ತಂತ್ರಜ್ಞಾನದಲ್ಲಿ ಕ್ರಾಂತಿಕಾರಿ ಬೆಳವಣಿಗೆ

ವಿಜಯವಾಣಿ ಸುದ್ದಿಜಾಲ ಕಲಬುರಗಿ
ಮಾಹಿತಿ ಸುರಕ್ಷತೆ ಐಟಿ ತಂತ್ರಜ್ಞಾನ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬೆಳವಣಿಗೆಯಾಗುತ್ತಿದೆ ಎಂದು ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರ್ಸ್ ಚೇರ್ಮನ್ ಬಿ.ಎಸ್.ಮೋರೆ ಅಭಿಪ್ರಾಯ ವ್ಯಕ್ತಪಡಿಸಿದರು.

ಪಿಡಿಎ ಇಂಜಿನಿಯರಿಂಗ್ ಮಹಾವಿದ್ಯಾಲಯದ ಮಾಹಿತಿ ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗ ಹಾಗೂ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರ್ಸ್ ಸಹಯೋಗದಡಿ ಶುಕ್ರವಾರ ಏರ್ಪಡಿಸಿದ್ದ ಒಂದು ದಿನದ ತಾಂತ್ರಿಕ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, ಸಾಕಷ್ಟು ಸಂಶೋಧನಾ ಕಾರ್ಯ ನಡೆದಿದೆ. ಹೊಸ ಹೊಸ ಆವಿಷ್ಕಾರಗಳು ಐಟಿ ಕ್ಷೇತ್ರಕ್ಕೆ ಕಾಲಿಡುತ್ತಿವೆ. ವಿದ್ಯಾರ್ಥಿಗಳು ಇದೇ ದಿಸೆಯಲ್ಲಿ ತಮ್ಮ ಸಂಶೋಧನಾ ಕಾರ್ಯ ಮುಂದುವರಿಸಬೇಕು ಎಂದು ಸಲಹೆ ನೀಡಿದರು.

ಪ್ರಾಚಾರ್ಯ ಡಾ.ಎಸ್.ಎಸ್. ಹೆಬ್ಬಾಳ ಅಧ್ಯಕ್ಷತೆ ವಹಿಸಿ ಮಾತನಾಡಿ, 2020ರಲ್ಲಿ ಪಿಡಿಎ ಒಂದು ಸಂಶೋಧನಾ ಕೇಂದ್ರವಾಗಿ ಮಿಂಚಲಿದೆ ಎಂದು ಆಶಯ ವ್ಯಕ್ತಪಡಿಸಿದರು.

ಸಂಪನ್ಮೂಲ ವ್ಯಕ್ತಿಯಾಗಿ ಇದೇ ವಿಭಾಗದ ಹಳೆಯ ವಿದ್ಯಾರ್ಥಿ, ಯುಎಸ್ಎದ ಸೀನಿಯರ್ ಸಲ್ಯೂಶನ್ ಆರ್ಕೆಟೆಕ್ಟ್, ಫಿಶನ್ ಸ್ಟಾರ್ಮ ಕ್ಯಾಲಿಫೋರ್ನಿಯಾದ ವಿಜಯಕುಮಾರ ಮಿಟ್ಟಿಮನಿ ಈ ಕ್ಷೇತ್ರದಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಕುರಿತು ಮಾಹಿತಿ ನೀಡಿದರು.

ಮಹಾವಿದ್ಯಾಲಯದ ಡೀನ್ ಅಕಾಡೆಮಿಕ್ಸ್ ಡಾ.ಎಸ್.ಆರ್. ಪಾಟೀಲ, ಟೆಕ್ಯೂಪ್-3ರ ಸಂಚಾಲಕ ಡಾ.ಚೆನ್ನಪ್ಪ ಎಚ್. ಬಿರಾದಾರ, ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರ್ಸ್ ಗೌರವ ಕಾರ್ಯದರ್ಶಿ ಡಾ.ಬಾಬುರಾವ ಶೇರಿಕಾರ, ಡಾ.ವಿಶ್ವನಾಥ ಬುರಕಪಳ್ಳಿ, ನಿತಿನ್ ಕಟ್ಟಶೆಟ್ಟರ್, ಅಶೋಕ ಪಾಟೀಲ, ಶರಣಕುಮಾರ ಹುಲಿ, ಗುರಪ್ಪ ಕಲ್ಯಾಣಿ, ರಶ್ಮಿ ತಳ್ಳಳ್ಳಿ, ಗಂಗಾಧರ, ಗೀತಾ ವಿ.ಜಿ., ಮಲ್ಲಿಕಾರ್ಜುನ ರೆಡ್ಡಿ, ಕವಿತಾ ಕೆ., ಅಂಬಾರಾಯ ಇತರರಿದ್ದರು.

ಡಾ.ಭಾರತಿ ಹರಸೂರ ಸ್ವಾಗತಿಸಿದರು. ಸಹಾಯಕ ಪ್ರಾಧ್ಯಾಪಕ ಮುಕುಂದ ಹಾಗೂ ಉದಯ ಬಳಗಾರ ಅತಿಥಿಗಳನ್ನು ಪರಿಚಯಿಸಿದರು. ಗೌರಿ ಪಾಟೀಲ ನಿರೂಪಣೆ ಮಾಡಿದರು.