ಡ್ರಾಪಿನ್ ವಾರಿಯರ್ಸ್ ಚಾಂಪಿಯನ್

ಹುಬ್ಬಳ್ಳಿ: 3ನೇ ಆವೃತ್ತಿಯ ಹುಬ್ಬಳ್ಳಿ ಪ್ರೀಮಿಯರ್ ಲೀಗ್ (ಎಚ್​ಪಿಎಲ್) ಜ್ಯೂನಿಯರ್ ಕ್ರಿಕೆಟ್ ಟೂರ್ನಿಯಲ್ಲಿ ಡ್ರಾಪಿನ್ ವಾರಿಯರ್ಸ್ ತಂಡ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಮಂಗಳವಾರ ರಾಜನಗರ ಕೆಎಸ್​ಸಿಎ ಮೈದಾನದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಡ್ರಾಪಿನ್, ಎಲೈಟ್ ಡ್ರೀಮ್್ಸ ವಿರುದ್ಧ 11ರನ್​ಗಳಿಂದ ಗೆಲುವು ದಾಖಲಿಸಿತು. ಟಾಸ್ ಸೋತು ಬ್ಯಾಟಿಂಗ್​ಗೆ ಇಳಿಸಲ್ಪಟ್ಟಿದ್ದ ಡ್ರಾಪಿನ್ ವಾರಿಯರ್ಸ್ ನಿಗದಿತ 30 ಓವರ್​ಗಳಲ್ಲಿ 8 ವಿಕೆಟ್​ಗೆ 175ರನ್ ಗಳಿಸಿತ್ತು. ಎಲೈಟ್ ಡ್ರೀಮ್್ಸ 6 ವಿಕೆಟ್​ಗೆ 164ರನ್ ಗಳಿಸಿತು. ಎಕ್ಸಸ್ ಬಿಲ್ಡರ್ಸ್ ಆಂಡ್ ಡೆವಲಪರ್ಸ್​ನ ಮಾಲೀಕ ಪ್ರಕಾಶ ಪಾಟೀಲ, ಶೇಖ್ ಆಂಡ್ ಶೆಟ್ಟಿ ಸ್ಪೋರ್ಟ್ಸ್ ಫೌಂಡೇಶನ್​ನ ಎಸ್. ಶೇಖ್ ಟ್ರೋಫಿ ಹಾಗೂ ಬಹುಮಾನ ವಿತರಿಸಿದರು. ಕೆಎಸ್​ಸಿಎ ಧಾರವಾಡ ವಲಯ ಸಂಚಾಲಕ ಬಾಬಾ ಭೂಸದ, ಇತರರು ಇದ್ದರು. ಬಿಡಿಕೆ ಸ್ಪೋರ್ಟ್ಸ್ ಫೌಂಡೇಶನ್ ಕ್ರಿಕೆಟ್ ಟೂರ್ನಿ ಸಂಘಟಿಸಿತ್ತು. ಕಮೀಲ್ ಬಾಂಬೆವಾಲೆ (ಡ್ರಾಪಿನ್ ವಾರಿಯರ್ಸ್) ಉತ್ತಮ ಬ್ಯಾಟ್ಸಮನ್, ದೀಪಕ ನೀರಲಗಿ (ಎಲೈಟ್ ಡ್ರೀಮ್್ಸ) ಉತ್ತಮ ಬೌಲರ್, ರಿಷಿಕೇಶ ರಜಪೂತ (ಎಲೈಟ್) ಸರಣಿ ಶ್ರೇಷ್ಠ ಪುರಸ್ಕಾರ ಪಡೆದರು. 14 ವಯೋಮಿತಿ ವಿಭಾಗದಲ್ಲಿ ಅಭಯ ಕುಲಕರ್ಣಿ (ವಿಕೆ ವಾರಿಯರ್ಸ್) ಉತ್ತಮ ಬ್ಯಾಟ್ಸಮನ್, ವಿನಾಯಕ ಪಾಂಡೆ (ಹುಬ್ಬಳ್ಳಿ ಟೈಗರ್ಸ್) ಉತ್ತಮ ಬೌಲರ್ ಹಾಗೂ ಮಣಿಕಂಠ ಬಿ. (ಡ್ರಾಪಿನ್) ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದರು.