ತಂತ್ರಜ್ಞಾನದ ಬಳಕೆ ಇಂದಿನ ಅಗತ್ಯ

ವಿಜಯವಾಣಿ ಸುದ್ದಿಜಾಲ ಕಲಬುರಗಿ
ವಿದ್ಯಾರ್ಥಿಗಳು ಹೆಚ್ಚು ಹೆಚ್ಚು ತಂತ್ರಜ್ಞಾನ ಬಳಸಿಕೊಂಡು ಸಂಶೋಧನೆ ಮಾಡಬೇಕು ಎಂದು ಗುಲ್ಬರ್ಗ ವಿಶ್ವವಿದ್ಯಾಲಯದ ಕುಲಪತಿ ಡಾ.ಎಸ್.ಆರ್.ನಿರಂಜನ್ ಸಲಹೆ ಮಾಡಿದರು.

ನಗರದ ಗೋದುತಾಯಿ ದೊಡ್ಡಪ್ಪ ಅಪ್ಪ ಕಲಾ ಮತ್ತು ವಾಣಿಜ್ಯ ಮಹಿಳಾ ಮಹಾವಿದ್ಯಾಲಯದಲ್ಲಿ ಭಾನುವಾರ ಹಮ್ಮಿಕೊಂಡ ಅವ್ವ ಹಬ್ಬ ಕಸದಿಂದ ರಸ ಎಂಬ ವಿನೂತನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿನಿಯರು ಉಪಯೋಗವಾಗದ ವಸ್ತುಗಳಿಂದ ಉಪಯೋಗಕ್ಕೆ ಬರುವಂತೆ ಮಾಡಿರುವುದನ್ನು ಗಮನಿಸಿದರೆ ನಿಮ್ಮಲ್ಲಿ ಸಂಶೋಧನೆ ಗುಣಗಳಿರುವುದು ಕಂಡುಬರುತ್ತದೆ ಎಂದರು.

ಪ್ರತಿಯೊಬ್ಬರಲ್ಲಿ ಯಾವುದಾದರೂ ತಂತ್ರಜ್ಞಾನ ಇದ್ದರೆ ಸಾಧನೆ ಮಾಡಲು ಸಾಧ್ಯ, ಪ್ರತಿಯೊಂದು ಕ್ಷೇತ್ರಗಳಲ್ಲಿಯೂ ತಂತ್ರಜ್ಞಾನ ಪ್ರಮುಖವಾಗಿದೆ. ಜಪಾನ, ಅಮೇರಿಕ, ಚೀನಾ ದೇಶಗಳಲ್ಲಿ ತಂತ್ರಜ್ಞಾನದ ಬಳಕೆ ಬಹಳಷ್ಟಿದೆ. ಹೀಗಾಗಿ ಆ ದೇಶಗಳು ಅಭಿವೃದ್ಧಿ ಹೊಂದಲು ಸಾಧ್ಯವಾಗಿದೆ. ತಂತ್ರಜ್ಞಾನ ಕೇವಲ ವಿಜ್ಞಾನ ವಿದ್ಯಾಥರ್ಿಗಳಿಗೆ ಸೀಮಿತವಾಗಿಲ್ಲ, ಎಲ್ಲಾ ವಿಷಯಗಳಲ್ಲೂ ತನ್ನದೇ ಆದ ತಂತ್ರಜ್ಞಾನದ ಅವಶ್ಯಕತೆ ಇದೆ. ಅದನ್ನು ಬಳಸಬೇಕು. ಯಾರೂ ಬೇಕಾದರೂ ಕೈಗಾರಿಕೆ ಸ್ಥಾಪನೆ ಮಾಡಬಹುದು, ಆದರೆ ಬುದ್ಧಿವಂತಿಕೆ ಅಗತ್ಯ.

ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ, ಶರಣಬಸವ ವಿಶ್ವವಿದ್ಯಾಲಯದ ಸಹಕುಲಪತಿ ಡಾ. ವಿ.ಡಿ.ಮೈತ್ರಿ, ಕುಲಸಚಿವ ಮೌಲ್ಯಮಾಪನ ಡಾ.ಎಸ್.ಎಚ್.ಹೊನ್ನಳ್ಳಿ, ಡೀನ್ ಡಾ.ಲಿಂಗರಾಜ ಶಾಸ್ತ್ರೀ, ಡಾ. ಎಸ್.ಜಿ,ಡೊಳ್ಳೇಗೌಡ್ರ, ಡಾ. ಲಕ್ಷ್ಮೀ ಮಾಕಾ, ಡಾ. ಡಿ.ಟಿ.ಅಂಗಡಿ, ಡಾ. ಎಂ.ಆರ್.ಹುಗ್ಗಿ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ನೀಲಾಂಬಿಕಾ ಶೇರಿಕಾರ, ಪ್ರೊ. ಶಾಂತಲಾ ನಿಷ್ಠಿ ಇತರರು ಇದ್ದರು.

