ಹಗರಿಬೊಮ್ಮನಹಳ್ಳಿ: ತಂಬ್ರಹಳ್ಳಿಯ ಅರಿವು ಕೇಂದ್ರದಲ್ಲಿ ಆಯೋಜಿಸಿರುವ ಮಕ್ಕಳ ಬೇಸಿಗೆ ಶಿಬಿರದಲ್ಲಿ ಭಾನುವಾರ ತಾಯಂದಿರ ದಿನ ಆಚರಿಸಲಾಯಿತು.

ಗ್ರಾಪಂ ಸದಸ್ಯೆ ಸಪ್ಪರದ ಕಮಲಾಕ್ಷಮ್ಮ ಪಂಪಾಪತಿ ಕಾರ್ಯಕ್ರಮ ಉದ್ಘಾಟಿಸಿ, ಶಿಬಿರದಲ್ಲಿ ಪ್ರತಿದಿನ ಸಂಪನ್ಮೂಲ ವ್ಯಕ್ತಿಗಳು ಬಂದು ಉಪನ್ಯಾಸ ನೀಡುತ್ತಿದ್ದಾರೆ. ಮಕ್ಕಳು ಇದರ ಸದುಪಯೋಗ ಪಡೆದುಕೊಳ್ಳಬೇಕು. ನೀವು ದೊಡ್ಡವರಾದ ಮೇಲೆ ತಂದೆ-ತಾಯಿಯನ್ನು ಚೆನ್ನಾಗಿ ಹಾರೈಕೆ ಮಾಡಬೇಕು ಎಂದು ತಿಳಿಸಿದರು.
ವಿಶ್ವ ತಾಯಂದಿರ ದಿನದ ಕುರಿತು ಯೋಗ ತಂಡದ ಜಿ.ಗೀತಾ ರಾಘವೇಂದ್ರ ಶೆಟ್ಟಿ, ಗಡ್ಡದ ರಾಜೇಶ್ವರಿ ಬಸರಾಜ್, ಸಪ್ಪರದ ಶಾರದಾ ವಾಸುದೇವ, ಸುಮಾ ನಟರಾಜ್ ಮಾತನಾಡಿದರು.