25.5 C
Bangalore
Monday, December 16, 2019

ತಂದೆ-ಮಗನ ಭೀಕರ ಹತ್ಯೆ

Latest News

ರಾಜರಾಜೇಶ್ವರಿ ನಗರದ ಸಮಸ್ಯೆ ಬಗೆಹರಿಸುವಂತೆ ಬಿಜೆಪಿ ನಾಯಕರ ಬೆನ್ನುಹತ್ತಿರುವ ಅನರ್ಹ ಶಾಸಕ ಮುನಿರತ್ನ

ಬೆಂಗಳೂರು: ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಸಮಸ್ಯೆ ಬಗೆ ಹರಿಸಿ ಶೀಘ್ರವೇ ಉಪ ಚುನಾವಣೆ ನಡೆಯುವಂತೆ ಮಾಡಬೇಕು ಎಂದು ಅನರ್ಹ ಶಾಸಕ ಮುನಿರತ್ನ...

ಪೌರತ್ವ ತಿದ್ದುಪಡಿ ಕಾಯ್ದೆ, ಎನ್​ಆರ್​ಸಿ ವಿರುದ್ಧ ಕೋಲ್ಕತ್ತದಲ್ಲಿ ಬೃಹತ್​ ರ‍್ಯಾಲಿ; ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವ

ಕೋಲ್ಕತ್ತ: ಪೌರತ್ವ ತಿದ್ದುಪಡಿ ಕಾಯ್ದೆ ಈಗಾಗಲೇ ದೇಶದ ಕೆಲವು ರಾಜ್ಯಗಳಲ್ಲಿ ಕಿಡಿ ಹೊತ್ತಿಸಿದೆ. ದೇಶದ ಈಶಾನ್ಯ ಭಾಗದಲ್ಲಿ ಪ್ರಾರಂಭವಾದ ಪ್ರತಿಭಟನೆ ಈಗ ದೆಹಲಿ, ಉತ್ತರ ಪ್ರದೇಶ...

ಮುಸ್ಲಿಂರಿಂದ ಅಯ್ಯಪ್ಪ ಮಾಲಾಧಾರಿಗಳಿಗೆ ಅನ್ನದಾನ

* ಸಾಮರಸ್ಯಕ್ಕೆ ಮುನ್ನುಡಿ ಬರೆದ ಕಾರ್ಯಕ್ರಮವಿಜಯವಾಣಿ ಸುದ್ದಿಜಾಲ ಬಳ್ಳಾರಿನಗರದ ಹೊಸಪೇಟೆ ರಸ್ತೆಯಲ್ಲಿರುವ ಏಳು ಮಕ್ಕಳ ದೇವಸ್ಥಾನದಲ್ಲಿ ಅಯ್ಯಪ್ಪ ಮಾಲಾಧಾರಿಗಳಿಗೆ ಸೋಮವಾರ ಮುಸ್ಲಿಂರು ಊಟ...

ಒಂದೂವರೆ ತಾಸು ಶಸ್ತ್ರಚಿಕಿತ್ಸೆ ನಡೆಸಿ ಎದೆಗೆ ನಾಟಿದ್ದ ಕಬ್ಬಿಣ ರಾಡ್​ ಹೊರತೆಗೆದ ವೈದ್ಯರು: ಪ್ರಾಣಾಪಾಯದಿಂದ ವ್ಯಕ್ತಿ ಪಾರು

ರಾಯಚೂರು: ಎದೆಗೆ ಕಬ್ಬಿಣದ ರಾಡ್ ತೂರಿದ್ದ ವ್ಯಕ್ತಿಗೆ ರಾಯಚೂರಿನ ಖಾಸಗಿ ಆಸ್ಪತ್ರೆಯ ವೈದ್ಯರು ಸತತ ಒಂದೂವರೆ ತಾಸು ಶಸ್ತ್ರಚಿಕಿತ್ಸೆ ನಡೆಸಿ ಪ್ರಾಣಾಪಾಯದಿಂದ ಪಾರು...

