ಕುಳಗೇರಿ ಕ್ರಾಸ್: ರೈತರು ಕೃಷಿಯಿಂದ ವಿಮುಕ್ತರಾಗದೆ ತಂತ್ರಜ್ಞಾನ ಆಧಾರಿತ ಕೃಷಿ ಮಾಡಬೇಕು ಎಂದು ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ. ಪಿ.ಎಲ್. ಪಾಟೀಲ ಹೇಳಿದರು.
ಸಮೀಪದ ಖಾನಾಪುರ ಎಸ್.ಕೆ. ಗ್ರಾಮದ ಹೆಬ್ಬಳೆಮ್ಮ ದೇವಸ್ಥಾನದ ಆವರಣದಲ್ಲಿ ಧಾರವಾಡದ ಕೃಷಿ ವಿಶ್ವವಿದ್ಯಾಲಯ, ಬಾಗಲಕೋಟೆ ಕೃಷಿ ವಿಜ್ಞಾನ ಕೇಂದ್ರ, ಕೃಷಿ ಇಲಾಖೆ, ತೋಟಗಾರಿಕೆ ಹಾಗೂ ಪಶುಪಾಲನೆ ಇಲಾಖೆ ಸಂಯುಕ್ತಾಶ್ರಯದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ವಿಕಸಿತ ಕೃಷಿ ಸಂಕಲ್ಪ ಯೊಜನೆಯ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ಕೃಷಿ ವಿಸ್ತರಣಾ ನಿರ್ದೇಶಕ ಡಾ. ಎಂ.ವಿ. ಮಂಜುನಾಥ ಮಾತನಾಡಿ, ಸಕಾಲದಲ್ಲಿ ಮಣ್ಣು, ನೀರು ಸಂರಕ್ಷಣೆ ಮಾಡಬೇಕು. ಸುಸ್ಥಿರ ಕೃಷಿ ಮಾಡಬೇಕೆಂದು ಸಲಹೆ ನೀಡಿದರು.
ಸೂಕ್ಷ್ಮ್ಮಜೀವಿ ಶಾಸಜ್ಞ ಡಾ. ಸಿ.ಆರ್. ಪಾಟೀಲ ಮಾತನಾಡಿ, ಕಬ್ಬು ಬೆಳೆಯಲ್ಲಿನ ಸೂಕ್ಷ್ಮ್ಮ ಜೀವಿಗಳ ಮಹತ್ವ ಕುರಿತು ತಿಳಿ ಹೇಳಿದರು.
ಡಾ. ಎಲ್.ಐ. ರೂಡಗಿ, ಸಿದ್ದಪ್ಪ ಅಂಗಡಿ, ಡಾ. ಗುರುದತ್ತ ಹೆಗಡೆ, ಅಶೋಕ ತಿರಕನ್ನವರ, ಪರಶುರಾಮ ಗಣಿ, ಶಿವನಗೌಡ ಗೌಡರ, ಗ್ರಾಪಂ ಅಧ್ಯಕ್ಷೆ ರೇಣುಕಾ ಹಿರಗನ್ನವರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಲಲಿತಾ ಪೂಜಾರ, ಸದಸ್ಯರಾದ ಶೇಖಪ್ಪ ಪವಾಡಿನಾಯ್ಕರ್, ಲಕ್ಷ್ಮಣ ದಾದನಟ್ಟಿ, ಹನುಮಂತ ನರಗುಂದ, ವೆಂಕಣ್ಣ ಹೊರಕೇರಿ, ಮಾರುತಿ ತಳವಾರ ಇದ್ದರು.