ಡ್ರಾಯಿಂಗ್ ರೂಮಿನ ಅಂದ ಹೆಚ್ಚಿಸುವುದೆಂತು?

ಪ್ರತಿಯೊಬ್ಬರು ತಮ್ಮ ತಮ್ಮ ಮನೆಯ ಅಂದ-ಚೆಂದವನ್ನು ಇನ್ನಷ್ಟು ಹೆಚ್ಚಿಸುವುದು ಹೇಗೆ? ಇರುವ ಸ್ಥಳಾವಕಾಶವನ್ನು ಬಳಸಿಕೊಂಡು ಒಳಾಂಗಣ ವಿನ್ಯಾಸ ಮಾಡುವ ಬಗೆ ಎಂತು ಎಂದು ಯೋಚಿಸುತ್ತಿರುತ್ತಾರೆ. ಒಳಾಂಗಣ ವಿನ್ಯಾಸ ಒಂದು ಕಲೆ, ಎಲ್ಲ ಬಗೆಯ ವಿನ್ಯಾಸ ಮತ್ತು ಬಣ್ಣಗಳು ಕೆಲವು ಕೊಠಡಿಗಳಿಗೆ ಹೊಂದುವುದಿಲ್ಲ, ಹಾಗಾಗಿ ಯೋಚಿಸಿ-ಯೋಜಿಸಿ ಅವುಗಳನ್ನು ಸಂಯೋಜಿಸಬೇಕಾಗುತ್ತದೆ. ಆಗ ಮಾತ್ರ ಸುಂದರ ಒಳಾಂಗಣ ವಿನ್ಯಾಸದ ರೂಮ್ ನಿಮ್ಮದಾಗುತ್ತದೆ.

 | ಕಿರಣ್ ಇಜಿಮಾನ್ ಬೆಂಗಳೂರು

ನೆಯೆಂದ ಮೇಲೆ ಡ್ರಾಯಿಂಗ್ ರೂಮ್ ಬೆಡ್ ರೂಮ್ ಡೈನಿಂಗ್-ಕಿಚನ್ ಎಂದೆಲ್ಲ ಇದ್ದದ್ದೆ, ಪ್ರತಿ ಕೊಠಡಿಗೂ ತನ್ನದೇ ಆದ ವಿನ್ಯಾಸ, ಅಳತೆ ಮತ್ತು ರೂಪವಿದೆ. ಆಯಾ ಕೊಠಡಿಯ ಅಗತ್ಯ ಮತ್ತು ಅನುಕೂಲಕ್ಕೆ ತಕ್ಕಂತೆ ಅದಕ್ಕೆ ಹೊಂದಿಕೆಯಾಗುವ ವಿನ್ಯಾಸವನ್ನು ಅಳವಡಿಸುವುದು ವಿನ್ಯಾಸಕಾರರ ಜಾಣತನ ಮತ್ತು ಅದನ್ನು ಮಾಡಿಸುವುದು ಮನೆ ಮಾಲೀಕನ ಆಸಕ್ತಿ.

ಸಾಮಾನ್ಯವಾಗಿ ಮನೆಯಲ್ಲಿ ಎಲ್ಲರಿಗೂ ಕಾಣುವಂತೆ ಇರುವುದು ಮತ್ತು ಅತಿಥಿಗಳು ಬಂದರೆ ಕೂರುವುದು ಡ್ರಾಯಿಂಗ್ ರೂಮ್ಲ್ಲಿ. ಅಲ್ಲಿನ ವಿನ್ಯಾಸ, ಫರ್ನಿಶಿಂಗ್ ಲಭ್ಯವಿರುವ ಸ್ಥಳಾವಕಾಶವನ್ನು ಅವಲಂಬಿಸಿರುತ್ತದೆ. ಡ್ರಾಯಿಂಗ್ ರೂಮ್ಲ್ಲಿ ಒಂದು ಸುಂದರ ಶಿಲ್ಪ, ಕಲಾಕೃತಿ ಇರಿಸಿದರೆ ರೂಮ್ ಅಂದ ಹೆಚ್ಚುತ್ತದೆ. ಜತೆಗೆ ಗೋಡೆಗೆ ಚೆಂದನೆಯ ಪೇಂಟಿಂಗ್, ಹೂಗುಚ್ಛ, ಡೆಕೊರೇಷನ್ ಐಟಮ್ಳು, ನೇತು ಬಿಡುವ ಕಲಾಕೃತಿ, ಕಸದಿಂದ ತಯಾರಿಸಿದ ವಸ್ತು, ಚೆಂದದ ಫ್ರೇಮ್ ಕನ್ನಡಿ..ಹೀಗೆ ಪ್ರತಿಯೊಂದು ವಸ್ತುವು ಕೊಠಡಿಗೆ ಮೆರುಗು ನೀಡುತ್ತವೆ.