ಹಿಂದು ರಾಷ್ಟ್ರದಲ್ಲಿ ಹಿಂದುಗಳ ಮೇಲೆ ದೌರ್ಜನ್ಯ ಮಿತಿಮೀರಿದೆ

ಕೊಡಗು: ಹಿಂದು ರಾಷ್ಟ್ರದಲ್ಲಿ ಹಿಂದುಗಳ ಮೇಲೆ ದೌರ್ಜನ್ಯ ಮಿತಿಮೀರಿದೆ ಎಂದು ವಕೀಲ ಪಿ. ಕೃಷ್ಣಮೂರ್ತಿ ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಹಿಂದು ಜನಜಾಗೃತಿ ಸಮಿತಿಯಿಂದ ಕುಶಾಲನಗರದ ಗಾಯತ್ರಿ ಕಲ್ಯಾಣ...

ಕಲಘಟಗಿ: ಹಳೇ ದ್ವೇಷದ ಕಾರಣದಿಂದ ಒಂದು ಗುಂಪು ಇನ್ನೊಂದು ಗುಂಪಿನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ, ತಂದೆ-ಮಗನನ್ನು ಭೀಕರವಾಗಿ ಕೊಲೆಗೈದು, ಐದಾರು ಜನರನ್ನು ತೀವ್ರ ಗಾಯಗೊಳಿಸಿರುವ ಘಟನೆ ಕಲಘಟಗಿ ತಾಲೂಕು ಜಮ್ಮಿಹಾಳ ಗ್ರಾಮದಲ್ಲಿ ಸೋಮವಾರ ರಾತ್ರಿ ನಡೆದಿದೆ.

- Advertisement -

ತೀವ್ರ ಗಾಯಗೊಂಡಿದ್ದ ಇಲ್ಲಿಯ ಪಿಎಲ್​ಡಿ ಬ್ಯಾಂಕ್ ನಿರ್ದೇಶಕ ವೀರಭದ್ರಪ್ಪ ಬಸವಣ್ಣೆಪ್ಪ ಸತ್ತೂರ (55) ಸ್ಥಳದಲ್ಲೇ ಮೃತಪಟ್ಟಿದ್ದರೆ, ಆತನ ಪುತ್ರ ರವಿಕುಮಾರ ಸತ್ತೂರ (20) ಮಂಗಳವಾರ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ. ಗಾಯಗೊಂಡಿರುವ ಐದಾರು ಜನರನ್ನು ಹುಬ್ಬಳ್ಳಿ ಕಿಮ್್ಸ ಹಾಗೂ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ವೀರಭದ್ರಪ್ಪ ಸತ್ತೂರನ ಕೊಲೆ ಮುಖ್ಯವಾಗಿ ರಾಜಕೀಯ ಕಾರಣಕ್ಕೆ ನಡೆದಿದೆ ಎಂದು ಹೇಳಲಾಗಿದೆ. ವೀರಭದ್ರಪ್ಪ ಸತ್ತೂರ ದೇವಿಲಿಂಗನಕೊಪ್ಪ ಗ್ರಾ.ಪಂ. ಮಾಜಿ ಅಧ್ಯಕ್ಷ. ಕಲಘಟಗಿ ಪಿಎಲ್​ಡಿ ಬ್ಯಾಂಕ್​ನ ಹಾಲಿ ನಿರ್ದೇಶಕ. ಹಲವು ವರ್ಷಗಳಿಂದ ಗ್ರಾಮದ ಬಸವಣ್ಣ ದೇವರ ಗುಡಿಯ ಪೂಜಾರಿಕೆ, ಮನೆ ಮುಂದೆ ಹಾದು ಹೋಗಿರುವ ರಸ್ತೆ ಮತ್ತು ರಾಜಕೀಯ ವೈಷಮ್ಯದ ಹಿನ್ನೆಲೆಯಲ್ಲಿ ಅಕ್ಕಿ, ಸತ್ತೂರ ಮತ್ತು ಪೂಜಾರ ಕುಟುಂಬಗಳ ನಡುವೆ ಜಗಳವಾಗುತ್ತಿತ್ತು.

