ಡ್ಯಾಶರ್ಸ್ ನಿರ್ಗಮನ

ಬೆಂಗಳೂರು: ಟ್ರಂಪ್ ಪಂದ್ಯದಲ್ಲಿ ಅನುಭವಿ ಪಿವಿ ಸಿಂಧು ಗೆಲುವು ಕಂಡರೂ, ಅವರ ತಂಡ ಹೈದರಾಬಾದ್ ಹಂಟರ್ಸ್ ಪ್ರೀಮಿಯರ್ ಬ್ಯಾಡ್ಮಿಂಟನ್ ಲೀಗ್​ನ 4ನೇ ಆವೃತ್ತಿಯ ತನ್ನ 7ನೇ ಪಂದ್ಯದಲ್ಲಿ ಡೆಲ್ಲಿ ಡ್ಯಾಶರ್ಸ್ ವಿರುದ್ಧ 3-4ರ ವೀರೋಚಿತ ಸೋಲನುಭವಿಸಿದೆ. ಹಾಗಿದ್ದರೂ, ಹೈದರಾಬಾದ್ ತಂಡ ಅಗ್ರಸ್ಥಾನದೊಂದಿಗೆ ಪಿಬಿಎಲ್​ನ ಉಪಾಂತ್ಯಕ್ಕೇರಿದ್ದರೆ, ಡೆಲ್ಲಿ ತಂಡ ಒಂದು ಜಯ ಕಂಡು ನಿರ್ಗಮನ ಕಂಡಿದೆ.

ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಉಭಯ ತಂಡಗಳಿಂದಲೂ ಸಮಬಲದ ಹೋರಾಟ ಕಂಡು ಬಂದರೂ, ಅಂತಿಮವಾಗಿ ದೆಹಲಿ ಮೇಲುಗೈ ಸಾಧಿಸಿತು. ಹೈದರಾಬಾದ್ ತಂಡ 24 ಅಂಕದೊಂದಿಗೆ ಉಪಾಂತ್ಯಕ್ಕೇರಿದರೆ, ಅವಧ್ ವಾರಿಯರ್ಸ್, ಮುಂಬೈ ರಾಕೆಟ್ಸ್ ತಂಡಗಳೂ ನಾಕೌಟ್ ಹಂತವನ್ನು ಖಚಿತಪಡಿಸಿಕೊಂಡಿವೆ. ಬೆಂಗಳೂರು ತಂಡ ಗುರುವಾರ ಚೆನ್ನೈ ವಿರುದ್ಧ ನಡೆಯಲಿರುವ ಅಂತಿಮ ಲೀಗ್ ಪಂದ್ಯದಲ್ಲಿ ಒಂದು ಟ್ರಂಪ್ ಪಂದ್ಯದಲ್ಲಿ ಜಯ ಸಾಧಿಸಿದರೂ, ಮುನ್ನಡೆ ಕಾಣಲಿದೆ.