ದುಬಾರಿ ಕಲಾಕೃತಿಯೆಂದ ಕೂಡಲೇ ಅದು ರೂಮಿನ ಅಂದ ಹೆಚ್ಚಿಸುತ್ತದೆ ಎಂದಲ್ಲ, ಬದಲಾಗಿ ನಿಮ್ಮ ಕೊಠಡಿಯ ವಿನ್ಯಾಸಕ್ಕೆ, ನಿಮ್ಮ ಅಭಿರುಚಿಗೆ ಹೊಂದಿಕೆಯಾಗುವ ಕಲಾಕೃತಿ, ಸೃಜನಶೀಲ ವಸ್ತುವೂ ಆಗುತ್ತದೆ. ಕೆಲೆವೆಡೆ ಕಲಾ ಶಿಬಿರ, ಜಾತ್ರೆ, ಸಂತೆಗಳಲ್ಲೂ ಈ ರೀತಿಯ ಶೃಂಗಾರ ವಸ್ತುಗಳು ದೊರೆಯುತ್ತವೆ. ಅವುಗಳನ್ನು ಕೊಳ್ಳುವಾಗಲೂ ಸ್ವಲ್ಪ ಗಮನಿಸಿ, ನಿಮ್ಮ ಮನೆಗೆ ಒಪ್ಪುತ್ತದೆ ಎಂದಾದರೆ ಮಾತ್ರ ಖರೀದಿಸಬೇಕು.

ಪೀಠೋಪಕರಣ

ಡ್ರಾಯಿಂಗ್ ರೂಮ್ ವಿಶಾಲವಾಗಿದ್ದರೆ ಉತ್ತಮ, ಅಲ್ಲಿಗೆ ಚೆಂದನೆಯ ವಿನ್ಯಾಸದ, ಅಗಲವಾದ ಪೀಠೋಪಕರಣಗಳನ್ನು ತಂದು ಜೋಡಿಸಬಹುದು. ಮರ, ಪ್ಲಾಸ್ಟಿಕ್, ಫೈಬರ್ ಮತ್ತು ಕಬ್ಬಿಣ, ಸ್ಟೀಲ್ ಹೀಗೆ ಬೇರೆ ಬೇರೆ ತರದ ಲೋಹ-ಮರಗಳಿಂದ ತಯಾರಿಸಿದ ಪೀಠೋಪಕರಣ ಮಾರುಕಟ್ಟೆಯಲ್ಲಿ ದೊರೆಯುತ್ತದೆ. ಅವುಗಳ ಬೆಲೆಯೂ ಒಂದು ಕಡೆಯಿಂದ ಒಂದು ಜಡೆ ದುಬಾರಿ. ಹೀಗಾಗಿ ಪೀಠೋಪಕರಣ ಖರೀದಿಸುವಾಗ ಕೆಲವು ಕಡೆ ವಿಚಾರಿಸುವುದು ಉತ್ತಮ. ನಿಮಗೆ ಸಾಕಷ್ಟು ಸಮಯಾವಕಾಶ, ತಾಳ್ಮೆ ಇದ್ದರೆ ಮರ ಕೊಂಡು ನೀವೇ ಬಡಗಿಗೆ ಹೇಳಿ, ನಿಮ್ಮಿಷ್ಟದ ಪೀಠೋಪಕರಣ ವಿನ್ಯಾಸ ಮಾಡಿಸಬಹುದು.