ಸೋಮವಾರ ಸಂಜೆ ವೀರಭದ್ರಪ್ಪ ದನಗಳನ್ನು ಹೊಡೆದುಕೊಂಡು ಬಸವರಾಜ ಶಿವಪ್ಪ ಅಕ್ಕಿ, ಬಸವರಾಜ ಸಂಗಪ್ಪ ಅಕ್ಕಿ ಅವರ ಮನೆ ಎದುರು ಹಾದು ಹೋಗುತ್ತಿದ್ದಾಗ ಏನೋ ಕಾರಣಕ್ಕೆ ಮಾತಿಗೆ ಮಾತು ಬೆಳೆದಿತ್ತು. ಈ ಸಂದರ್ಭದಲ್ಲಿ ಬಸವರಾಜ ಶಿವಪ್ಪ ಅಕ್ಕಿ, ಬಸವರಾಜ ಸಂಗಪ್ಪ ಅಕ್ಕಿ ಮತ್ತು ಇತರರು ತಲವಾರ್, ಕಬ್ಬಿಣದ ಸಲಾಕೆಯಂಥ ಮಾರಕಾಸ್ತ್ರಗಳನ್ನು ಹಿಡಿದು ವೀರಭದ್ರಪ್ಪನ ಬೆನ್ನಟ್ಟಿಕೊಂಡು ಹೋದರು ಎನ್ನಲಾಗಿದೆ.

ವೀರಭದ್ರಪ್ಪ ಸತ್ತೂರನ ಮನೆಗೆ ನುಗ್ಗಿದ ಗುಂಪು ಹಲ್ಲೆ ನಡೆಸುತ್ತ ಆತನನ್ನು ಎಳೆದುಕೊಂಡು ನಿರ್ಜನ ಪ್ರದೇಶಕ್ಕೆ ಒಯ್ದು ತೀವ್ರವಾಗಿ ಹೊಡೆದು ಸಾಯಿಸಿತು. ಈ ಕೃತ್ಯಕ್ಕೆ ಪ್ರತಿರೋಧ ಒಡ್ಡಿದ ವೀರಭದ್ರಪ್ಪನ ಮಗ ರವಿಕುಮಾರ ಸೇರಿ ಐದಾರು ಜನರ ಮೇಲೆ ದುಷ್ಕರ್ವಿುಗಳು ಮನಬಂದಂತೆ ಹಲ್ಲೆ ನಡೆಸಿದ್ದರು. ರವಿಕುಮಾರ ಆಸ್ಪತ್ರೆಗೆ ದಾಖಲಿಸಲ್ಪಟ್ಟರೂ ಚಿಕಿತ್ಸೆಗೆ ಸ್ಪಂದಿಸಲಾರದಷ್ಟು ಪೆಟ್ಟು ಬಿದ್ದಿದ್ದರಿಂದ ಮಂಗಳವಾರ ಮೃತಪಟ್ಟಿದ್ದಾನೆ.

ಪೂರ್ವ ನಿಯೋಜಿತ ಕೃತ್ಯ?: ವೀರಭದ್ರಪ್ಪ ಸತ್ತೂರನನ್ನು ಕೊಲೆಗೈಯಲು ಅಕ್ಕಿ ಕುಟುಂಬದವರು ಪೂರ್ವತಯಾರಿ ಮಾಡಿಕೊಂಡಿದ್ದ ಶಂಕೆ ವ್ಯಕ್ತವಾಗಿದೆ. ತಲವಾರ್ ಮತ್ತು ರಾಡ್​ಗಳನ್ನು ಸಂಗ್ರಹಿಸಿಟ್ಟುಕೊಂಡಿದ್ದಲ್ಲದೇ, ಹತ್ತಾರು ಜನ ಏಕಕಾಲದಲ್ಲಿ ದಾಳಿ ಮಾಡಿರುವುದು ಇದಕ್ಕೆ ಪುಷ್ಟಿ ನೀಡುವಂತಿದೆ.

