ತಂದೆ-ತಾಯಿ, ಹಿರಿಯರನ್ನು ಗೌರವಿಸಿ

ಮುಂಡಗೋಡ: ತಂದೆ ತಾಯಿ, ಗುರು- ಹಿರಿಯರನ್ನು ಗೌರವಿಸಬೇಕು. ಅವರ ಮಾತಿಗೆ ಬೆಲೆ ಕೊಡಬೇಕು ಎಂದು ಶಿಶುವಿನಹಾಳದ ಸಂತ ಶಿಶುನಾಳ ಶರೀಫರ ಮರಿಮೊಮ್ಮಗ ಅಭಿನವ ಹುಸೇನಸಾಬ್ ಶರೀಫ ಹೇಳಿದರು.

ತಾಲೂಕಿನ ಇಂದೂರಿನಲ್ಲಿ ಶ್ರೀ ಸದ್ಗುರು ಗೋವಿಂದ, ಶರೀಫ ಶಿವಯೋಗಿಗಳ ಟ್ರಸ್ಟ್ ವತಿಯಿಂದ ಸೋಮವಾರ ಜರುಗಿದ ಸದ್ಗುರು ಗೋವಿಂದ, ಶರೀಫ ಶಿವಯೋಗಿಗಳ 14ನೇ ಜಾತ್ರಾ ಮಹೋತ್ಸವದ ಸರ್ವಧರ್ಮ ಸಮೂಹ ಜನಜಾಗೃತಿ ಚಿಂತನ ಗೋಷ್ಠಿಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಮಾಜಿ ಶಾಸಕ ವಿ.ಎಸ್. ಪಾಟೀಲ ಮಾತನಾಡಿ, ಧರ್ಮವನ್ನು ನಾವು ರಕ್ಷಿಸಿದರೆ ಧರ್ಮ ನಮ್ಮನ್ನು ರಕ್ಷಿಸುತ್ತದೆ. ಶರೀಫರ ತತ್ತ್ವ್ವ ಪದಗಳಲ್ಲಿರುವ ಸಿದ್ಧಾಂತಗಳನ್ನು ಅಳವಡಿಸಿಕೊಂಡರೆ ಜೀವನ ಪಾವನವಾಗುತ್ತದೆ ಎಂದರು. ಎಂ.ಬಿ. ಕುಟ್ರಿ ಅಧ್ಯಕ್ಷತೆ ವಹಿಸಿದ್ದರು.

ಟಿಎಪಿಸಿಎಂಎಸ್ ಮಾಜಿ ಅಧ್ಯಕ್ಷ ಬಿ.ಕೆ. ಪಾಟೀಲ, ಟ್ರಸ್ಟ್ ಅಧ್ಯಕ್ಷ ಸಹದೇವ ನಡಗೇರಿ ಮಾತನಾಡಿದರು. ತಾಪಂ ಅಧ್ಯಕ್ಷೆ ದಾಕ್ಷಾಯಣಿ ಸುರಗಿಮಠ, ಎ.ವಿ. ಪಾಲೇಕರ, ನಾಗಭೂಷಣ ಹಾವಣಗಿ, ಕೆಂಜೋಡಿ ಗಲಬಿ, ನಾಗರಾಜ ಗೋಣೆಪ್ಪನವರ, ಶರೀಫ ಧುಂಡಶಿ ಇತರರಿದ್ದರು. ಇದೇ ವೇಳೆ ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಲಾಯಿತು. ಇದ್ಕಕ್ಕೂ ಮುನ್ನ ಜರುಗಿದ ಸಾಮೂಹಿಕ ವಿವಾಹದಲ್ಲಿ ನಾಲ್ಕು ಜೋಡಿ ವಧು- ವರರು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಪ್ರೀತಿ ಹರ್ಡೆಕರ ಹಾಗೂ ಸಂಗಡಿಗರು ಸ್ವಾಗತಿಸಿದರು. ಮಂಜುನಾಥ ನಡಗೇರಿ, ಸಂತೋಷ ಅಂಗಡಿ ನಿರ್ವಹಿಸಿದರು.