ಪರದೆಗಳು

ಪ್ರತಿ ಕೋಣೆಗೂ ಕರ್ಟೆನ್​ಗಳು ಹೊಂದಿಕೊಳ್ಳುತ್ತವೆ. ಅವುಗಳ ಬಣ್ಣ ಮತ್ತು ವಿನ್ಯಾಸಕ್ಕೆ ಅನುಗುಣವಾಗಿ ಅವು ಮನೆಗೆ ಸಾಂಪ್ರದಾಯಿಕ ಮತ್ತು ಸೌಂದರ್ಯದ ಲುಕ್ ನೀಡುತ್ತವೆ. ಪರದೆಯ ಬಣ್ಣ, ವಿನ್ಯಾಸವು ಕೊಠಡಿಯ ಕಿಟಕಿ, ಬಾಗಿಲು, ಗೋಡೆಯ ಬಣ್ಣ ಮತ್ತು ಕೊಠಡಿಯ ವಿನ್ಯಾಸಕ್ಕೆ ಹೊಂದಿಕೆಯಾಗುವಂತಿರಬೇಕು. ಕಾಟನ್ ಮತ್ತು ಸಿಲ್ಕ್​ನಿಂದ ತಯಾರಾದ ಕರ್ಟೆನ್​ಗಳು ಎಲ್ಲರ ಮನಮೆಚ್ಚುತ್ತವೆ. ಲೈನಿಂಗ್ ಬಂದಿರುವ ಮತ್ತು ವಿವಿಧ ವಿನ್ಯಾಸದ ಚಿತ್ರಗಳಿರುವ ಪರದೆಗಳನ್ನು ಬಳಸಿದರೆ, ಕೊಠಡಿಗೆ ಹೆಚ್ಚು ಲುಕ್ ನೀಡುತ್ತವೆ. ಹೊರಗಿನ ಹವಾಗುಣಕ್ಕೆ ಹೊಂದಿಕೆಯಾಗುವ ಕರ್ಟೆನ್​ಗಳನ್ನು ಬಳಸಿದರೆ ಡ್ರಾಯಿಂಗ್ ರೂಮ್ೂ ಸುಂದರ ಲುಕ್ ಬರುತ್ತದೆ.

ಬಣ್ಣ-ಬಣ್ಣದ ಡ್ರಾಯಿಂಗ್ ರೂಮ್

ಡ್ರಾಯಿಂಗ್ ರೂಮ್ ಬಣ್ಣವನ್ನು ಆಯ್ದುಕೊಳ್ಳುವಾಗ ಸ್ವಲ್ಪ ಎಚ್ಚರಿಕೆ ವಹಿಸಬೇಕು. ಇಲ್ಲಿ ಚಿಕ್ಕ ಕೊಠಡಿಗೆ ತೆಳು ಬಣ್ಣ ಸೂಕ್ತ, ಕಡು ಬಣ್ಣ ಬಳಿದರೆ ರೂಮ್ ತೀರಾ ಚಿಕ್ಕದಾಗಿ ಕಾಣಿಸುತ್ತದೆ, ಅದೇ ತಿಳಿಯಾದ ಬಣ್ಣವಾದರೆ ರೂಮ್ ವಿಶಾಲವಾಗಿ ಕಾಣಿಸುತ್ತದೆ. ಒಟ್ಟಾರೆ ಬಣ್ಣ ಬಳಿಯುವ ಬದಲು ಹದವಾದ, ಎಲ್ಲರ ಮನಸ್ಸಿಗೆ ಮೆಚ್ಚುವ ತಿಳಿ ಬಣ್ಣ ಡ್ರಾಯಿಂಗ್ ರೂಮ್ೆ ಸೂಕ್ತವೆನಿಸುತ್ತದೆ. ಅಲ್ಲದೆ ತಿಳಿ ಬಣ್ಣದ ಹಿನ್ನೆಲೆಯಲ್ಲಿ ಗೋಡೆಯಲ್ಲಿನ ಕಲಾಕೃತಿ, ಪೇಂಟಿಂಗ್ ಕೂಡಾ ಹೆಚ್ಚು ಆಕರ್ಷಕವಾಗಿ ಕಾಣಿಸುತ್ತದೆ.