ಪಂಚಾಯಿತಿ ನಡೆದಿತ್ತು

ವೀರಭದ್ರಪ್ಪ ಸತ್ತೂರ ಮೇಲೆ ರಾಜಕೀಯ ದ್ವೇಷ ಸಾಧಿಸುತ್ತಿದ್ದ ವಿಷಯ ಊರವರಿಗೆ ತಿಳಿದಿತ್ತು. ಸತ್ತೂರ, ಅಕ್ಕಿ ಮತ್ತು ಪೂಜಾರ ಕುಟುಂಬಗಳ ಮಧ್ಯೆ ಆಗಾಗ ಜಗಳ, ಘರ್ಷಣೆ ನಡೆದು, ಊರಲ್ಲಿ ಅಶಾಂತಿ ವಾತಾವರಣ ಉಂಟಾಗುತ್ತಿದ್ದುದನ್ನು ತಪ್ಪಿಸಲು ಹಿರಿಯರ ಸಮ್ಮುಖದಲ್ಲಿ ಪಂಚಾಯತಿ ನಡೆದಿತ್ತು. ಆದರೆ, ಹಿರಿಯರ ತೀರ್ವನಗಳಿಗೆ ಪಂಚಾಯತಿ ವೇಳೆ ತಲೆ ಅಲ್ಲಾಡಿಸುತ್ತಿದ್ದ ಕುಟುಂಬಗಳು ನಂತರ ಅದರಂತೆ ನಡೆದುಕೊಳ್ಳದೇ ಸಣ್ಣಪುಟ್ಟ ವಿಷಯಕ್ಕೆ ಜಗಳ ಮಾಡಿಕೊಳ್ಳುತ್ತಿದ್ದವು ಎನ್ನಲಾಗಿದೆ.

16 ಆರೋಪಿಗಳ ಬಂಧನ

ಧಾರವಾಡ: ಕಲಘಟಗಿ ತಾಲೂಕಿನ ಜಮ್ಮಿಹಾಳದ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 16 ಜನರನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವರ್ತಿಕಾ ಕಟಿಯಾರ್ ತಿಳಿಸಿದ್ದಾರೆ. ಮಂಗಳವಾರ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು, ಬಸವರಾಜ ಶಿವಪ್ಪ ಅಕ್ಕಿ,

ಬಸವರಾಜ ಸಂಗಪ್ಪ ಅಕ್ಕಿ ಹಾಗೂ ಇತರ 15 ಜನ ಸೇರಿ ವೀರಭದ್ರಪ್ಪ ಸತ್ತೂರ ಮನೆಗೆ ತೆರಳಿ ತಲ್ವಾರ್, ಕಬ್ಬಿಣದ ರಾಡ್​ಗಳಿಂದ ಹಲ್ಲೆ ಮಾಡಿದ್ದಾರೆ. ತೀವ್ರ ಗಾಯಗೊಂಡ ನಾಗಪ್ಪ ಬಸವಣ್ಣೆಪ್ಪ ಸತ್ತೂರ, ಬಸವರಾಜ ನಾಗಪ್ಪ ಸತ್ತೂರ, ಈರಣ್ಣ ಕಲ್ಲಪ್ಪ ಸತ್ತೂರ ಸೇರಿದಂತೆ ಐವರು ಕಿಮ್್ಸ ಹಾಗೂ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದರು.

