ತಂತ್ರಜ್ಞಾನ ಬಳಸಿ ಜಾನಪದ ಕಲೆ ಬೆಳೆಸಿ

ಧಾರವಾಡ: ತಂತ್ರಜ್ಞಾನ ಬಳಸಿಕೊಂಡು ಜಾನಪದ ಕಲೆ ಬೆಳೆಸಬೇಕು. ಇದರಿಂದ ಮುಂದಿನ ಪಿಳಿಗೆಗೆ ಕಲೆ ಪರಿಚಯಿಸುವುದರ ಜೊತೆಗೆ ಜಗತ್ತಿಗೆ ಕಲೆಯನ್ನು ತೋರಿಸಬಹುದಾಗಿದೆ ಎಂದು ಕರ್ನಾಟಕ ಉನ್ನತ ಶಿಕ್ಷಣ ಅಕಾಡೆಮಿ ನಿರ್ದೇಶಕ ಡಾ. ಎಸ್.ಎಂ. ಶಿವಪ್ರಸಾದ ಹೇಳಿದರು.

ನಗರದ ಕರ್ನಾಟಕ ವಿದ್ಯಾವರ್ಧಕ ಸಂಘದ 130ನೇ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ಭಾನುವಾರ ಆಯೋಜಿಸಿದ್ದ ನೃತ್ಯ ಸಂಜೆ ಹಾಗೂ ಸಂಘದ ಹಿರಿಯ ಸದಸ್ಯರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ವಿಜ್ಞಾನಕ್ಕಿಂತ ಜಾನಪದ ಕಲೆ ದೊಡ್ಡದು. ಕಲೆ ಜಾನಪದ ಭಾಷೆ, ಸಂಸ್ಕೃತಿ ಹಾಗೂ ವ್ಯಕ್ತಿತ್ವವನ್ನು ಬೆಳೆಸುತ್ತದೆ. ಕಲೆಯಲ್ಲಿನ ಭಾವನಾತ್ಮಕ ಸೌಂದರ್ಯವನ್ನು ಮಕ್ಕಳಿಗೆ ತಿಳಿಸಬೇಕು. ಈ ನಿಟ್ಟಿನಲ್ಲಿ ಕರ್ನಾಟಕ ವಿದ್ಯಾವರ್ಧಕ ಸಂಘ ಸಾಕಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.

ಸಂಘದ ಹಿರಿಯ ಸದಸ್ಯರಾದ ಶಿವಪ್ಪ ಭಂಡಿವಾಡ, ರೇವಣಸಿದ್ದಪ್ಪ, ಶಿವನಗೌಡ ದೊಡಗೌಡರ, ಚಂದ್ರಶೇಖರ ಮುಮ್ಮಿಗಟ್ಟಿ, ಮೋಹನ ಮಂಟೂರಶೆಟ್ಟರ್ ಅವರನ್ನು ಸನ್ಮಾನಿಸಲಾಯಿತು. ನಂತರ ಕೊಣ್ಣೂರಿನ ಜೈ ಕಿಸಾನ್ ಸಾಂಸ್ಕೃತಿಕ ಮತ್ತು ಜನಪದ ಕಲಾ ಸಂಘ ಹಾಗೂ ಹುಬ್ಬಳ್ಳಿಯ ಸುಹಾಸಿನಿ ನಾರಾಯಣಕರ ಮತ್ತು ನೃತ್ಯ ತಂಡದ ಕಲಾವಿದರು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು. ಪ್ರಸಿದ್ಧ ಕಲಾವಿದ ಡಾ. ಅಪ್ಪಗೆರೆ ತಿಮ್ಮರಾಜು, ಡಾ. ಪಾಟೀಲ ಪುಟ್ಟಪ್ಪ, ಸುಜಾತಾ ರಾಜಗೋಪಾಲ, ಶಂಕರ ಕುಂಬಿ, ಚೈತ್ರಾ ನಾಗಮ್ಮನವರ, ಪ್ರಕಾಶ ಉಡಕೇರಿ, ಇದ್ದರು.

Leave a Reply

Your email address will not be published. Required fields are marked *