ಇಲ್ಲಿ ಸೂರ್ಯನ ಬೆಳಕು ನೇರವಾಗಿ ಕೊಠಡಿಗೆ ಬೀಳುವಂತಿದ್ದರೆ ಅಲ್ಲಿ ತಿಳಿ ನೀಲಿ ಮತ್ತು ಹಸಿರು ಬಣ್ಣ ಸೂಕ್ತ, ಹಾಗೆಯೇ ಮಿಕ್ಸ್ ಆಂಡ್ ಮ್ಯಾಚ್ ಬಣ್ಣವೂ ಇಲ್ಲಿ ಹಿಡಿಸುತ್ತದೆ. ಆದರೆ ಬಣ್ಣಗಳ ಆಯ್ಕೆಯಲ್ಲಿ ಜಾಣತನ ಮುಖ್ಯ.

ಫ್ಲೋರಿಂಗ್: ಸಾಮಾನ್ಯವಾಗಿ ಡ್ರಾಯಿಂಗ್ ರೂಮ್ೆ ಮೂರು ವಿಧದ ಫ್ಲೋರಿಂಗ್​ಗಳು ಹೊಂದಿಕೆಯಾಗುತ್ತವೆ. ಸೆರಾಮಿಕ್ ಟೈಲ್ಸ್ ಫ್ಲೋರಿಂಗ್, ಮರದ ಫ್ಲೋರಿಂಗ್ ಮತ್ತು ಬಿಳಿ ಮಾರ್ಬಲ್ ಫ್ಲೋರಿಂಗ್, ಇವು ಹೆಚ್ಚು ಸೂಕ್ತವೆನಿಸುತ್ತವೆ. ಸೆರಾಮಿಕ್ ಫ್ಲೋರಿಂಗ್ ಹೆಚ್ಚು ಗಟ್ಟಿಯಾಗಿದ್ದು, ಸ್ವಚ್ಛಗೊಳಿಸಲು ಸುಲಭ, ಬ್ಯಾಕ್ಟೀರಿಯ ಮುಕ್ತ, ಹಗುರವಾದ ಮತ್ತು ಬೆಂಕಿ ನಿರೋಧಕವಾಗಿರುತ್ತವೆ, ಇದರಲ್ಲಿ ಕಲೆಯಾಗುವುದಿಲ್ಲ. ಅಲ್ಲದೆ ಇದು ಜಾರುವುದಿಲ್ಲ. ಮರದ ಫ್ಲೋರಿಂಗ್ ಅಳವಡಿಸುವುದು ಅದರ ವಿನ್ಯಾಸಕರ ಮೇಲೆ ಅವಲಂಬಿತವಾಗಿರುತ್ತದೆ. ಇದನ್ನು ಚೆನ್ನಾಗಿ ನಿರ್ವಹಿಸಿದರೆ ದೀರ್ಘ ಕಾಲ ಬಾಳುತ್ತವೆ. ಕೊಠಡಿಗೆ ಹೆಚ್ಚು ಶ್ರೀಮಂತ ಲುಕ್ ಸಿಗುವುದು ಮರದ ಫ್ಲೋರಿಂಗ್​ನಿಂದ. ಬೇಸಿಗೆಯಲ್ಲಿ ಬಿಸಿಯಾಗದೆ, ಚಳಿಗಾಲದಲ್ಲಿ ಕೂಲ್ ಆಗದೆ ಸದಾ ಕಾಲ ಒಂದೇ ತೆರನಾಗಿರುತ್ತದೆ. ಶ್ವೇತ ಮಾರ್ಬಲ್ ಫ್ಲೋರಿಂಗ್ ಡ್ರಾಯಿಂಗ್ ರೂಮ್ೆ ಸುಂದರ ಲುಕ್ ನೀಡುತ್ತದೆ. ಗಟ್ಟಿಯಾದ, ಹೆಚ್ಚು ಕಾಲ ಬಾಳಿಕೆ ಬರುವ ಸ್ವಚ್ಛವಾದ ಫ್ಲೋರಿಂಗ್​ನ್ನು ಎಲ್ಲರೂ ಇಷ್ಟಪಡುತ್ತಾರೆ.