ಘಟನೆ ನಡೆದ 24 ಗಂಟೆಯೊಳಗೆ ಕಲಘಟಗಿ ಠಾಣೆಯ ಇನ್ಸ್​ಪೆಕ್ಟರ್ ವಿಜಯ ಬಿರಾದಾರ ಹಾಗೂ ಪಿಎಸ್​ಐ ಆನಂದ ಡೋಣಿ ನೇತೃತ್ವದ ಆರು ಜನರ ತಂಡ ಒಟ್ಟು 16 ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ಉಳಿದವರ ಬಂಧನಕ್ಕೆ ಜಾಲ ಬೀಸಲಾಗಿದೆ. ಸದ್ಯ ಗ್ರಾಮದಲ್ಲಿ ಶಾಂತಿ ಕಾಪಾಡುವ ನಿಟ್ಟಿನಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ನೀಡಲಾಗಿದೆ ಎಂದರು.

ಬಸವರಾಜ ಶಿವಪ್ಪ ಅಕ್ಕಿ, ಬಸವರಾಜ ಸಂಗಪ್ಪ ಅಕ್ಕಿ, ಪ್ರಲ್ಹಾದ ಚುಳಕಿ, ಕೃಷ್ಣ ಚುಳಕಿ, ಮಲ್ಲಪ್ಪ ಚುಳಕಿ, ಚನ್ನಯ್ಯ ಬಸಯ್ಯ ಪೂಜಾರ, ಪ್ರವೀಣ ಕರಡಿ, ಸಿದ್ರಾಮ ಅಕ್ಕಿ, ಸಂಗಪ್ಪ ಎಮ್ಮೆಟ್ಟಿ ಬಂಧಿತರಲ್ಲಿ ಸೇರಿದ್ದಾರೆ.

Stay connected

278,752FansLike
588FollowersFollow
629,000SubscribersSubscribe

ವಿಡಿಯೋ ನ್ಯೂಸ್

VIDEO| ಕ್ರಿಕೆಟ್​​ ಮೈದಾನಕ್ಕೆ ಎಂಟ್ರಿ ಕೊಟ್ಟು ಪಂದ್ಯವನ್ನೇ ಕೆಲಕಾಲ ನಿಲ್ಲಿಸಿದ...

ಹೈದರಾಬಾದ್​: ಮಳೆಯ ಕಾರಣದಿಂದಾಗಿ ಕ್ರಿಕೆಟ್​ ಪಂದ್ಯಗಳು ಕೆಲಕಾಲ ಸ್ಥಗಿತಗೊಳ್ಳುವುದನ್ನು ನಾವು ನೋಡಿದ್ದೇವೆ. ಆದರೆ, ಹಾವಿನಿಂದಾಗಿ ಪಂದ್ಯ ಕೆಲಕಾಲ ನಿಲ್ಲುವುದನ್ನು ಎಂದಾದರೂ ನೋಡಿದ್ದೀರಾ? ಇಲ್ಲ ಎಂದಾದಲ್ಲಿ ನಾವು ತೋರಿಸುತ್ತೇವೆ ನೋಡಿ.... ಡಿಸೆಂಬರ್​ 9ರ...

VIDEO: ನಮಾಮಿ ಗಂಗಾ ಯೋಜನೆ ಪ್ರಗತಿ ಪರಿಶೀಲನೆ ಮುಗಿಸಿ ವಾಪಸ್​...

ಲಖನೌ: ಪ್ರಧಾನಿ ನರೇಂದ್ರ ಮೋದಿಯವರು ನ್ಯಾಷನಲ್ ಗಂಗಾ ಕೌನ್ಸಿಲ್​ನ ಮೊದಲ ಸಭೆಯನ್ನು ಇಂದು ಕಾನ್ಪುರದಲ್ಲಿ ನಡೆಸಿದ್ದಾರೆ. ಸಭೆಯಲ್ಲಿ ನಮಾಮಿ ಗಂಗಾ ಯೋಜನೆಯ ಮುಂದಿನ ಹಂತಗಳು, ನದಿ ಸ್ವಚ್ಛತೆಗೆ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ನರೇಂದ್ರ ಮೋದಿ...

ವಿಡಿಯೋ | ಪತ್ನಿಗಾಗಿ ಆತ ಮಾಡಿದ ಆ ಕೆಲಸಕ್ಕೆ ನೆಟ್ಟಿಗರ...

