು ಪ್ರದರ್ಶನ, ಶಾಲಾ-ಕಾಲೇಜ್ ಆವರಣದ 100 ಮೀಟರ್ ಅಂತರದೊಳಗೆ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುತ್ತಿರುವ ಅಂಗಡಿ ಮಾಲೀಕರಿಗೆ ನೋಟಿಸ್ ಜಾರಿಗೊಳಿಸಿದೆ. ತಂಡದಲ್ಲಿ ಜಿಲ್ಲಾ ತಂಬಾಕು ನಿಯಂತ್ರಣ ಸಲಹೆಗಾರರಾದ ಡಾ. ಸಂತೋಷ ದಡ್ಡಿ, ದಾದಾಪೀರ ಹುಲಿಕಟ್ಟಿ, ನಗರ ಪೊಲೀಸ್ ಠಾಣೆ ಸಿಬ್ಬಂದಿ ವೈ.ಡಿ. ಹಾವನೂರ, ಆಹಾರ ಸುರಕ್ಷತಾಧಿಕಾರಿ ಜಿ.ವಿ. ಕುಂದಗೋಳ, ಪಿ.ಎನ್. ಪಾಟೀಲ, ಮಹೇಶ ಕುಮ್ಮೂರ ಇತರರಿದ್ದರು.

Leave a Reply

Your email address will not be published. Required fields are marked *