ಕಾರ್ಪೆಟ್

ಯಾವುದೇ ಕೊಠಡಿಯಿರಲಿ, ಅಲ್ಲಿ ಮುಖ್ಯವಾಗಿ ಕಾಲೊರೆಸು ಬೇಕಾಗಿರುತ್ತದೆ. ಮೆತ್ತಗಿನ ಅಥವಾ ಒರಟಾದ ಕಾರ್ಪೆಟ್, ಅವರವರ ಆಯ್ಕೆ, ಕೊಠಡಿ ಒಟ್ಟು ವಿನ್ಯಾಸಕ್ಕೆ ಹೊಂದಿಕೆಯಾಗುವ ಕಾರ್ಪೆಟ್ ಕೊಳ್ಳಬೇಕು. ಕಡಿಮೆ ದರದ ಕಾರ್ಪೆಟ್ ಕೂಡಾ ಹೆಚ್ಚು ಕಾಲ ಬಾಳಿಕೆ ಬರುತ್ತದೆ, ಆದರೆ ಕೊಳೆಯಾದಂತೆ ಅದನ್ನು ಸ್ವಚ್ಛಗೊಳಿಸುವುದು ಸೂಕ್ತ. ಡ್ರಾಯಿಂಗ್ ರೂಮ್ ಅಂದಕ್ಕೆ ಕಾಲೊರೊಸು ಕೂಡಾ ಮೆರುಗು ನೀಡುತ್ತದೆ.

ಬೆಳಕು

ಡ್ರಾಯಿಂಗ್ ರೂಮ್ ಒಳಾಂಗಣ ವಿನ್ಯಾಸದಲ್ಲಿ ಬೆಳಕಿಗೆ ಪ್ರಮುಖ ಸ್ಥಾನವಿದೆ. ಯಾವ ಬಣ್ಣದ ಬೆಳಕು ಎನ್ನುವುದಕ್ಕಿಂತಲೂ, ಕೊಠಡಿಯ ಬಣ್ಣ, ಅಲ್ಲಿ ಬರುವ ನೈಸರ್ಗಿಕ ಬೆಳಕು ಮತ್ತು ಲಭ್ಯ ಬೆಳಕು, ಜತೆಗೆ ಆಯಾ ಸ್ಥಳದಲ್ಲಿ ಬೇಕಾಗುವ ಬೆಳಕಿನ ಅಗತ್ಯತೆ ಹೀಗೆ ಎಲ್ಲವನ್ನೂ ಲೆಕ್ಕ ಹಾಕಿ, ಸೂಕ್ತವಾದ, ಕೊಠಡಿಯ ಒಳಾಂಗಣ ವಿನ್ಯಾಸಕ್ಕೆ ಒಪ್ಪುವ ಬೆಳಕಿನ ಬಲ್ಬ್​ಗಳನ್ನು ಅಳವಡಿಸಬೇಕು. ಇವು ಆಯಾ ಕೊಠಡಿಯ ಬಣ್ಣ, ಸ್ಥಳಾವಕಾಶಕ್ಕೆ ಹೊಂದಿಕೆಯಾಗುವಂತಿರಬೇಕು. ಟಿವಿ ನೋಡಲು, ಓದಲು ಹೀಗೆ ನಮ್ಮ ಅಗತ್ಯ ಏನಿದೆಯೋ ಅದಕ್ಕೆ ತಕ್ಕ ಬೆಳಕನ್ನು ಆಯ್ದುಕೊಂಡರೆ ಡ್ರಾಯಿಂಗ್ ರೂಮ್ೆ ಮೆರುಗು ನೀಡುತ್ತದೆ. ಹೀಗೆ ತಮ್ಮ ತಮ್ಮ ಅಭಿರುಚಿಗೆ ತಕ್ಕಂತೆ ಡ್ರಾಯಿಂಗ್ ರೂಮ್ ಒಳಾಂಗಣ ವಿನ್ಯಾಸವೂ ಒಂದು ಕಲೆ, ಮನೆಗೆ ಮೆರುಗು ನೀಡುವ ಡ್ರಾಯಿಂಗ್ ರೂಮನ್ನು ಶೃಂಗರಿಸಿ, ಸುಂದರ ಒಳಾಂಗಣ ನಿರ್ವಿುಸಿಕೊಂಡರೆ ಚೆನ್ನಾಗಿರುತ್ತದೆ.

Leave a Reply

Your email address will not be published. Required fields are marked *