ಈತ ತನ್ನ ಮಡದಿಗಾಗಿ ಮಾಡಿದ ಆ ಕೆಲಸದಿಂದ ಸಾಮಾಜಿಕ ಜಾಲತಾಣಗಳಲ್ಲಿ ಅಪಾರ ಪ್ರಶಂಸೆ ಪಡೆದಿದ್ದಾನೆ. ಚೀನಾದ ಹೆಗಾಂಗ್​ನ ಪೊಲೀಸರು ಇಂತಹ ವೀಡಿಯೊಂದನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋ ವೀಕ್ಷಿಸಿದ ಸಾವಿರಾರು ಮಂದಿ ಅದಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ. ಆ...

VIDEO: ಕಾನ್ಪುರದಲ್ಲಿ ನ್ಯಾಷನಲ್​ ಗಂಗಾ ಕೌನ್ಸಿಲ್​ ಮೊದಲ ಸಭೆ: ಅಟಲ್​...

ಕಾನ್ಪುರ: ಪ್ರಧಾನಿ ನರೇಂದ್ರ ಮೋದಿಯವರು ಇಂದು ಕಾನ್ಪುರಕ್ಕೆ ತೆರಳಿದ್ದು ನ್ಯಾಷನಲ್​ ಗಂಗಾ ಕೌನ್ಸಿಲ್​ನ ಮೊದಲ ಸಭೆ ನಡೆಸಿದ್ದಾರೆ. ಉತ್ತರ ಪ್ರದೇಶದ ಕಾನ್ಪುರಕ್ಕೆ ತಲುಪಿದ ಅವರನ್ನು ಅಲ್ಲಿನ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಅವರು ಸ್ವಾಗತಿಸಿದರು. ಬಳಿಕ...

ಮನೆಗೆಲಸದ ಯುವತಿ ಮೇಲೆ ಮೌಲ್ವಿಯಿಂದ ಅತ್ಯಾಚಾರ: ಐರನ್​ ಬಾಕ್ಸ್​ನಿಂದ ಮೈಯೆಲ್ಲ...

ಬೆಂಗಳೂರು: ಮನೆಯ ಕೆಲಸಕ್ಕಿದ್ದ ಯುವತಿಯ ಮೇಲೆ ಅತ್ಯಾಚಾರ ಎಸಗಿ, ಐರನ್​ ಬಾಕ್ಸ್​ನಿಂದ ಮೈಯೆಲ್ಲಾ ಸುಟ್ಟು ಮೌಲ್ವಿಯೊಬ್ಬ ವಿಕೃತ ಮೆರೆದಿರುವ ಆರೋಪ ರಾಜ್ಯ ರಾಜಧಾನಿಯಲ್ಲಿ ಕೇಳಿಬಂದಿದೆ. ನಗರದ ಕೋರಮಂಗಲದಲ್ಲಿ ಪೈಶಾಚಿಕ ಕೃತ್ಯ ನಡೆದಿದೆ...

ಕಾಂಗ್ರೆಸ್​ನಿಂದ ಭಾರತ್​ ಬಚಾವೋ ಬೃಹತ್​ ರ‍್ಯಾಲಿ: ಬಿಜೆಪಿ ವಿರುದ್ಧ ಹರಿಹಾಯ್ದ...

ನವದೆಹಲಿ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಹಲವು ಕ್ರಮಗಳು ಹಾಗೂ ದೇಶದಲ್ಲಿ ಕುಸಿಯುತ್ತಿರುವ ಅರ್ಥ ವ್ಯವಸ್ಥೆ ಹಾಗೂ ಉದ್ಯೋಗಾವಕಾಶಗಳ ಬಗ್ಗೆ ಜನರಿಗೆ ತಿಳಿಸಲು ಕಾಂಗ್ರೆಸ್,​ ರಾಷ್ಟ್ರ ರಾಜಧಾನಿಯಲ್ಲಿ "ಭಾರತ್​ ಬಚಾವೋ"...