ಪುರುಷರ ಸಿಂಗಲ್ಸ್ ವಿಭಾಗದ ಮೊದಲ ಪಂದ್ಯದಲ್ಲಿ ದೆಹಲಿಯ ಎಚ್​ಎಸ್ ಪ್ರಣಯ್ 15-10, 9-15, 15-12 ಗೇಮ್ಳಿಂದ ಚಿಟೊಬೊಯ್ನರನ್ನು ಸೋಲಿಸಿರು. ಪುರುಷರ ಡಬಲ್ಸ್ ವಿಭಾಗದ ಪಂದ್ಯವನ್ನು ಟ್ರಂಪ್ ಆಗಿ ಆಡಿದ ದೆಹಲಿ ತಂಡ ಬಿಯವೊ-ಜಾಂಗ್​ಜೀತ್ ಮನೀಪಾಂಗ್ ಜೋಡಿ 8-15, 15-9, 15-8ರಿಂದ ಹೈದರಾಬಾದ್​ನ ಜಾರ್ಜ್ ಹಾಗೂ ಇಸಾರ ಜೋಡಿಯನ್ನು ಸೋಲಿಸುವುದರೊಂದಿಗೆ 3-0 ಮುನ್ನಡೆ ಕಂಡಿತು. ನಂತರ ಮಾಡು ಇಲ್ಲ ಮಡಿ ಹೋರಾಟದ ಟ್ರಂಪ್ ಮ್ಯಾಚ್​ನಲ್ಲಿ ಸಿಂಧು 15-11, 15-9ರ ನೇರ ಗೇಮ್ಳಿಂದ ಕೊಸಿಟ್​ಕಯಾರನ್ನು ಸೋಲಿಸಿ ತಂಡವನ್ನು 2-3ರ ಲಯಕ್ಕೆ ತಂದರು. ಆದರೆ ನಂತರದ ಪುರುಷರ ಸಿಂಗಲ್ಸ್​ನಲ್ಲಿ ಹೈದರಾಬಾದ್ ಸೋಲುವುದರೊಂದಿಗೆ ಗೆಲುವಿನ ಅವಕಾಶ ತಪ್ಪಿತು. ಮಿಶ್ರ ಡಬಲ್ಸ್ ವಿಭಾಗದಲ್ಲಿ ಹೈದರಾಬಾದ್ ಗೆದ್ದರೂ, ಪಂದ್ಯದ ಸೋಲು ತಪ್ಪಲಿಲ್ಲ.

ಇಂದಿನ ಪಂದ್ಯ

ಬೆಂಗಳೂರು ರ್ಯಾಪ್ಟರ್ಸ್

ಚೆನ್ನೈ ಸ್ಮ್ಯಾಷರ್ಸ್

ಆರಂಭ: ಸಂಜೆ 7

ಎಲ್ಲಿ: ಕಂಠೀರವ ಒಳಾಂಗಣ ಕ್ರೀಡಾಂಗಣ ಬೆಂಗಳೂರು

ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್

ಜಯದೊಂದಿಗೆ ಉಪಾಂತ್ಯಕ್ಕೆ ಅವಧ್

ದಿನದ 2ನೇ ಪಂದ್ಯದಲ್ಲಿ ಅವಧ್ ವಾರಿಯರ್ಸ್ ತಂಡ ಇನ್ನೂ ಎರಡು ಪಂದ್ಯ ಉಳಿದಿರುವಂತೆ ನಾರ್ತ್ ಈಸ್ಟರ್ನ್ ವಾರಿಯ್್ಸ ತಂಡದ ವಿರುದ್ಧ 4-(-1) ಏಕಪಕ್ಷೀಯ ಗೆಲುವು ಕಂಡಿದೆ. ಟ್ರಂಪ್ ಪಂದ್ಯದಲ್ಲಿ ಸೈನಾ ನೆಹ್ವಾಲ್ ಸೋತ ಹಿನ್ನಡೆಯಿಂದಾಗಿ ನಾರ್ತ್ ಈಸ್ಟರ್ನ್ ಗೆಲುವಿನ ಕನಸಿಗೆ ಏಟು ಬಿತ್ತು. ಮೊದಲ ಪುರುಷರ ಸಿಂಗಲ್ಸ್ ಪಂದ್ಯದಲ್ಲಿ ಗೆದ್ದ ಅವಧ್ 2ನೇ ಪಂದ್ಯ ಮಿಶ್ರ ಡಬಲ್ಸ್ ವಿಭಾಗವನ್ನು ಟ್ರಂಪ್ ಪಂದ್ಯನ್ನಾಗಿ ಆಡಿ ಜಯಿಸಿತಲ್ಲದೆ 3-0ಯ ಭರ್ಜರಿ ಮುನ್ನಡೆ ಕಂಡಿತು. ಆದರೆ ನಾರ್ತ್ ತಂಡಕ್ಕೆ ನಿರ್ಣಾಯಕವೆನಿಸಿದ್ದ ಪಂದ್ಯದಲ್ಲಿ ಸೈನಾ ನೆಹ್ವಾಲ್ 15-11, 11-15, 7-15ರಿಂದ ಜಾಂಗ್ ಬೈವಿನ್ ಅವರ ಎದುರು ಎಡವಿದರು.

Leave a Reply

Your email address will not be published. Required fields are marked *