ಅವ್ವ ಹಬ್ಬದಲ್ಲಿ ವಿವಿಧ ವಸ್ತುಗಳನ್ನು ಸಿದ್ಧಪಡಿಸಿ ಪ್ರದರ್ಶಿಸುತ್ತಿರುವ ಗೋದುತಾಯಿ ಕಾಲೇಜಿನ ವಿದ್ಯಾರ್ಥಿಗಳು.

ಪ್ರೊ. ಜಾನಕಿ ಹೊಸೂರ, ಡಾ. ಎನ್.ಎಸ್.ಹೂಗಾರ, ಈರಣ್ಣ ಸ್ವಾದಿ, ಡಾ.ಸಿದ್ದಲಿಂಗರೆಡ್ಡಿ, ಸಿದ್ರಾಮ ಪಾಟೀಲ, ಕೃಪಾಸಾಗರ ಗೊಬ್ಬುರ, ದೀಶಾ ಮೇಹತಾ, ಸಂಗೀತಾ, ಅನಿತಾ ಗೊಬ್ಬುರ, ವಿದ್ಯಾ ರೇಶ್ಮಿ, ಅನುಸುಯಾ ಬಡಿಗೇರ, ಪ್ರಭಾವತಿ, ವಿನೋದ ಹಳಕಟ್ಟಿ, ಅಪ್ಪಾಸಾಬ ಬಿರಾದಾರ, ಅಶೋಕ ಮೂಲಗೆ ಅನೇಕ ವಿದ್ಯಾಥರ್ಿನಿಯರು ಉಪಸ್ಥಿತರಿದ್ದರು.

ಡಾ. ಸೀಮಾ ಪಾಟೀಲ ಸ್ವಾಗತಿಸಿದರು, ಡಾ. ಇಂದಿರಾ ಶೆಟಕಾರ ಪ್ರಾಸ್ತಾವಿಕ ಮಾತನಾಡಿದರು, ಡಾ.ಸಿದ್ದಮ್ಮ ಗುಡೇದ್ ಮತ್ತು ಪ್ರೊ. ಸಾವಿತ್ರಿ ಜಂಬಲದಿನ್ನಿ ಪರಿಚಯಿಸಿದರು, ಡಾ.ಪುಟ್ಟಮಣಿ ದೇವಿದಾಸ ನಿರೂಪಿಸಿದರು, ಪ್ರೊ. ರೇವಯ್ಯ ವಸ್ತ್ರದಮಠ ಮತ್ತು ವಿದ್ಯಾರ್ಥಿನಿಯರು ಪ್ರಾರ್ಥಿಸಿದರು.

ಮಹಾವಿದ್ಯಾಲಯದ ಕಲಾ ಮತ್ತು ವಾಣಿಜ್ಯ ವಿದ್ಯಾರ್ಥಿನಿಯರು ಕಸದಿಂದ ರಸ ಎಂಬ ವಿಷಯದ ಮೇಲೆ ಉಪಯೋಗವಾದ ವಸ್ತುಗಳಾದ ಟೈರ್, ಕಾಗದ, ಪ್ಲಾಸ್ಟಿಕ್, ಬಟ್ಟೆ, ಮಣ್ಣು, ಗಾಜು, ಎಲೆಕ್ಟ್ರಾನಿಕ್ ವಸ್ತುಗಳಿಂದ ಅನೇಕ ಉಪಯೋಗದ ವಸ್ತುಗಳನ್ನು ಮಾಡಿ ಪ್ರದರ್ಶನ ಮಾಡಿದರು. ಕಾಲೇಜಿನ ಕ್ಯಾಂಪಸ್ ತುಂಬಾ ಅವ್ವ ಹಬ್ಬದ ಸಡಗರ ಜೋರಾಗಿತ್ತು.

ಇತ್ತೀಚಿನ ದಿನಗಳಲ್ಲಿ ಮಹಿಳೆಯರು ಹೆಚ್ಚು ಹೆಚ್ಚು ಉದ್ಯಮಿಗಳಾಗುತ್ತಿದ್ದಾರೆ. ಈ ಮಹಾವಿದ್ಯಾಲಯದ ವಿದ್ಯಾರ್ಥಿನಿಯರು ಕಡಿಮೆ ಅವಧಿಯಲ್ಲಿ ಉತ್ಕಷ್ಟವಾದ ವಸ್ತುಗಳನ್ನು ಸಿದ್ಧಪಡಿಸಿರುವುದು ಗಮನಿಸಿದರೆ ಉತ್ತಮ ಸಂಶೋಧಕರಾಗುವುದು ಖಚಿತ.
| ಪ್ರೊ.ಎಸ್.ಆರ್.ನಿರಂಜನ್ ಕುಲಪತಿ, ಗುಲ್ಬರ್ಗ ವಿವಿ ಕಲಬುರಗಿ.